World’s Richest Person: ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿ; ನಾಲ್ಕನೇ ಸ್ಥಾನಕ್ಕೆ ಕುಸಿದ ಗೌತಮ್ ಅದಾನಿ

Bloomberg Billionaires Index; 188 ಶತಕೋಟಿ ಡಾಲರ್ ಒಟ್ಟು ನಿವ್ವಳ ಸಂಪತ್ತಿನೊಂದಿಗೆ ಬರ್ನಾರ್ಡ್ ಅರ್ನಾಲ್ಟ್ ಮೊದಲ ಸ್ಥಾನದಲ್ಲಿದ್ದರೆ, 145 ಶತಕೋಟಿ ಡಾಲರ್ ಒಟ್ಟು ನಿವ್ವಳ ಸಂಪತ್ತಿನೊಂದಿಗೆ ಎಲಾನ್ ಮಸ್ಕ್ ಎರಡನೇ ಸ್ಥಾನದಲ್ಲಿದ್ದಾರೆ.

World's Richest Person: ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿ; ನಾಲ್ಕನೇ ಸ್ಥಾನಕ್ಕೆ ಕುಸಿದ ಗೌತಮ್ ಅದಾನಿ
ಗೌತಮ್ ಅದಾನಿ (ಸಂಗ್ರಹ ಚಿತ್ರ)Image Credit source: PTI
Follow us
Ganapathi Sharma
|

Updated on:Jan 24, 2023 | 11:20 AM

ನವದೆಹಲಿ: ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಉದ್ಯಮಿ ಗೌತಮ್ ಅದಾನಿ (Gautam Adani) ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ‘ಬ್ಲೂಮ್​ಬರ್ಗ್ ಕೋಟ್ಯಧಿಪತಿಗಳ ಸೂಚ್ಯಂಕ’ದಲ್ಲಿ (Bloomberg Billionaires Index) ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ (Jeff Bezos) ಮೂರನೇ ಸ್ಥಾನಕ್ಕೇರಿದ್ದಾರೆ. ಮೊದಲ ಎರಡು ಸ್ಥಾನಗಳಲ್ಲಿ ಕ್ರಮವಾಗಿ ಬರ್ನಾರ್ಡ್ ಅರ್ನಾಲ್ಟ್ ಹಾಗೂ ಎಲಾನ್ ಮಸ್ಕ್ ಇದ್ದಾರೆ. ಇವರಿಬ್ಬರ ಸ್ಥಾನದಲ್ಲಿ ಬದಲಾವಣೆ ಆಗಿಲ್ಲ. ರಿಲಯನ್ಸ್ ಸಮೂಹದ ಅಧ್ಯಕ್ಷ ಮುಕೇಶ್ ಅಂಬಾನಿ ಅವರೂ ಒಂದು ಸ್ಥಾನ ಕುಸಿದಿದ್ದಾರೆ. ಅದಾನಿ ಅವರ ಸಂಪತ್ತು 24 ಗಂಟೆ ಅವಧಿಯಲ್ಲಿ 872 ದಶಲಕ್ಷ ಡಾಲರ್​​ ಕುಸಿದಿದೆ. ಒಟ್ಟಾರೆಯಾಗಿ 683 ದಶಲಕ್ಷ ಡಾಲರ್​ ಕಳೆದುಕೊಂಡಿದ್ದಾರೆ. ಆದಾಗ್ಯೂ ಅದಾನಿ ಮತ್ತು ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಗಳಾಗಿಯೇ ಮುಂದುವರಿದಿದ್ದಾರೆ.

ಬ್ಲೂಮ್​ಬರ್ಗ್​ ಕೋಟ್ಯಧಿಪತಿಗಳ ಸೂಚ್ಯಂಕ

ಬ್ಲೂಮ್​ಬರ್ಗ್​ ಕೋಟ್ಯಧಿಪತಿಗಳ ಸೂಚ್ಯಂಕ ಪ್ರತಿ ದಿನದ ರ್ಯಾಂಕಿಂಗ್ ಆಗಿದೆ. ಜಗತ್ತಿನ ಅತ್ಯಂತ ಶ್ರೀಮಂತ 500 ಮಂದಿಯ ಹೆಸರು ಒಳಗೊಂಡ ಪಟ್ಟಿ ಇದಾಗಿದೆ. 2012ರಲ್ಲಿ ಮೊದಲು ಈ ಪಟ್ಟಿ ಪ್ರಕಟಗೊಂಡಿತ್ತು. ಆಗ ಅತ್ಯಂತ ಶ್ರೀಮಂತರ 20 ಹೆಸರುಗಳನ್ನು ಪಟ್ಟಿ ಒಳಗೊಂಡಿತ್ತು. ಕ್ರಮೇಣ ಸಂಖ್ಯೆಯನ್ನು 100, 200 ಹೀಗೆ ಹೆಚ್ಚಿಸುತ್ತಾ 2016ರಲ್ಲಿ 500ಕ್ಕೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: Gautam Adani: ಐದು ಕಂಪನಿಗಳ ಐಪಿಒಗೆ ಉದ್ಯಮಿ ಗೌತಮ್ ಅದಾನಿ ಚಿಂತನೆ

