ಬೆಂಗಳೂರು, ಸೆಪ್ಟೆಂಬರ್ 28: ನಿನ್ನೆ ಇಲ್ಲಿ ನಡೆಯಬೇಕಿದ್ದ ಟ್ರೆವೊರ್ ನೋವಾ ಅವರ ಕಾಮಿಡಿ ಶೋ (South African standup comedian Trevor Noah) ತಾಂತ್ರಿಕ ತೊಂದರೆಯಿಂದಾಗಿ ರದ್ದುಗೊಂಡಿದೆ. ಸೌತ್ ಆಫ್ರಿಕಾದ ಸ್ಟ್ಯಾಂಡಪ್ ಕಾಮಿಡಿಯನ್ ಟ್ರೆವೊರ್ ಅವರು ನಿನ್ನೆ ವೇದಿಕೆಗೆ ಬಂದು ಶೋ ಶುರು ಮಾಡಲು ಯತ್ನಿಸಿದರೂ ಆಡಿಯೋ ಸಮಸ್ಯೆಯಾಗಿ ಕಾರ್ಯಕ್ರಮ ನಿಲ್ಲಿಸಿದ್ದರು. ಈ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ, ತಮ್ಮ ಕಾಮಿಡಿ ಶೋ ರದ್ದಾಗಿರುವುದನ್ನು ಪ್ರಕಟಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರು ನಿವಾಸಿ ಹಾಗೂ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಷಾ (Kiran Mazumdar Shah), ಟೆಕ್ ಸಿಟಿ ಎನಿಸಿರುವ ಬೆಂಗಳೂರಿನ ಹೆಸರಿಗೆ ಈ ಘಟನೆ ಕಳಂಕ ಆಗಿದೆ ಎಂದು ವಿಷಾದಿಸಿದ್ದಾರೆ.
‘ಬಲವಂತವಾಗಿ ರದ್ದು ಮಾಡಬೇಕಾಯಿತು’: ಟ್ರೆವೊರ್ ನೊವಾ ಅವರ ಬೆಂಗಳೂರು ಕಾರ್ಯಕ್ರಮಗಳನ್ನು ತಾಂತ್ರಿಕ ಸಮಸ್ಯೆಯಿಂದಾಗಿ ರದ್ದುಗೊಳಿಸಲಾಗಿದೆ. ಬೆಂಗಳೂರಿನ ಟೆಕ್ ಇಮೇಜ್ಗೆ ಇದು ಕಪ್ಪುಚುಕ್ಕೆಯಾಗಿದೆ. ಕನ್ವೆನ್ಷನ್ ಸೆಂಟರ್ನವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕಿರಣ್ ಮುಜುಮ್ದಾರ್ ಷಾ ಟ್ವೀಟ್ ಮಾಡಿದ್ದಾರೆ.
“Forced To Cancel”: Trevor Noah’s Bengaluru Shows Junked Over Tech Glitch – what a blot on Bangalore’s tech image. The convention centre has much to introspect https://t.co/qoG2eBWtwW
— Kiran Mazumdar-Shaw (@kiranshaw) September 27, 2023
Dear Bengalaru India, I was so looking forward to performing in your amazing city but due to technical issues we’ve been forced to cancel both shows.
