ಬಿಟ್​ಕಾಯಿನ್ 72,000 ಡಾಲರ್ ಮೈಲಿಗಲ್ಲು; ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಕ್ರಿಪ್ಟೋ; ಯಾಕಿಷ್ಟು ಏರಿಕೆ ಆಗುತ್ತಿದೆ? ಇಲ್ಲಿದೆ ಕಾರಣ

Why Bitcoin Is In All-time High: ಬಿಟ್​ಕಾಯಿನ್ ಮೌಲ್ಯ ಮೊದಲ ಬಾರಿಗೆ 72,000 ಡಾಲರ್ ಮೈಲಿಗಲ್ಲು ದಾಟಿದೆ. ಒಂದು ಹಂತದಲ್ಲಿ 73,000 ಡಾಲರ್ ಮಟ್ಟದ ಸಮೀಪಕ್ಕೆ ಏರಿತ್ತು. ಕಳೆದ ಆರು ತಿಂಗಳಿಂದ ಬಿಟ್​ಕಾಯಿನ್ ಮೌಲ್ಯ ಮೂರು ಪಟ್ಟು ಹೆಚ್ಚಾಗಿದೆ. ಅಮೆರಿಕದಲ್ಲಿ ಬಡ್ಡಿದರ ಕಡಿಮೆ ಆಗುವ ಸೂಚನೆ ಇರುವುದು, ಮತ್ತು ಬಿಟ್​ಕಾಯಿನ್ ಇಟಿಎಫ್​ಗಳಲ್ಲಿ ಸಾಂಸ್ಥಿಕ ಹೂಡಿಕೆದಾರರಿಂದ ಹಣದ ಹರಿವು ಬರುತ್ತಿರುವುದು ಈ ಕ್ರಿಪ್ಟೋಕರೆನ್ಸಿ ಮೌಲ್ಯ ಹೆಚ್ಚಲು ಕಾರಣವಾಗಿದೆ.

ಬಿಟ್​ಕಾಯಿನ್ 72,000 ಡಾಲರ್ ಮೈಲಿಗಲ್ಲು; ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಕ್ರಿಪ್ಟೋ; ಯಾಕಿಷ್ಟು ಏರಿಕೆ ಆಗುತ್ತಿದೆ? ಇಲ್ಲಿದೆ ಕಾರಣ
ಬಿಟ್​ಕಾಯಿನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 12, 2024 | 11:04 AM

ನವದೆಹಲಿ, ಮಾರ್ಚ್ 12: ವಿಶ್ವದ ಮೊದಲ ಹಾಗೂ ಪ್ರಮುಖ ಕ್ರಿಪ್ಟೋ ಕರೆನ್ಸಿ ಎನಿಸಿರುವ ಬಿಟ್​ಕಾಯಿನ್ (Bitcoin) ಇತ್ತೀಚೆಗೆ ನಾಗಾಲೋಟದಲ್ಲಿದೆ. ಒಂದು ಬಿಟ್​ಕಾಯಿನ್ ಮೌಲ್ಯ ಮೊದಲ ಬಾರಿಗೆ ಬರೋಬ್ಬರಿ 72,000 ಡಾಲರ್ ಮಟ್ಟದ ಮೈಲಿಗಲ್ಲು ಮುಟ್ಟಿದೆ. ಒಂದು ಹಂತದಲ್ಲಿ ಅದರ ಮೌಲ್ಯ 77,700 ಡಾಲರ್ ಗಡಿ ದಾಟಿ ಹೋಗಿತ್ತು. ಇವತ್ತು ಅದು 71,870 ಡಾಲರ್ ದರದಲ್ಲಿ ವಹಿವಾಟು ಕಾಣುತ್ತಿದೆ. ಕಳೆದ ಆರು ತಿಂಗಳಿಂದ ಬಿಟ್​ಕಾಯಿನ್ ಬೆಲೆ ರಾಕೆಟ್​ನಂತೆ ಏರುತ್ತಿದೆ. ಸೆಪ್ಟೆಂಬರ್​ನಲ್ಲಿ 25,000 ಡಾಲರ್ ಆಸುಪಾಸಿನಲ್ಲಿ ಇದ್ದ ಬಿಟ್​ಕಾಯಿನ್ ಬೆಲೆ ಬಹುತೇಕ ಮೂರು ಪಟ್ಟು ಹೆಚ್ಚಿರುವುದು ಸೋಜಿಗವೇ ಸರಿ.

ಬಿಟ್​ಕಾಯಿನ್​ಗೆ ಯಾಕಿಷ್ಟು ಬೇಡಿಕೆ?

ಬಿಟ್​ಕಾಯಿನ್ ಡಿಜಿಟಲ್ ಕರೆನ್ಸಿ ಇಷ್ಟು ವೇಗದಲ್ಲಿ ಓಡುತ್ತಿರುವುದು ಯಾಕೆ ಎಂದು ಕ್ರಿಪ್ಟೋ ಮಾರುಕಟ್ಟೆ ತಜ್ಞರು ಎರಡು ಪ್ರಮುಖ ಕಾರಣಗಳನ್ನು ಪ್ರಸ್ತಾಪಿಸಿದ್ದಾರೆ. ಒಂದು, ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಸಂಸ್ಥೆ ಬಡ್ಡಿದರ ಕಡಿಮೆ ಮಾಡಬಹುದು ಎನ್ನುವ ನಿರೀಕ್ಷೆ. ಇನ್ನೊಂದು ಕಾರಣವೆಂದರೆ, ಬಿಟ್​ಕಾಯಿನ್ ಇಟಿಎಫ್​ಗಳು.

