AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Holidays Oct 2024: ಹಬ್ಬ ಹರಿದಿನಗಳೇ ಇರುವ ಅಕ್ಟೋಬರ್​ನಲ್ಲಿ ಬ್ಯಾಂಕ್​ ರಜಾದಿನಗಳ ಪಟ್ಟಿ

2024 October bank holidays list: ಅಕ್ಟೋಬರ್ ತಿಂಗಳಲ್ಲಿ ಇರುವ 30 ದಿನಗಳಲ್ಲಿ 15 ದಿನ ಬ್ಯಾಂಕುಗಳಿಗೆ ರಜೆ ಇದೆ. ಕೆಲವೆಡೆ ಸತತ ಐದು ದಿನ ಬ್ಯಾಂಕ್ ಬಂದ್ ಆಗಿರುತ್ತವೆ. ಕರ್ನಾಟಕದಲ್ಲಿ ಅಕ್ಟೋಬರ್​ನಲ್ಲಿ 12 ಬ್ಯಾಂಕ್ ರಜಾದಿನಗಳಿವೆ. ಇದರಲ್ಲಿ ಎರಡು ಶನಿವಾರ ಮತ್ತು ನಾಲ್ಕು ಭಾನುವಾರದ ರಜೆಗಳಿವೆ.

Bank Holidays Oct 2024: ಹಬ್ಬ ಹರಿದಿನಗಳೇ ಇರುವ ಅಕ್ಟೋಬರ್​ನಲ್ಲಿ ಬ್ಯಾಂಕ್​ ರಜಾದಿನಗಳ ಪಟ್ಟಿ
ಬ್ಯಾಂಕ್ ರಜಾದಿನಗಳು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 26, 2024 | 12:12 PM

Share

ನವದೆಹಲಿ, ಸೆಪ್ಟೆಂಬರ್ 26: ಅಕ್ಟೋಬರ್ ತಿಂಗಳಲ್ಲಿ ಅರ್ಧದಷ್ಟು ದಿನಗಳು ಬ್ಯಾಂಕುಗಳಿಗೆ ರಜೆ ಇರುತ್ತವೆ. ಶನಿವಾರ ಮತ್ತು ಭಾನುವಾರ ಸೇರಿಸಿ ಒಟ್ಟು 15 ದಿನಗಳು ಬ್ಯಾಂಕ್​ಗೆ ರಜೆ ಇರುತ್ತವೆ. ಕರ್ನಾಟಕದಲ್ಲಿ 12 ದಿನಗಳು ಬ್ಯಾಂಕ್ ಬಾಗಿಲು ಮುಚ್ಚಿರುತ್ತವೆ. ಕೆಲ ರಾಜ್ಯಗಳಲ್ಲಿ ಅಕ್ಟೋಬರ್ 10ರಿಂದ 14ರವರೆಗೆ ಸತತ ಐದು ದಿನಗಳ ಕಾಲ ಬ್ಯಾಂಕ್ ಬಂದ್ ಆಗಿರುತ್ತವೆ. ಅಕ್ಟೋಬರ್ ತಿಂಗಳಲ್ಲಿ ಹಬ್ಬ ಹರಿದಿನಗಳು ಹೆಚ್ಚಿವೆ. ದಸರಾ, ದೀಪಾವಳಿ, ದುರ್ಗಾ ಪೂಜೆ, ನವರಾತ್ರಿ ಎಲ್ಲವೂ ಅಕ್ಟೋಬರ್​ನಲ್ಲೇ ಇವೆ. ಜೊತೆಗೆ ಗಾಂಧಿ ಜಯಂತಿ, ವಾಲ್ಮೀಕಿ ಜಯಂತಿಗಳಿಗೂ ರಜೆ ಇದೆ. ದೇಶಾದ್ಯಂತ ಹಾಗೂ ಕರ್ನಾಟಕದಲ್ಲಿ ಬ್ಯಾಂಕುಗಳು ಯಾವ್ಯಾವಾಗ ರಜೆ ಹೊಂದಿವೆ ಎನ್ನುವ ವಿವರ ಇಲ್ಲಿ ಮುಂದಿದೆ.

