ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಗುರುವಾರದಂದು (ಸೆಪ್ಟೆಂಬರ್ 23, 2021) ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದ್ದು, ಬ್ಯಾಂಕಿಂಗ್ ಮತ್ತು ಲೋಹದ ಷೇರುಗಳಿಂದ ಉತ್ತೇಜನ ದೊರೆತಿದೆ. ಜಾಗತಿಕ ಮಾರುಕಟ್ಟೆಗಳು ಕೂಡ ಮೇಲಕ್ಕೆ ಏರಿದವು. ಅಮೆರಿಕದ ಕೇಂದ್ರ ಬ್ಯಾಂಕ್ ನೀತಿಯಿಂದ ಹೂಡಿಕೆದಾರರು ಸ್ವಲ್ಪ ಮಟ್ಟಿಗೆ ಉತ್ಸಾಹದಿಂದ ಇರುವಂತೆ ಕಂಡುಬಂದಿದ್ದಾರೆ. ಸೆನ್ಸೆಕ್ಸ್ 800 ಪಾಯಿಂಟ್‌ಗಳಷ್ಟು ಮೇಲೇರಿ 59,747 ಪಾಯಿಂಟ್ಸ್ನೊಂದಿಗೆ ಹೊಸ ಗರಿಷ್ಠ ಮಟ್ಟವನ್ನು ತಲುಪಿತು. ಬಿಎಸ್ಇ-ಲಿಸ್ಟೆಡ್ ಷೇರುಗಳ ಮಾರುಕಟ್ಟೆ ಬಂಡವಾಳವು ಗುರುವಾರದಂದು 3 ಲಕ್ಷ ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ. ನಿಫ್ಟಿ ಶೇ 1ಕ್ಕಿಂತ ಮೇಲೇರಿದ್ದು, 17,750 ಪಾಯಿಂಟ್ಸ್ಗೂ ಮೇಲೆ ವಹಿವಾಟು ನಡೆಸಿತು.
ಷೇರು ಮಾರುಕಟ್ಟೆಯ ಪ್ರಮುಖ ಅಪ್‌ಡೇಟ್‌ಗಳಿವು
ಅಮೆರಿಕದ ಕೇಂದ್ರ ಬ್ಯಾಂಕ್ ಆದ ಫೆಡ್ ಬುಧವಾರ ರಾತ್ರಿ ತನ್ನ ಮಾಸಿಕ ಬಾಂಡ್ ಖರೀದಿಯನ್ನು ನವೆಂಬರ್‌ನಿಂದಲೇ ಆರಂಭಿಸಬಹುದೆಂದು ಹೇಳಿದೆ ಮತ್ತು ಇದು ನಿರೀಕ್ಷೆಗಿಂತ ವೇಗವಾಗಿ ಬಡ್ಡಿದರಗಳನ್ನು ಹೆಚ್ಚಿಸಬಹುದು ಎಂದು ಸೂಚಿಸಿತು. ಆದರೆ “ಫೆಡ್ ಪ್ರಕಟಣೆಗೆ ಯುಎಸ್ ಮಾರುಕಟ್ಟೆ ಪ್ರತಿಕ್ರಿಯಿಸಿದ ರೀತಿಯು ಗೂಳಿ ಓಟವನ್ನು (ಬುಲ್ ರನ್) ಸ್ಪಷ್ಟ ಮಾಡಿದೆ. ಡೌ, ನಾಸ್ಡಾಕ್ ಮತ್ತು ಎಸ್&ಪಿ 500 ಶೇ 1ರಷ್ಟು ಮೇಲೇರಿ, ಇದನ್ನು ಖಾತ್ರಿಪಡಿಸಿದೆ. ಫೆಡ್‌ಗೆ ಈ ಬುಲ್ಲಿಶ್ ಪ್ರತಿಕ್ರಿಯೆ ಆಶ್ಚರ್ಯಕರವಾಗಿದೆ. ಆದರೆ ಬಲವಾದ ಬುಲ್ಲಿಶ್ ಒಳಹರಿವನ್ನು ಸೂಚಿಸುತ್ತದೆ,” ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ.ವಿಜಯಕುಮಾರ್ ಹೇಳುತ್ತಾರೆ.
ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್ ಮತ್ತು ಆಕ್ಸಿಸ್ ಬ್ಯಾಂಕ್ ಶೇ 2 ರಿಂದ 5ರಷ್ಟು ಹೆಚ್ಚಳದೊಂದಿಗೆ ಹಣಕಾಸು ಷೇರುಗಳು ಏರಿಕೆಯಾಗಿದೆ. ಬುಧವಾರ ನಗದು ಮಾರುಕಟ್ಟೆಯಲ್ಲಿ ಎಫ್‌ಐಐ ಮತ್ತು ಡಿಐಐ ಹೂಡಿಕೆಯ ಮಾರಾಟಗಾರರು (1943 ಕೋಟಿ ರೂಪಾಯಿ) ಮತ್ತು ಡಿಐಐಗಳು ಖರೀದಿದಾರರನ್ನು (1850 ಕೋಟಿ ರೂಪಾಯಿ) ತಿರುಗಿಸುವ ಮೂಲಕ ಒಂದು ದಿನದ ಹಿಂದೆ ಇದ್ದ ಸ್ಥಿತಿಯನ್ನು ಉಲ್ಟಾ ಮಾಡಿದೆ. ಈ ಮಧ್ಯೆ ಎವರ್ಗ್ರ್ಯಾಂಡ್ನಂಥ ಸಮಸ್ಯೆಯನ್ನೂ ಮೀರಿ ಗೂಳಿ ಓಟ ಮುಂದುವರಿದಿದೆ. ಇದು ಎಷ್ಟು ಸಮಯ ಹೀಗೇ ಮುಂದುವರಿಯುತ್ತದೋ ನೋಡೋಣ ಎಂದು ಹೇಳುತ್ತಾರೆ.
