AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cashless Treatment: ಇನ್ಷೂರೆನ್ಸ್ ಇದ್ದು ಯಾವುದೇ ಆಸ್ಪತ್ರೆಗೆ ದಾಖಲಾದರೂ ಕ್ಯಾಷ್​ಲೆಸ್ ಟ್ರೀಟ್ಮೆಂಟ್ ಪಡೆಯಿರಿ; ಇದು ಜಿಐಸಿ ಹೊಸ ನಿಯಮ

General Insurance Council New Rule: ಜನರಲ್ ಇನ್ಷೂರೆನ್ಸ್ ಕೌನ್ಸಿಲ್ ಹೊಸ ನಿಯಮ ರೂಪಿಸಿದ್ದು ಅದರ ಪ್ರಕಾರ ಯಾವುದೇ ಆಸ್ಪತ್ರೆಯಲ್ಲೂ ಕ್ಯಾಷ್​ಲೆಸ್ ಚಿಕಿತ್ಸೆಗೆ ಅವಕಾಶ ಇರುತ್ತದೆ. ಇನ್ಷೂರೆನ್ಸ್ ಕಂಪನಿಗೆ ಜೋಡಿತವಾದ ಆಸ್ಪತ್ರೆಗಳಲ್ಲಿ ಮಾತ್ರವೇ ಕ್ಯಾಷ್​ಲೆಸ್ ಫೆಸಿಲಿಟಿ ಇರುತ್ತಿತ್ತು. ಈಗ ಎಲ್ಲಾ ಆಸ್ಪತ್ರೆಯಲ್ಲೂ ಸಿಗುತ್ತದೆ. ಶಸ್ತ್ರಚಿಕಿತ್ಸೆ ಮಾಡಿಸುವುದಾದರೆ ಆಸ್ಪತ್ರೆಗೆ ದಾಖಲಾಗುವ 48 ಗಂಟೆ ಮುಂಚೆ ಇನ್ಷೂರೆನ್ಸ್ ಕಂಪನಿಗೆ ಮಾಹಿತಿ ನೀಡಬೇಕಾಗುತ್ತದೆ.

Cashless Treatment: ಇನ್ಷೂರೆನ್ಸ್ ಇದ್ದು ಯಾವುದೇ ಆಸ್ಪತ್ರೆಗೆ ದಾಖಲಾದರೂ ಕ್ಯಾಷ್​ಲೆಸ್ ಟ್ರೀಟ್ಮೆಂಟ್ ಪಡೆಯಿರಿ; ಇದು ಜಿಐಸಿ ಹೊಸ ನಿಯಮ
ಆಸ್ಪತ್ರೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 25, 2024 | 4:56 PM

ನವದೆಹಲಿ, ಜನವರಿ 25: ಸಾಮಾನ್ಯವಾಗಿ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಯಲ್ಲಿ ಕಂಪನಿ ಟೈಯಪ್ ಆಗಿರುವ ಆಸ್ಪತ್ರೆಗಳ ಪಟ್ಟಿ ಇರುತ್ತದೆ. ಈ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ದಾಖಲಾದರೆ ಕ್ಯಾಷ್​ಲೆಸ್ ಟ್ರೀಟ್ಮೆಂಟ್ ಸಿಗುತ್ತದೆ. ಬೇರೆ ಆಸ್ಪತ್ರೆಯಾದರೆ ವೆಚ್ಚವನ್ನೆಲ್ಲಾ ಸ್ವತಃ ಭರಿಸಿ ಬಳಿಕ ಬಿಲ್​ ಹಾಗು ಇತರ ದಾಖಲೆಗಳನ್ನು ಸಲ್ಲಿಸಿ ಹಣ ಕ್ಲೈಮ್ ಮಾಡಿಕೊಳ್ಳುವ ಅವಕಾಶ ಇರುತ್ತದೆ. ಈಗ ಇನ್ಷೂರೆನ್ಸ್ ಕಂಪನಿಗೆ ಜೋಡಿತವಾಗಿಲ್ಲದ ಯಾವುದೇ ಆಸ್ಪತ್ರೆಯಲ್ಲೂ ಕ್ಯಾಷ್​ಲೆಸ್ ಆಗಿ ಚಿಕಿತ್ಸೆ ಪಡೆದುಕೊಳ್ಳುವ ಅವಕಾಶ ಇದೆ. ಇಂಥದ್ದೊಂದು ನಿಯಮ ರೂಪಿಸಲಾಗಿದೆ. ಜನರಲ್ ಇನ್ಷೂರೆನ್ಸ್ ಕೌನ್ಸಿಲ್ (GIC- General Insurance Council) ‘ಕ್ಯಾಷ್​ಲೆಸ್ ಎವೆರಿವೇರ್’ (Cashless Everywhere) ಯೋಜನೆ ಅಡಿಯಲ್ಲಿ ಈ ಹೊಸ ನಿಯಮ ಮಾಡಿದೆ. ಇಂದಿನಿಂದಲೇ (ಜ. 25) ಈ ನಿಯಮ ಜಾರಿಗೆ ಬರಲಿದೆ.