2024ರ ಅಕ್ಟೋಬರ್ ತಿಂಗಳಲ್ಲಿನ ಬ್ಯಾಂಕ್ ರಜಾದಿನಗಳು

  • ಅ. 1, ಮಂಗಳವಾರ: ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಿಮಿತ್ತ ರಜೆ
  • ಅ. 2, ಬುಧವಾರ: ಗಾಂಧಿ ಜಯಂತಿ, ಮಹಾಲಯ ಅಮಾವಾಸ್ಯೆ
  • ಅ. 3, ಗುರುವಾರ: ನವರಾತ್ರಿ, ಮಹಾರಾಜ ಅಗ್ರಸೇನ ಜಯಂತಿ
  • ಅ. 6: ಭಾನುವಾರದ ರಜೆ
  • ಅ. 10, ಗುರುವಾರ: ಮಹಾಸಪ್ತಮಿ
  • ಅ. 11, ಶುಕ್ರವಾರ: ಮಹಾನವಮಿ
  • ಅ. 12: ಎರಡನೇ ಶನಿವಾರ ಮತ್ತು ದಸರಾ, ಆಯುಧ ಪೂಜೆ (ದೇಶದೆಲ್ಲೆಡೆ ರಜೆ)
  • ಅ. 13: ಭಾನುವಾರದ ರಜೆ
  • ಅ. 14, ಸೋಮವಾರ: ದುರ್ಗಾ ಪೂಜೆ, ದಸರಾ (ಸಿಕ್ಕಿಂ ಮೊದಲಾದ ಕೆಲವೆಡೆ ರಜೆ)
  • ಅ. 16, ಬುಧವಾರ: ಲಕ್ಷ್ಮೀ ಪೂಜೆ (ಕೋಲ್ಕತಾ, ಅಗಾರ್ತಲಾದಲ್ಲಿ ರಜೆ)
  • ಅ. 17, ಗುರುವಾರ: ವಾಲ್ಮೀಕಿ ಜಯಂತಿ, ಕಾಟಿ ಬಿಹು (ಹಲವೆಡೆ ರಜೆ)
  • ಅ. 20: ಭಾನುವಾರ ರಜೆ
  • ಅ. 26: ನಾಲ್ಕನೇ ಶನಿವಾರದ ರಜೆ
  • ಅ. 27: ಭಾನುವಾರದ ರಜೆ
  • ಅ. 31, ಗುರುವಾರ: ನರಕ ಚತುರ್ದಶಿ, ದೀಪಾವಳಿ (ಎಲ್ಲೆಡೆ ರಜೆ)

ಇದನ್ನೂ ಓದಿ: ಪಿಎಂ ಕಿಸಾನ್ ಸ್ಕೀಮ್; ಅಕ್ಟೋಬರ್ ಮೊದಲ ವಾರದಲ್ಲಿ 18ನೇ ಕಂತಿನ ಹಣ ಬಿಡುಗಡೆ

2024ರ ಅಕ್ಟೋಬರ್ ತಿಂಗಳಲ್ಲಿ ಕರ್ನಾಟಕದಲ್ಲಿ ಇರುವ ಬ್ಯಾಂಕ್ ರಜಾದಿನಗಳು

  • ಅ. 2, ಬುಧವಾರ: ಗಾಂಧಿ ಜಯಂತಿ, ಮಹಾಲಯ ಅಮಾವಾಸ್ಯೆ
  • ಅ. 3, ಗುರುವಾರ: ನವರಾತ್ರಿ
  • ಅ. 6: ಭಾನುವಾರದ ರಜೆ
  • ಅ. 10, ಗುರುವಾರ: ಮಹಾಸಪ್ತಮಿ
  • ಅ. 11, ಶುಕ್ರವಾರ: ಮಹಾನವಮಿ
  • ಅ. 12: ಎರಡನೇ ಶನಿವಾರ
  • ಅ. 13: ಭಾನುವಾರದ ರಜೆ
  • ಅ. 17, ಗುರುವಾರ: ವಾಲ್ಮೀಕಿ ಜಯಂತಿ
  • ಅ. 20: ಭಾನುವಾರ ರಜೆ
  • ಅ. 26: ನಾಲ್ಕನೇ ಶನಿವಾರದ ರಜೆ
  • ಅ. 27: ಭಾನುವಾರದ ರಜೆ
  • ಅ. 31, ಗುರುವಾರ: ದೀಪಾವಳಿ

ಬ್ಯಾಂಕುಗಳು ಮುಚ್ಚಿದರೂ ಅದರ ಸರ್ವರ್​ಗಳು ಚಾಲನೆಯಲ್ಲೇ ಇರುತ್ತವೆ. ಎಟಿಎಂ, ನೆಟ್​ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್, ಯುಪಿಐ ಇತ್ಯಾದಿ ನಿರಂತರವಾಗಿ ಲಭ್ಯ ಇರುತ್ತವೆ. ಹೆಚ್ಚಿನ ಹಣದ ವಹಿವಾಟಿಗೆ ಯಾವ ಅಡಚಣೆ ಆಗದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?