Loan Apps: ಸಾಲಕ್ಕಾಗಿ ನೀವು ಲೋನ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುತ್ತಿದ್ದೀರಾ? ಗಂಡಾಂತರಕ್ಕೆ ಸಿಲುಕುವ ಮುನ್ನ ಈ ಲೇಖನ ಓದಿಕೊಳ್ಳಿ!
Loan App Fraud: ಲೋನ್ ಅಪ್ಲಿಕೇಶನ್‌ಗಳ ಮೂಲಕ ವಂಚನೆ ಎಸಗುವ ಗುಂಪುಗಳು ಬಹಳ ಸಕ್ರಿಯವಾಗಿವೆ. ಮುಕ್ತವಾಗಿ ಸಾಲ ನೀಡುವ ಹೆಸರಿನಲ್ಲಿ ಜನರು ಕಷ್ಟಪಟ್ಟು ದುಡಿದ ಹಣವನ್ನು ದೋಚುತ್ತಿವೆ ಈ ಲೋನ್ ಅಪ್ಲಿಕೇಶನ್‌ಗಳ ಜಾಲ.
SBI loan safety tips: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಗಳು ಸಾಮಾನ್ಯವಾಗುತ್ತಿವೆ. ಸುಲಭ ಹಣಕ್ಕೆ (Easy Money) ಮಾರುಹೋಗಿರುವ ಕೆಲವರು ತಮ್ಮ ಜ್ಞಾನ ಮತ್ತು ಬುದ್ಧಿವಂತಿಕೆ ಬಳಸಿ ವಂಚನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ವಂಚನೆಗಳು ಹೆಚ್ಚಾಗುತ್ತಿವೆ. ಇವುಗಳಲ್ಲಿ ಹೆಚ್ಚಿನವು ಬ್ಯಾಂಕಿಂಗ್ ವಂಚನೆಗಳಾಗಿವೆ ಎಂದು SBI ಅಧಿಕಾರಿಗಳು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಲೋನ್ ಆಪ್ ವಂಚನೆಗೆ (loan app fraud) ಸಿಲುಕದಂತೆ ಎಸ್‌ಬಿಐ ನೀಡಿರುವ ಕೆಲ ನಿರ್ದಿಷ್ಟ ಸುರಕ್ಷತಾ ಸಲಹೆಗಳು ಇಲ್ಲಿವೆ.
ಜನರ ಅತ್ಯಗತ್ಯಗಳನ್ನು ಅರಿತುಕೊಂಡು ಪಾತಕಿಗಳು ವಂಚನೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ವಿಶೇಷವಾಗಿ ಲೋನ್ ಅಪ್ಲಿಕೇಶನ್‌ಗಳ ವಂಚನೆ ದಂಧೆಯಲ್ಲಿ ನಿರತವಾಗಿರುವ ತಂಡಗಳು ಮುಕ್ತವಾಗಿ ಸಾಲ ನೀಡುವ ಹೆಸರಿನಲ್ಲಿ ಜನ ಕಷ್ಟಪಟ್ಟು ದುಡಿದ ಹಣವನ್ನು ದೋಚುತ್ತಿವೆ. ಆದ್ದರಿಂದ ಯಾವಾಗಲೂ ಜಾಗರೂಕರಾಗಿರಲು ಗ್ರಾಹಕರಿಗೆ ಸಲಹೆ ನೀಡಿದೆ.
ಇಂತಹ ಸಾಲ ವಂಚಕರ ವಿರುದ್ಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಭಿಯಾನ ಆರಂಭಿಸಿದೆ. ಲೋನ್ ಅಪ್ಲಿಕೇಶನ್‌ಗಳ ವಂಚನೆಗಳನ್ನು ತಪ್ಪಿಸಲು 6 ಸುರಕ್ಷತಾ ಸಲಹೆಗಳನ್ನು ಹಂಚಿಕೊಂಡಿದೆ. ಸ್ಮಾರ್ಟ್ ಫೋನ್‌ಗಳಲ್ಲಿ ತ್ವರಿತ ಸಾಲಗಳನ್ನು ಆಯ್ಕೆ ಮಾಡುವಾಗ ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದರಿಂದ ವಂಚನೆಯಿಂದ ಮುಕ್ತಿ ಪಡೆಯಬಹುದು ಎಂಬ ಸಲಹೆ ಕೇಳಿಬಂದಿದೆ.
“ಸಂಶಯಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದನ್ನು ತಪ್ಪಿಸಿ.. ಅದು ನಿಮ್ಮ ಖಾತೆಯಿರುವ ಬ್ಯಾಂಕ್ ಆಗಿರಲಿ ಅಥವಾ ಇತರೆ ಹಣಕಾಸು ಕಂಪನಿಗಳಂತಹ ಮೋಸದ ಕಂಪನಿಗಳಿಗೆ ನಿಮ್ಮ ಮಾಹಿತಿ ನೀಡುವುದನ್ನು ತಪ್ಪಿಸಿ. https://cybercrime.gov.in ನಲ್ಲಿ ಸೈಬರ್ ಅಪರಾಧದ ಬಗ್ಗೆ ಮಾಹಿತಿ ನೀಡಿ ಎಂದು ಎಸ್‌ಬಿಐ ಟ್ವೀಟ್ ಮಾಡಿ, ತಿಳಿಯ ಹೇಳಿದೆ.
SBI ಹಂಚಿಕೊಂಡಿರುವ 6 ಭದ್ರತಾ ಸಲಹೆಗಳು ಹೀಗಿವೆ:
- ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೊದಲು ಅಪ್ಲಿಕೇಶನ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಿ.
- ಯಾವುದೇ ಅನುಮಾನಾಸ್ಪದ ಲಿಂಕ್ ಅನ್ನು ಕ್ಲಿಕ್ ಮಾಡಲೇಬೇಡಿ.
- ನಿಮ್ಮ ಡೇಟಾವನ್ನು ಕದಿಯಬಹುದಾದ ಅನಧಿಕೃತ ಅಪ್ಲಿಕೇಶನ್‌ಗಳ ಬಳಕೆಯನ್ನು ತಪ್ಪಿಸಿ.
- ನಿಮ್ಮ ಡೇಟಾವನ್ನು ಕಳವು ಮಾಡಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅಪ್ಲಿಕೇಶನ್‌ನ ಅನುಮತಿ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ.
- ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಅನುಮಾನಾಸ್ಪದ ಹಣ ಸಾಲ ನೀಡುವ ಅಪ್ಲಿಕೇಶನ್‌ಗಳ ಬಗ್ಗೆ ಮಾಹಿತಿ ನೀಡಿ.
- ನಿಮ್ಮ ಎಲ್ಲಾ ಹಣಕಾಸಿನ ವಹಿವಾಟು, ದೂರುಗಳಿಗಾಗಿ https://bank.sbi ವೆಬ್ ಸೈಟ್ ಗೆ ಭೇಟಿ ನೀಡಿ.
Please refrain from clicking on suspicious links or giving your information to a company posing as a Bank or Financial Company.
Report cybercrimes on – https://t.co/d3aWRrftOA#SBI #AmritMahotsav #SafetyTips #StaySafe #StayVigilant #CyberSafety #ThinkBeforeYouClick pic.twitter.com/9eFYc4VXcU
— State Bank of India (@TheOfficialSBI) July 23, 2022
To read in Telugu click here: