ಹಣಕಾಸು ವರ್ಷ FY23ರ ಮೊದಲ ತಿಂಗಳಾದ 2022ನೇ ಇಸವಿಯ ಏಪ್ರಿಲ್ ಆರಂಭಕ್ಕೆ ಎದುರಿಗಿದ್ದೇವೆ ಮತ್ತು ಬ್ಯಾಂಕಿಂಗ್ ವಲಯಕ್ಕೆ ಈಗಾಗಲೇ ರಜಾದಿನಗಳು ಕಾಯುತ್ತಿವೆ. ನಿಮಗೆ ಗೊತ್ತಾ, ಬ್ಯಾಂಕ್‌ಗಳಿಗೆ ಏಪ್ರಿಲ್ ತಿಂಗಳ ಅರ್ಧದಷ್ಟು ಅಂದರೆ 15 ದಿನ ರಜೆ ಇದ್ದು, ತಿಂಗಳಲ್ಲಿ 30 ದಿನಗಳಿವೆ. ಏಪ್ರಿಲ್‌ನಲ್ಲಿ ಯಾವುದೇ ರಾಷ್ಟ್ರೀಯ ರಜಾದಿನಗಳಿಲ್ಲ. ಆದರೂ ಹಲವಾರು ಹಬ್ಬಗಳು ಮತ್ತು ದೀರ್ಘ ವಾರಾಂತ್ಯಗಳಿವೆ. ಬ್ಯಾಂಕ್ ರಜಾದಿನಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ನಿರ್ಧರಿಸುತ್ತದೆ. ಸೆಂಟ್ರಲ್ ಬ್ಯಾಂಕ್ನಿಂದ ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕ್‌ಗಳಿಗೆ ವರ್ಷದ ಆರಂಭದಲ್ಲಿ ತಿಂಗಳವಾರು ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ರಜಾದಿನಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ – ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನಗಳು; ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್‌ಮೆಂಟ್ ಹಾಲಿಡೇ; ಮತ್ತು ಬ್ಯಾಂಕ್‌ಗಳ ಖಾತೆಗಳನ್ನು ಮುಕ್ತಾಯಗೊಳಿಸುವುದು ಹೀಗಿದೆ.
ಏಪ್ರಿಲ್‌ನಲ್ಲಿ ಒಟ್ಟು 15 ರಜೆಗಳನ್ನು ಬ್ಯಾಂಕ್‌ಗಳಿಗೆ ನೀಡಲಾಗುವುದು. ಅದರಲ್ಲಿ 6 ರಜಾದಿನಗಳು ವಾರಾಂತ್ಯದ ರಜೆಗಳು. ಬ್ಯಾಂಕ್ ಖಾತೆಗಳನ್ನು ವಾರ್ಷಿಕವಾಗಿ ಮುಕ್ತಾಯಗೊಳಿಸುವುದರಿಂದ ಹೆಚ್ಚಿನ ಬ್ಯಾಂಕ್‌ಗಳು ಏಪ್ರಿಲ್ 1ರಂದು ಮುಚ್ಚಿರುತ್ತವೆ. ಈ ಮಧ್ಯೆ, ಗುಡಿ ಪಡ್ವಾ/ಯುಗಾದಿ ಹಬ್ಬ/1ನೇ ನವರಾತ್ರಿ/ತೆಲುಗು ಹೊಸ ವರ್ಷದ ದಿನ/ಸಜಿಬು ನೋಂಗ್ಮಾಪನ್ಬಾ (ಚೀರಾಬಾ)ಗಾಗಿ ಏಪ್ರಿಲ್ 2ರಂದು ಬ್ಯಾಂಕುಗಳಿಗೆ ರಜಾ ಇರುತ್ತದೆ. ಇದಲ್ಲದೆ ಭಾರತದ ಕೆಲವು ಪ್ರದೇಶಗಳಲ್ಲಿ ಸರ್ಹುಲ್ ಮತ್ತು ಬಾಬು ಜಗಜೀವನ್ ರಾಮ್ ಅವರ ಜನ್ಮದಿನದ ಕಾರಣ ಏಪ್ರಿಲ್ 4 ಮತ್ತು 5ರಂದು ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವುದಿಲ್ಲ.
