AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Of Maharashtra: ಹೋಮ್ ಲೋನ್, ಗೋಲ್ಡ್​ ಲೋನ್, ಕಾರು ಲೋನ್​ ಮೇಲೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಆಫರ್

ಬ್ಯಾಂಕ್ ಆಫ್ ಮಹಾರಾಷ್ಟ್ರದಿಂದ ಗೃಹಸಾಲ, ಕಾರು ಸಾಲ ಹಾಗೂ ಚಿನ್ನದ ಮೇಲಿನ ಸಾಲಕ್ಕೆ ಆಫರ್ ಘೋಷಣೆ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

Bank Of Maharashtra: ಹೋಮ್ ಲೋನ್, ಗೋಲ್ಡ್​ ಲೋನ್, ಕಾರು ಲೋನ್​ ಮೇಲೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಆಫರ್
ಬ್ಯಾಂಕ್ ಆಫ್ ಮಹಾರಾಷ್ಟ್ರ
TV9 Web
| Edited By: |

Updated on:Aug 20, 2021 | 11:52 PM

Share

ರಿಯಾಯಿತಿ ಬಡ್ಡಿ ದರಗಳು ಮತ್ತು ರೀಟೇಲ್ ಸಾಲಗಳ ಮೇಲಿನ ಪ್ರೊಸೆಸಿಂಗ್ ಶುಲ್ಕ ಶೇ 100ರಷ್ಟು ಮನ್ನಾ ಸೇರಿ ಹಲವು ಕೊಡುಗೆಗಳನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಮಹಾರಾಷ್ಟ್ರ (ಬಿಒಎಂ)ದಿಂದ ಘೋಷಿಸಲಾಗಿದೆ. ‘ರೀಟೇಲ್ ಬೊನಾಂಜಾ-ಮಾನ್ಸೂನ್ ಧಮಾಕಾ’ ಅಡಿಯಲ್ಲಿ ಬ್ಯಾಂಕ್​ನಿಂದ ಚಿನ್ನ, ಗೃಹ ಮತ್ತು ಕಾರು ಸಾಲದ ಪ್ರೊಸೆಸಿಂಗ್ ಶುಲ್ಕವನ್ನು ಮನ್ನಾ ಮಾಡಲಾಗಿದೆ ಮತ್ತು ಈ ಆಫರ್ ಸೆಪ್ಟೆಂಬರ್ 30, 2021ರ ವರೆಗೆ ಇರುತ್ತದೆ ಎಂದು ಬ್ಯಾಂಕ್​ ಆಫ್ ಮಹಾರಾಷ್ಟ್ರದಿಂದ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಲಾಗಿದೆ. ವಿಶೇಷ ಕೊಡುಗೆಯ ಬಗ್ಗೆ ಪ್ರತಿಕ್ರಿಯಿಸಿದ ಬ್ಯಾಂಕ್​ನ ಕಾರ್ಯನಿರ್ವಾಹಕ ನಿರ್ದೇಶಕ ಹೇಮಂತ್ ತಮ್ತಾ, “ನಮ್ಮ ಗ್ರಾಹಕರಿಗೆ ಚಿನ್ನ, ಗೃಹ ಮತ್ತು ಕಾರು ಸಾಲಗಳನ್ನು ಪಡೆಯಲು ಆಕರ್ಷಕವಾದ ಆಫರ್​ಗಳನ್ನು ನೀಡಲು ಉದ್ದೇಶಿಸಿದ್ದೇವೆ. ಕಡಿಮೆ ಬಡ್ಡಿ ದರಗಳಿಂದ ಮತ್ತು ಪ್ರೊಸೆಸಿಂಗ್ ಶುಲ್ಕದ ವಿನಾಯಿತಿಯಿಂದ ಲಾಭ ಪಡೆಯುತ್ತಾರೆ,” ಎಂದು ಹೇಳಿದ್ದಾರೆ.