ಜನರಲ್ ಇನ್ಷೂರೆನ್ಸ್ ಕೌನ್ಸಿಲ್ ಸಂಸ್ಥೆ ದೇಶದ ಎಲ್ಲಾ ಜನರಲ್ ಮತ್ತು ಹೆಲ್ತ್ ಇನ್ಷೂರೆನ್ಸ್ ಕಂಪನಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಕ್ಯಾಷ್​ಲೆಸ್ ಎವೆರಿವೇರ್ ಅಭಿಯಾನ ಆರಂಭಿಸಿದೆ.

ಈ ಯೋಜನೆ ಅಡಿಯಲ್ಲಿ ಪಾಲಿಸಿದಾರ ಇಚ್ಛಿಸಿದ ಯಾವುದೇ ಆಸ್ಪತ್ರೆಗೆ ಹೋಗಿ ದಾಖಲಾಗಿ ಕ್ಯಾಷ್​ಲೆಸ್ ಆಗಿ ಚಿಕಿತ್ಸೆ ಪಡೆಯಬಹುದು. ಆದರೆ, ಕೆಲವಿಷ್ಟು ಕಂಡೀಷನ್​ಗಳಿವೆ:

ಇದನ್ನೂ ಓದಿ: Crore in 5 Years: ಸ್ಟೆಪಪ್ ಮ್ಯಾಜಿಕ್ ತಿಳಿಯಿರಿ; ಕೇವಲ 5 ವರ್ಷದಲ್ಲಿ 1 ಕೋಟಿ ಗಳಿಸಲು ಎಷ್ಟು ಹೂಡಿಕೆ ಬೇಕು?

ಆಸ್ಪತ್ರೆಯಲ್ಲಿ ದಾಖಲಾಗಿ ಶಸ್ತ್ರ ಚಿಕಿತ್ಸೆ ಅಥವಾ ಎಲೆಕ್ಟಿವ್ ಪ್ರೊಸೀಜರ್​ಗಳಿಗೆ ಒಳಪಡಬೇಕಿದ್ದಲ್ಲಿ, ದಾಖಲಾತಿಗೆ 48 ಗಂಟೆ ಮುಂಚೆ ಇನ್ಷೂರೆನ್ಸ್ ಕಂಪನಿಗೆ ಮಾಹಿತಿ ನೀಡಬೇಕು.

ತುರ್ತು ಚಿಕಿತ್ಸೆ ಪಡೆಯಬೇಕಿದ್ದಾಗ ಆಸ್ಪತ್ರೆಗೆ ದಾಖಲಾಗಿ 48 ದಿನದ ಒಳಗೆ ಇನ್ಷೂರೆನ್ಸ್ ಕಂಪನಿಗೆ ಮಾಹಿತಿ ನೀಡಬೇಕು.

