AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oil Price: ಮೂರು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿದ ಕಚ್ಚಾ ತೈಲ ಬೆಲೆ ಬ್ಯಾರೆಲ್​​ಗೆ 85 ಯುಎಸ್​ಡಿ

ಬ್ರೆಂಟ್​ ಕಚ್ಚಾ ತೈಲ ಮೂರು ವರ್ಷದ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದು, ಬ್ಯಾರೆಲ್​ಗೆ 85 ಯುಎಸ್​ ಡಾಲರ್​ನಂತೆ ವ್ಯವಹಾರ ಮಾಡುತ್ತಿದೆ. ಆ ಬಗ್ಗೆ ವಿವರ ಇಲ್ಲಿದೆ.

Oil Price: ಮೂರು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿದ ಕಚ್ಚಾ ತೈಲ ಬೆಲೆ ಬ್ಯಾರೆಲ್​​ಗೆ 85 ಯುಎಸ್​ಡಿ
ಪ್ರಾತಿನಿಧಿಕ ಚಿತ್ರ
TV9 Web
| Updated By: Srinivas Mata|

Updated on: Oct 15, 2021 | 5:00 PM

Share

ಅನಿಲ ಮತ್ತು ಕಲ್ಲಿದ್ದಲು ದರಗಳು ಗಗನಕ್ಕೆ ಏರಿದ್ದು, ತೈಲ ಉತ್ಪನ್ನಗಳ ಕಡೆಗೆ ಬದಲಾಗಿರುವುದರಿಂದ ಮುಂದಿನ ಕೆಲವು ತಿಂಗಳುಗಳಲ್ಲಿ ಪೂರೈಕೆ ಕೊರತೆಯ ಮುನ್ಸೂಚನೆ ಮೇಲೆ ತೈಲ ಬೆಲೆಗಳು ಶುಕ್ರವಾರ ಮೂರು ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದ್ದು, ಬ್ಯಾರೆಲ್​ಗೆ (1 ಬ್ಯಾರೆಲ್​ಗೆ 158.987 ಲೀಟರ್​) 85 ಯುಎಸ್​ಡಿಗಿಂತ ಮೇಲ್ಮಟ್ಟದಲ್ಲಿದೆ. ಬ್ರೆಂಟ್ ಕಚ್ಚಾ ಫ್ಯೂಚರ್ಸ್ 80 ಸೆಂಟ್ಸ್ ಅಥವಾ ಶೇ 0.95ರಷ್ಟು ಏರಿಕೆಯಾಗಿದ್ದು, 0930 GMTನಲ್ಲಿ ಬ್ಯಾರೆಲ್‌ಗೆ 84.80 ಯುಎಸ್​ಡಿ ತಲುಪಿದೆ. ಮುಂಚಿನ ತಿಂಗಳ ಬೆಲೆಗಳು ಈ ಮೊದಲು ಅಕ್ಟೋಬರ್ 2018ರ ನಂತರದಲ್ಲಿ 85.10 ಯುಎಸ್​ಡಿ ಗರಿಷ್ಠ ಮಟ್ಟವನ್ನು ಮುಟ್ಟಿದ್ದವು. ಈ ವಾರ ಶೇ 3ರಷ್ಟು ಏರಿಕೆಯತ್ತ ಸಾಗುವ ಮೂಲಕ ಸತತ ಆರನೇ ವಾರ ಏರಿಕೆಗೆ ಸಜ್ಜಾಗಿವೆ. ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್​ಮೀಡಿಯೆಟ್ (ಡಬ್ಲ್ಯುಟಿಐ) ಕಚ್ಚಾ ಫ್ಯೂಚರ್ಸ್ 73 ಸೆಂಟ್ಸ್ ಅಥವಾ ಶೇ 0.9ರಷ್ಟು ಏರಿಕೆಯಾಗಿದ್ದು, ಬ್ಯಾರೆಲ್‌ಗೆ 82.04 ಯುಎಸ್​ಡಿ ತಲುಪಿದೆ. ಈ ಕಾಂಟ್ರ್ಯಾಕ್ಟ್ ವಾರದಲ್ಲಿ ಶೇ 3.3ರಷ್ಟು ಲಾಭದತ್ತ ಸಾಗುತ್ತಿದೆ, ಹೀಗೆ ಸತತ ಎಂಟನೇ ವಾರಕ್ಕೆ ಏರಿಕೆಯತ್ತ ಸಾಗಿದೆ. ಅಟ್ಲಾಂಟಿಕ್‌ನ ಎರಡೂ ಬದಿಗಳಲ್ಲಿನ ಬಲವಾದ ಸ್ಟಾಕ್ ಮಾರುಕಟ್ಟೆಗಳು, ತೈಲ ಬೆಲೆಗಳಿಂದ ಹೆಚ್ಚಾಗಿ ಗುರುತಿಸಲ್ಪಡುತ್ತವೆ. ಇದು ಉತ್ತೇಜನವನ್ನು ನೀಡಿದೆ.

