Online Shopping: ಆನ್​ಲೈನ್ ಶಾಪಿಂಗ್; ಬೆಂಗಳೂರಿಗರದೇ ಮೇಲುಗೈ; ಸಣ್ಣ ನಗರವಾಸಿಗಳೂ ಹಿಂದೆಬಿದ್ದಿಲ್ಲ; ಜನರಿಗೆ ಅಮೇಜಾನ್ ಫೇವರಿಟ್

|

Updated on: Jun 30, 2023 | 6:30 PM

Bengalureans Top In Online Shopping Time Spend: ಮಹಾನಗರಗಳು, ಟಯರ್ 1, ಟಯರ್ 2, ಟಯರ್ 3 ಇತ್ಯಾದಿ ನಗರಗಳಲ್ಲಿ ಜನರ ಶಾಪಿಂಗ್ ವರ್ತನೆ ಮತ್ತು ಅಭಿರುಚಿ ಬಗ್ಗೆ ಇತ್ತೀಚೆಗೆ ಅಧ್ಯಯನ ವರದಿಯೊಂದು ಬಿಡುಗಡೆ ಆಗಿದೆ. ಅದರ ವಿವರ ಇಲ್ಲಿದೆ....

Online Shopping: ಆನ್​ಲೈನ್ ಶಾಪಿಂಗ್; ಬೆಂಗಳೂರಿಗರದೇ ಮೇಲುಗೈ; ಸಣ್ಣ ನಗರವಾಸಿಗಳೂ ಹಿಂದೆಬಿದ್ದಿಲ್ಲ; ಜನರಿಗೆ ಅಮೇಜಾನ್ ಫೇವರಿಟ್
ಆನ್​ಲೈನ್ ಶಾಪಿಂಗ್
Follow us on

ನವದೆಹಲಿ: ಭಾರತದಲ್ಲಿ ಆನ್​ಲೈನ್ ಶಾಪಿಂಗ್ ಸಂಸ್ಕೃತಿ (Online Shopping Culture) ಗಾಢವಾಗಿ ಬೆಳೆಯುತ್ತಿದೆ. ಬಹಳ ಜನರು ಅಂಗಡಿ ಮುಂಗಟ್ಟು, ಮಾರುಕಟ್ಟೆ ಬದಲು ಇಕಾಮರ್ಸ್ ತಾಣಗಳ ಮೂಲಕವೇ ಶಾಪಿಂಗ್ ಮಾಡಲು ಇಚ್ಛಿಸುತ್ತಿದ್ದಾರೆ. ಉತ್ತಮ ಬೆಲೆ, ಡಿಸ್ಕೌಂಟ್, ಸುಲಭ ಬಳಕೆ ಇತ್ಯಾದಿ ಕಾರಣಕ್ಕೆ ಜನರು ಆನ್​ಲೈನ್ ಶಾಪಿಂಗ್​ನತ್ತ ವಾಲುತ್ತಿದ್ದಾರೆ. ಸೈಬರ್​ಮೀಡಿಯಾ ರೀಸರ್ಚ್ (CMR- Cybermedia Research) ಸಂಸ್ಥೆ ಇತ್ತೀಚೆಗೆ ನಡೆಸಿದ ಅಧ್ಯಯನವೊಂದರ ವರದಿ ಬೆಳಕಿಗೆ ಬಂದಿದ್ದು, ಬೆಂಗಳೂರು, ಮುಂಬೈ, ದೆಹಲಿಯಂತಹ ಮಹಾನಗರಿಗಳ ಜನರಷ್ಟೇ ಅಲ್ಲ ಎರಡನೇ ಹಾಗೂ ಅದಕ್ಕೂ ಕೆಳಗಿನ ಸ್ತರದ ನಗರಗಳ ಜನರೂ ಆನ್​ಲೈನ್ ಶಾಪಿಂಗ್​ಗೆ ಒಲವು ತೋರಿಸುತ್ತಿರುವುದು ಹೆಚ್ಚಾಗಿದೆಯಂತೆ.

ಬೆಂಗಳೂರಿಗರಿಂದಲೇ ಹೆಚ್ಚು ಆನ್​ಲೈನ್ ಶಾಪಿಂಗ್…!

