
ನವದೆಹಲಿ, ಜನವರಿ 31: ಭಾರತವ ಪೂರ್ಣ ವಿಕಸಿತ ದೇಶವಾಗಲು (Viksit Bharat) ಮತ್ತು ಪ್ರಬಲ ರಾಷ್ಟ್ರವಾಗಲು ತಂತ್ರಜ್ಞಾನದಲ್ಲಿ ಉನ್ನತಿ ಸಾಧಿಸುವುದು ಬಹಳ ಅಗತ್ಯ. ತಂತ್ರಜ್ಞಾನದಲ್ಲಿ ಕ್ಷಮತೆ ಹೊಂದಿರುವ ದೇಶಗಳು ಆರ್ಥಿಕವಾಗಿ ಮತ್ತು ಮಿಲಿಟರಿಯಾಗಿ ಬಲಿಷ್ಠವಾಗಿರುತ್ತವೆ. ಇವತ್ತಿನ ಜಾಗತಿಕ ರಾಜಕೀಯ ಹಾಗೂ ನೆರೆಹೊರೆ ದೇಶಗಳ ಅಪಾಯವು ಭಾರತಕ್ಕೆ ಸತ್ವ ಪರೀಕ್ಷೆ ಒಡ್ಡಿದೆ. ಈ ಪರೀಕ್ಷೆಯಲ್ಲಿ ಪಾಸಾಗಬೇಕಾದರೆ ಭಾರತ ಟೆಕ್ ಸೆಕ್ಟರ್ನಲ್ಲಿ ನಾವೀನ್ಯತೆಗಳನ್ನು ಹುಟ್ಟುಹಾಕಬೇಕು. ಈ ಬಾರಿಯ ಬಜೆಟ್‌ನಲ್ಲಿ (Union budget 2026) ಈ ಕ್ಷೇತ್ರದ ಬಗ್ಗೆ ಹೆಚ್ಚು ಗಮನ ಕೊಡುವ ನಿರೀಕ್ಷೆ ಇದೆ.
ಎಐ ಕ್ಷೇತ್ರದಲ್ಲಿ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಗಳನ್ನು ಹಮ್ಮಿಕೊಂಡಿದೆ. ಅಮೆರಿಕ, ಚೀನಾ ಮಟ್ಟದಲ್ಲಿ ಎಐ ಟೆಕ್ನಲ್ಲಿ ಉನ್ನತಿ ಸಾಧಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಸಂಶೋಧನೆಗಳಿಗೆ ಉತ್ತೇಜನ ನೀಡುವಂತಹ ಕ್ರಮಗಳನ್ನು ಬಜೆಟ್‌ನಲ್ಲಿ ನಿರೀಕ್ಷಿಸಬಹುದು. ಹಾಗೆಯೇ, ಉದ್ದಿಮೆಗಳು ತಮ್ಮ ಸಿಸ್ಟಂಗಳಿಗೆ ಎಐ ಟೆಕ್ ಮತ್ತು ಆಟೊಮೇಶನ್ ಅನ್ನು ಅಳವಡಿಸಿಕೊಳ್ಳುವುದರಿಂದ ಉತ್ಪನ್ನಶೀಲತೆ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲೂ ಬಜೆಟ್‌ನಲ್ಲಿ ಪ್ರೋತ್ಸಾಹಕರ ಕ್ರಮ ಬರಬಹುದು.
