Bill Gates and Azim Premji Meet: ನನ್ನ ಜೀವನದ ಎರಡು ಮಾದರಿಗಳು, ಬಿಲ್ ಗೇಟ್ಸ್, ಅಜೀಂ ಪ್ರೇಮ್‌ಜಿ ಕೊಂಡಾಡಿದ ವಿಪ್ರೋ ಅಧ್ಯಕ್ಷ
ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಇತ್ತೀಚೆಗೆ ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್‌ಜಿ ಮತ್ತು ಅವರ ತಂದೆ, ವಿಪ್ರೋ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಅವರನ್ನು ಭಾರತದಲ್ಲಿ ಭೇಟಿ ಮಾಡಿದ್ದಾರೆ.

ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ಇತ್ತೀಚೆಗೆ ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್‌ಜಿ ಮತ್ತು ಅವರ ತಂದೆ, ವಿಪ್ರೋ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್‌ಜಿ (Premji Meet) ಅವರನ್ನು ಭಾರತದಲ್ಲಿ ಭೇಟಿ ಮಾಡಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಿಷಾದ್ ಅವರು ತಮ್ಮ ತಂದೆ ಮತ್ತು ಬಿಲ್ ಗೇಟ್ಸ್ ಅವರು ಲೋಕೋಪಕಾರಿಯಾಗಿ ಪೋಸ್ ನೀಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಜೀವನದಲ್ಲಿ ಎರಡು ಮಾದರಿಗಳೊಂದಿಗೆ ನಾನು ನಿಂತಿದ್ದೇನೆ ಎಂದು ವಿಪ್ರೋ ಅಧ್ಯಕ್ಷರು ತಮ್ಮ ಟ್ವಿಟರ್ ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ಫೋಟೋ ಯಾವಾಗ ಅಥವಾ ಎಲ್ಲಿ ತೆಗೆಯಲಾಗಿದೆ ಎಂದು ರಿಷಾದ್ ಹೇಳಲಿಲ್ಲ. ಅವರ ಪೋಸ್ಟ್ RPG ಗ್ರೂಪ್ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರ ಗಮನ ಸೆಳೆದಿತ್ತು. ಚಿತ್ರಕ್ಕೆ ಪ್ರತಿಕ್ರಿಯಿಸಿದ ಗೋಯೆಂಕಾ, ಎಡಭಾಗದಲ್ಲಿರುವ ವ್ಯಕ್ತಿ (ಅಜೀಂ ಪ್ರೇಮ್‌ಜಿ) ನನ್ನ ರೋಲ್ ಮಾಡೆಲ್ ಎಂದು ಕಮೆಂಟ್ ಮಾಡಿದ್ದಾರೆ.
ರಿಷಾದ್ ಅವರ ಪೋಸ್ಟ್ ಅನೇಕರಿಗೆ ಇಷ್ಟವಾಗಿದ್ದು, ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ 293,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 5,600 ಕ್ಕೂ ಹೆಚ್ಚು ಲೈಕ್ -ಪಡೆದುಕೊಂಡಿದೆ. ನೀವು ಒಬ್ಬ ಮಹಾನ್ ವ್ಯಕ್ತಿಗೆ ಜನಿಸಿದ್ದು, ಅವರಿಂದ ನೀವು ಏನು ಪಡೆಯುತ್ತೀರಿ? ನಮ್ರತೆ ಮತ್ತು ಸಂಸ್ಕೃತಿಯನ್ನು ಪಡೆದುಕೊಂಡಿದ್ದೀರಿ. ಎಡಭಾಗದಲ್ಲಿರುವ ವ್ಯಕ್ತಿಯಿಂದ ನಾನು ಸ್ಫೂರ್ತಿ ಪಡೆದಿದ್ದೇನೆ ಎಂದು ಕಾಮೆಂಟ್ ವಿಭಾಗದಲ್ಲಿ ಒಬ್ಬ ಬಳಕೆದಾರರು ಬರೆದಿದ್ದಾರೆ. ಅವರು ಲಕ್ಷಾಂತರ ಜನರಿಗೆ ರೋಲ್ ಮಾಡೆಲ್ ಮತ್ತು ಸ್ಫೂರ್ತಿ ಇನ್ನೊಬ್ಬರು ಹೇಳಿದರು.
ಇದನ್ನೂ ಓದಿ; Bill Gates at India G20: ಜಿ20 ಸಭೆಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಜೊತೆ ಬಿಲ್ ಗೇಟ್ಸ್
ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ಸಹ-ಅಧ್ಯಕ್ಷ ಮತ್ತು ಟ್ರಸ್ಟಿಯಾಗಿರುವ ಗೇಟ್ಸ್, ಕಳೆದ ಕೆಲವು ದಿನಗಳಿಂದ ಭಾರತದಲ್ಲಿದ್ದು ಮತ್ತು ವಿವಿಧ ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಭೇಟಿಯಾಗುತ್ತಿದ್ದಾರೆ. ಇದಕ್ಕೂ ಮುನ್ನ ಅವರು ಕೇಂದ್ರ ಸಚಿವೆ ಸ್ಮೃತಿ ಇರಾನಿ , ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ , ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ , ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಸೇರಿದಂತೆ ಇತರರನ್ನು ಭೇಟಿ ಮಾಡಿದರು.
With two role models ! pic.twitter.com/YaghCwRxdO
— Rishad Premji (@RishadPremji) March 3, 2023
COVID-19 ಸಾಂಕ್ರಾಮಿಕ ರೋಗದ ನಂತರ ಇದು ಬಿಲ್ ಗೇಟ್ಸ್ ಅವರ ಮೊದಲ ಭಾರತ ಭೇಟಿಯಾಗಿದೆ. ಭಾರತವು ನನಗೆ ಭವಿಷ್ಯದ ಭರವಸೆಯನ್ನು ನೀಡುತ್ತದೆ. ಮುಂದಿನ ವಾರ ಭೇಟಿ ನೀಡಲು ನಾನು ಉತ್ಸುಕನಾಗಿದ್ದೇನೆ ಮತ್ತು ಹವಾಮಾನ ಬದಲಾವಣೆ, ಆರೋಗ್ಯ ಮತ್ತು ಹಸಿವಿನಂತಹ ದೊಡ್ಡ ಸವಾಲುಗಳನ್ನು ನಿಭಾಯಿಸಲು ನವೋದ್ಯಮಿಗಳು ಮತ್ತು ಉದ್ಯಮಿಗಳು ಮಾಡುತ್ತಿರುವ ಕೆಲಸವನ್ನು ನೋಡಲು ನಾನು ಉತ್ಸುಕನಾಗಿದ್ದೇನೆ ಎಂದು ಅವರು ಕಳೆದ ವಾರ ಟ್ವೀಟ್ ಮಾಡಿದ್ದಾರೆ.
Published On - 11:43 am, Sat, 4 March 23