ಸೈಬರ್​ಮೀಡಿಯಾ ರಿಸರ್ಚ್ (ಸಿಎಂಆರ್) ಅಧ್ಯಯನದ ಪ್ರಕಾರ 2ನೇ ಹಾಗೂ ಅದಕ್ಕೂ ಕೆಳಗಿನ ಸ್ತರದ ನಗರಗಳಲ್ಲಿ ಜನರು ನಡೆಸುವ ಆನ್​ಲೈನ್ ಶಾಪಿಂಗ್​ನ ಸಮಯವನ್ನು ಸರಾಸರಿಯಾಗಿ ಗಣಿಸಿದರೆ ವಾರಕ್ಕೆ 2 ಗಂಟೆ 25 ನಿಮಿಷ ಆಗುತ್ತದೆ. ಅಂದರೆ ವಾರಕ್ಕೆ 145 ನಿಮಿಷ ಕಾಲವನ್ನು ಸರಾಸರಿಯಾಗಿ ಇವರು ಶಾಪಿಂಗ್​ಗೆ ವ್ಯಯಿಸುತ್ತಾರೆ. ಬೆಂಗಳೂರಿನಲ್ಲಿ ಅತಿಹೆಚ್ಚು ಸಮಯವನ್ನು ಆನ್​ಲೈನ್ ಶಾಪಿಂಗ್​ಗೆ ವ್ಯಯಿಸಲಾಗುತ್ತದಂತೆ. ಈ ವರದಿ ಪ್ರಕಾರ ಬೆಂಗಳೂರಿಗರು ಆನ್​ಲೈನ್ ಶಾಪಿಂಗ್​ಗೆ ಸರಾಸರಿಯಾಗಿ ವಾರಕ್ಕೆ 4 ಗಂಟೆ 2 ನಿಮಿಷ ಸಮಯ ವ್ಯಯಿಸುತ್ತಾರೆ. ಬೇರಾವುದೇ ನಗರವಾಸಿಗಳು ಇಷ್ಟು ಹೊತ್ತನ್ನು ಆನ್​ಲೈನ್​ಗೆ ಖರ್ಚು ಮಾಡುವುದಿಲ್ಲ.

ಇದನ್ನೂ ಓದಿSensex Points: ಸೆನ್ಸೆಕ್ಸ್ ಮೂರೇ ದಿನದಲ್ಲಿ 1,800 ಅಂಕಗಳ ಏರಿಕೆ; ಸೆನ್ಸೆಕ್ಸ್ ಪಾಯಿಂಟ್ ಹೇಗೆ ಲೆಕ್ಕಹಾಕಲಾಗುತ್ತೆ?

ಆನ್​ಲೈನ್ ಶಾಪ್ಪರ್ಸ್​ಗೆ ಅಮೇಜಾನ್ ಫೇವರಿಟ್

ಬೆಂಗಳೂರೇ ಆಗಲೀ ಸಣ್ಣ ನಗರಗಳೇ ಆಗಲಿ ಆನ್​ಲೈನ್ ಶಾಪಿಂಗ್ ಮಾಡುವವರಿಗೆ ಅಮೇಜಾನ್ ಮೊದಲ ಫೇವರಿಟ್ ಆಗಿದೆ. ಶೇ. 73ರಷ್ಟು ಮಂದಿ ಅಮೇಜಾನ್​ಗೆ ಆದ್ಯತೆ ಕೊಡುತ್ತಾರಂತೆ. ಬಳಿಕ ಫ್ಲಿಪ್​ಕಾರ್ಟ್ (ಶೇ. 70), ಟಾಟಾ ಮೀಶೋ (ಶೇ. 30), ರಿಲಾಯನ್ಸ್​ನ ಪ್ಲಾಟ್​ಫಾರ್ಮ್​ಗಳು (ಶೇ. 20) ಹೆಚ್ಚು ಬಳಕೆ ಆಗುತ್ತವೆ.

