ನವದೆಹಲಿ: ಜಾಗತಿಕ ಐಟಿ ದಿಗ್ಗಜ ಮೈಕ್ರೋಸಾಫ್ಟ್ನ ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ನಿನ್ನೆ ಬುಧವಾರ ಟಾಟಾ ಸನ್ಸ್ ಕಂಪನಿಯ ಛೇರ್ಮನ್ ಎನ್ ಚಂದ್ರಶೇಖರನ್ ಮತ್ತು ಅದರ ಮಾಜಿ ಛೇರ್ಮನ್ ರತನ್ ಟಾಟಾ (Tata Sons Chairman Emeritus Ratan Tata) ಅವರನ್ನು ಭೇಟಿ ಮಾಡಿದ್ದಾರೆ. ಆರೋಗ್ಯ, ತಪಾಸಣೆ (Diagnostics), ನ್ಯೂಟ್ರಿಶನ್ ಮೊದಲಾದ ಕ್ಷೇತ್ರದ ಬಗ್ಗೆ ಮೂವರೂ ಕೂಡ ಚರ್ಚಿಸಿದ್ದು, ಈ ಕ್ಷೇತ್ರಗಳಲ್ಲಿ ಪರಸ್ಪರ ಸಹಯೋಗ, ಸಮನ್ವಯತೆ ಸಾಧಿಸುವ ಬಗೆ ಬಗ್ಗೆ ಮಾತನಾಡಿದರೆನ್ನಲಾಗಿದೆ. ಬಿಲ್ ಗೇಟ್ಸ್ ಮತ್ತು ರತನ್ ಟಾಟಾ ಇಬ್ಬರೂ ಸಾಮಾಜಿಕ ಕಾರ್ಯಗಳಿಗೆ ತಮ್ಮ ಹಣ ವಿನಿಯೋಗ ಮಾಡುವ ವಿರಳ ಉದ್ಯಮಿಗಳ ಪೈಕಿಯವರು. ತಮ್ಮ ಕಂಪನಿಯ ಆದಾಯದಲ್ಲಿ ಬಹಳಷ್ಟು ಹಣವನ್ನು ಇವರು ಲೋಕೋಪಯೋಗಿ ಕಾರ್ಯಗಳಿಗಾಗಿ ದಾನ ನೀಡುತ್ತಾರೆ.
ಈ ಮೂವರ ಸಮ್ಮಿಲನ ಬಹಳಷ್ಟು ಕುತೂಹಲ ಮೂಡಿಸಿದೆ. ಬಿಲ್ ಗೇಟ್ಸ್ ಅವರ ಗೇಟ್ಸ್ ಫೌಂಡೇಶನ್ ಸಂಸ್ಥೆ ಈ ಭೇಟಿಯನ್ನು ಟ್ವೀಟ್ ಮೂಲಕ ದೃಢಪಡಿಸಿದೆ.
ನಮ್ಮ ಸಂಸ್ಥಾಪಕ ಹಾಗೂ ಸಹ–ಛೇರ್ಮನ್ ಬಿಲ್ ಗೇಟ್ಸ್ ಅವರು ರತನ್ ಟಾಟಾ ಮತ್ತು ಎನ್ ಚಂದ್ರಶೇಖರನ್ ಜೊತೆ ಉತ್ತಮ ರೀತಿಯ ಚರ್ಚೆಯಲ್ಲಿ ಭಾಗಿಯಾದರು. ಅವರ ಲೋಕೋಪಯೋಗಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದರು. ಒಟ್ಟಿಗೆ ಕೆಲಸ ಮಾಡಲು ಮತ್ತು ಆರೋಗ್ಯ, ತಪಾಸಣೆ ಮತ್ತು ಪೌಷ್ಟಿಕಾಂಶ ಕ್ಷೇತ್ರದಲ್ಲಿ ಸಹಭಾಗಿತ್ವ ಎದುರುನೋಡುತ್ತಿದ್ದೇವೆ ಎಂದು ಗೇಟ್ಸ್ ಫೌಂಡೇಶನ್ನಿಂದ ಟ್ವೀಟ್ ಆಗಿದೆ.
