AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಸ್​ಇ ಒಟ್ಟಾರೆ ಷೇರುಸಂಪತ್ತು 4 ಟ್ರಿಲಿಯನ್ ಡಾಲರ್; ಇತಿಹಾಸದಲ್ಲಿ ಇದೇ ಮೊದಲು; ಎನ್​ಎಸ್​ಇಯಲ್ಲೂ ಉತ್ತಮ ಏರಿಕೆ

BSE Market Cap Record: ಭಾರತದ ಬಿಎಸ್​ಇಯಲ್ಲಿ ಲಿಸ್ಟ್ ಆಗಿರುವ ಎಲ್ಲಾ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯ 4 ಟ್ರಿಲಿಯನ್ ಡಾಲರ್ ದಾಟಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಷೇರುಸಂಪತ್ತು 4 ಟ್ರಿಲಿಯನ್ ಡಾಲರ್ ಗಡಿ ದಾಟಿರುವುದು. ಅಮೆರಿಕದ ಆರ್ಥಿಕ ಮತ್ತು ಹಣಕಾಸು ಸ್ಥಿತ್ಯಂತರಗಳು ಭಾರತದ ಷೇರುಮಾರುಕಟ್ಟೆಗೆ ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಬರುವಂತೆ ಮಾಡಿವೆ.

ಬಿಎಸ್​ಇ ಒಟ್ಟಾರೆ ಷೇರುಸಂಪತ್ತು 4 ಟ್ರಿಲಿಯನ್ ಡಾಲರ್; ಇತಿಹಾಸದಲ್ಲಿ ಇದೇ ಮೊದಲು; ಎನ್​ಎಸ್​ಇಯಲ್ಲೂ ಉತ್ತಮ ಏರಿಕೆ
ಷೇರುಪೇಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 29, 2023 | 12:38 PM

Share

ನವದೆಹಲಿ, ನವೆಂಬರ್ 29: ಭಾರತದ ಷೇರುಮಾರುಕಟ್ಟೆ ಮಿರಮಿರ ಮಿಂಚುತ್ತಿದೆ. ಹೊರದೇಶಗಳಿಂದ ಸಾಕಷ್ಟು ಹೂಡಿಕೆಗಳು ಷೇರುಪೇಟೆಗೆ ಹರಿದುಬರುತ್ತಿವೆ. ಇದೇ ವೇಳೆ, ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಪ್ಲಾಟ್​ಫಾರ್ಮ್​ನಲ್ಲಿ ಲಿಸ್ಟ್ ಆಗಿರುವ ಕಂಪನಿಗಳ (BSE listed companies) ಒಟ್ಟು ಷೇರು ಸಂಪತ್ತು ಅಥವಾ ಮಾರ್ಕೆಟ್ ಕ್ಯಾಪಿಟಲೈಸೇಶನ್ (Market Cap) 4 ಟ್ರಿಲಿಯನ್ ಡಾಲರ್ ಮುಟ್ಟಿದೆ. ರುಪಾಯಿ ಲೆಕ್ಕದಲ್ಲಿ 333 ಲಕ್ಷಕೋಟಿ ರೂ ಮೊತ್ತವಾಗುತ್ತದೆ. ಬಿಎಸ್​ಇ ಇತಿಹಾಸದಲ್ಲೇ ಈ 4 ಟ್ರಿಲಿಯನ್ ಡಾಲರ್ ಷೇರುಸಂಪತ್ತು ಮುಟ್ಟಿದ್ದು ಇದೇ ಮೊದಲು. ನವೆಂಬರ್ 29, ಇಂದು ಈ ಮೈಲಿಗಲ್ಲು ದಾಟಿದೆ. ಬಿಎಸ್​ಇನಲ್ಲಿ ಒಟ್ಟಾರೆ ಷೇರುಸಂಪತ್ತು 3 ಟ್ರಿಲಿಯನ್ ಡಾಲರ್ ಮಟ್ಟ ಮೊದಲ ಬಾರಿಗೆ ದಾಟಿದ್ದು 2021ರ ಮೇ ತಿಂಗಳಲ್ಲಿ. ಎರಡು ವರ್ಷದ ಅಂತರದಲ್ಲಿ 1 ಟ್ರಿಲಿಯನ್ ಡಾಲರ್​ನಷ್ಟು ಷೇರುಸಂಪತ್ತು ಹೊಸದಾಗಿ ಸೇರ್ಪಡೆಯಾಗಿದೆ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಬಹುತೇಕ ಎಲ್ಲಾ ಸೂಚ್ಯಂಕಗಳು ದಾಖಲೆ ಮಟ್ಟಕ್ಕೆ ಏರಿವೆ. ಪ್ರಮುಖ ಸೂಚ್ಯಂಕವೆನಿಸಿದ ಸೆನ್ಸೆಕ್ಸ್ ಇಂದು 305.44 ಅಂಕಗಳನ್ನು ಹೆಚ್ಚಿಸಿಕೊಂಡಿದೆ. ಇದರೊಂದಿಗೆ ಸೆನ್ಸೆಕ್ಸ್ ಒಟ್ಟಾರೆ 66,479.64 ಅಂಕಗಳ ಮಟ್ಟಕ್ಕೆ ಏರಿದೆ. ಸೆಪ್ಟೆಂಬರ್ 15ರಂದು ಸೆನ್ಸೆಕ್ಸ್ 67,927.23 ಅಂಕಗಳ ಮುಟ್ಟ ಮುಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂದಿನದ್ದು ದಾಖಲೆಯಾಗಿ ಉಳಿದಿದೆ.

ಇದನ್ನೂ ಓದಿ: ವಾರನ್ ಬಫೆಟ್ ದೀರ್ಘಕಾಲದ ಸಹವರ್ತಿ ಚಾರ್ಲೀ ಮುಂಗರ್ 99ರ ವಯಸ್ಸಿನ ನಿಧನ

ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಕೂಡ ಸಾಕಷ್ಟು ಬಲವೃದ್ಧಿ ಕಂಡಿದೆ. ನಿಫ್ಟಿ ಸೇರಿದಂತೆ ಅದರ ಹಲವು ಸೂಚ್ಯಂಕಗಳು ಗಣನೀಯವಾಗಿ ಏರಿಕೆ ಕಂಡಿವೆ. ನಿಫ್ಟಿ50 ಸೂಚ್ಯಂಕ ಇಂದು 141 ಅಂಕಗಳಷ್ಟು ವೃದ್ಧಿಸಿ 20,000 ಅಂಕಗಳ ಗಡಿ ದಾಟಿದ್ದು ವಿಶೇಷ.

ಭಾರತೀಯ ಷೇರುಪೇಟೆ ಮಿಂಚುತ್ತಿರುವುದು ಯಾಕೆ?

ಭಾರತದ ಷೇರುಪೇಟೆಗೆ ವಿದೇಶೀ ಸಾಂಸ್ಥಿಕ ಹೂಡಿಕೆದಾರರ ಹಣ ಹರಿದುಬರುತ್ತಿದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಮನಬಂದಂತೆ ಮಾರಿ ಹೋಗಿದ್ದ ಈ ಹೂಡಿಕೆದಾರರು ಈಗ ಮರಳಿ ಇತ್ತ ಮುಖ ಮಾಡುತ್ತಿರುವುದಕ್ಕೆ ಬಲವಾದ ಕಾರಣಗಳಿವೆ. ಅಮೆರಿಕದಲ್ಲಿ ಆಗುತ್ತಿರುವ ಹಣಕಾಸು ಮತ್ತು ಆರ್ಥಿಕ ಸ್ಥಿತ್ಯಂತರಗಳು ಭಾರತದಲ್ಲಿ ಹೂಡಿಕೆಗಳ ಮೇಲೆ ಪ್ರಭಾವ ಬೀರುತ್ತಿವೆ.

ಇದನ್ನೂ ಓದಿ: ಅದಾನಿ ಗ್ರೂಪ್ ಷೇರುಸಂಪತ್ತು ಒಂದೇ ದಿನದಲ್ಲಿ 1 ಲಕ್ಷ ಕೋಟಿ ರೂನಷ್ಟು ಹೆಚ್ಚಳ; ಹಿಂಡನ್ಬರ್ಗ್ ಘಟನೆ ಬಳಿಕ ಇಂಥದ್ದು ಇದೇ ಮೊದಲು

ಅಮೆರಿಕದಲ್ಲಿ ಹಣದುಬ್ಬರ ಕಡಿಮೆ ಆಗುತ್ತಿದ್ದು, ಬಡ್ಡಿದರವನ್ನು ಇಳಿಸುವುದಾಗಿ ಅಲ್ಲಿನ ಫೆಡರಲ್ ರಿಸರ್ವ್ ಬ್ಯಾಂಕ್ ಸುಳಿವು ನೀಡಿದೆ. ಇಷ್ಟು ದಿನ ಅಲ್ಲಿನ ಬಾಂಡ್​ಗಳು ಹೆಚ್ಚು ಇಳುವರಿ ಕೊಡುತ್ತಿದ್ದುದ್ದರಿಂದ ಅಲ್ಲಿಗೆ ಹೂಡಿಕೆಗಳನ್ನು ವರ್ಗಾಯಿಸಿದ್ದ ಸಾಂಸ್ಥಿಕ ಹೂಡಿಕೆದಾರರು ಈಗ ಪರ್ಯಾಯ ಹೂಡಿಕೆಗಳನ್ನು ಅರಸುತ್ತಿದ್ದಾರೆ. ವಿಶ್ವದ ಇತರ ಈಕ್ವಿಟಿಗಳು ಮತ್ತು ಚಿನ್ನದ ಮೇಲೆ ಇವರ ಹೂಡಿಕೆಗಳು ವರ್ಗಾವಣೆ ಆಗುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