
ನವದೆಹಲಿ, ಮೇ 31: ವಿದೇಶಗಳಲ್ಲಿ ಕೆಲಸ ಮಾಡಿ ಕೈತುಂಬ ಹಣ ಸಂಬಳ ಪಡೆಯಬೇಕೆಂಬ ಹಂಬಲ ಹೆಚ್ಚಿನ ಜನರಲ್ಲಿ ಇರುತ್ತೆ. ವಿದೇಶದಲ್ಲಿ ಕೆಲಸ ಇದೆ ಎಂದು ಯಾವುದಾದರೂ ಜಾಬ್ ಆಫರ್ ಬಂದರೆ ಕಣ್ಮುಚ್ಚಿ ಒಪ್ಪಿ ಬಿಡುತ್ತೇವೆ. ಹೇಗೋ ಒಂದು ಫಾರೀನ್ ಕೆಲಸ ಸಿಕ್ಕರೆ ಸಾಕು ಎಂಬ ಆತುರದಲ್ಲಿ ವಂಚಕರ ಗಾಳಕ್ಕೆ ಬೀಳುವ ಸಾಧ್ಯತೆ ಇದೆ. ಉದ್ಯೋಗ ಕೊಡಿಸುತ್ತೇವೆಂದು ಸುಳ್ಳು ಭರವಸೆ ನೀಡಿ ಕೆಲ ನಕಲಿ ಏಜೆಂಟ್ಗಳು (fake agents) ಹಣ ಲಪಟಾಯಿಸಬಹುದು. ವಂಚಕ ಕಂಪನಿಗಳಲ್ಲಿ ಕೆಲಸ ಮಾಡಲು ಕಳುಹಿಸಬಹುದು. ಹೀಗೆ ವಿವಿಧ ಸಾಧ್ಯತೆಗಳಿವೆ. ಕಾಂಬೋಡಿಯಾ, ಥಾಯ್ಲೆಂಡ್, ಲಾವೋಸ್ ಮೊದಲಾದ ಆಗ್ನೇಯ ಏಷ್ಯನ್ (south east asian countries) ದೇಶಗಳಲ್ಲಿ ಉದ್ಯೋಗಾವಕಾಶ (job offer) ಬಂದರೆ ಹುಷಾರಾಗಿರಿ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಡ್ವೈಸರಿ ಹೊರಡಿಸಿದೆ.
ಕಾಂಬೋಡಿಯಾ, ಲಾವೋಸ್ ಮೊದಲಾದ ಕೆಲಸ ಸೌತ್ ಈಸ್ಟ್ ದೇಶಗಳಲ್ಲಿ ನಕಲಿ ಏಜೆಂಟ್ಗಳು ಚಟುವಟಿಯಲ್ಲಿದ್ದಾರೆ. ಭಾರತದಲ್ಲಿರುವ ಕೆಲ ಏಜೆಂಟ್ಗಳ ಜೊತೆ ಸೇರಿ ಇವರು ಸೈಬರ್ ಕ್ರೈಮ್ಗಳಲ್ಲಿ ತೊಡಗಿರುವ ಸ್ಕ್ಯಾಮ್ ಕಂಪನಿಗಳಿಗೆ ಜನರನ್ನು ಸರಬರಾಜು ಮಾಡುತ್ತಿದ್ದಾರೆ. ಜಾಬ್ ಆಫರ್ ಪಡೆದಿರುವ ಭಾರತೀಯರು ಕಾಂಬೋಡಿಯಾದ ರಾಜಧಾನಿ ನಗರಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಅಮೆರಿಕಕ್ಕೆ ಹೋಗಿ ಭೂಮಿತ್ರ ಮೂಲಕ ರೈತರಿಗೆ ಡಬಲ್ ಧಮಾಕ ಸೃಷ್ಟಿಸುತ್ತಿರುವ ಕನ್ನಡಿಗ ಆದಿತ್ ಮೂರ್ತಿ
ಲಾವೋಸ್ನಲ್ಲಿ ಡಿಜಿಟಲ್ ಸೇಲ್ಸ್ ಅಂಡ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ಸ್ ಕೆಲಸ ಹಾಗೂ ಕಸ್ಟಮರ್ ಸಪೋರ್ಟ್ ಸರ್ವಿಸ್ ಕೆಲಸಗಳಿಗೆ ನೇಮಕಾತಿ ನಡೆಯುತ್ತಿದೆ ಎಂಬ ಜಾಹೀರಾತು ನೀಡಿ ಉದ್ಯೋಗಾಕಾಂಕ್ಷಿಗಳನ್ನು ಸೆಳೆಯುವ ಕೆಲಸ ಮಾಡಲಾಗುತ್ತಿದೆ. ಲಾವೋಸ್ನ ಸ್ಪೆಷಲ್ ಎನಾಮಿಕ್ ಝೋನ್ನಲ್ಲಿ ಕಾಲ್ ಸೆಂಟರ್ ಸ್ಕ್ಯಾಮ್, ಕ್ರಿಪ್ಟೋ ಕರೆನ್ಸಿ ಫ್ರಾಡ್ನಲ್ಲಿ ನಿರತವಾಗಿರುವ ಕಂಪನಿಗಳಿದ್ದು ಅಲ್ಲಿಗೆ ಕಳುಹಿಸಲಾಗುತ್ತಿದೆ. ಭಾರತ, ಸಿಂಗಾಪುರ, ದುಬೈ ಮೊದಲಾದ ಕಡೆ ಈ ಕಂಪನಿಗಳೊಂದಿಗೆ ಸಂಪರ್ಕ ಇರುವ ಏಜೆಂಟ್ಗಳಿದ್ದಾರೆ.
