Bill Gates: ಒರಾಕಲ್ ಮಾಜಿ ಸಿಇಒ ಪತ್ನಿ ಜತೆ ಬಿಲ್ ಗೇಟ್ಸ್ ಡೇಟಿಂಗ್; ಇಳಿ ವಯಸ್ಸಿನಲ್ಲಿ ಅರಳಿದ ಪ್ರೇಮ!

ಇತ್ತೀಚೆಗೆ ನಡೆದ ಆಸ್ಟ್ರೇಲಿಯನ್ ಓಪನ್​ನ ಪುರುಷರ ಸಿಂಗಲ್ಸ್ ಪಂದ್ಯಾವಳಿ ಸಂದರ್ಭ ಬಿಲ್ ಗೇಟ್ಸ್ ಮತ್ತು ಪೌಲಾ ಹರ್ಡ್‌ ಜತೆಯಾಗಿ ಕಾಣಿಸಿಕೊಂಡಿದ್ದರು.

Bill Gates: ಒರಾಕಲ್ ಮಾಜಿ ಸಿಇಒ ಪತ್ನಿ ಜತೆ ಬಿಲ್ ಗೇಟ್ಸ್ ಡೇಟಿಂಗ್; ಇಳಿ ವಯಸ್ಸಿನಲ್ಲಿ ಅರಳಿದ ಪ್ರೇಮ!
ಬಿಲ್ ಗೇಟ್ಸ್Image Credit source: Reuters
Follow us
Ganapathi Sharma
|

Updated on:Feb 09, 2023 | 4:47 PM

ಜಗತ್ತಿನ ಶ್ರೀಮಂತ ಉದ್ಯಮಿ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) 67ನೇ ಇಳಿವಯಸ್ಸಿನಲ್ಲಿ ಮತ್ತೆ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ! ಹೌದು, ಒರಾಕಲ್‌ ಮಾಜಿ ಸಿಇಒ ಮಾರ್ಕ್‌ ಹರ್ಡ್‌ ಪತ್ನಿ ಪೌಲಾ ಹರ್ಡ್‌ (Paula Hurd) ಜತೆ ಬಿಲ್ ಗೇಟ್ಸ್ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅಂದಹಾಗೆ, ಮಾರ್ಕ್‌ ಹರ್ಡ್‌ 2019ರಲ್ಲಿ ನಿಧನರಾಗಿದ್ದರು. ಅವರ ಪತ್ನಿ ಪೌಲಾ ಹರ್ಡ್​ಗೆ ಈಗ 60 ವರ್ಷ ವಯಸ್ಸು. ಬಿಲ್ ಗೇಟ್ಸ್ 2021ರ ಆಗಸ್ಟ್​​ನಲ್ಲಿ ಪತ್ನಿ ಮೆಲಿಂಡಾ ಫ್ರೆಂಚ್​ ಗೇಟ್ಸ್ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು. ಆ ಮೂಲಕ 27ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ಇತ್ತೀಚೆಗೆ ನಡೆದ ಆಸ್ಟ್ರೇಲಿಯನ್ ಓಪನ್​ನ ಪುರುಷರ ಸಿಂಗಲ್ಸ್ ಪಂದ್ಯಾವಳಿ ಸಂದರ್ಭ ಬಿಲ್ ಗೇಟ್ಸ್ ಮತ್ತು ಪೌಲಾ ಹರ್ಡ್‌ ಜತೆಯಾಗಿ ಕಾಣಿಸಿಕೊಂಡಿದ್ದರು. ವ್ಯಾಲಂಟೈನ್​​ ಡೇ (Valentine’s Day) ಸಮೀಪಿಸುತ್ತಿರುವ ಸಂದರ್ಭದಲ್ಲೇ ಬಿಲ್ ಗೇಟ್ಸ್ ಮತ್ತು ಪೌಲಾ ಹರ್ಡ್‌ ನಡುವಣ ಡೇಟಿಂಗ್ ವಿಚಾರ ಬಹಿರಂಗಗೊಂಡಿದೆ.

ಪೌಲಾ ಹರ್ಡ್‌ ಅವರು ಒರಾಕಲ್ ಸಿಇಒ ಮಾರ್ಕ್‌ ಹರ್ಡ್‌ ಅವರನ್ನು ಮದುವೆಯಾಗಿ 30 ವರ್ಷ ದಾಂಪತ್ಯ ಜೀವನ ನಡೆಸಿದ್ದರು. 2019ರಲ್ಲಿ ಮಾರ್ಕ್‌ ಹರ್ಡ್‌ ನಿಧನರಾಗಿದ್ದು, ನಂತರ ಒಬ್ಬರೇ ವಾಸಿಸುತ್ತಿದ್ದರು ಎಂದು ‘ಪೀಪಲ್​ ಡಾಟ್ ಕಾಂ’ ವರದಿ ಮಾಡಿದೆ. ಪೌಲಾ ಹರ್ಡ್‌ 1984ರಲ್ಲಿ ಯೂನಿವರ್ಸಿಟಿ ಆಫ್ ಟೆಕ್ಸಾಸ್​​ನಿಂದ ಪದವಿ ಪಡೆದಿದ್ದರು.

ಇದನ್ನೂ ಓದಿ: Bill Gates: ಬಿಲ್ ಗೇಟ್ಸ್ ರೋಟಿ ವಿಡಿಯೋಗೆ ಸೂಪರ್ಬ್ ಎಂದ ಪ್ರಧಾನಿ ಮೋದಿ ಕೊಟ್ಟರು ಮತ್ತೊಂದು ಸಲಹೆ

ದಶಕಗಳ ಕಾಲ ಸಾಫ್ಟ್​ವೇರ್ ಕಂಪನಿಯಲ್ಲಿ ಮಾರಾಟ, ಸಹಭಾಗಿತ್ವ ನಿರ್ವಹಣೆ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಉಳ್ಳ ಪೌಲಾ ಹರ್ಡ್‌ ಸದ್ಯ ಡೆವಲಪರ್, ಆರ್ಗನೈಸರ್ ಸೇರಿದಂತೆ ಹಲವು ವಿಷಯಗಳಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎಂಬುದು ಅವರ ಲಿಂಕ್ಡ್​​ಇನ್ ಖಾತೆಯಿಂದ ತಿಳಿದುಬಂದಿದೆ.

ಪೌಲಾ ಹರ್ಡ್‌ ಮತ್ತು ಮಾರ್ಕ್ ಹರ್ಡ್ ದಂಪರಿಗೆ ಇಬ್ಬರು ಮಕ್ಕಳಿದ್ದಾರೆ. ಮೆಲಿಂಡಾ ಅವರ ಜತೆಗಿನ ದಾಂಪತ್ಯ ಜೀವನದಲ್ಲಿ ಬಿಲ್ ಗೇಟ್ಸ್ ಮೂವರು ಮಕ್ಕಳನ್ನು ಹೊಂದಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:41 pm, Thu, 9 February 23