Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget Price Rise History: ಬಜೆಟ್ ಪೂರ್ವಭಾವಿ ನೋಟ; ಯಾವ್ಯಾವ ವಸ್ತುಗಳ ಬೆಲೆ ಏರಿಕೆ, ಇಳಿಕೆಯಾಗಿವೆ?

Union Budget 2023: ಈ ಬಾರಿಯ ಬಜೆಟ್​ನಲ್ಲಿ ವಿದೇಶಗಳಿಂದ ಹೆಚ್ಚು ಆಮದು ಆಗುವ ಛತ್ರಿ, ಇಯರ್​ಫೋನ್ ಇತ್ಯಾದಿ ವಸ್ತುಗಳ ಆಮದು ಸುಂಕವನ್ನು ಏರಿಸಬಹುದು ಎನ್ನಲಾಗಿದೆ.

Budget Price Rise History: ಬಜೆಟ್ ಪೂರ್ವಭಾವಿ ನೋಟ; ಯಾವ್ಯಾವ ವಸ್ತುಗಳ ಬೆಲೆ ಏರಿಕೆ, ಇಳಿಕೆಯಾಗಿವೆ?
ಬೆಲೆ ಹೆಚ್ಚಳ
Follow us
TV9 Web
| Updated By: Digi Tech Desk

Updated on:Feb 01, 2023 | 10:25 AM

ನವದೆಹಲಿ: ಕೇಂದ್ರ ಸರ್ಕಾರದ ಕೊನೆಯ ಪೂರ್ಣಪ್ರಮಾಣದ ಬಜೆಟ್​ನ (Union Budget 2023) ಮಂಡನೆ ಇದಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಇಂದು ತಮ್ಮ 5ನೇ ಬಜೆಟ್ ಮಂಡಿಸುತ್ತಿದ್ದಾರೆ. ಬಹಳ ಮಂದಿಯ ಚಿತ್ತ ಇದೀಗ ಆದಾಯ ತೆರಿಗೆ ಅಂಶದ ಜೊತೆಗೆ ಬೆಲೆ ಏರಿಕೆ ಮತ್ತು ಇಳಿಕೆಯತ್ತ ನೆಟ್ಟಿದೆ.

ಕೆಲ ವರದಿಗಳ ಪ್ರಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಾಧ್ಯತೆ ಈ ಬಾರಿ ಕಡಿಮೆ ಇದೆ. ಅಗತ್ಯವಲ್ಲದ ವಸ್ತುಗಳ ಬೆಲೆಯನ್ನು ಬಜೆಟ್​ನಲ್ಲಿ ಏರಿಸುವ ನಿರೀಕ್ಷೆ ಇದೆ. ಉದಾಹರಣೆಗೆ, ಪ್ರೈವೇಟ್ ಜೆಟ್, ಆಭರಣ, ಉನ್ನತ ಹಂತದ ಎಲೆಕ್ಟ್ರಾನಿಕ್ ವಸ್ತುಗಳು, ಹೆಲಿಕಾಪ್ಟರ್ ಇತ್ಯಾದಿ ವಸ್ತುಗಳ ಬೆಲೆ ಏರಿಕೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ. ಸರ್ಕಾರದ ಮೂಲಗಳ ಪ್ರಕಾರ ವಿವಿಧ ಸಚಿವಾಲಯಗಳೊಂದಿಗೆ ಸಮಾಲೋಚಿಸಿ ಅಗತ್ಯೇತರ ವಸ್ತುಗಳ ಬೆಲೆ ಏರಿಕೆಗೆ ಪಟ್ಟಿ ಮಾಡಲಾಗಿದ್ದು, ಬಜೆಟ್​ನಲ್ಲಿ ಇವುಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ.

