ಅಡುಗೆ ಎಣ್ಣೆಯಲ್ಲಿನ ವಂಚನೆಗಳನ್ನು ತಡೆಗಟ್ಟಲು ಪ್ಯಾಕೇಜಿಂಗ್ ನಿಯಮಗಳನ್ನು ಪರಿಷ್ಕರಿಸಿದ ಕೇಂದ್ರ ಸರ್ಕಾರ
ಅಡುಗೆ ಎಣ್ಣೆಯ ಪ್ರಮಾಣಕ್ಕೆ ಸಂಬಂಧಿಸಿದಂತೆ ನಡೆಯುವ ವಂಚನೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಪ್ಯಾಕೇಜಿಂಗ್‌ಗೆ ಸಂಬಂಧಿಸಿದ ನಿಯಮಗಳನ್ನು ಪರಿಷ್ಕರಿಸಿದೆ. ಆ ಮೂಲಕ ಎಲ್ಲಾ ಖಾದ್ಯ ಎಣ್ಣೆ ತೂಕದಲ್ಲಿ ಅದೇ ತಾಪಮಾನವನ್ನು ಘೋಷಿಸುವುದು ಕಡ್ಡಾಯವಾಗಿದೆ.
ಅಡುಗೆ ಎಣ್ಣೆಯಲ್ಲಿನ ಪ್ರಮಾಣದಲ್ಲಿ ಗ್ರಾಹಕರಿಗೆ ಮಾಡುತ್ತಿರುವ ವಂಚನೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಅಡುಗೆ ಎಣ್ಣೆ ಪ್ಯಾಕೇಜಿಂಗ್‌ಗೆ ಸಂಬಂಧಿಸಿದ ನಿಯಮಗಳನ್ನು ಗುರುವಾರ ಪರಿಷ್ಕರಿಸಿದೆ. ಖಾದ್ಯ ತೈಲದ ತೂಕವು ವಿಭಿನ್ನ ತಾಪಮಾನದಲ್ಲಿ ವಿಭಿನ್ನವಾಗಿರುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಖಾದ್ಯ ತೈಲ ತಯಾರಕರು ಅಥವಾ ಪ್ಯಾಕರ್‌ಗಳು ಅಥವಾ ಆಮದುದಾರರು ತೂಕದಲ್ಲಿ ಅದೇ ತಾಪಮಾನವನ್ನು ಘೋಷಿಸಬೇಕು. ಇದರ ಜೊತೆಗೆ ತಾಪಮಾನವಿಲ್ಲದೆ ಪರಿಮಾಣದಲ್ಲಿ ಅಡುಗೆ ಎಣ್ಣೆಯ ನಿವ್ವಳ ಪ್ರಮಾಣವನ್ನು ಘೋಷಿಸಲು ಕಡ್ಡಾಯಗೊಳಿಸಲಾಗಿದೆ. ಉತ್ಪನ್ನದ ತೂಕದೊಂದಿಗೆ ತಾಪಮಾನವನ್ನು ನಮೂದಿಸದೆ ಪರಿಮಾಣದ ಘಟಕಗಳಲ್ಲಿ ನಿವ್ವಳ ಪ್ರಮಾಣವನ್ನು ಘೋಷಿಸುವ ಲೇಬಲ್ ಅನ್ನು ಸರಿಪಡಿಸುವಂತೆ ಕಂಪನಿಗಳು ಹಾಗೂ ಆಮದುದಾರರಿಗೆ ಗ್ರಾಹಕ ವ್ಯವಹಾರಗಳ ಇಲಾಖೆಯು ಸಲಹೆ ನೀಡಿದೆ.