ಅಮೆರಿಕದಲ್ಲಿ ಬಡ್ಡಿದರ ಕಡಿಮೆ ಆಗುತ್ತಿದೆ ಎಂದರೆ ಸಹಜವಾಗಿ ಅದರ ಲಾಭ ಷೇರು ಮಾರುಕಟ್ಟೆ, ಚಿನ್ನ ಮತ್ತಿತರ ಕಡೆ ಹೋಗುತ್ತದೆ. ಬಹಳಷ್ಟು ಹೂಡಿಕೆದಾರರು ಚಿನ್ನ ಖರೀದಿಸುತ್ತಿದ್ದಾರೆ. ಹಾಗೆಯೇ, ಬಿಟ್​ಕಾಯಿನ್​ನಂಥ ಕ್ರಿಪ್ಟೋಕರೆನ್ಸಿಗಳ ಮೇಲೆಯೂ ಹೂಡಿಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಕಾರ್ ಲೋನ್​ಗೆ ನಿಮ್ಮ ಕನಿಷ್ಠ ಸಿಬಿಲ್ ಸ್ಕೋರ್ ಎಷ್ಟಿರಬೇಕು? ಇಲ್ಲಿದೆ ಡೀಟೇಲ್ಸ್

ಇನ್ನು ಬಿಟ್​ಕಾಯಿನ್ ಇಟಿಎಫ್ ಅಥವಾ ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್​ಗಳಲ್ಲಿ ಸಾಂಸ್ಥಿಕ ಹೂಡಿಕೆದಾರರಿಂದ ಬಹಳಷ್ಟು ಬಂಡವಾಳ ಹರಿದುಬರುತ್ತಿದೆ. ಹೀಗಾಗಿ, ಬಿಟ್​ಕಾಯಿನ್ ಸಾರ್ವಕಾಲಿಕ ಗರಿಷ್ಠ ಮಟ್ಟ ದಾಟಿ ಹೋಗುತ್ತಲೇ ಇದೆ.

ಬಿಟ್​ಕಾಯಿನ್ ಮಾತ್ರವಲ್ಲ, ಎಥಿರಿಯಮ್, ಬಿಎನ್​ಬಿ, ಟೆಥರ್, ಸೊಲಾನ, ಡೋಜೆಕಾಯಿನ್ ಇತ್ಯಾದಿ ಹಲವು ಕ್ರಿಪ್ಟೊಕರೆನ್ಸಿಗಳೂ ಕೂಡ ಬೇಡಿಕೆ ಪಡೆದಿವೆ. ಕ್ರಿಪ್ಟೋ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಸಾಕಷ್ಟು ಕಲರವ ನಡೆಯುತ್ತಿದೆ.

ಬಿಟ್​ಕಾಯಿನ್ ಏರಿಳಿತದ ಹಾದಿ…

ಇದು ವಿಶ್ವದ ಮೊದಲ ಕ್ರಿಪ್ಟೋಕರೆನ್ಸಿ. 2008ರಲ್ಲಿ ಇದರ ಆವಿಷ್ಕಾರ ಆದುದು. ಸರ್ಕಾರ ಅಥವಾ ಬ್ಯಾಂಕುಗಳ ನಿಯಂತ್ರಣ ಇಲ್ಲದೆ ಮುಕ್ತವಾಗಿರುವುದ ಕ್ರಿಪ್ಟೋದ ವಿಶೇಷತೆ. 2017ರಲ್ಲಿ ಮೊದಲ ಬಾರಿಗೆ ಇದು ಏರಿಕೆ ಕಂಡಿತ್ತು. ಆ ವರ್ಷದ ಆರಂಭದಲ್ಲಿ ಸಾವಿರ ರೂ ಒಳಗಿದ್ದ ಅದರ ಬೆಲೆ ವರ್ಷಾಂತ್ಯದಲ್ಲಿ10 ಪಟ್ಟು ಹೆಚ್ಚಾಗಿತ್ತು.

ಇದನ್ನೂ ಓದಿ: ಮಾ. 1ರ ವಾರದಲ್ಲಿ ಭಾರತದ ಫಾರೆಕ್ಸ್ ಮೀಸಲು ನಿಧಿ 625 ಬಿಲಿಯನ್ ಡಾಲರ್​ಗೆ ಏರಿಕೆ

ಅದಾದ ಬಳಿಕ ಎರಡನೇ ಬಾರಿ ಹೈಜಂಪ್ ಆಗಿದ್ದು ಕೋವಿಡ್ ಕಾಲಘಟ್ಟವಾದ 2020-21ರಲ್ಲಿ. ಈಗ ಮತ್ತೊಮ್ಮೆ ಸೂಪರ್ ಜಿಗಿತ ಕಂಡಿದೆ.

ಬಿಟ್​ಕಾಯಿನ್ ಸೇರಿದಂತೆ ಕ್ರಿಪ್ಟೋಕರೆನ್ಸಿಗಳು ನೀರ ಮೇಲಣ ಗುಳ್ಳೆಗಳಂತೆ ಮಾತ್ರ ಎಂದು ಹಲವು ಪರಿಣಿತರು ಎಚ್ಚರಿಸುತ್ತಲೇ ಇದ್ದಾರೆ. ಆದರೂ ಕ್ರಿಪ್ಟೋಗಳಿಗೆ ಬೇಡಿಕೆ ಕಡಿಮೆ ಆಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು