AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರನ್ ಬಫೆಟ್ ದೀರ್ಘಕಾಲದ ಸಹವರ್ತಿ ಚಾರ್ಲೀ ಮುಂಗರ್ 99ರ ವಯಸ್ಸಿನ ನಿಧನ

Charlie Munger Passes Away: ವಾರನ್ ಬಫೆಟ್ ಅವರ ದೀರ್ಘಕಾಲದ ಸಹವರ್ತಿ, ಆಪ್ತಸ್ನೇಹಿತ, ಬಿಸಿನೆಸ್ ಪಾರ್ಟ್ನರ್ ಚಾರ್ಲೀ ಮುಂಗರ್ ನಿಧನರಾಗಿದ್ದಾರೆ. ಕ್ಯಾಲಿಫೋರ್ನಿಯಾದ ಆಸ್ಪತ್ರೆಯೊಂದರಲ್ಲಿ 99 ವರ್ಷದ ಚಾರ್ಲೀ ಮುಂಗರ್ ಕೊನೆಯುಸಿರೆಳೆದರೆಂದು ಅವರ ಕುಟುಂಬದವರು ತಿಳಿಸಿದ್ದಾರೆ. ಬರ್ಕ್​ಸೈರ್ ಹಾಥವೇ ಸಂಸ್ಥೆಯ ವೈಸ್ ಛೇರ್ಮನ್ ಆಗಿ ಚಾರ್ಲಿ ಮುಂಗರ್ ಸಾಕಷ್ಟು ವಿಸ್ಮಯಕಾರಿ ಕಾರ್ಯಗಳನ್ನು ಮಾಡಿದ್ದಾರೆ.

ವಾರನ್ ಬಫೆಟ್ ದೀರ್ಘಕಾಲದ ಸಹವರ್ತಿ ಚಾರ್ಲೀ ಮುಂಗರ್ 99ರ ವಯಸ್ಸಿನ ನಿಧನ
ಚಾರ್ಲೀ ಮುಂಗರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 29, 2023 | 10:57 AM

Share

ಕ್ಯಾಲಿಫೋರ್ನಿಯಾ, ನವೆಂಬರ್ 29: ಅಮೆರಿಕದ ವಿಶ್ವಖ್ಯಾತ ಹೂಡಿಕೆದಾರ ವಾರನ್ ಬಫೆಟ್ (Warren Buffett) ಅವರ ಬಿಸಿನೆಸ್ ಪಾರ್ಟ್ನರ್ ಮತ್ತು ಆಪ್ತ ಸ್ನೇಹಿತರಾಗಿದ್ದ ಚಾರ್ಲೀ ಮುಂಗರ್ (Charlie Munger) ಅವರ ಮಂಗಳವಾರ (ನ. 28) ನಿಧನರಾಗಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು. ಡಿಸೆಂಬರ್ 31 ಕಳೆದಿದ್ದರೆ ಅವರು ಶತಾಯುಷಿ ಆಗಿರುತ್ತಿದ್ದರು. ಬರ್ಕ್​ಶೈರ್ ಹಾಥವೇ ಸಂಸ್ಥೆಯಲ್ಲಿ ಹಲವಾರು ದಶಕಗಳಿಂದ ಅವರು ವೈಸ್ ಛೇರ್ಮನ್ ಆಗಿ ಕೆಲಸ ಮಾಡಿದ್ದರು. ಬರ್ಕ್​ಶೈರ್ ಹಾಥವೇ ಸಂಸ್ಥೆ ಈ ನಿಧನವಾರ್ತೆಯನ್ನು ಮಾಧ್ಯಮಗಳಿಗೆ ತಿಳಿಸಿದೆ.

‘ಕ್ಯಾಲಿಫೋರ್ನಿಯಾ ಆಸ್ಪತ್ರೆಯೊಂದರಲ್ಲಿ ಇಂದು ಬೆಳಗ್ಗೆ ಚಾರ್ಲೀ ಮುಂಗರ್ ಅವರು ನಿಧನ ಹೊಂದಿದರು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ,’ ಎಂದು ಬರ್ಕ್​ಶೈರ್ ಹಾಥವೇ ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

‘ಚಾರ್ಲೀ ಅವರ ಪಾಲ್ಗೊಳ್ಳುವಿಕೆ, ಹಿತನುಡಿ ಇಲ್ಲದೇ ಇವತ್ತು ಬರ್ಕ್​ಶೈರ್ ಹಾತವೇ ಇವತ್ತಿನ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಸಂಸ್ಥೆಯ ಸಂಸ್ಥಾಪಕ ವಾರನ್ ಬಫೆಟ್ ಕೂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಅಟಲ್ ಪೆನ್ಷನ್ ಯೋಜನೆ, ಏನು ಲಾಭ, ಅರ್ಜಿ ಸಲ್ಲಿಕೆ ಹೇಗೆ, ವಯೋಮಿತಿ ಎಷ್ಟು? ಇಲ್ಲಿದೆ ಡೀಟೇಲ್ಸ್

