ಸರ್ಕಾರಿ ಬೆಂಬಲದ ಪಿಎಂ ವಿದ್ಯಾಲಕ್ಷ್ಮೀ ಯೋಜನೆ; 15 ಲಕ್ಷ ರೂವರೆಗೆ ಸಾಲದ ಅವಕಾಶ

PM Vidya Lakshmi Education Loan Scheme: ಕೇಂದ್ರ ಸರ್ಕಾರ ವಿವಿಧ ವರ್ಗಗಳ ಅಭ್ಯುದಯಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಿವಿಧ ಸಾಲ ಯೋಜನೆಗಳಿವೆ. ಅದರಲ್ಲಿ ಪಿಎಂ ವಿದ್ಯಾಲಕ್ಷ್ಮೀ ಯೋಜನೆ ಒಂದು. 15 ಲಕ್ಷ ರೂವರೆಗೂ ಸಾಲ ಸಿಗುತ್ತದೆ. ಭಾರತದಲ್ಲಿ ಕೋರ್ಸ್ ಮಾಡುವುದಾದರೆ ಏಳೂವರೆ ಲಕ್ಷ ರೂವರೆಗೂ ಸಾಲ ಕೊಡಲಾಗುತ್ತದೆ. ಒಟ್ಟು 14 ಬ್ಯಾಂಕುಗಳಲ್ಲಿ ಸಾಲ ಸಿಗಲಿದ್ದು ನೀವಿಚ್ಛಿಸುವ ಬ್ಯಾಂಕ್ ಅನ್ನು ಸಾಲಕ್ಕೆ ಆಯ್ಕೆ ಮಾಡಿಕೊಳ್ಳಬಹುದು.

ಸರ್ಕಾರಿ ಬೆಂಬಲದ ಪಿಎಂ ವಿದ್ಯಾಲಕ್ಷ್ಮೀ ಯೋಜನೆ; 15 ಲಕ್ಷ ರೂವರೆಗೆ ಸಾಲದ ಅವಕಾಶ
ಶಿಕ್ಷಣ ಸಾಲ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 31, 2024 | 2:53 PM

ಉನ್ನತ ಶಿಕ್ಷಣ ಇವತ್ತು ಬಹಳ ದುಬಾರಿ. ಉತ್ತಮ ವೃತ್ತಿ ಆರಂಭಿಸಲು ಬಹಳ ಅಗತ್ಯ ಇರುವ ಉನ್ನತ ಶಿಕ್ಷಣವನ್ನು ಹಣವಿಲ್ಲವೆಂಬ ಅಸಹಾಯಕತೆಯಿಂದ ಕೈಬಿಡಲು ಆಗುವುದಿಲ್ಲ. ಸಾಲವಾದರೂ ಸರಿ ಶಿಕ್ಷಣ ಪೂರ್ಣಗೊಳಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಇಂಥ ಸಂದರ್ಭಗಳಿಗೆ ಸಹಾಯಕವಾಗುವಂತೆ ಪಿಎಂ ವಿದ್ಯಾಲಕ್ಷ್ಮೀ ಶಿಕ್ಷಣ ಸಾಲ ಯೋಜನೆ (PM Vidya Lakshmi Education Loan Yojana) ಆರಂಭಿಸಿದೆ. 2015ರಿಂದ ಚಾಲನೆಯಲ್ಲಿರುವ ಈ ಸ್ಕೀಮ್​ನಲ್ಲಿ ಭಾರತದ ಯಾವುದೇ ನಾಗರಿಕರು ಸಾಲ ಪಡೆಯಬಹುದಾಗಿದೆ. ಮನೆಯಲ್ಲಿ ಆರ್ಥಿಕ ಸಂಕಷ್ಟದ ಪರಿಸ್ಥಿತಿ ಇರುವ ವಿದ್ಯಾರ್ಥಿಗಳಿಗೆ ಈ ಸಾಲ ಉಪಯುಕ್ತವಾಗುತ್ತದೆ. ಹಣಕಾಸು ತೊಂದರೆಯಿಂದ ಓದಿಗೆ ತೊಂದರೆ ಆಗುವುದನ್ನು ಇದು ತಪ್ಪಿಸುತ್ತದೆ.

ಪಿಎಂ ವಿದ್ಯಾಲಕ್ಷ್ಮೀ ಯೋಜನೆ ಅಡಿಯಲ್ಲಿ ಬ್ಯಾಂಕುಗಳಿಂದ ಸಾಲ ಸಿಗುತ್ತದೆ. ಉನ್ನತ ಶಿಕ್ಷಣದ ಕೋರ್ಸ್ ಭಾರತದಲ್ಲಿಯಾದರೆ ಏಳೂವರೆ ಲಕ್ಷ ರೂವರೆಗೂ ಸಾಲ ಪಡೆಯಬಹುದು. ವಿದೇಶಗಳಲ್ಲಿ ಓದುವುದಾದರೆ 15 ಲಕ್ಷ ರೂವರೆಗೆ ಸಾಲ ಕೊಡಲಾಗುತ್ತದೆ.

