Bank Holidays June 2021: ಜೂನ್ನಲ್ಲಿ ಬ್ಯಾಂಕ್ಗಳ ರಜಾ ದಿನಗಳ ಪಟ್ಟಿ ಇಲ್ಲಿದೆ
Bank Holidays in Karnataka: 2021ರ ಜೂನ್ ತಿಂಗಳಲ್ಲಿ ಕರ್ನಾಟಕದಲ್ಲಿ ಬ್ಯಾಂಕ್ ರಜಾ ದಿನಗಳು ಸೇರಿ ಇಡೀ ದೇಶದ ವಿವಿಧ ಯಾವ ರಾಜ್ಯಗಳಲ್ಲಿ ರಜಾ ಇದೆ ಎಂಬುದರ ಮಾಹಿತಿ ಇಲ್ಲಿದೆ.

ಕೊರೊನಾದ ಎರಡನೇ ಅಲೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಬ್ಯಾಂಕ್ ವ್ಯವಹಾರದ ಸಮಯದಲ್ಲಿ ಬದಲಾವಣೆ ಆಗಿ, ಮೊಟಕುಗೊಳಿಸಲಾಗಿದೆ. ಅಷ್ಟೇ ಅಲ್ಲ, ಹಣದ ಡೆಪಾಸಿಟ್ ಸ್ವೀಕೃತಿ, ಹಣ ವಿಥ್ಡ್ರಾ, ಒಂದು ಖಾತೆಯಿಂದ ಮತ್ತೊಂದಕ್ಕೆ ವರ್ಗಾವಣೆ, ಸರ್ಕಾರದ ವ್ಯವಹಾರಗಳು ಬಿಟ್ಟು ಉಳಿದಿದ್ದನ್ನು ಮಾಡುತ್ತಿಲ್ಲ. ಇವೆಲ್ಲ ಮೇ 31, 2021ರ ತನಕ ಮುಂದುವರಿಯುತ್ತದೆ. ಜೂನ್ 1ರ ನಂತರವೂ ದೇಶದಲ್ಲಿ ಕೋರೊನಾ ಸೋಂಕು ಪ್ರಕರಣಗಳು ಜಾಸ್ತಿ ಆದಲ್ಲಿ ಬ್ಯಾಂಕ್ಗಳ ಕಾರ್ಯ ನಿರ್ವಹಣೆ ವ್ಯವಹಾರದ ಅವಧಿ ಪೂರ್ಣ ಪ್ರಮಾಣದಲ್ಲಿ ನಡೆಯುವುದು ಅನುಮಾನ. ಅಂಥದ್ದರಲ್ಲೂ 2021ರ ಜೂನ್ ತಿಂಗಳಲ್ಲಿ ಬ್ಯಾಂಕ್ಗಳ ರಜಾ ದಿನ ಯಾವ್ಯಾವ ದಿನಾಂಕಗಳಂದು ಇದೆ ಎಂಬುದರ ವಿವರ ಈ ಲೇಖನದಲ್ಲಿದೆ. ಆ ದಿನಗಳಂದು ವ್ಯವಹಾರ ಮಾಡುವುದು ಕಷ್ಟವಾಗಲಿದೆ ಅಥವಾ ನಡೆಯುವುದಿಲ್ಲ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಸೂಚನೆ ಪ್ರಕಾರ, ಬ್ಯಾಂಕ್ಗಳಿಗೆ ರಜಾ ದಿನಗಳನ್ನು ಘೋಷಣೆ ಮಾಡಲಾಗುತ್ತದೆ. ಇನ್ನು ಆಯಾ ರಾಜ್ಯಗಳಲ್ಲಿ ಅನುಸರಿಸುವ ಪ್ರಕಾರ ಈ ರಜಾ ಪಟ್ಟಿ ಇರುತ್ತದೆ. ಉದಾಹರಣೆಗೆ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂಥ ಕೆಲವು ರಾಷ್ಟ್ರೀಯ ರಜಾ ದಿನಗಳು ಹಾಗೂ ಭಾನುವಾರಗಳು ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರದಂಥ ಮಾಮೂಲಿ ರಜಾ ದಿನಗಳನ್ನು ಹೊರತುಪಡಿಸಿದಂತೆ ಉಳಿದ ರಜಾ ದಿನಗಳು ಒಂದು ರಾಜ್ಯದಿಂದ ಮತ್ತೊಂದು ದಿನಕ್ಕೆ ಬದಲಾಗುತ್ತದೆ. 2021ರ ಜೂನ್ ತಿಂಗಳಲ್ಲಿ ಯಾವ್ಯಾವ ದಿನಗಳಂದು ರಜಾ ಇದೆ ಎಂಬುದರ ವಿವರ ಇಲ್ಲಿದೆ.
ಜೂನ್ 6 ಭಾನುವಾರ ಜೂನ್ 12 ಎರಡನೇ ಶನಿವಾರ ಜೂನ್ 13 ಭಾನುವಾರ ಜೂನ್ 20 ಭಾನುವಾರ ಜೂನ್ 26 ನಾಲ್ಕನೇ ಶನಿವಾರ
ಈ ಮೇಲ್ಕಂಡ ದಿನಗಳಲ್ಲಿ ದೇಶದಾದ್ಯಂತ ಬ್ಯಾಂಕ್ಗಳು ಕಾರ್ಯ ನಿರ್ವಹಿಸುವುದಿಲ್ಲ ಇದನ್ನು ಹೊರತು ಪಡಿಸಿದಂತೆ ಬ್ಯಾಂಕ್ಗಳಿಗೆ ರಜಾ ಇರುವ ದಿನಗಳು ಯಾವುವು ಎಂಬುದರ ವಿವರ ಹೀಗಿದೆ:
ಜೂನ್ 13- ಭಾನುವಾರ- ಮಹಾರಾಣಾ ಪ್ರತಾಪ್ ಜಯಂತಿ- ಹಿಮಾಚಲಪ್ರದೇಶ, ಹರಿಯಾಣ, ರಾಜಸ್ಥಾನ ಜೂನ್ 14- ಸೋಮವಾರ- ಪಹಿಲಿ ರಾಜಾ, ಶ್ರೀ ಗುರು ಅರ್ಜುನ್ ದೇವ್ ಜೀ ಹುತಾತ್ಮ ದಿನ- ಒಡಿಶಾ, ಪಂಜಾಬ್ ಜೂನ್ 15- ಮಂಗಳವಾರ- ರಾಜಾ ಸಂಕ್ರಾಂತಿ, ವೈಎಂಎ ದಿನ- ಒಡಿಶಾ, ಮಿಜೋರಾಂ ಜೂನ್ 24- ಗುರುವಾರ- ಸಂತ ಗುರು ಕಬೀರ್ ಜಯಂತಿ- ಚಂಡೀಗಢ, ಹಿಮಾಚಲಪ್ರದೇಶ, ಹರಿಯಾಣ, ಪಂಜಾಬ್ ಜೂನ್ 30- ಬುಧವಾರ- ರೆಮ್ನಾ ನಿ- ಮಿಜೋರಾಂ
ಇದನ್ನೂ ಓದಿ: Bank working hours: ಕೋವಿಡ್- 19 ಎರಡನೇ ಅಲೆ ಪ್ರಭಾವದಿಂದ ಬ್ಯಾಂಕ್ಗಳ ಕಾರ್ಯ ನಿರ್ವಹಣೆ ಅವಧಿಯಲ್ಲಿ ಬದಲಾವಣೆ
(Here is the list of 2021 June month bank holidays in Karnataka and other major states of India)