ಕಾನೂನು ಮಾಪನಶಾಸ್ತ್ರ (ಪ್ಯಾಕೇಜ್ ಮಾಡಲಾದ ಸರಕುಗಳು) ನಿಯಮಗಳು 2011ರ ಅಡಿಯಲ್ಲಿ ಗ್ರಾಹಕರ ಹಿತಾಸಕ್ತಿಯಿಂದ ಎಲ್ಲಾ ಪೂರ್ವ ಪ್ಯಾಕ್ ಮಾಡಲಾದ ಸರಕುಗಳ ಮೇಲಿನ ಇತರ ಘೋಷಣೆಗಳ ಹೊರತಾಗಿ ನಿವ್ವಳ ಪ್ರಮಾಣವನ್ನು ಘೋಷಿಸುವುದು ಕಡ್ಡಾಯವಾಗಿದೆ. ಸಸ್ಯಜನ್ಯ ಎಣ್ಣೆ ಉತ್ಪಾದನಾ ಕಂಪನಿಗಳು ದ್ರವ್ಯರಾಶಿಯ ಘಟಕಗಳೊಂದಿಗೆ ಪ್ಯಾಕಿಂಗ್ ಮಾಡುವ ಸಮಯದಲ್ಲಿ ತಾಪಮಾನವನ್ನು ನಮೂದಿಸುವ ಪರಿಮಾಣದಲ್ಲಿ ಪ್ರಮಾಣವನ್ನು ಘೋಷಿಸುತ್ತಿವೆ ಎಂದು ಸಚಿವಾಲಯ ಗಮನಿಸಿದೆ. ಕೆಲವು ತಯಾರಕರು ತಾಪಮಾನವನ್ನು 600 ಡಿಗ್ರಿ ಸೆಲ್ಸಿಯಸ್‌ನಂತೆ ತೋರಿಸುತ್ತಿದ್ದಾರೆ ಎಂದು ಬೊಟ್ಟು ಮಾಡಿದೆ.
ಖಾದ್ಯ ತೈಲ ತಯಾರಕರು ಅಥವಾ ಪ್ಯಾಕರ್‌ಗಳು ಅಥವಾ ಆಮದುದಾರರು ತಾಪಮಾನವನ್ನು ನಮೂದಿಸದೆ ಉತ್ಪನ್ನಗಳನ್ನು ಪ್ಯಾಕ್ ಮಾಡುವಂತೆ ಹಾಗೂ ಪರಿಮಾಣ ಮತ್ತು ದ್ರವ್ಯರಾಶಿಯಲ್ಲಿ ಪ್ಯಾಕೇಜ್‌ನಲ್ಲಿ ಘೋಷಿಸಲಾದ ಪ್ರಮಾಣವು ಸರಿಯಾಗಿರಬೇಕು ಎಂದು ಕೇಂದ್ರವು ನಿರ್ದೇಶಿಸಿದೆ. ಇದರಿಂದಾಗಿ ಗ್ರಾಹಕರು ಖರೀದಿಯ ಸಮಯದಲ್ಲಿ ಎಣ್ಣೆಯಲ್ಲಿ ಸರಿಯಾದ ಪ್ರಮಾಣವನ್ನು ಪಡೆಯಬಹುದು.
ತಾಪಮಾನದಲ್ಲಿನ ಬದಲಾವಣೆಯು ತೂಕದ ಬದಲಾವಣೆಗಳಿಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಕೇಂದ್ರ ಸಚಿವಾಲಯವು ಎತ್ತಿ ತೋರಿಸಿದೆ:
- 21 ಡಿಗ್ರಿ ಸೆ. 919.1 ಗ್ರಾಂ
- 30 ಡಿಗ್ರಿ ಸೆ. 912 ಗ್ರಾಂ
- 40 ಡಿಗ್ರಿ ಸೆ. 906.2 ಗ್ರಾಂ
- 50 ಡಿಗ್ರಿ ಸೆ. 899.4 ಗ್ರಾಂ
- 60 ಡಿಗ್ರಿ ಸೆ. 892.6 ಗ್ರಾಂ
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:41 pm, Thu, 25 August 22