188 ಶತಕೋಟಿ ಡಾಲರ್ ಒಟ್ಟು ನಿವ್ವಳ ಸಂಪತ್ತಿನೊಂದಿಗೆ ಬರ್ನಾರ್ಡ್ ಅರ್ನಾಲ್ಟ್ ಮೊದಲ ಸ್ಥಾನದಲ್ಲಿದ್ದರೆ, 145 ಶತಕೋಟಿ ಡಾಲರ್ ಒಟ್ಟು ನಿವ್ವಳ ಸಂಪತ್ತಿನೊಂದಿಗೆ ಎಲಾನ್ ಮಸ್ಕ್ ಎರಡನೇ ಸ್ಥಾನದಲ್ಲಿದ್ದಾರೆ. 121 ಶತಕೋಟಿ ಡಾಲರ್ ಒಟ್ಟು ನಿವ್ವಳ ಸಂಪತ್ತಿನೊಂದಿಗೆ ಜೆಫ್​ ಬೆಜೋಸ್ ಮೂರನೇ ಸ್ಥಾನದಲ್ಲಿದ್ದಾರೆ. 120 ಶತಕೋಟಿ ಡಾಲರ್ ಒಟ್ಟು ನಿವ್ವಳ ಸಂಪತ್ತಿನೊಂದಿಗೆ ಗೌತಮ್ ಅದಾನಿ ನಾಲ್ಕನೇ ಸ್ಥಾನದಲ್ಲಿದ್ದರೆ, 111 ಶತಕೋಟಿ ಡಾಲರ್ ಒಟ್ಟು ನಿವ್ವಳ ಸಂಪತ್ತಿನೊಂದಿಗೆ ಬಿಲ್ ಗೇಟ್ಸ್ 5ನೇ ಸ್ಥಾನದಲ್ಲಿದ್ದಾರೆ. ವಾರನ್ ಬಫೆಟ್, ಲ್ಯಾರಿ ಎಲ್ಲಿಸನ್, ಲ್ಯಾರಿ ಪೇಜ್, ಸೆರೆಗೆ ಬ್ರಿನ್, ಸ್ಟೀವ್ ಬ್ಲೇಮರ್ ಕ್ರಮವಾಗಿ 6, 7, 8, 9 ಹಾಗೂ 10ನೇ ಸ್ಥಾನದಲ್ಲಿದ್ದಾರೆ. 84.7 ಶತಕೋಟಿ ಡಾಲರ್ ಒಟ್ಟು ನಿವ್ವಳ ಸಂಪತ್ತಿನೊಂದಿಗೆ ಮುಕೇಶ್ ಅಂಬಾನಿ 12ನೇ ಸ್ಥಾನದಲ್ಲಿದ್ದಾರೆ.

ಕರಗುತ್ತಿದೆಯೇ ಅದಾನಿ ಸಂಪತ್ತು?

ಸಾಲ ಮರುಪಾವತಿ ಮತ್ತು ಒತರ ಅಭಿವೃದ್ಧಿ ಯೋಜನೆಗಳಲ್ಲಿ ಹೂಡಿಕೆಗಾಗಿ ಬಂಡವಾಳ ಸಂಗ್ರಹಿಸಲು ಅದಾನು ಸಮೂಹದ ಅದಾನಿ ಎಂಟರ್​ಪ್ರೈಸಸ್ ಎಫ್​ಪಿಒ (Follow-On Public Offer) ಮೂಲಕ ಬಂಡವಾಳ ಸಂಗ್ರಹಿಸುವುದಾಗಿ ಕಳೆದ ವಾರ ಘೋಷಿಸಿತ್ತು. ಈ ಮೂಲಕ 20,000 ಕೋಟಿ ರೂ. ಸಂಗ್ರಹದ ಗುರಿಯನ್ನು ಕಂಪನಿ ಹೊಂದಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ, ಗೌತಮ್ ಅದಾನಿ 2028ರ ಅವಧಿಯಲ್ಲಿ ತಮ್ಮ ಒಡೆತನದ ಐದು ಕಂಪನಿಗಳ ಷೇರುಗಳ ಐಪಿಒ ಅಥವಾ ಆರಂಭಿಕ ಸಾರ್ವಜನಿಕ ಕೊಡುಗೆಗೆ ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಸಾಲದ ಅನುಪಾತಗಳನ್ನು ಸುಧಾರಿಸಲು ಮತ್ತು ಹೂಡಿಕೆದಾರರ ನೆಲೆಯನ್ನು ವಿಸ್ತರಣೆ ಮಾಡುವುದಕ್ಕಾಗಿ ಅವರು ಈ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:17 am, Tue, 24 January 23

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