ಇದನ್ನೂ ಓದಿ: ಬಜೆಟ್ ಟೀಮ್; ಇಗೋ ಇವರೇ ಮುಂಗಡ ಪತ್ರದ ರೂವಾರಿಗಳು
‘ಅಲ್ಪಾವಧಿಗೆ ಗುರಿ ಇಡುವ ಬದಲು ದೀರ್ಘಾವಧಿ ತಂತ್ರಜ್ಞಾನ ಸಾಮರ್ಥ್ಯ ವೃದ್ಧಿಗೆ ಆದ್ಯತೆ ಕೊಡಬೇಕು. ಎಐ, ಕ್ಲೌಡ್, ಸೈಬರ್ ಸೆಕ್ಯೂರಿಟಿ ಮತ್ತು ಡೀಪ್ ಟೆಕ್ಗಳನ್ನು ರಾಷ್ಟ್ರೀಯ ಡಿಜಿಟಲ್ ಮೂಲಸೌಕರ್ಯವೆಂದು ಪರಿಗಣಿಸಬೇಕು. ಡಾಟಾ ಸೆಂಟರ್ ವಿಸ್ತರಣೆ ಇತ್ಯಾದಿಗಳಿಗೆ ಹೆಚ್ಚಿನ ಹಣ ನೀಡಬೇಕು. ಆರ್ ಅಂಡ್ ಡಿ ಟ್ಯಾಕ್ಸ್ ವಿನಾಯಿತಿ ಕೊಡಬೇಕು. ಪ್ರೋಟೋಟೈಪ್ ಹಂತದಿಂದ ಉತ್ಪನ್ನ ಹಂತದವರೆಗೆ ವೇಗವಾಗಿ ಬೆಳೆಯಲು ಪ್ರೋತ್ಸಾಹ ಕೊಡಬೇಕು. ಇದರಿಂದ ಭಾರತದ ತಂತ್ರಜ್ಞಾನ ಕ್ಷೇತ್ರದಿಂದ ಆರ್ಥಿಕ ಶಕ್ತಿ ಸಂಚಯವಾಗಬಹುದು’ ಎಂದು ಎನರ್ಜಿ ಬೋಟ್ಸ್ ಎನ್ನುವ ಸ್ಟಾರ್ಟಪ್ನ ಎಂಡಿಯಾದ ಮುರಳಿ ಮಂತ್ರವಾದಿ ಹೇಳುತ್ತಾರೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ಮ್ಯಾನುಫ್ಯಾಕ್ಚರಿಂಗ್ ಕೆಲಸಗಳನ್ನು ಸರ್ಕಾರ ಪ್ರೋತ್ಸಾಹಿಸುವ ನಿರೀಕ್ಷೆ ಇದೆ. ‘ಸುಧಾರಿತ 4ಕೆ, 8ಕೆ ಪ್ಯಾನಲ್ಗಳು, ಲೇಸರ್ ಪ್ರೊಜೆಕ್ಷನ್ ಟೆಕ್ನಾಲಜಿ, ಐ ಕೇರ್ ಮಾನಿಟರ್ಗಳು ಇತ್ಯಾದಿಯನ್ನು ದೇಶೀಯವಾಗಿ ತಯಾರಿಸಲು ಪ್ರೋತ್ಸಾಹಿಸಬೇಕು. ಈ ಉತ್ಪನ್ನಗಳಿಗೆ ಶೇ. 45ರಷ್ಟು ಆಮದು ಅವಲಂಬನೆ ಇದೆ. ಇದನ್ನು ಶೇ. 10ಕ್ಕೆ ಇಳಿಸಬಹುದು’ ಎಂದು BenQ India ಸಂಸ್ಥೆಯ ಎಂಡಿ ರಾಜೀವ್ ಸಿಂಗ್ ಹೇಳುತ್ತಾರೆ.
ಇದನ್ನೂ ಓದಿ: ಟ್ಯಾಕ್ಸ್ ಡಿಡಕ್ಷನ್, ಡೆವಲಪರ್ಸ್ಗೆ ಕಡಿಮೆ ದರದಲ್ಲಿ ಭೂಮಿ ಇತ್ಯಾದಿ ಕ್ರಮಗಳ ನಿರೀಕ್ಷೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ
ಪಿಎಲ್‌ಐ 2.0 ಸ್ಕೀಮ್ ಅನ್ನು ಇನ್ನಷ್ಟು ವಿಸ್ತರಿಸಬೇಕು ಮತ್ತು ಅನುದಾನ ಹೆಚ್ಚಿಸಬೇಕು. ದೇಶೀಯವಾಗಿ ಉತ್ಪಾದನೆ ಹೆಚ್ಚಿದರೆ ಉದ್ಯೋಗ ಸೃಷ್ಟಿಯೂ ಆಗುತ್ತದೆ. ಸೆಮಿಕಂಡಕ್ಟರ್, ಡಿಸ್ಪ್ಲೇ ಟೆಕ್, ಅಸೆಂಬ್ಲಿ ಲೈನ್ ತಂತ್ರಜ್ಞಾನಕ್ಕೆ ತರಬೇತಿ ವ್ಯವಸ್ಥೆ ಮಾಡಲು ಫಂಡ್ ಇರಬೇಉ. ಇದರಿಂದ ವರ್ಷಕ್ಕೆ ಐದು ಲಕ್ಷ ಯುವಜನರಿಗೆ ಕೌಶಲ್ಯಾಭಿವೃದ್ಧಿ ಆಗುತ್ತದೆ. ಎಲೆಕ್ಟ್ರಾನಿಕ್ಸ್ ಮೌಲ್ಯ ಸರಪಳಿಯಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿಸಬಹುದು ಎಂದು ಹೈಸೆನ್ಸ್ ಇಂಡಿಯಾದ ಸಿಇಒ ಪಂಕಜ್ ರಾಣಾ ತಿಳಿಸುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