ವಾರನ್ ಬಫೆಟ್ ಅವರಿಗೆ 93 ವರ್ಷ ವಯಸ್ಸಾಗಿದ್ದರೆ, ಚಾರ್ಲೀ ಮುಂಗರ್ ಅವರಿಗೆ 99 ವರ್ಷ ವಯಸ್ಸಾಗಿತ್ತು. ಇಬ್ಬರೂ ಕೂಡ ಅಮೆರಿಕದ ನೆಬ್ರಾಸ್ಕ ರಾಜ್ಯದ ಒಮಾಹ ಪ್ರದೇಶದಲ್ಲಿ ಜನಿಸಿ ಅಲ್ಲಿಯೇ ಬೆಳೆದವರು. ಆರು ದಶಕಗಳ ಕಾಲ ಅವರಿಬ್ಬರ ಗಾಢ ಸ್ನೇಹ ಇತ್ತು. 1959ರಲ್ಲಿ ಇಬ್ಬರು ಮೊದಲ ಬಾರಿಗೆ ಸಂಧಿಸಿದ್ದು. ಅಲ್ಲಿಂದ ಅವರ ಸ್ನೇಹ ಪರ್ವ 60 ವರ್ಷಕ್ಕೂ ಹೆಚ್ಚು ಕಾಲ ಇತ್ತು. ಇಬ್ಬರೂ ಕೇವಲ ಆಪ್ತ ಸ್ನೇಹಿತರು ಮಾತ್ರವೇ ಆಗಿರಲಿಲ್ಲ, ಒಳ್ಳೆಯ ಬಿಸಿನೆಸ್ ಪಾರ್ಟ್ನರ್ಸ್ ಆಗಿದ್ದರು. ಬಿಸಿನೆಸ್ ಮತ್ತು ಸ್ನೇಹ ಎರಡೂ ಅವರಿಬ್ಬರನ್ನು ಹೆಚ್ಚು ಆಪ್ತರನ್ನಾಗಿಸಿದ್ದು ವಿಶೇಷ.

ಚಾರ್ಲೀ ಮುಂಗರ್ 1978ರಲ್ಲಿ ಬರ್ಕ್​ಶೈರ್ ಹಾಥವೇ ಸಂಸ್ಥೆಗೆ ವೈಸ್ ಛೇರ್ಮನ್ ಆಗಿ ಕೆಲಸಕ್ಕೆ ಸೇರಿದರು. ಆಗ ಅದು ಒಂದು ಸಣ್ಣ ಜವಳಿ ಸಂಸ್ಥೆಯಾಗಿತ್ತು. ಇವರ ವ್ಯಾವಹಾರಿಕ ಚತುರತೆಯಿಂದ ಇವತ್ತು ಅದು 780 ಬಿಲಿಯನ್ ಡಾಲರ್​ಗೂ ಹೆಚ್ಚು ಮೌಲ್ಯದ ಬೃಹತ್ ಸಮೂಹ ಸಂಸ್ಥೆಯಾಗಿ ಬೆಳೆದಿದೆ.

ಇದನ್ನೂ ಓದಿ: ಅದಾನಿ ಗ್ರೂಪ್ ಷೇರುಸಂಪತ್ತು ಒಂದೇ ದಿನದಲ್ಲಿ 1 ಲಕ್ಷ ಕೋಟಿ ರೂನಷ್ಟು ಹೆಚ್ಚಳ; ಹಿಂಡನ್ಬರ್ಗ್ ಘಟನೆ ಬಳಿಕ ಇಂಥದ್ದು ಇದೇ ಮೊದಲು

99 ವರ್ಷ ವಯಸ್ಸಾದರೂ ಚಾರ್ಲೀ ಮುಂಗರ್ ಕಾಯಕ ಬಿಟ್ಟಿರಲಿಲ್ಲ. ಹೂಡಿಕೆ ಬಗ್ಗೆ ಅಪಾರ ಜ್ಞಾನ ಮತ್ತು ಚಾಕಚಕ್ಯತೆ ಹೊಂದಿದ್ದರು. ವಾರನ್ ಬಫೆಟ್ ಒಬ್ಬ ಅಪ್ರತಿಮ ಮತ್ತು ಯಶಸ್ವಿ ಹೂಡಿಕೆದಾರರಾಗಿ ಹೊರಹೊಮ್ಮಲು ಮುಖ್ಯ ಕಾರಣವೆ ಚಾರ್ಲೀ ಅವರಾಗಿದ್ದರು. ಹೂಡಿಕೆಗೆ ಒಳ್ಳೆಯ ಕಂಪನಿಗಳನ್ನು ಗುರುತಿಸುವ ಮತ್ತು 5, 10, 20 ವರ್ಷ ಅವಧಿಗೆ ಯಾವುದು ಉತ್ತಮ ಹೂಡಿಕೆ ಎಂಬುದನ್ನು ಗುರುತಿಸುವ ಕಲೆ ಅವರಿಗೆ ಸಿದ್ಧಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