Petrol Price Today: ದೇಶದ ವಿವಿಧ ನಗರಗಳಲ್ಲಿ ಜುಲೈ 28ರಂದು ಪೆಟ್ರೋಲ್, ಡೀಸೆಲ್ ದರ ಹೇಗಿದೆ?

ಸರ್ಕಾರಿ ತೈಲ ಕಂಪನಿಗಳು ಗುರುವಾರ ಬೆಳಗ್ಗೆ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಅಪ್​ಡೇಟ್ ಮಾಡಿವೆ. ಸಾಕಷ್ಟು ಸಮಯಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬದಲಾವಣೆಯಾಗಿಲ್ಲ.

Petrol Price Today: ದೇಶದ ವಿವಿಧ ನಗರಗಳಲ್ಲಿ ಜುಲೈ 28ರಂದು ಪೆಟ್ರೋಲ್, ಡೀಸೆಲ್ ದರ ಹೇಗಿದೆ?
Petrol Price
Follow us
TV9 Web
| Updated By: ನಯನಾ ರಾಜೀವ್

Updated on: Jul 28, 2022 | 10:19 AM

ನವದೆಹಲಿ: ಸರ್ಕಾರಿ ತೈಲ ಕಂಪನಿಗಳು ಗುರುವಾರ ಬೆಳಗ್ಗೆ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಅಪ್​ಡೇಟ್ ಮಾಡಿವೆ. ಸಾಕಷ್ಟು ಸಮಯಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್​ಗೆ 96.72 ರೂ., ಡೀಸೆಲ್​ ಬೆಲೆ 89.62 ರೂ.ನಷ್ಟಿದೆ. ದೇಶದ ಯಾವುದೇ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಮುಂಬೈನಲ್ಲಿ ಪೆಟ್ರೋಲ್​ ಬೆಲೆ 106.31 ರೂ, ಡೀಸೆಲ್ ಬೆಲೆ 94.27ರಷ್ಟಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 106.03 ರೂ, ಡೀಸೆಲ್​ ಬೆಲೆ 92.76 ರೂ. ಇದೆ.

ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 102.63 ರೂ.ನಷ್ಟಿದ್ದು ಸ್ಥಿರವಾಗಿದೆ, ಡೀಸೆಲ್ ಬೆಲೆ 94.24 ರೂ. ಇದೆ. ಕೇಂದ್ರ ಸರ್ಕಾರವು ಮೇ 21ರಂದು ಪೆಟ್ರೋಲ್ ಡೀಸೆಲ್ ಮೇಲೆ ಹಾಕುವ ಅಬಕಾರಿ ಸುಂಕವನ್ನು ಕಡಿಮೆ ಮಾಡಿವೆ.

ಸರ್ಕಾರವು ಪೆಟ್ರೋಲ್​ ದರನ್ನು 8 ರೂ.ನಷ್ಟು ಇಳಿಕೆ ಮಾಡಿತ್ತು, ಹಾಗೂ ಡೀಸೆಲ್ ದರವನ್ನು 6 ರೂ. ಇಳಿಸಿತ್ತು. ಬೆಂಗಳೂರಿನಲ್ಲಿ ಪೆಟ್ರೋಲ್ 101.94 ರೂ. ಇದೆ, ಡೀಸೆಲ್ ದರ 87.87 ರೂ. ಇದೆ.

ನಿಮ್ಮ ನಗರದ ಪೆಟ್ರೋಲ್, ಡೀಸೆಲ್ ದರವನ್ನು ತಿಳಿಯುವುದು ಹೇಗೆ?

