ಫ್ರೀಡಂ ಆ್ಯಪ್ ಖರೀದಿಸಿದ ಬಾಸ್ ವಾಲಾ; ಹೊಸ ಬಿಸಿನೆಸ್ ಮಾಡುವವರಿಗೆ ಉತ್ತಮ ಪ್ಲಾಟ್​ಫಾರ್ಮ್ ಒದಗಿಸಲು ಯೋಜನೆ

Boss Wallah acquires Ffreedom app: ಹೂಡಿಕೆದಾರ ಹಾಗೂ ಉದ್ಯಮಿ ಶಶಿ ರೆಡ್ಡಿ ನೇತೃತ್ವದ ಬಾಸ್ ವಾಲಾ ಸಂಸ್ಥೆ ಶಿಕ್ಷಣ ತಂತ್ರಜ್ಞಾನ ಪ್ಲಾಟ್​ಫಾರ್ಮ್ ಅದ ಫ್ರೀಡಂ ಆ್ಯಪ್ ಅನ್ನು ಖರೀದಿ ಮಾಡಿದೆ. ಫ್ರೀಡಂ ಆ್ಯಪ್​ನ ಮಾಲೀಕ ಸಂಸ್ಥೆಯಾದ ಸುವಿಶನ್ ಹೋಲ್ಡಿಂಗ್ಸ್ ಜೊತೆ ಬಾಸ್ ವಾಲಾ ಒಪ್ಪಂದ ಮಾಡಿಕೊಂಡಿದೆ. ಸಣ್ಣ ಪಟ್ಟಣಗಳಲ್ಲಿರುವ ಉದ್ಯಮಾಕಾಂಕ್ಷಿಗಳಿಗೆ ಸಣ್ಣ ಉದ್ದಿಮೆಗಳನ್ನು ಆರಂಭಿಸಲು ನೆರವಾಗುವ ಒಂದು ಪ್ಲಾಟ್​ಫಾರ್ಮ್ ಆಗಿ ರೂಪಿಸುವ ಗುರಿ ಬಾಸ್ ವಾಲಾದ್ದು.

ಫ್ರೀಡಂ ಆ್ಯಪ್ ಖರೀದಿಸಿದ ಬಾಸ್ ವಾಲಾ; ಹೊಸ ಬಿಸಿನೆಸ್ ಮಾಡುವವರಿಗೆ ಉತ್ತಮ ಪ್ಲಾಟ್​ಫಾರ್ಮ್ ಒದಗಿಸಲು ಯೋಜನೆ
ಶಶಿ ರೆಡ್ಡಿ

Updated on: Feb 28, 2025 | 11:10 AM

ಬೆಂಗಳೂರು, ಫೆಬ್ರುವರಿ 28: ಸಾಮಾನ್ಯ ಜ್ಞಾನ, ಕರೆಂಟ್ ಅಫೇರ್ಸ್ ಇತ್ಯಾದಿ ಶೈಕ್ಷಣಿಕ ಮಾಹಿತಿಯನ್ನು ಒದಗಿಸುವ ಫ್ರೀಡಂ ಆ್ಯಪ್ (ffreedom app) ಅನ್ನು ಬಾಸ್ ವಾಲಾ (Boss Wallah) ಸಂಸ್ಥೆ ಖರೀದಿ ಮಾಡಿದೆ. ಉದ್ಯಮಿ ಹಾಗೂ ಹೂಡಿಕೆದಾರರಾದ ಶಶಿ ರೆಡ್ಡಿ (Shashi Reddi) ಮಾಲಕತ್ವದ ಬಾಸ್ ವಾಲಾ ಸಂಸ್ಥೆ ಫ್ರೀಡಂ ಆ್ಯಪ್ ಖರೀದಿಸಲು ಸುವಿಶನ್ ಹೋಲ್ಡಿಂಗ್ಸ್ ಪ್ರೈ ಲಿ ಸಂಸ್ಥೆ ಜೊತೆ ಅಧಿಕೃತ ಒಪ್ಪಂದ ಮಾಡಿಕೊಂಡಿದೆ.

ಫ್ರೀಡಂ ಆ್ಯಪ್​ನಲ್ಲಿ ಈಗಿರುವಂತೆ ಮಾಹಿತಿ ಪ್ರಸ್ತುತಿ ಮುಂದುವರಿಸುವುದರ ಜೊತೆಗೆ ವಿವಿಧ ಬಿಸಿನೆಸ್​ಗಳನ್ನು ಸ್ಥಾಪಿಸಲು ಆಸಕ್ತಿ ಹೊಂದಿರುವವರಿಗೆ ತಜ್ಞರ ಸಲಹೆಗಳನ್ನು ಒದಗಿಸುವ ಒಂದು ಪ್ಲಾಟ್​ಫಾರ್ಮ್ ಆಗಿಯೂ ಇದನ್ನು ರೂಪಿಸಲು ಉದ್ದೇಶಿಸಲಾಗಿದೆ. ಎರಡನೇ ಮತ್ತು ಮೂರನೇ ಸ್ತರದ ನಗರ ಮತ್ತು ಪಟ್ಟಣಗಳಲ್ಲಿನ ಜನರಿಗೆ ಒಂದು ಯಶಸ್ವಿ ಬ್ಯುಸಿನೆಸ್ ಸ್ಥಾಪಿಸಲು ಅಗತ್ಯವಾದ ಸಂಪನ್ಮೂಲಗಳ ಕೊರತೆ ಇದ್ದು, ಅದನ್ನು ನೀಗಿಸಲು ಯತ್ನಿಸಲಾಗುವುದು ಎಂದು ಬಾಸ್ ವಾಲಾ ಸಂಸ್ಥೆ ಹೇಳಿಕೊಂಡಿದೆ.