ಡಾಲರ್ ವಿರುದ್ಧ ರೂಪಾಯಿ ಮೌಲ್ಯ
ಡಾಲರ್ ಬಲದ ಹೊರತಾಗಿಯೂ ಭಾರತೀಯ ರೂಪಾಯಿ ಗುರುವಾರ ಮೇಲಕ್ಕೆ ಏರಿದೆ. ಯುಎಸ್ ಡಾಲರ್ ಎದುರು ರೂಪಾಯಿ 73.87 ಇತ್ತು. ದೀನ್ ದಯಾಳ್ ಇನ್ವೆಸ್ಟ್‌ಮೆಂಟ್ಸ್‌ನ ಮಾಲೀಕತ್ವದ ಸೂಚ್ಯಂಕ ವ್ಯಾಪಾರಿ ಮತ್ತು ತಾಂತ್ರಿಕ ವಿಶ್ಲೇಷಕ ಮನೀಶ್ ಹತಿರಮಣಿ ಮಾತನಾಡಿ, “ನಿಫ್ಟಿ 17600 ಪಾಯಿಂಟ್ಸ್ ದಾಟಿದ ನಂತರ ಏರಿಕೆಯೊಂದಿಗೆ ಮಾರುಕಟ್ಟೆ ವ್ಯವಹಾರ ಆರಂಭಿಸಿತು. ನಾವು ಇದನ್ನು ಮುಕ್ತಾಯದ (ಕ್ಲೋಸಿಂಗ್) ಆಧಾರದಲ್ಲಿ ಉಳಿಸಿಕೊಳ್ಳಲು ಸಾಧ್ಯವಾದರೆ, ಇದು ಮಾರುಕಟ್ಟೆಗಳಿಗೆ ಪಾಸಿಟಿವ್ ಆದ ಸಂಕೇತವಾಗಿದೆ. ನಾವು 17900 ಕ್ಕೆ ಏರಬಹುದು. 17200 ಪಾಯಿಂಟ್ಸ್ನಲ್ಲಿ ಉತ್ತಮ ಬೆಂಬಲ ಇದೆ. ಒಟ್ಟಾರೆಯಾಗಿ ಪಾಸಿಟಿವ್ ಟ್ರೆಂಡ್ ಮುಂದುವರಿಯಲಿದೆ,” ಎಂದಿದ್ದಾರೆ.
ನಿಫ್ಟಿ ರಿಯಲ್ ಎಸ್ಟೇಟ್ ಸೂಚ್ಯಂಕವು ಗುರುವಾರ ಶೇ 5ರಷ್ಟು ಹೆಚ್ಚಾಗಿದ್ದು, ಗೋದ್ರೆಜ್ ಪ್ರಾಪರ್ಟೀಸ್ ಶೇ 7ರಷ್ಟು ಏರಿ, ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಗೋದ್ರೆಜ್ ಪ್ರಾಪರ್ಟೀಸ್ ಬುಧವಾರ ನೋಯ್ಡಾದ ತನ್ನ ಐಷಾರಾಮಿ ಯೋಜನೆಯಲ್ಲಿ ಒಂದೇ ದಿನದಲ್ಲಿ 575 ಕೋಟಿ ಮೌಲ್ಯದ ವಸತಿ ಆಸ್ತಿಗಳನ್ನು ಮಾರಾಟ ಮಾಡಿದೆ ಎಂದು ಹೇಳಿದೆ. ಆಸ್ತಿ ಮಾರಾಟ ಹೆಚ್ಚಳದ ಈ ಸುಳಿವಿನಿಂದ ಸಕಾರಾತ್ಮಕ ಭಾವನೆಯು ಸಹಾಯಕ ವಲಯಗಳಿಗೆ ಹರಡುತ್ತಿದೆ. ಇದರಿಂದ ಆಸ್ತಿ ಅಡಮಾನ ಮಾಡಿಕೊಳ್ಳುವ ಖಾಸಗಿ ಬ್ಯಾಂಕ್ಗಳಿಗೂ ಲಾಭದಾಯಕ ಎಂದು ವಿಶ್ಲೇಷಕರು ಹೇಳುತ್ತಾರೆ.
ಏಷಿಯನ್ ಮಾರುಕಟ್ಟೆಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಚೀನಾದ ಎವರ್‌ಗ್ರಾಂಡ್ ಗ್ರೂಪ್ ಯುನಿಟ್‌ನ ಸಂಧಾನದ ಕೂಪನ್ ಪಾವತಿಯ ಹೇಳಿಕೆಯು ಡೆವಲಪರ್‌ನ ಸಾಲದ ಬಿಕ್ಕಟ್ಟಿನ ಅಪಾಯದ ಸಾಂಕ್ರಾಮಿಕ ಭಯವನ್ನು ಕಡಿಮೆ ಮಾಡಿದೆ.
ಇದನ್ನೂ ಓದಿ: Bitcoin Price Today: ಎವರ್ಗ್ರ್ಯಾಂಡ್ ಹೊಡೆತಕ್ಕೆ ಬಿಟ್ಕಾಯಿನ್ ಸೇರಿದಂತೆ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯೇ ಥಂಡಾ ಥಂಡಾ
(BSE Sensex Listed Companies Investors Wealth Increased By Rs 3 Lakhs Crore)