AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru House Rent: ಬೆಂಗಳೂರಿಗರಿಗೆ ಪಾರ್ಕಿಂಗ್ ತಲೆನೋವು; ಪಾರ್ಕಿಂಗ್ ಇಲ್ಲದ ಮನೆಗಳ ಕೇಳೋರಿಲ್ಲವಾ?

Less Rent For Houses Without Parking Space: ಉದ್ಯಾನನಗರಿಯಲ್ಲಿ ಪಾರ್ಕಿಂಗ್ ಸೌಲಭ್ಯ ಇಲ್ಲದ ಅಪಾರ್ಟ್ಮೆಂಟ್​ಗಳ ಬೆಲೆ ಮತ್ತು ಬಾಡಿಗೆ ಶೇ. 20ರಷ್ಟು ಕಡಿಮೆ ಆಗಿದೆ ಎಂದು ಇಲ್ಲಿನ ಬ್ರೋಕರ್​ಗಳು ಹೇಳುತ್ತಾರೆ.

Bengaluru House Rent: ಬೆಂಗಳೂರಿಗರಿಗೆ ಪಾರ್ಕಿಂಗ್ ತಲೆನೋವು; ಪಾರ್ಕಿಂಗ್ ಇಲ್ಲದ ಮನೆಗಳ ಕೇಳೋರಿಲ್ಲವಾ?
ಬೆಂಗಳೂರಿನಲ್ಲಿ ಪಾರ್ಕಿಂಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 04, 2023 | 5:03 PM

Share

ಬೆಂಗಳೂರು: ಅಗಾಧವಾಗಿ ಮತ್ತು ಹುಚ್ಚುಚ್ಚಾಗಿ ಬೆಳೆದಿರುವ ಸಿಲಿಕಾನ್ ಸಿಟಿಯಲ್ಲಿ ಪಾರ್ಕಿಂಗ್ ಸಮಸ್ಯೆ (Parking Problem) ವಿಪರೀತ ಎಂಬುದು ಇಲ್ಲಿನ ಎಲ್ಲಾ ನಿವಾಸಿಗಳಿಗೂ ಗೊತ್ತಿರುವ ಸಂಗತಿ. ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಮನೆ ಬಳಿ ವಾಹನ ನಿಲ್ಲಿಸಲೂ ಜಾಗವಿಲ್ಲದಂತಾಗಿದೆ. ಅದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು, ವಾಹನಗಳ ಸಂಖ್ಯೆ ವಿಪರೀತ ಏರಿರುವುದು. ಇನ್ನೊಂದು, ಕಟ್ಟಡಗಳಲ್ಲಿ ಮನೆಗಳ ಸಂಖ್ಯೆಗೆ ಅನುಗುಣವಾಗಿ ಪಾರ್ಕಿಂಗ್ ಪ್ರದೇಶ ನಿರ್ಮಿಸದಿರುವುದು. 2010ಕ್ಕೆ ಮುಂಚೆ ಕಟ್ಟಿದ ಬಹಳಷ್ಟು ಅಪಾರ್ಟ್ಮೆಂಟ್​ಗಳಲ್ಲಿ ಸಾಕಷ್ಟು ಪಾರ್ಕಿಂಗ್ ಇಲ್ಲದಿರುವುದರಿಂದ ಅನೇಕ ನಿವಾಸಿಗಳು ತಮ್ಮ ವಾಹನವನ್ನು ಮನೆ ಮುಂದಿನ ರಸ್ತೆಬದಿಯಲ್ಲಿ ನಿಲ್ಲಿಸುತ್ತಾರೆ. ಇಲ್ಲದಿದ್ದರೆ ಎಲ್ಲಿ ಜಾಗ ಇದೆಯೋ ಅಲ್ಲಿ ಹೋಗಿ ಪಾರ್ಕಿಂಗ್ ಮಾಡುತ್ತಾರೆ. ಇದರಿಂದ ಬೆಂಗಳೂರಿನ ವಾಸಪ್ರದೇಶಗಳಲ್ಲಿ ಪಾರ್ಕಿಂಗ್ ವಿಚಾರವಾಗಿ ತಿಕ್ಕಾಟ, ಜಗಳಗಳು ಸಾಮಾನ್ಯವಾಗಿಹೋಗಿವೆ.

ಬೆಂಗಳೂರಿನಲ್ಲಿ ಪಾರ್ಕಿಂಗ್ ಸೌಲಭ್ಯ ಇರುವ ಮನೆಗಳಿಗೆ ಭಾರೀ ಡಿಮ್ಯಾಂಡ್ ಇದೆ. ಪಾರ್ಕಿಂಗ್ ಸೌಲಭ್ಯ ಇಲ್ಲದ ಅಪಾರ್ಟ್ಮೆಂಟ್​ಗಳ ಮೌಲ್ಯ ಗಣನೀಯವಾಗಿ ಇಳಿಯುತ್ತಿದೆ. ಒಂದು ವರದಿ ಪ್ರಕಾರ ಪಾರ್ಕಿಂಗ್ ಸ್ಥಳವಾಕಾಶ ಇಲ್ಲದ ಅಪಾರ್ಟ್ಮೆಂಟ್​ಗಳ ಬೆಲೆ ಮತ್ತು ಬಾಡಿಗೆ ದರ ಶೇ. 15ರಿಂದ 20ರಷ್ಟು ಕಡಿಮೆ ಆಗಿದೆಯಂತೆ.

