Bharti Airtel: ಸಿಂಗ್​ಟೆಲ್​ನಿಂದ ಶೇ.3.33 ಪಾಲನ್ನು ಖರೀದಿಸಲಿರುವ ಭಾರ್ತಿ ಟೆಲಿಕಾಂ

| Updated By: Rakesh Nayak Manchi

Updated on: Aug 25, 2022 | 11:37 AM

ಭಾರ್ತಿ ಏರ್‌ಟೆಲ್ ಪ್ರವರ್ತಕ ಭಾರ್ತಿ ಟೆಲಿಕಾಂ ಸಿಂಗ್‌ಟೆಲ್‌ನಿಂದ ಶೇಕಡಾ 3.33 ಪಾಲನ್ನು 12,895 ಕೋಟಿಗೆ 90 ದಿನಗಳಲ್ಲಿ ಖರೀದಿಸಲಿದೆ. ಈ ಬಗ್ಗೆ ಟೆಲಿಕಾಂ ಆಪರೇಟರ್ ಹೇಳಿದೆ.

Bharti Airtel: ಸಿಂಗ್​ಟೆಲ್​ನಿಂದ ಶೇ.3.33 ಪಾಲನ್ನು ಖರೀದಿಸಲಿರುವ ಭಾರ್ತಿ ಟೆಲಿಕಾಂ
ಸಿಂಗ್​ಟೆಲ್​ನಿಂದ ಶೇ.3.33 ಪಾಲನ್ನು ಖರೀದಿಸಲಿರುವ ಭಾರ್ತಿ ಟೆಲಿಕಾಂ
Follow us on

ಭಾರ್ತಿ ಏರ್‌ಟೆಲ್ ಪ್ರವರ್ತಕ ಭಾರ್ತಿ ಟೆಲಿಕಾಂ ಸಿಂಗ್‌ಟೆಲ್‌ನಿಂದ ಶೇಕಡಾ 3.33 ಪಾಲನ್ನು 2.25 ಬಿಲಿಯನ್ ಸಿಂಗಾಪುರ್ ಡಾಲರ್‌ಗಳಿಗೆ ಅಂದರೆ ಸುಮಾರು 12,895 ಕೋಟಿಗ ರೂಪಾಯಿಗೆ ಖರೀದಿಸಲು ಮುಂದಾಗಿದೆ. ಈ ಪಾಲನ್ನು ಮುಂದಿನ 90 ದಿನಗಳಲ್ಲಿ ಖರೀದಿಸಲಿದೆ ಎಂದು ಟೆಲಿಕಾಂ ಆಪರೇಟರ್ ಗುರುವಾರ ತಿಳಿಸಿದೆ.

“ಸಿಂಗ್‌ಟೆಲ್‌ ಮತ್ತು ಅದರ ಅಂಗಸಂಸ್ಥೆಗಳು ಭಾರ್ತಿ ಟೆಲಿಕಾಂಗೆ ಸರಿಸುಮಾರು 2.25 ಶತಕೋಟಿ ಸಿಂಗಾಪುರ್ ಡಾಲರ್‌ಗಳಿಗೆ ಸರಿಸುಮಾರು 3.33 ರಷ್ಟು ಷೇರುಗಳನ್ನು ವರ್ಗಾಯಿಸಲು ಒಪ್ಪಂದವನ್ನು ಮಾಡಿಕೊಂಡಿವೆ. ಇದು ಏರ್‌ಟೆಲ್‌ನಲ್ಲಿ ಸಿಂಗ್‌ಟೆಲ್‌ ಮತ್ತು ಭಾರ್ತಿಯ ನೇರ ಷೇರುಗಳನ್ನು ಅನುಕ್ರಮವಾಗಿ 10 ಪ್ರತಿಶತ ಮತ್ತು 6 ಪ್ರತಿಶತದಷ್ಟು ಹೊಂದಿದೆ. ಈ ಬಗ್ಗೆ ಭಾರ್ತಿ ಏರ್‌ಟೆಲ್ ಗುರುವಾರ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.

ಶೇ.3.33ರಷ್ಟು ಪಾಲನ್ನು ಖರೀದಿಸುವ ಪ್ರಕ್ರಿಯೆಯು 90 ದಿನಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದ ಟೆಲಿಕಾಂ ಆಪರೇಟರ್, “ಭಾರ್ತಿ ಮತ್ತು ಸಿಂಗ್‌ಟೆಲ್ ಒಂದು ಅವಧಿಯಲ್ಲಿ ಏರ್‌ಟೆಲ್‌ನಲ್ಲಿ ತಮ್ಮ ಪಾಲನ್ನು ಸರಿಗಟ್ಟಲು ಕೆಲಸ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ” ಎಂದು ಹೇಳಿದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:37 am, Thu, 25 August 22