‘ವಂಚನೆ’ ಎಂಬ ಪದದ ವ್ಯಾಖ್ಯಾನದಲ್ಲಿ ಬದಲಾವಣೆಯನ್ನು ಕೋರಿ, ಎಲ್ಲ ಬ್ಯಾಂಕ್‌ಗಳು ಒಗ್ಗೂಡಿ ಈಗ ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಳಿ ತೆರಳಲು ಸಿದ್ಧವಾಗಿವೆ. ಸದ್ಯಕ್ಕೆ, ಒಂದು ಬ್ಯಾಂಕ್ನಿಂದ ವಂಚನೆ ಟ್ಯಾಗ್ ಅನ್ನು ಹಾಕಿದಾಗ ಎಲ್ಲ ಬ್ಯಾಂಕ್‌ಗಳು ಸಾಲ ಪಡೆಯುವ ಕಂಪೆನಿಯನ್ನು ಅದರ ಎಲ್ಲ ಖಾತೆಗಳೊಂದಿಗೆ ‘ವಂಚನೆ ಖಾತೆ (ಗಳು)’ ಎಂದು ಲೇಬಲ್ ಮಾಡಬೇಕಾಗುತ್ತದೆ. ಅಂತಹ ನಿಬಂಧನೆಯಿಂದಾಗಿ ಬ್ಯಾಂಕ್‌ಗಳು ಪೊಲೀಸ್ ದೂರುಗಳನ್ನು ನೀಡಲು ಅಗತ್ಯ ಇರುವ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕಾಗುತ್ತದೆ ಮತ್ತು ವಂಚನೆಯ ಗಾತ್ರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಲುವಂತಾಗಿದೆ. ಇದಲ್ಲದೆ, ಈ ಕ್ರಮಗಳಿಂದಾಗಿ ಸಾಲ ಪಡೆಯುವ ಕಾರ್ಪೊರೇಟ್‌ನ ಆಸ್ತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಸಾಲದಾತರು, ಪೂರೈಕೆದಾರರು, ಹೂಡಿಕೆದಾರರು ಸೇರಿದಂತೆ ಇತರ ಸಂಬಂಧಪಟ್ಟವರನ್ನು ದೂರ ಮಾಡುತ್ತದೆ. ಈ ಆತಂಕವನ್ನು ಗಮನದಲ್ಲಿಟ್ಟುಕೊಂಡು, ಪ್ರಮುಖ ಬ್ಯಾಂಕ್ಗಳ ಸಿಇಒಗಳು ಕೆಲವು ವಾರಗಳ ಹಿಂದೆ ನಡೆದ ಸಭೆಯಲ್ಲಿ ಕೇಂದ್ರ ಬ್ಯಾಂಕ್‌ಗೆ ‘ವಂಚನೆ’ ವ್ಯಾಖ್ಯಾನವನ್ನು ಬದಲಾಯಿಸುವ ಪ್ರಕರಣವನ್ನು ಪ್ರಸ್ತುತಪಡಿಸಲು ನಿರ್ಧರಿಸಿದ್ದಾರೆ. ಎಕನಾಮಿಕ್ ಟೈಮ್ಸ್ ಉಲ್ಲೇಖಿಸಿದ ಇಬ್ಬರು ಹಿರಿಯ ಬ್ಯಾಂಕ್ ಅಧಿಕಾರಿಗಳ ಪ್ರಕಾರ, ಬ್ಯಾಂಕ್‌ಗಳು ಎದುರಿಸುತ್ತಿರುವ ಕೆಲವು ಸಮಸ್ಯೆಗಳ ಬಗ್ಗೆ ಮಾತನಾಡಲು ಆ ಸಭೆ ನಡೆಸಲಾಗಿತ್ತು.
ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಸಿಇಒ ಸುನಿಲ್ ಮೆಹ್ತಾ ಅವರು ಮಾತನಾಡಿ, “ಫಂಡ್ನ ಸಣ್ಣ ಮೊತ್ತವನ್ನು ಬೇರೆಡೆ ಬಳಸಿದ್ದಕ್ಕೆ ಅದರ ಸಂಪೂರ್ಣ ಸಾಲವನ್ನು ‘ವಂಚನೆ’ ಎಂದು ಘೋಷಿಸಿ, ಇಡೀ ಕಂಪೆನಿಗೆ ಕಳಂಕ ಆಗದಂತಹ ವ್ಯವಸ್ಥೆಯನ್ನು ನಾವು ಹೊಂದಬೇಕು. ಅಂತಹ ಘೋಷಣೆ ಮತ್ತು ಸಂಬಂಧಿತ ಪ್ರಕ್ರಿಯೆಯು ಎಫ್‌ಐಆರ್ ಮೂಲಕ ಕಂಪೆನಿಯ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಬಹುದು ಮತ್ತು ನಕಾರಾತ್ಮಕ ಗ್ರಹಿಕೆಯನ್ನು ಉಂಟು ಮಾಡಬಹುದು,” ಎಂದಿದ್ದಾರೆ. ಮಾಜಿ ಬ್ಯಾಂಕರ್ ಆದ ಅವರು ಆರ್‌ಬಿಐ ಮುಂದೆ ಈ ವಿಷಯವನ್ನು ತೆಗೆದುಕೊಂಡು ಹೋಗಲು ಯೋಜಿಸಿರುವುದಾಗಿ ಹೇಳಿದ್ದಾರೆ.