ನಿಮ್ಮ ನಗರದ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿದಿನ SMS ಮೂಲಕ ಪರಿಶೀಲಿಸಬಹುದು. ನೀವು ಇಂಡಿಯನ್ ಆಯಿಲ್‌ನ ಗ್ರಾಹಕರಾಗಿದ್ದರೆ, ನೀವು RSP ಡೀಲರ್ ಕೋಡ್ ಅನ್ನು ಬರೆಯುವ ಮೂಲಕ 9224992249 ಸಂಖ್ಯೆಗೆ SMS ಕಳುಹಿಸಬಹುದು ಮತ್ತು ನೀವು HPCL ಗ್ರಾಹಕರಾಗಿದ್ದರೆ ನೀವು HPPRICE ಡೀಲರ್ ಕೋಡ್ ಅನ್ನು ಟೈಪ್ ಮಾಡುವ ಮೂಲಕ 9222201122 ಸಂಖ್ಯೆಗೆ SMS ಕಳುಹಿಸಬಹುದು. BPCL ಗ್ರಾಹಕರು ಡೀಲರ್ ಕೋಡ್ ಅನ್ನು ನಮೂದಿಸುವ ಮೂಲಕ 9223112222 ಗೆ RSP ಅನ್ನು ಕಳುಹಿಸಬಹುದು.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಹೆಚ್ಚಾಗಿ ಡಾಲರ್ ದರದಿಂದ ಪ್ರಭಾವಿತವಾಗಿರುತ್ತದೆ. ಡಾಲರ್ ದುಬಾರಿಯಾಗಿದ್ದರೆ, ಕಚ್ಚಾ ತೈಲವನ್ನು ಖರೀದಿಸುವುದು ಹೆಚ್ಚು ದುಬಾರಿಯಾಗಬಹುದು ಮತ್ತು ಇದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸುತ್ತದೆ. ಈ ಆಧಾರದಲ್ಲಿ ದೇಶದಲ್ಲಿ ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಅದರ ನಂತರ ದರಗಳನ್ನು ಹೊಸದಾಗಿ ನಿಗದಿಪಡಿಸಲಾಗುತ್ತದೆ. ಈ ಕೆಲಸವನ್ನು ದೇಶದ ಪೆಟ್ರೋಲಿಯಂ ಕಂಪನಿಗಳು ಮಾಡುತ್ತವೆ.

ಪೆಟ್ರೋಲ್‌ನಲ್ಲಿ ತೆರಿಗೆಯ ಪಾಲು ಎಷ್ಟು? ಮಾರುಕಟ್ಟೆಯಲ್ಲಿ ಮಾರಾಟವಾಗುವ ಪೆಟ್ರೋಲ್ ಮತ್ತು ಡೀಸೆಲ್‌ಗೆ ಜನರು ಪಾವತಿಸುವ ಅರ್ಧಕ್ಕಿಂತ ಹೆಚ್ಚು ಹಣವು ಕೇಂದ್ರ ಸರ್ಕಾರ ಮತ್ತು ರಾಜ್ಯಗಳಿಂದ ತೆರಿಗೆ ರೂಪದಲ್ಲಿದೆ. ಜನರಿಂದ ಪೆಟ್ರೋಲ್ ಮೇಲೆ ಶೇ.55.5 ಮತ್ತು ಡೀಸೆಲ್ ಮೇಲೆ ಶೇ.47.3 ತೆರಿಗೆ ಸಂಗ್ರಹವಾಗಿದೆ ಎಂದು ಅಂದಾಜಿಸಲಾಗಿದೆ.

ದೇಶದ ಪೆಟ್ರೋಲ್ ಪಂಪ್ ಡೀಲರ್‌ಗಳು ಪ್ರತಿ ಲೀಟರ್‌ಗೆ ಪೆಟ್ರೋಲ್ ಮತ್ತು ಡೀಸೆಲ್‌ಗೆ ಕಮಿಷನ್ ವಿಧಿಸುತ್ತಾರೆ. ಇದರ ಬೆಲೆಯೂ ಪೆಟ್ರೋಲ್ ಮತ್ತು ಡೀಸೆಲ್ ದರಕ್ಕೆ ಸೇರುತ್ತದೆ, ಅದು ದುಬಾರಿಯಾಗುತ್ತದೆ.

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್