ಈ ಯೋಜನೆ ಅಡಿಯಲ್ಲಿ 22 ವಿಧದ ಶಿಕ್ಷಣ ಸಾಲಗಳು ಸಿಗುತ್ತವೆ. 14 ಬ್ಯಾಂಕುಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಅಂದರೆ ಈ 14 ಬ್ಯಾಂಕ್​ಗಳಲ್ಲಿ ಸಾಲ ಪಡೆಯಬಹುದು. ಎಚ್​ಡಿಎಫ್​ಸಿ ಬ್ಯಾಂಕ್, ಕರ್ಣಾಟಕ ಬ್ಯಾಂಕ್, ಐಸಿಐಸಿಐ, ಎಕ್ಸಿಸ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ ಬ್ಯಾಂಕ್ ಇದರಲ್ಲಿ ಒಳಗೊಂಡಿವೆ.

ಇದನ್ನೂ ಓದಿ: ಪಿಪಿಎಫ್​ನಿಂದ ಟ್ರಿಪಲ್ ಲಾಭ; ಉಳಿತಾಯ, ದೀರ್ಘಾವಧಿ ಹೂಡಿಕೆ, ತೆರಿಗೆ ಲಾಭ

ವಿದ್ಯಾಲಕ್ಷ್ಮೀ ಶಿಕ್ಷಣ ಸಾಲ ಒದಗಿಸುವ ಬ್ಯಾಂಕುಗಳಿವು

  1. ಬ್ಯಾಂಕ್ ಆಫ್ ಇಂಡಿಯಾ
  2. ಕೆನರಾ ಬ್ಯಾಂಕ್
  3. ಐಡಿಬಿಐ ಬ್ಯಾಂಕ್
  4. ಅಭ್ಯುದಯ ಬ್ಯಾಂಕ್
  5. ಎಕ್ಸಿಸ್ ಬ್ಯಾಂಕ್
  6. ಜಿಪಿ ಪಾರ್ಸಿಕ್ ಬ್ಯಾಂಕ್
  7. ಎಚ್​ಡಿಎಫ್​ಸಿ ಬ್ಯಾಂಕ್
  8. ಐಸಿಐಸಿಐ ಬ್ಯಾಂಕ್
  9. ದೇನಾ ಬ್ಯಾಂಕ್
  10. ದೊಂಬಿವಿಲಿ ನಗರಿ ಸಹಕಾರಿ ಬ್ಯಾಂಕ್
  11. ಕೋಟಕ್ ಮಹೀಂದ್ರ ಬ್ಯಾಂಕ್
  12. ಅಲಹಾಬಾದ್ ಬ್ಯಾಂಕ್
  13. ಕರ್ಣಾಟಕ ಬ್ಯಾಂಕ್
  14. ಪಂಜಾಬ್ ನ್ಯಾಷನಲ್ ಬ್ಯಾಂಕ್

ವಿದ್ಯಾಲಕ್ಷ್ಮೀ ಶಿಕ್ಷಣ ಸಾಲ ಪಡೆಯಲು ಅರ್ಹತೆ ಏನು?

ಅಭ್ಯರ್ಥಿಯು ಪ್ಲಸ್ 2 ಅಥವಾ ದ್ವಿತೀಯ ಪಿಯು ಮುಗಿಸಿರಬೇಕು. ಪದವಿ, ಮಾಸ್ಟರ್ಸ್ ಇತ್ಯಾದಿ ಕೋರ್ಸ್​ಗೆ ಅರ್ಜಿ ಸಲ್ಲಿಸಿರಬೇಕು. ಈ ಯೋಜನೆಗೆ ಅಧಿಕೃತ ವೆಬ್​ಸೈಟ್ ಅಭಿವೃದ್ದಿಪಡಿಸಲಾಗಿದೆ. ಅದರ ವಿಳಾಸ ಇಂತಿದೆ: vidyalakshmi.co.in/Students/

ಇದನ್ನೂ ಓದಿ: Post Office Accident Insurance: 520 ರೂಗೆ 10 ಲಕ್ಷ ರೂ; 12 ರೂಗೆ 2 ಲಕ್ಷ ರೂ ಆಕ್ಸಿಡೆಂಟ್ ಕವರೇಜ್ ಕೊಡುವ ಅಂಚೆ ಕಚೇರಿ ಸ್ಕೀಮ್​ಗಳು

ಈ ಪೋರ್ಟಲ್​ನಲ್ಲಿ ರಿಜಿಸ್ಟರ್ ಮಾಡಿಕೊಂಡು, ಕಾಮನ್ ಎಜುಕೇಶನ್ ಲೋನ್ ಅಪ್ಲಿಕೇಶನ್ (ಸೆಲಾಫ್) ಅನ್ನು ಭರ್ತಿ ಮಾಡಿ ಸಲ್ಲಿಸಬೇಕು.

ಈ ಸಾಲಕ್ಕೆ ಬಡ್ಡಿದರ ಬ್ಯಾಂಕಿಂಗ್ ಬ್ಯಂಕಿಗೆ ವ್ಯತ್ಯಾಸ ಇರುತ್ತದೆ. ಸಾಮಾನ್ಯವಾಗಿ ಪರ್ಸನಲ್ ಲೋನ್​ಗಿಂತ ಕಡಿಮೆ ಬಡ್ಡಿ ಇರುತ್ತದೆ. ಜನಸಮರ್ಥ್ ವೆಬ್​ಸೈಟ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಿದರೆ ಒಂದಷ್ಟು ಡಿಸ್ಕೌಂಟ್ ಸಿಗುತ್ತದೆ. ಆದರೆ, ಪೋಷಕರ ಆದಾಯ ವರ್ಷಕ್ಕೆ ನಾಲ್ಕೂವರೆ ಲಕ್ಷ ರೂಗಿಂತ ಕಡಿಮೆ ಇರಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