ಕ್ರಿಮಿನಲ್ ಕಾನೂನಿನಲ್ಲಿ ವಂಚನೆಯನ್ನು ದುರುದ್ದೇಶಪೂರಿತ ಉದ್ದೇಶ ಮತ್ತು ವಂಚನೆಗೆ ಸಂಬಂಧಿಸಿದಂತೆ ನೋಡಲಾಗುತ್ತದೆ. ಆದರೆ ಬ್ಯಾಂಕ್‌ಗಳು ಯಾವುದೇ ಹಣದ ತಿರುವುಗಳನ್ನು ವಂಚನೆ ಎಂದು ವರ್ಗೀಕರಿಸುತ್ತವೆ. ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ಒಂದು ಡಜನ್ ಬ್ಯಾಂಕ್‌ಗಳಿಂದ ಒಟ್ಟು 15,000 ಕೋಟಿ ರೂಪಾಯಿಗಳ ಸಾಲವನ್ನು ಹೊಂದಿರುವ ಕಂಪೆನಿಯಲ್ಲಿ ರೂ.300 ಕೋಟಿ ವಂಚನೆ ಕಂಡುಬಂದರೆ, ಎಲ್ಲ ಬ್ಯಾಂಕ್‌ಗಳು ಸಂಪೂರ್ಣ ಸಾಲವನ್ನು ‘ವಂಚನೆ’ ಎಂದು ವರ್ಗೀಕರಿಸುತ್ತವೆ. ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸುತ್ತವೆ. “ಅಂತಹ ಸಂದರ್ಭದಲ್ಲಿ, ಬ್ಯಾಂಕ್‌ಗಳು ವಂಚನೆಯ ವರ್ಗೀಕರಣವನ್ನು ಕೇವಲ 300 ಕೋಟಿ ರೂಪಾಯಿ ಅಥವಾ ‘ಅಪಾಯದ ಮೌಲ್ಯ’ಕ್ಕೆ ಸೀಮಿತಗೊಳಿಸಲು ಆರ್‌ಬಿಐಗೆ ಅವಕಾಶ ನೀಡಬೇಕೆಂದು ಬಯಸುತ್ತವೆ. ಇಂದು ಡೀಫಾಲ್ಟ್ ಮಾಡದ ಬ್ಯಾಂಕ್‌ಗಳು ಕಂಪೆನಿಯನ್ನು ಸಹ ವಂಚನೆಯ ಖಾತೆ ಎಂದು ಗ್ರೇಡ್ ಮಾಡಬೇಕು,” ಎಂಬುದಾಗಿ ಹಿರಿಯ ಬ್ಯಾಂಕ್ ಅಧಿಕಾರಿಯೊಬ್ಬರು ಹೇಳಿದರು.
ವಂಚನೆಯನ್ನು ಹೇಗೆ ಘೋಷಿಸಲಾಗುತ್ತದೆ?
ಫೋರೆನ್ಸಿಕ್ ವರದಿಯಲ್ಲಿ ಕಂಡುಬಂದ ಸಂಗತಿಗಳ ಆಧಾರದ ಮೇಲೆ ಸಾಲವು ಕಾರ್ಯನಿರ್ವಹಿಸದ ಆಸ್ತಿಯಾಗಿ ಮಾರ್ಪಡುತ್ತದೆ (ಬಡ್ಡಿ ಅಥವಾ ಅಸಲು ಪಾವತಿಯು 90 ದಿನಗಳವರೆಗೆ ಮಿತಿ ಮೀರಿದಾಗ). “ಒಂದು ಫೋರೆನ್ಸಿಕ್ ಲೆಕ್ಕಪರಿಶೋಧನೆಯು ಯಾವಾಗಲೂ ಏನಾದರೂ ವಿಚಾರದೊಂದಿಗೆ ಹೊರಬರುತ್ತದೆ. ಅದು ನಿರ್ಣಾಯಕವಾಗಿ ಸಾಬೀತುಪಡಿಸಲು ಸಾಧ್ಯವಾಗದಿದ್ದರೂ ಅದು ಕೆಲವು ಲೋಪಗಳನ್ನು ಸೂಚಿಸುತ್ತದೆ,” ಎಂದು ಮತ್ತೊಬ್ಬ ಬ್ಯಾಂಕರ್ ವಿವರಿಸಿದ್ದಾರೆ.
ಸಾಲದ ಅಂತಿಮ ಬಳಕೆಯನ್ನು ಬದಲಾಯಿಸಿದರೆ ಅದು ವಂಚನೆ ಎನಿಸಿಕೊಳ್ಳುತ್ತದೆ. ಆದರೆ ಅಂತಿಮ-ಬಳಕೆಯಲ್ಲಿನ ಬದಲಾವಣೆಯು ವೈಯಕ್ತಿಕ ಸ್ವತ್ತುಗಳನ್ನು ಖರೀದಿಸಲು ಮಾತ್ರ ಹಣವನ್ನು ಬಳಸಿರಬೇಕು ಎಂದರ್ಥವಲ್ಲ. ಅಲ್ಲದೆ, ಇದು ಕ್ರಿಮಿನಲ್ ಅಪರಾಧವಾಗಿದೆ, ಇದು ಸಿವಿಲ್ ವಸೂಲಾತಿ ಕ್ರಮವಲ್ಲ – ಒಂದು ಮಾತಿಗೆ ಹೇಳಬೇಕೆಂದರೆ, ಮೊತ್ತವನ್ನು ಮರುಪಾವತಿಸಿದರೂ ಕ್ರಿಮಿನಲ್ ಪ್ರಕ್ರಿಯೆಗಳು ಮುಂದುವರಿಯಬಹುದು, ಎಂದು ಬ್ಯಾಂಕರ್ ಸೇರಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Credit Card Billing Cycle: ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಬದಲಿಸಿಕೊಳ್ಳಲು ಒಂದು ಬಾರಿಯ ಅವಕಾಶ ನೀಡಿದ ಆರ್‌ಬಿಐ