15 ನಿಮಿಷಗಳಲ್ಲಿ ಚಿನ್ನದ ಸಾಲ ಗೃಹ ಮತ್ತು ಕಾರು ಸಾಲಗಳನ್ನು ಬ್ಯಾಂಕ್ ಕ್ರಮವಾಗಿ ಶೇ 6.90 ಮತ್ತು ಶೇ 7.30ರಿಂದ ಆರಂಭವಾಗುವ ಬಡ್ಡಿದರದೊಂದಿಗೆ ನೀಡುತ್ತದೆ. ರೀಟೇಲ್​ ಪ್ರಾಡಕ್ಟ್​ಗಳ ಜತೆಯಲ್ಲಿ ಹಲವು ಆಕರ್ಷಕ ಫೀಚರ್​ಗಳಿವೆ. ಗೃಹ ಸಾಲದಲ್ಲಿ ನಿಯಮಿತ ಮರುಪಾವತಿಯ ಮೇಲೆ ಎರಡು ಉಚಿತ ಇಎಂಐಗಳು, ಗೃಹ ಹಾಗೂ ಕಾರುಗಳಿಗೆ ಶೇ 90ರವರೆಗಿನ ಸಾಲ ಸೌಲಭ್ಯ ಮತ್ತು ಯಾವುದೇ ಪೂರ್ವ ಪಾವತಿ ಅಥವಾ ಪ್ರೀಕ್ಲೋಷರ್ ಅಥವಾ ಭಾಗಶಃ ಪಾವತಿಗೆ ಶುಲ್ಕಗಳು ಇರುವುದಿಲ್ಲ. ಇತರ ಹಲವು ಲಾಭದಾಯಕ ವೈಶಿಷ್ಟ್ಯಗಳ ಜತೆಗೆ ಬರುತ್ತದೆ ಎಂದು ಹೇಳಲಾಗಿದೆ.

ಪುಣೆ ಮೂಲದ ಬ್ಯಾಂಕ್​ ಆಫ್ ಮಹಾರಾಷ್ಟ್ರ ಚಿನ್ನದ ಸಾಲ ಯೋಜನೆಯನ್ನು ಪರಿಷ್ಕರಿಸಿದ್ದು, ರೂ. 20 ಲಕ್ಷದವರೆಗೆ ಶೇ 7.10 ಬಡ್ಡಿದರದಲ್ಲಿ ಸಾಲವನ್ನು ನೀಡುತ್ತಿದ್ದು, ಶೂನ್ಯ ಪ್ರೊಸೆಸಿಂಗ್ ಶುಲ್ಕವನ್ನು 1 ಲಕ್ಷ ರೂಪಾಯಿವರೆಗೆ ನೀಡುತ್ತದೆ. ಬ್ಯಾಂಕ್​ನಿಂದ ‘ಗೋಲ್ಡ್ ಲೋನ್ ಪಾಯಿಂಟ್’ ಹೊಂದಿದ್ದು, ತನ್ನ ಆಯ್ದ ಶಾಖೆಗಳಲ್ಲಿ 15 ನಿಮಿಷಗಳಲ್ಲಿ ಚಿನ್ನದ ಸಾಲವನ್ನು ವಿತರಿಸ;ಇ ಮೀಸಲಾದ ಕೌಂಟರ್ ಹೊಂದಿದೆ ಎಂದು ಹೇಳಲಾಗಿದೆ. ಅಂದಹಾಗೆ ಕಳೆದ ತಿಂಗಳು, ದೇಶದ ಅತಿದೊಡ್ಡ ಬ್ಯಾಂಕ್​ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಆಗಸ್ಟ್ ಅಂತ್ಯದವರೆಗೆ ಗೃಹ ಸಾಲಗಳ ಮೇಲಿನ ಪ್ರೊಸೆಸಿಂಗ್ ಶುಲ್ಕವನ್ನು ಮನ್ನಾ ಮಾಡುವುದಾಗಿ ಘೋಷಿಸಿತ್ತು.

ಇದನ್ನೂ ಓದಿ: Two Wheeler Loan: ಸ್ಕೂಟರ್, ಬೈಕ್ ಖರೀದಿಗೆ ಪ್ರಮುಖ ಬ್ಯಾಂಕ್​ಗಳಲ್ಲಿನ ಬಡ್ಡಿ ದರ ಹೀಗಿದೆ

(Bank Of Maharashtra Announced Various Offers On Home Loan Gold Loan And Car Loan)

Published On - 11:51 pm, Fri, 20 August 21