ಇದನ್ನೂ ಓದಿ22 ವರ್ಷ ನಂತರ ಕೆಜಿಎಫ್​ ಚಿನ್ನದ ಗಣಿಯ ಪುನರಾರಂಭ ಸೂಚನೆ, ಆದರೆ ಆಂಧ್ರ ಸರ್ಕಾರ- ಗಣಿ ಕಾರ್ಮಿಕರ ಸಂಘರ್ಷ, ಏನಿದರ ಆಳ-ಅಗಲ?

ಐಟಿ ಕಂಪನಿಗಳು ಹೆಚ್ಚು ಇರುವ ಪ್ರದೇಶಗಳ ಸುತ್ತಮುತ್ತ ಸರಿಯಾದ ಪಾರ್ಕಿಂಗ್ ಸೌಲಭ್ಯ ಹೊಂದಿರುವ ಎರಡು ಬೆಡ್​ರೂಂ (2ಬಿಎಚ್​ಕೆ) ಮನೆ ಅಥವಾ ಫ್ಲಾಟ್​ಗೆ ಬಾಡಿಗೆ ತಿಂಗಳಿಗೆ ಸುಮಾರು 40,000 ರೂ ಇದೆ. ಅದೇ ಪಾರ್ಕಿಂಗ್ ಇಲ್ಲದೇ ಇರುವ ಮನೆ ಬಾಡಿಗೆ 18,000 ರೂ ಇದೆ. 1 ಕೋಟಿ ರೂ ಮೌಲ್ಯದ ಅಪಾರ್ಟ್ಮೆಂಟ್​ಗಳನ್ನು ಮಾರಲು ಹೋದರೆ ಪಾರ್ಕಿಂಗ್ ಕೊರತೆಯಿಂದಾಗಿ 80 ಲಕ್ಷ ರೂಗೂ ಖರೀದಿಸುವವರಿಲ್ಲದಂತಾಗಿದೆ ಎಂದು ಬೆಂಗಳೂರಿನ ಬ್ರೋಕರ್​ವೊಬ್ಬರು ಹೇಳುತ್ತಾರೆ.

ಖಾಲಿ ನಿವೇಶನಗಳು ಹೆಚ್ಚು ಇರುವ ಹೊಸ ಪ್ರದೇಶಗಳಲ್ಲಿ ಸದ್ಯಕ್ಕೆ ಈ ಸಮಸ್ಯೆ ಇಲ್ಲ. ಬೆಂಗಳೂರಿಗರು ಇಲ್ಲಿ ಹೇಗೋ ಪಾರ್ಕಿಂಗ್ ಸ್ಥಳ ಹೊಂದಿಸಿಕೊಳ್ಳುತ್ತಾರೆ. ಆದರೆ ಖಾಲಿ ಸ್ಥಳಗಳು ಇಲ್ಲದ ಮತ್ತು ಪಾರ್ಕಿಂಗ್ ಇಲ್ಲದೇ ನಿರ್ಮಿಸಿದ ದೊಡ್ಡ ದೊಡ್ಡ ಕಟ್ಟಡಗಳಿರುವ ಪ್ರದೇಶಗಳಲ್ಲಿ ಪಾರ್ಕಿಂಗ್ ಸಮಸ್ಯೆ ವಿಪರೀತ.

ಇದನ್ನೂ ಓದಿRation Card Aadhaar Linking: ಆಧಾರ್, ರೇಷನ್ ಕಾರ್ಡ್ ಲಿಂಕ್ ಮಾಡುವ ಡೆಡ್​ಲೈನ್ ಸೆಪ್ಟಂಬರ್ 30ಕ್ಕೆ ವಿಸ್ತರಣೆ; ಯಾರಿಗೆ ಇದು ಕಡ್ಡಾಯ? ಲಿಂಕ್ ಮಾಡುವುದು ಹೇಗೆ?

ಬಿಬಿಎಂಪಿಯಿಂದ ಆಯ್ದ ಪ್ರದೇಶಗಳಲ್ಲಿ ಪಾರ್ಕಿಂಗ್ ಪ್ರದೇಶಗಳನ್ನು ನಿರ್ಮಾಣವಾಗಬೇಕೆಂಬುದು ಇಲ್ಲಿನ ನಿವಾಸಿಗಳ ಆಗ್ರಹ.

ಪಾರ್ಕಿಂಗ್ ಸ್ಥಳ ಇಲ್ಲದೇ ವಾಹನ ಖರೀದಿ ಅಸಾಧ್ಯವಾಗುವ ಕಾನೂನು ಬರುತ್ತಾ?

ಬೆಂಗಳೂರಿನಲ್ಲಿ ಸಾರಿಗೆ ಇಲಾಖೆಯ ಮುಂದೆ ಒಂದು ಪ್ರಸ್ತಾಪ ಇತ್ತು. ಮನೆ ಬಳಿ ಪಾರ್ಕಿಂಗ್ ಸ್ಥಳಕ್ಕೆ ಜಾಗ ಇಲ್ಲದಿದ್ದರೆ ಅಂಥವರಿಗೆ ಕಾರು ಖರೀದಿಸಲು ಅವಕಾಶ ಕೊಡದಿರುವ ಕಾನೂನೊಂದನ್ನು ತರಲು ಆರ್​ಟಿಒ ಯೋಜಿಸಿತ್ತು. ಈ ಯೋಜನೆ ಪ್ರಕಾರ ಕಾರು ಖರೀದಿಸುವವರು ವಾಹನ ಪಾರ್ಕಿಂಗ್ ಸಂಬಂಧ ಬಿಬಿಎಂಪಿಯಿಂದ ಎನ್​ಒಸಿ ಪಡೆಯಬೇಕು ಎಂಬ ಕಾನೂನನ್ನು ತರುವ ಉದ್ದೇಶವಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