ಚಿಕಿತ್ಸೆಯ ವೆಚ್ಚದಲ್ಲಿ ಎಷ್ಟು ಭಾಗ ಕ್ಯಾಷ್​ಲೆಸ್ ಆಗಿರುತ್ತದೆ ಅಥವಾ ಇನ್ಷೂರೆನ್ಸ್ ಕಂಪನಿ ಎಷ್ಟು ಭರಿಸುತ್ತದೆ ಎಂಬುದು ಪಾಲಿಸಿಯ ನಿಯಮ ಮತ್ತು ನಿಬಂಧನೆಗಳು ಹಾಗೂ ಚಿಕಿತ್ಸೆಯ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ.

ಹೆಚ್ಚಿನ ಸಂದರ್ಭದಲ್ಲಿ ಆಸ್ಪತ್ರೆಯ ನೊಂದಣಿ ಹಣವನ್ನು ರೋಗಿಗಳು ತಮ್ಮ ಕೈಯಿಂದಲೇ ಕಟ್ಟಬೇಕು. ಶಸ್ತ್ರ ಚಿಕಿತ್ಸೆಗೆ ಉಪಯೋಗಿಸುವ ಕೆಲ ಉಪಕರಣಗಳು ಇನ್ಷೂರೆನ್ಸ್ ವ್ಯಾಪ್ತಿಗೆ ಬರುವುದಿಲ್ಲ. ಹೆಚ್ಚಿನ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳಲ್ಲಿ ಶೇ. 90ಕ್ಕೂ ಹೆಚ್ಚಿನ ವೆಚ್ಚ ಕವರ್ ಆಗುತ್ತದೆ.

ಇದನ್ನೂ ಓದಿ: Tariq Premji: ವಿಪ್ರೋ ಸೇರುವ ಮುನ್ನ ಬೆಂಗಳೂರಿನ ಸೇಂಟ್ ಜೋಸೆಪ್ಸ್​ನಲ್ಲಿ ಓದಿ ಬಿಪಿಒದಲ್ಲಿ ಕೆಲಸ ಮಾಡಿದ್ದ ಅಜೀಮ್ ಪ್ರೇಮ್​ಜಿ 2ನೇ ಮಗ

ಕ್ಯಾಷ್​ಲೆಸ್ ಚಿಕಿತ್ಸೆ ಈ ಆಸ್ಪತ್ರೆಗಳಲ್ಲಿ ಇರುವುದಿಲ್ಲ…

ಎಲ್ಲಾ ಆಸ್ಪತ್ರೆಗಳಲ್ಲೂ ಕ್ಯಾಷ್​ಲೆಸ್ ಚಿಕಿತ್ಸೆ ಇರುವುದಿಲ್ಲ. ಈ ಆಸ್ಪತ್ರೆಗಳಿಗೆ ಜನರಲ್ ಇನ್ಷೂರೆನ್ಸ್ ಕೌನ್ಸಿಲ್​ನ ಕ್ಯಾಷ್​ಲೆಸ್ ಎವರಿವೇರ್ ಯೋಜನೆಯ ನಿಯಮ ಅನ್ವಯ ಆಗುವುದಿಲ್ಲ. ನೀವು ಇನ್ಷೂರೆನ್ಸ್ ಹೊಂದಿದ್ದರೂ ಈ ಆಸ್ಪತ್ರೆಗಳಲ್ಲಿ ದಾಖಲಾದರೆ ನೀವೇ ವೆಚ್ಚ ಭರಿಸಬೇಕು. ಡಿಸ್​ಚಾರ್ಜ್ ಆಗಿ ನಿರ್ದಿಷ್ಟ ದಿನದೊಳಗೆ ಬಿಲ್ ಮತ್ತು ದಾಖಲೆಗಳನ್ನು ಸಂಬಂಧಿತ ಇನ್ಷೂರೆನ್ಸ್ ಪ್ರೋಸಸಿಂಗ್ ಏಜೆನ್ಸಿಗೆ ಕಳುಹಿಸಿಕೊಡಬೇಕು. ಆಗ ಇನ್ಷೂರೆನ್ಸ್ ಕಂಪನಿ ನಿಮಗೆ ರೀ ಇಂಬುರ್ಸ್ಮೆಂಟ್ ಮಾಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