ಹೊಸ ತಲೆಮಾರಿನವರಿಂದಲೇ ಹೆಚ್ಚಿನ ಶಾಪಿಂಗ್

ಕಳೆದ 6 ತಿಂಗಳಲ್ಲಿ ಆನ್​ಲೈನ್ ಶಾಪಿಂಗ್ ಮಾಡಿದವರ ಪೈಕಿ ಮೂರನೇ ಎರಡು ಭಾಗದ ಜನರು 20,000 ರೂವರೆಗೂ ವ್ಯಯಿಸಿದ್ದಾರೆ. ಈ ವಿಚಾರದಲ್ಲಿ ಮಹಾನಗರಗಳು (ಟಯರ್ 1) ಹಾಗೂ ಎರಡನೇ ಸ್ತರದ ನಗರಗಳು (ಟಯರ್ 2) ಸಮಾನವಾಗಿವೆ. ಮುಂಬೈ ಜನರು ಬೆಂಗಳೂರಿನವರಿಗಿಂತ ಹೆಚ್ಚು ಹಣ ವ್ಯಯಿಸಿದ್ದಾರೆ.

ಇದನ್ನೂ ಓದಿHome Loan: ಸಾಲಕ್ಕೆ ಇಎಂಐ ಹುಷಾರ್..! 50 ಲಕ್ಷ ಸಾಲ ಪಡೆದು 40 ವರ್ಷ ಇಎಂಐ ಆದರೆ ಕಟ್ಟುವ ಬಡ್ಡಿಯೇ 1.27 ಕೋಟಿ ರೂ

ಆನ್​ಲೈನ್ ಶಾಪಿಂಗ್​ನಲ್ಲಿ ಬಟ್ಟೆ ಬರೆ, ಫೋನ್​ಗಳೇ ಹೆಚ್ಚು

ಆನ್​ಲೈನ್ ಶಾಪಿಂಗ್ ಮಾಡುವವರು ಅತಿಹೆಚ್ಚು ಖರೀದಿಸಿದ ವಸ್ತುಗಳೆಂದರೆ ಬಟ್ಟೆ, ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್​ಗಳೇ ಹೆಚ್ಚಂತೆ. ಶೇ. 62ರಷ್ಟು ಮಂದಿ ಕಳೆದ 6 ತಿಂಗಳಲ್ಲಿ ಬಟ್ಟೆಗಳನ್ನು ಖರೀದಿಸಿದ್ದಾರೆ. ಬಿಕರಿಯಾದ ವಸ್ತುಗಳಲ್ಲಿ ಶೇ. 54ರಷ್ಟು ಎಲೆಕ್ಟ್ರಾನಿಕ್ ವಸ್ತುಗಳೇ ಆಗಿವೆ. ಸ್ಮಾರ್ಟ್​ಫೋನ್, ಸ್ಮಾರ್ಟ್​ವಾಚ್, ಲ್ಯಾಪ್​ಟಾಪ್ ಇತ್ಯಾದಿಯವು ಎಲೆಕ್ಟ್ರಾನಿಕ್ ವಸ್ತುಗಳಾಗಿವೆ. ಟಯರ್ 2 ಸಿಟಿ ಎನಿಸಿರುವ ನಾಗಪುರ್​ನ ಜನರು ಅನ್​ಲೈನ್​ನಲ್ಲಿ ಇಂಥ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಸುವುದು ಅತಿಹೆಚ್ಚಂತೆ.

ಸ್ಮಾರ್ಟ್​ಫೋನ್ ಪೈಕಿ ಜನರಿಗೆ 5ಜಿ ಪ್ರಮುಖ ಮಾನದಂಡವಾಗಿದೆ. ಟ್ಯಾಬ್ಲೆಟ್ ಖರೀದಿಸುವಾಗ ಬ್ಯಾಟರಿ ಬಾಳಿಕೆ, 5ಜಿ ಹೊಂದಾಣಿಕೆ ಮತ್ತು ಆಪರೇಟಿಂಗ್ ಸಿಸ್ಟಂ ಈ ಮೂರು ಅಂಶಗಳು ಖರೀದಿಗೆ ಪ್ರಮುಖ ಮಾನದಂಡಗಳಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