ಈ ಮಧ್ಯೆ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ, ಬೈಸಾಖಿ, ವೈಶಾಖಿ, ತಮಿಳು ಹೊಸ ವರ್ಷದ ದಿನ, ಚೀರೋಬಾ, ಬಿಜು ಹಬ್ಬ, ಗುಡ್ ಫ್ರೈಡೇ, ಬಂಗಾಳಿ ಹೊಸ ವರ್ಷದ ದಿನ (ನಬಬರ್ಷ), ಹಿಮಾಚಲ ದಿನ, ವಿಷು ಸೇರಿದಂತೆ ಹಲವಾರು ಹಬ್ಬಗಳ ಕಾರಣದಿಂದ ಏಪ್ರಿಲ್ 14ರಿಂದ 16ರ ವರೆಗೆ ಬ್ಯಾಂಕ್‌ಗಳಿಗೆ ರಜೆ ಇರುತ್ತವೆ. ಏಪ್ರಿಲ್ 16ರಂದು ಬ್ಯಾಂಕ್‌ಗಳ ಮೂರನೇ ಶನಿವಾರವೂ ಸಹ ಬೋಹಾಗ್ ಬಿಹು ಕಾರಣದಿಂದಾಗಿ ರಜೆ ಇರುತ್ತದೆ. ಏಪ್ರಿಲ್ 21ರಂದು ಗರಿಯಾ ಪೂಜೆಯ ಕಾರಣ ಮತ್ತು ಏಪ್ರಿಲ್ 29ರಂದು ಶಬ್-ಐ-ಕದ್ರ್/ಜುಮಾತ್-ಉಲ್-ವಿದಾ ಕಾರಣ ಬ್ಯಾಂಕ್ ರಜಾದಿನಗಳಿವೆ.
ವಾರದ ರಜೆಯ ಭಾಗವಾಗಿ ನಾಲ್ಕು ಭಾನುವಾರಗಳ ರಜೆ ಇರುತ್ತದೆ (ಏಪ್ರಿಲ್ 3, 10, 17 ಮತ್ತು 24). ಎರಡು ಶನಿವಾರ (ಏಪ್ರಿಲ್ 9, 23) ಸಹ ರಜೆ ಇರುತ್ತದೆ. ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಬ್ಯಾಂಕ್‌ಗಳು ಸಾಮಾನ್ಯವಾಗಿ ತೆರೆದಿರುತ್ತವೆ. ವಾರದ ರಜೆಗಳ ಹೊರತಾಗಿ ಹೆಚ್ಚಿನ ಬ್ಯಾಂಕ್‌ಗಳು ಏಪ್ರಿಲ್ 1, 14 ಮತ್ತು 15ರಂದು ಮುಚ್ಚುತ್ತವೆ. ಗ್ರಾಹಕರು ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡುವ ಅಗತ್ಯವಿರುವ ಯಾವುದೇ ಬ್ಯಾಂಕಿಂಗ್ ವಹಿವಾಟುಗಳನ್ನು ಕೈಗೊಳ್ಳಲು ಯೋಜಿಸುತ್ತಿದ್ದಲ್ಲಿ ಏಪ್ರಿಲ್‌ನಲ್ಲಿ ಈ ರಜಾದಿನಗಳನ್ನು ಗಮನಿಸಬೇಕು.
ಇದನ್ನೂ ಓದಿ: Paytm Payments Bank: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಹೊಸ ಗ್ರಾಹಕರ ಸೇರ್ಪಡೆ ಮಾಡದಂತೆ ಆರ್ಬಿಐ ಸೂಚನೆ
Published On - 9:09 pm, Tue, 29 March 22