ಇನ್ನು, ವಿದೇಶಗಳಿಂದ ಹೆಚ್ಚು ಆಮದು ಆಗುವ ಛತ್ರಿ, ಇಯರ್​ಫೋನ್ ಇತ್ಯಾದಿ ವಸ್ತುಗಳ ಆಮದು ಸುಂಕವನ್ನು ಏರಿಸಬಹುದು ಎನ್ನಲಾಗಿದೆ. ಈ ವಸ್ತುಗಳ ಸ್ಥಳೀಯ ತಯಾರಿಕೆಗೆ ಉತ್ತೇಜನ ಕೊಡಲು ಈ ಕ್ರಮ ಕೈಗೊಳ್ಳಲಾಗುತ್ತಿರುವುದು ತಿಳಿದುಬಂದಿದೆ.

ಈ ಹಿಂದಿನ ಮೂರು ವರ್ಷಗಳಲ್ಲಿ ಯಾವ್ಯಾವ ವಸ್ತುಗಳ ಬೆಲೆ ಏರಿಕೆ ಮತ್ತು ಬೆಲೆ ಇಳಿಕೆಯಾಗಿದೆ ಎಂಬುದರ ವಿವರ ಇಲ್ಲಿದೆ:

ಬೆಲೆ ಹೆಚ್ಚಳವಾಗಿದ್ದು:

2022: ಲೌಡ್ ಸ್ಪೀಕರ್ಸ್, ಹೆಡ್​ಫೋನ್, ಇಯರ್ ಫೋನ್, ಛತ್ರಿ, ಇಮಿಟೇಶನ್ ಜ್ಯೂವೆಲರಿ, ಸ್ಮಾರ್ಟ್ ಮೀಟರ್ಸ್, ಸೋಲಾರ್ ಸೆಲ್, ಸೋಲಾರ್ ಮಾಡ್ಯೂಲ್ಸ್, ಎಕ್ಸ್ ರೇ ಮೆಷೀನ್, ಎಲೆಕ್ಟ್ರಾನಿಕ್ ಟಾಯ್​ಗಳ ಬಿಡಿಭಾಗಗಳು.

2021: ಎಲೆಕ್ಟ್ರಾನಿಕ್ ವಸ್ತು, ಮೊಬೈಲ್, ಮೊಬೈಲ್ ಚಾರ್ಜರ್, ಲೆದರ್ ಶೂ, ಕಾಬೂಲು ಕಡಲೆ.

2020: ಸಿಗರೇಟು, ತಂಬಾಕು, ಚಪ್ಪಲಿ, ವೈದ್ಯಕೀಯ ಉಪಕರಣ, ಪೀಠೋಕರಣ, ಸೀಲಿಂಗ್ ಫ್ಯಾನ್, ಕೆಲ ಬಗೆಯ ಪಾತ್ರೆಪಗಡೆಗಳು.

ಬೆಲೆ ಇಳಿಕೆಯಾಗಿದ್ದು:

2022: ಬಟ್ಟೆ, ಮೊಬೈಲ್ ಫೋನ್ ಚಾರ್ಜರ್, ಹಿಂಗು, ಕೊಕೋವಾ ಬೀಜ, ಮೀಥೈಲ್ ಆಲ್ಕೋಹಾಲ್, ಪಾಲಿಶ್ ಮಾಡಿದ ಡೈಮಂಡ್, ಸ್ಮಾರ್ಟ್​ಫೋನ್​ನ ಕ್ಯಾಮೆರಾ ಲೆನ್ಸ್

2021: ಕಬ್ಬಿಣ, ಉಕ್ಕು, ನೈಲಾನ್ ಬಟ್ಟೆ, ಕಾಪರ್ ವಸ್ತು, ಇನ್ಷೂರೆನ್ಸ್, ವಿದ್ಯುತ್,

2020: ಕಚ್ಛಾ ಸಕ್ಕರೆ, ಕೃಷಿಪ್ರಾಣಿ ಆಧಾರಿತ ಉತ್ಪನ್ನಗಳು, ಸ್ಕಿಮ್ಡ್ ಮಿಲ್ಕ್ ಕೆಲ ಆಲ್ಕೋಹಾಲ್ ಪಾನೀಯಗಳು, ಸೋಯಾ ಫೈಬರ್, ಸೋಯಾ ಪ್ರೋಟೀನ್

Published On - 10:19 am, Wed, 1 February 23

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್