Our co-chair & founder, @BillGates had an enriching discussion with @RNTata2000 & N. Chandrasekaran, about their philanthropic initiatives. We look forward to strengthening our work together & partnering for health, diagnostics, and nutrition. pic.twitter.com/Xqs1hooDyX
— Gates Foundation India (@BMGFIndia) March 1, 2023
We are all students for life. Today was a wonderful learning opportunity to gain perspectives on philanthropy – including children’s healthcare, which our Foundation works on.
Sharing ideas is a powerful way to solve the world’s challenges.
Thanks for your insights @BillGates! pic.twitter.com/3o0wvHXelU
— Sachin Tendulkar (@sachin_rt) February 28, 2023
Good to see @BillGates again. And, refreshingly, the entire conversation between our teams was not about IT or any business but about how we could work together to multiply social impact. (Though there was some profit involved for me;I got a free, autographed copy of his book?) pic.twitter.com/lZjtnKwmMc
— anand mahindra (@anandmahindra) February 28, 2023
ಅದೇ ವೇಳೆ, ಬಿಲ್ ಗೇಟ್ಸ್ ಅವರು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ಪತ್ನಿ ಅಂಜಲಿ ತೆಂಡೂಲ್ಕರ್ ಅವರನ್ನೂ ಭೇಟಿಯಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಟ್ವಿಟ್ಟರ್ನಲ್ಲಿ ಇದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಕ್ಕಳ ಆರೋಗ್ಯಪಾಲನೆ ಸೇರಿದಂತೆ ಲೋಕೋಪಯೋಗಿ ಕಾರ್ಯಗಳ ಬಗ್ಗೆ ಕಲಿಯುವ ಅದ್ಭುತ ಅವಕಾಶ ಸಿಕ್ಕಿತು ಎಂದು ಸಚಿನ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Adani Shares: ತಿರುಗಿ ನಿಂತ ಅದಾನಿ ಷೇರುಗಳು; ಮಾರದೇ ಬಿಟ್ಟವರಿಗೆ ಹೊಡೆಯುತ್ತಾ ಜಾಕ್ಪಾಟ್?
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್, ಮಹೀಂದ್ರ ಗ್ರೂಪ್ ಛೇರ್ಮನ್ ಆನಂದ್ ಮಹೀಂದ್ರ ಅವರನ್ನೂ ಬಿಲ್ ಗೇಟ್ಸ್ ನಿನ್ನೆ ಬುಧವಾರ ಭೇಟಿ ಮಾಡಿ, ಇದೇ ಲೋಕೋಪಯೋಗಿ, ಸಮಾಜಸೇವೆ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿರುವುದು ತಿಳಿದುಬಂದಿದೆ.
ಭಾರತವನ್ನು ಹೊಗಳಿದ ಗೇಟ್ಸ್
ಹೋರಾಟ ಮನೋಭಾವ, ನಾವೀನ್ಯತೆಗೆ ಭಾರತ ಒಳ್ಳೆಯ ಉದಾಹರಣೆ. ದೊಡ್ಡ ಸಮಸ್ಯೆಗಳನ್ನು ಎದುರಿಸಬಲ್ಲೆ, ಭವಿಷ್ಯದ ಬೆಳಕಾಗಬಲ್ಲೆ ಎಂದು ಅದು ತೋರಿಸಿಕೊಟ್ಟಿದೆ. ಪೋಲಿಯೋ ನಿರ್ಮೂಲನೆ ಮಾಡಿದೆ. ಎಚ್ಐವಿ ಹರಡುವಿಕೆಯನ್ನು ಕಡಿಮೆ ಮಾಡಿದೆ. ಬಡತನ ತಗ್ಗಿಸಿದೆ. ಶಿಶು ಮರಣ ಪ್ರಮಾಣ ಕಡಿಮೆ ಮಾಡಿದೆ. ಶೌಚ ಮತ್ತು ಹಣಕಾಸು ಸೇವೆಗಳನ್ನು ಬಲಯುತಗೊಳಿಸಿದೆ ಎಂದು ಬಿಲ್ ಗೇಟ್ಸ್ ಅಭಿಪ್ರಾಯಪಟ್ಟಿದ್ದಾರೆ.
Published On - 11:31 am, Thu, 2 March 23