Calligo: ಬೆಂಗಳೂರಿನ ಕ್ಯಾಲಿಗೋ ಸಾಧನೆ; ಪೊಸಿಟ್ ಎನೇಬಲ್ಡ್ ಸಿಲಿಕಾನ್ ರಚಿಸಿದ ವಿಶ್ವದ ಮೊದಲ ಕಂಪನಿ

|

Updated on: Jan 26, 2024 | 11:55 AM

World's First Posit Enabled Silicon: ಬೆಂಗಳೂರಿನ ಕ್ಯಾಲಿಗೋ ಟೆಕ್ನಾಲಜೀಸ್ ಇದೀಗ ಪೊಸಿಟ್ ಎನೇಬಲ್ಡ್ ಸಿಲಿಕಾನ್ ತಯಾರಿಸಿದೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ಕಂಪನಿಯಾಗಿದೆ. ಕ್ಯಾಲಿಗೋ ಈಗ ಸಾಮಾನ್ಯ ಬಳಕೆಯ ಕಂಪ್ಯೂಟಿಂಗ್​​ಗೆ ಆಕ್ಸಲರೇಟರ್ ಕಾರ್ಡ್ ತಯಾರಿಸುವ ಸಾಮರ್ಥ್ಯ ಹೊಂದಿದೆ. 2016ರಲ್ಲಿ ಅಮೆರಿಕದ ಗಣಿತಜ್ಞರೊಬ್ಬರು ರೂಪಿಸಿದ ಪೊಸಿಟ್ ನಂಬರ್ ವ್ಯವಸ್ಥೆಯಲ್ಲಿ ಹೆಚ್ಚು ನಿಖರತೆ ಇದೆ. ಇದರ ಆಧಾರದಲ್ಲಿ ಸಿಲಿಕಾನ್ ತಯಾರಿಸಲಾಗಿದೆ.

Calligo: ಬೆಂಗಳೂರಿನ ಕ್ಯಾಲಿಗೋ ಸಾಧನೆ; ಪೊಸಿಟ್ ಎನೇಬಲ್ಡ್ ಸಿಲಿಕಾನ್ ರಚಿಸಿದ ವಿಶ್ವದ ಮೊದಲ ಕಂಪನಿ
ಕ್ಯಾಲಿಗೋ ಆ್ಯಕ್ಸಲರೇಟರ್ ಕಾರ್ಡ್
Follow us on

ಬೆಂಗಳೂರು, ಜನವರಿ 26: ಭಾರತದ ಸೆಮಿಕಂಡಕ್ಟರ್ ಕ್ಷೇತ್ರದ ಬೆಳವಣಿಗೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವಂತಿದೆ. ಬಹಳಷ್ಟು ಫ್ಯಾಬ್​ಲೆಸ್ ಚಿಪ್ ಡಿಸೈನ್ (fabless semiconductor chip design) ಸ್ಟಾರ್ಟಪ್​ಗಳು ಭಾರತದಲ್ಲಿ ಹುಲುಸಾಗಿ ಬೆಳೆಯುತ್ತಿವೆ. ಅದರಲ್ಲಿ ಬೆಂಗಳೂರಿನ ಕ್ಯಾಲಿಗೋ ಟೆಕ್ನಾಲಜೀಸ್ (Calligo Technologies) ಒಂದು. ಹತ್ತು ವರ್ಷದ ಹಿಂದೆ ಸ್ಥಾಪನೆಯಾದ ಕ್ಯಾಲಿಗೋ ಹೊಸ ಮೈಲಿಗಲ್ಲು ಮುಟ್ಟಿದೆ. ಪೊಸಿಟ್ ಎನೇಬಲ್ಡ್ ಸಿಲಿಕಾನ್ (POSIT-enabled Silicon) ಅನ್ನು ತಯಾರಿಸಿದ ವಿಶ್ವದ ಮೊದಲ ಕಂಪನಿ ಎನಿಸಿದೆ. ಇದರೊಂದಿಗೆ ಆ್ಯಕ್ಸಲರೇಟರ್ ಕಾರ್ಡ್ (Accelerator card) ತಯಾರಿಸುವ ಸಾಮರ್ಥ್ಯ ಕ್ಯಾಲಿಗೋಗೆ ಸಿಕ್ಕಂತಾಗಿದೆ. ಮುಂದಿನ ತಲೆಮಾರಿನ ಕಂಪ್ಯೂಟಿಂಗ್ ತಂತ್ರಜ್ಞಾನದಲ್ಲಿ ಬೆಂಗಳೂರಿನ ಸ್ಟಾರ್ಟಪ್​ಗೆ ಬಲ ಸಿಕ್ಕಂತಾಗಿದೆ.