We tried everything but because the audience can’t hear the comedians on stage there’s literally no way to do a show. We’ll make…— Trevor Noah (@Trevornoah) September 27, 2023
ಇದನ್ನೂ ಓದಿ: ಪಿಂಚಣಿದಾರರು ಹಾಸಿಗೆ ಹಿಡಿದಿದ್ದರೆ ಮನೆ ಬಾಗಿಲಿಗೆ ಹೋಗಿ ಲೈಫ್ ಸರ್ಟಿಫಿಕೇಟ್ ಪಡೆಯಿರಿ: ಬ್ಯಾಂಕುಗಳಿಗೆ ಕೇಂದ್ರ ನಿರ್ದೇಶನ
ದಕ್ಷಿಣ ಆಫ್ರಿಕಾದ ಹಾಸ್ಯಗಾರ ಟ್ರೆವೋರ್ ನೋವಾ ಅವರು ನಾಗವಾರಯಲ್ಲಿರುವ ಮ್ಯಾನ್ಫೋ ಕನ್ವೆನ್ಷನ್ ಸೆಂಟರ್ನಲ್ಲಿ ನಿನ್ನೆ ಮತ್ತು ಇವತ್ತು (ಸೆ. 27, 28) ಕಾರ್ಯಕ್ರಮ ನಡೆಸಬೇಕಿತ್ತು. ನಿನ್ನೆ ಕನ್ವೆನ್ಷನ್ ಸೆಂಟರ್ನ ಸಭಾಂಗಣದಲ್ಲಿ ವೇದಿಕೆ ಏರಿ ಕಾರ್ಯಕ್ರಮ ಶುರು ಮಾಡಿದಾಗಲೇ ಗೊತ್ತಾಗಿದ್ದು ತಾಂತ್ರಿಕ ತೊಂದರೆ ಇದೆ ಎಂಬದು. ಸಭಾಂಗಣದಲ್ಲಿ ನೆರೆದಿದ್ದ ಸಭಿಕರಲ್ಲಿ ಒಬ್ಬರಿಗೂ ಕೂಡ ಅವರ ಧ್ವನಿ ಕೇಳುತ್ತಿರಲಿಲ್ಲ. ಈ ಸಮಸ್ಯೆ ಬೇರ ಸರಿಯಾಗಲೂ ಇಲ್ಲ. ಹೀಗಾಗಿ, ಟ್ರೆವೊರ್ ಅವರು ಅನಿವಾರ್ಯವಾಗಿ ಕಾರ್ಯಕ್ರಮ ರದ್ದು ಮಾಡಬೇಕಾಯಿತು.
ಇನ್ನೂ ವಿಚಿತ್ರ ಎಂದರೆ, ನಿನ್ನೆ ಇದೇ ಪ್ರದೇಶದ ಸುತ್ತಮುತ್ತ ಮಾಮೂಲಿಗಿಂತ ತುಸು ಹೆಚ್ಚೇ ಟ್ರಾಫಿಕ್ ಜಾಮ್ ಇತ್ತು. ಹೀಗಾಗಿ, ಶೋಗೆ ಟಿಕೆಟ್ ಬುಕ್ ಮಾಡಿದ್ದವರಲ್ಲಿ ಬಹಳ ಮಂದಿ ತಡವಾಗಿ ಬಂದಿದ್ದರು. ಅವರೆಲ್ಲರೂ ಸಭಾಂಗಣಕ್ಕೆ ಬರುವ ಹೊತ್ತಿಗೆ ಶೋ ರದ್ದಾಗಿರುವುದು ಗೊತ್ತಾಗಿ ಪೆಚ್ಚುಮೋರೆ ಹಾಕಿ ಮರಳಬೇಕಾಯಿತು. ಸದ್ಯ, ಟಿಕೆಟ್ ನೀಡಿದ ಸಂಘಟಕರು, ಸಭಾಂಗಣದವರು ಮತ್ತು ಬುಕ್ ಮೈ ಶೋನವರು ಎಲ್ಲರಿಗೂ ರೀಫಂಡ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ರಣಬೀರ್ ಕಪೂರ್ ಒಟ್ಟೂ ಆಸ್ತಿ ಎಷ್ಟು? ಎಲ್ಲಿಂದ ಬಂತು ಇಷ್ಟೊಂದು ಹಣ?
ಇನ್ನು, ಬೆಂಗಳೂರಿನಲ್ಲಿ ಎರಡು ದಿನ ಶೋ ನಡೆಸಬೇಕಿದ್ದ ಟ್ರೆವೊರ್ ನೋವಾ ಅವರು ಮುಂಬೈನಲ್ಲಿ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1ರಂದು ಶೋ ಕೊಡುತ್ತಿದ್ದಾರೆ. ಅಲ್ಲಿಯೂ ಅವರಿಗೆ ತಾಂತ್ರಿಕ ತೊಂದರೆ ಆಗದಿದ್ದರೆ ಸರಿ..!
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