ಥಾಯ್ಲೆಂಡ್ ಅಥವಾ ಲಾವೋಸ್ನಲ್ಲಿ ಕೆಲಸ ಇದೆ ಎಂದು ಏಜೆಂಟ್ ವತಿಯಿಂದ ಟೂರಿಸ್ಟ್ ವೀಸಾ ಕೊಡಿಸಲಾಗಿದ್ದರೆ ಹುಷಾರಾಗಿರಿ. ಇಲ್ಲಿ ಉದ್ಯೋಗ ಮಾಡಬೇಕಾದರೆ ಮುಂಚಿತವಾಗಿಯೇ ವರ್ಕ್ ವೀಸಾ ಪಡೆಯಬೇಕು. ಅಲ್ಲಿಗೆ ಹೋದ ಬಳಿಕ ವರ್ಕ್ ಪರ್ಮಿಟ್ ಪಡೆಯಲು ಆಗುವುದಿಲ್ಲ.
ಭಾರತದಲ್ಲಿರುವ ಅಕ್ರಮ ಏಜೆಂಟ್ಗಳನ್ನು ಸರ್ಕಾರ ಗುರುತಿಸಿ ಪಟ್ಟಿ ಮಾಡುತ್ತದೆ. ಈ ಮುಂದಿನ ವೆಬ್ಸೈಟ್ಗೆ ಹೋದರೆ ಅಧಿಕೃತ ಮತ್ತು ಅನಧಿಕೃತ ಏಜೆಂಟ್ಗಳ ಪಟ್ಟಿ ನೋಡಬಹುದು.
ವೆಬ್ಸೈಟ್ ವಿಳಾಸ ಇಂತಿದೆ: www.emigrate.gov.in
ಇದನ್ನೂ ಓದಿ: ಸರ್ಕಾರಿ ಬೆಂಬಲದ ಪಿಎಂ ವಿದ್ಯಾಲಕ್ಷ್ಮೀ ಯೋಜನೆ; 15 ಲಕ್ಷ ರೂವರೆಗೆ ಸಾಲದ ಅವಕಾಶ
ಇಲ್ಲಿ ಮೈನ್ ಮೆನುನಲ್ಲಿ ರೆಕ್ರುಟಿಂಗ್ ಏಜೆಂಟ್ ಟ್ಯಾಬ್ ಅಡಿಯಲ್ಲಿ ಅನಧಿಕೃತ ಏಜೆಂಟ್ಗಳ ಪಟ್ಟಿಗೆ ಲಿಂಕ್ ಇರುತ್ತದೆ. ಅಧಿಕೃತ ಏಜೆಂಟ್ಗಳ ಪಟ್ಟಿಯನ್ನೂ ಕಾಣಬಹುದು. ಇಲ್ಲಿ ರಾಜ್ಯವಾರು ಪಟ್ಟಿ ವೀಕ್ಷಿಸಲು ಸಾಧ್ಯ. ಕರ್ನಾಟಕದಲ್ಲಿ ಅಧಿಕೃತ ಏಜೆಂಟ್ಸ್ ಯಾರು, ಅನಧಿಕೃತ ಏಜೆಂಟ್ಸ್ ಯಾರು ಎಂಬ ಪಟ್ಟಿ ನಿಮಗೆ ಸಿಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