ವಿಶ್ಲೇಷಕರು ತಿಳಿಸುವಂತೆ, 2015ರಿಂದ ಈಚೆಗೆ ಒಇಸಿಡಿ ತೈಲ ಸಂಗ್ರಹದಲ್ಲಿ ತೀರಾ ಕಡಿಮೆ ಮಟ್ಟಕ್ಕೆ ಇಳಿದಿದೆ. ಕೊವಿಡ್-19 ಸಾಂಕ್ರಾಮಿಕ ಬಿಕ್ಕಟ್ಟಿನ ಚೇತರಿಕೆಯೊಂದಿಗೆ ಬೇಡಿಕೆ ಹೆಚ್ಚಾಗಿದೆ. ದುಬಾರಿ ಅನಿಲ ಮತ್ತು ಕಲ್ಲಿದ್ದಲಿನಿಂದ ದೂರವುಳಿದು ವಿದ್ಯುತ್​ಗಾಗಿ ಇಂಧನ ತೈಲ ಮತ್ತು ಡೀಸೆಲ್‌ ಕಡೆಗೆ ಮುಖ ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ಇಂಧನ ಸಂಸ್ಥೆ ಗುರುವಾರ ಹೇಳಿದಂತೆ, ಇಂಧನ ಕೊರತೆಯು ದಿನಕ್ಕೆ 5,00,000 ಬ್ಯಾರೆಲ್‌ಗಳಷ್ಟು ತೈಲ ಬೇಡಿಕೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ (ಬಿಪಿಡಿ). ಇದು ಈ ವರ್ಷದ ಅಂತ್ಯದ ವೇಳೆಗೆ ಸುಮಾರು 700,000 ಬಿಪಿಡಿ ಪೂರೈಕೆ ಅಂತರವನ್ನು ಉಂಟು ಮಾಡುತ್ತದೆ. ಪೆಟ್ರೋಲಿಯಂ ದೇಶಗಳು ಮತ್ತು ಮಿತ್ರರಾಷ್ಟ್ರಗಳ ಸಂಘಟನೆಗಳನ್ನು ಒಪೆಕ್+ ಎಂದು ಕರೆಯಲಾಗುತ್ತದೆ. ಜನವರಿಯಲ್ಲಿ ಯೋಜಿಸಿದಂತೆ ಹೆಚ್ಚಿನ ಪೂರೈಕೆಯನ್ನು ಸೇರಿಸುತ್ತದೆ.

“ವರ್ಷಪೂರ್ತಿ ಹೊಂದಿದ್ದ ದೃಷ್ಟಿಕೋನವನ್ನು ನಾವು ಉಳಿಸಿಕೊಳ್ಳುತ್ತೇವೆ – ತೈಲ ಮಾರುಕಟ್ಟೆಯು ಬಹು -ವರ್ಷದ, ರಚನಾತ್ಮಕವಾಗಿ ಬಲವಾದ ಚಕ್ರದ ಆರಂಭಿಕ ದಿನಗಳಲ್ಲಿ ಇದೆ,” ಎಂದು ವಿಶ್ಲೇಷಕರು ತಮ್ಮ ಟಿಪ್ಪಣಿಯಲ್ಲಿ ಹೇಳಿದ್ದಾರೆ. ರಿಫೈನರಿ ಕಚ್ಚಾ ಓಟ ಕುಸಿದ ಕಾರಣ ಹೂಡಿಕೆದಾರರು ಕಳೆದ ವಾರ ಯುಎಸ್ ಕಚ್ಚಾ ತೈಲ ಷೇರುಗಳಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಲಾಭವನ್ನು ಪಡೆದರು. 7,02,000 ಬ್ಯಾರೆಲ್ ಏರಿಕೆಗಾಗಿ ರಾಯಿಟರ್ಸ್ ಸಮೀಕ್ಷೆಯಲ್ಲಿ ವಿಶ್ಲೇಷಕರ ನಿರೀಕ್ಷೆಗಳಿಗೆ ಹೋಲಿಸಿದರೆ, ಕಚ್ಚಾ ದಾಸ್ತಾನು ವಾರದಲ್ಲಿ 6.1 ಮಿಲಿಯನ್ ಬ್ಯಾರೆಲ್‌ ಏರಿಕೆಯಾಗಿ, ಅಕ್ಟೋಬರ್ 8ಕ್ಕೆ 427 ಮಿಲಿಯನ್ ಬ್ಯಾರೆಲ್‌ಗಳಷ್ಟು ಹೆಚ್ಚಾಗಿದೆ ಎಂದು ಇಂಧನ ಮಾಹಿತಿ ಆಡಳಿತ ಗುರುವಾರ ತಿಳಿಸಿದೆ.

ಇದನ್ನೂ ಓದಿ: Coal Mines: 40 ಹೊಸ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆ ಆರಂಭಿಸಿದ ಕೇಂದ್ರ ಸರ್ಕಾರ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