ಸೆಮಿಕಂಡಕ್ಟರ್ ಫ್ಯಾಬ್​ಲೆಸ್ ಆ್ಯಕ್ಸಲರೇಟರ್ ಲ್ಯಾಬ್ ಮತ್ತು ಕರ್ನಾಟಕ ಸರ್ಕಾರದ ಇನ್ಫಾರ್ಮೇಶನ್ ಟೆಕ್ನಾಲಜಿ ಸೊಸೈಟಿಯಿಂದ ಬೆಂಬಲ ಹೊಂದಿರುವ ಕ್ಯಾಲಿಗೋ ಟೆಕ್ನಾಲಜೀಸ್ ತಯಾರಿಸಿರುವ ಪೊಸಿಟ್ ಎನೇಬಲ್ಡ್ ಸಿಲಿಕಾನ್ ಅನ್ನು ಪಿಎಫ್​ಜಿಎ ಪ್ಲಾಟ್​ಫಾರ್ಮ್​ನಲ್ಲಿ ಅಳವಡಿಸಲಾಗುತ್ತದೆ. ಈ ರೀತಿಯಲ್ಲಿ ತಯಾರಿಸಲಾದ ಮೊದಲ ಸಿಲಿಕಾನ್ ಮುಂದಿನ ತಿಂಗಳು (2024ರ ಫೆಬ್ರುವರಿ) ತಯಾರಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: Foxconn CEO: ಫಾಕ್ಸ್​ಕಾನ್ ಸಿಇಒ ಯಂಗ್ ಲಿಯುಗೆ ಪದ್ಮ ಭೂಷಣ ಪ್ರಶಸ್ತಿ ಗೌರವ

ಕ್ಯಾಲಿಗೋ ಈಗ ಸಾಮಾನ್ಯ ಬಳಕೆಯ ಕಂಪ್ಯೂಟಿಂಗ್​​ಗೆ ಆಕ್ಸಲರೇಟರ್ ಕಾರ್ಡ್ ತಯಾರಿಸುವ ಸಾಮರ್ಥ್ಯ ಹೊಂದಿದೆ. ಇಂಡಸ್ಟ್ರಿ ಕಾಂಪ್ಯಾಟಬಲ್ ಕಂಪೈಲರ್ ಮತ್ತು ಆಪರೇಟಿಂಗ್ ಸಿಸ್ಟಂ ಸೇರಿದಂತೆ ಸಂಪೂರ್ಣ ಸಾಫ್ಟ್​ವೇರ್ ಟೆಕ್ನಾಲಜಿ ಹೊಂದಿದೆ.

ಏನಿದು ಪೊಸಿಟ್?

ಇತ್ತೀಚಿನವರೆಗೂ ಫ್ಲೋಟಿಂಗ್ ಪಾಯಿಂಟ್ ಯೂನಿಟ್ ಹಾರ್ಡ್​ವೇರ್​ಗಳಿಗೆ ಐಇಇಇ 754 ಎಂಬುದು ಟೆಕ್ನಿಕಲ್ ಸ್ಟ್ಯಾಂಡರ್ಡ್ ಆಗಿತ್ತು. ಆದರೆ, ಅದರ ಸಂಖ್ಯೆ ವ್ಯವಸ್ಥೆಯಲ್ಲಿ ಒಂದಷ್ಟು ಲೋಪದೋಷಗಳಿವೆ. 2016ರಲ್ಲಿ ಅಮೆರಿಕದ ಗಣಿತಜ್ಞ ಜಾನ್ ಗುಸ್ಟಾಫ್​ಸನ್ ಎಂಬುವವರು ಇನ್ನಷ್ಟು ಗಣಿತ ನಿಖರತೆ ಮತ್ತು ವ್ಯಾಪ್ತಿ ಹೆಚ್ಚುವಂತೆ ಪೊಸಿಟ್ ನಂಬರ್ ಸಿಸ್ಟಂ ಅನ್ನು ಶೋಧಿಸಿದರು.

ಇದನ್ನೂ ಓದಿ: Cashless Treatment: ಇನ್ಷೂರೆನ್ಸ್ ಇದ್ದು ಯಾವುದೇ ಆಸ್ಪತ್ರೆಗೆ ದಾಖಲಾದರೂ ಕ್ಯಾಷ್​ಲೆಸ್ ಟ್ರೀಟ್ಮೆಂಟ್ ಪಡೆಯಿರಿ; ಇದು ಜಿಐಸಿ ಹೊಸ ನಿಯಮ

ಈ ವಿನೂತನ ಪೊಸಿಟ್ ನಂಬರ್ ಸಿಸ್ಟಂ ಆಧಾರಿತವಾಗಿ ಚಿಪ್ ತಯಾರಿಸುವುದು ಸವಾಲಿನ ಕೆಲಸವಾಗಿತ್ತು. ಕ್ಯಾಲಿಗೋ ಟೆಕ್ನಾಲಜೀಸ್ ಈ ಕಾರ್ಯ ಮಾಡಿ ಸೈ ಎನಿಸಿದೆ. ಇದರಿಂದ ಕಂಪ್ಯೂಟಿಂಗ್ ನಿಖರತೆ ಇನ್ನಷ್ಟು ಹೆಚ್ಚುತ್ತದೆ. ನೆಕ್ಸ್ಟ್ ಜನರೇಶನ್ ಕಂಪ್ಯೂಟಿಂಗ್​ಗೆ ಇದು ಪುಷ್ಟಿ ಕೊಡಲಿದೆ.

ಭಾರತದಲ್ಲಿ ಕ್ರಿಯಾಶೀಲತೆ, ನಾವೀನ್ಯತೆಯ ಗುಣ ಹೊಂದಿರುವ ಸ್ಟಾರ್ಟಪ್​ಗಳಿಗೆ ಪ್ರತೀಕವಾಗಿ ಕ್ಯಾಲಿಗೋ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