ಇದನ್ನೂ ಓದಿ: 21,000 ಕಿಮೀ ಕಂಬಗಳು, 100 ಕಿಮೀ ಬಟ್ಟೆಗಳು; ವಾಟರ್ ಡ್ರೋನ್, ಎಐ ಕ್ಯಾಮರಾಗಳು… ಅಬ್ಬಬ್ಬ ಅನಿಸುವಂತಿತ್ತು ಮಹಾಕುಂಭಕ್ಕೆ ಮಾಡಿದ ವ್ಯವಸ್ಥೆ

‘ಜೆಇಇ ಮತ್ತು ಸರ್ಕಾರಿ ಪರೀಕ್ಷೆಗಳಿಗೆ ಸಿದ್ಧವಾಗಲು ಹಲವಾರು ಪ್ಲಾಟ್​ಫಾರ್ಮ್​ಗಳಿವೆ. ಆದರೆ, ಉದ್ಯೋಗ ಸೃಷ್ಟಿಸುವ ಮತ್ತು ಆದಾಯ ತಂದುಕೊಡಬಲ್ಲ ಬ್ಯುಸಿನೆಸ್​ಗಳನ್ನು ಆರಂಭಿಸುವ ಅವಶ್ಯಕತೆ ಈಗ ದೇಶಕ್ಕಿದೆ. ಈ ಕೆಲಸವನ್ನು ಬಾಸ್ ವಾಲಾ ಪ್ಲಾಟ್​ಫಾರ್ಮ್​ನಲ್ಲಿ ಮಾಡಲಾಗುವುದು’ ಎಂದು ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಶಶಿ ರೆಡ್ಡಿ ಹೇಳಿದ್ದಾರೆ.

ಫ್ರೀಡಂ ಆ್ಯಪ್​ನಲ್ಲಿ ಬಾಸ್ ವಾಲಾ ಸದ್ಯ ಸುಮಾರು 60 ಕೋಟಿ ರೂನಷ್ಟು ಆರಂಭಿಕ ಹೂಡಿಕೆ ಮಾಡಲಿದೆ. ಡಿಜಿಟಲ್ ಬಿಸಿನೆಸ್, ಕರಕುಶಲ, ಕೃಷಿ, ಪಶುಸಂಗೋಪನೆ, ರೀಟೇಲ್, ಆಹಾರ, ಸಣ್ಣ ಉದ್ದಿಮೆ ಇತ್ಯಾದಿ ವಿವಿಧ ವಿಭಾಗಗಳಲ್ಲಿ ಮೊದಲಿಗೆ ಗಮನ ಹರಿಸಲು ಬಾಸ್ ವಾಲಾ ಸಿಇಒ ಶಶಿ ರೆಡ್ಡಿ ನಿರ್ಧರಿಸಿದ್ದಾರೆ. ಇಂಥ ವ್ಯವಹಾರಗಳನ್ನು ಆರಂಭಿಸಲು ಹೆಚ್ಚು ಬಂಡವಾಳದ ಅವಶ್ಯಕತೆ ಇರುವುದಿಲ್ಲ. 2-3 ಜನರಿಗೆ ಉದ್ಯೋಗ ಕೂಡ ನೀಡಬಹುದು. ದೊಡ್ಡ ನಗರಗಳಿಗೆ ಹೋಗುವ ಬದಲು ತಮ್ಮ ಪಟ್ಟಣಗಳಲ್ಲೇ ಇದ್ದು ಬಿಸಿನೆಸ್ ಮಾಡಬಹುದು ಎಂಬುದು ಬಾಸ್ ವಾಲಾ ಆಶಯ.

ಇದನ್ನು ಓದಿ: 2025-26ರಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇ. 7ರಷ್ಟು ಹೆಚ್ಚಳ; ದ್ವಿಚಕ್ರ ವಾಹನಗಳು ಶೇ. 6-9 ಹೆಚ್ಚು ಸೇಲ್: ಇಕ್ರ ಅಂದಾಜು

ಬಾಸ್ ವಾಲಾ ಸಂಸ್ಥೆಯ ಅಧಿಕೃತ ವೆಬ್​ಸೈಟ್​ನ ಲಿಂಕ್ ಇಲ್ಲಿದೆ: bosswallah.com/

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