AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Union Budget 2026 : ಬೈಕ್​ ಅಪಘಾತ ಪರಿಹಾರ ವಿಮೆ ಹಣಕ್ಕಿಲ್ಲ ತೆರಿಗೆ; ಮಹತ್ವದ ಘೋಷಣೆ

ಕೇಂದ್ರ ಬಜೆಟ್ 2024 ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದಾರೆ. ಇನ್ನು ಮುಂದೆ ಬೈಕ್ ಅಪಘಾತ ಪರಿಹಾರ ವಿಮೆ ಹಣಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಇದು ದ್ವಿಚಕ್ರ ವಾಹನ ಅಪಘಾತ ಸಂತ್ರಸ್ತರಿಗೆ ದೊಡ್ಡ ಆರ್ಥಿಕ ನೆಮ್ಮದಿ ನೀಡಲಿದೆ. ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31ರವರೆಗೂ ಅವಕಾಶ, ವಿದೇಶಿ ಪ್ರಯಾಣದ ಟಿಸಿಎಸ್ ಕಡಿತ ಸೇರಿದಂತೆ ಹಲವು ಹೊಸ ತೆರಿಗೆ ನಿಯಮಗಳನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

Union Budget 2026 : ಬೈಕ್​ ಅಪಘಾತ ಪರಿಹಾರ ವಿಮೆ ಹಣಕ್ಕಿಲ್ಲ ತೆರಿಗೆ; ಮಹತ್ವದ ಘೋಷಣೆ
ವಿತ್ತ ಸಚಿವರಿಂದ ಮಹತ್ವದ ಘೋಷಣೆImage Credit source: Google
ಪ್ರಸನ್ನ ಹೆಗಡೆ
|

Updated on:Feb 01, 2026 | 1:20 PM

Share

ನವದೆಹಲಿ, ಫೆ. 01: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ ತಮ್ಮ ದಾಖಲೆಯ 9ನೇ ಬಜೆಟ್​​ನಲ್ಲಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಏಪ್ರಿಲ್ 1ರಿಂದ ನೂತನ ಐಟಿ ಕಾಯ್ದೆ ಜಾರಿಯ ಬಗ್ಗೆ ಸಚಿವರು ಮಾಹಿತಿ ನೀಡಿದ್ದು, ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31ರವರೆಗೂ ಅವಕಾಶ ನೀಡಿರೋದಾಗಿ ತಿಳಿಸಿದ್ದಾರೆ. ಆದಾಯ ತೆರಿಗೆಯಲ್ಲಿ ಅಪರಾಧ ಮಾಡಿದ್ರೆ ಶಿಕ್ಷೆ ಬಗ್ಗೆ ಕೋರ್ಟ್​​ನಲ್ಲಿ ತೀರ್ಮಾನ ಆಗಲಿದೆ. ಸಣ್ಣ ತೆರಿಗೆ ಅಪರಾಧಗಳಿಗೆ ಕೇವಲ ದಂಡ ಮಾತ್ರ ಎಂದು ಸಚಿವರು ತಿಳಿಸಿದ್ದಾರೆ.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿಯೂ ಶೇ.2ರಷ್ಟು TCS ಕಡಿತ ಮಾಡಲಾಗಿದ್ದು, ಇನ್ಮುಂದೆ ಬೈಕ್​ ಅಪಘಾತ ಪರಿಹಾರ ವಿಮೆ ಹಣಕ್ಕೆ ತೆರಿಗೆ ಇರಲ್ಲ. ವಿದೇಶಿ ಪ್ರವಾಸ ಕೈಗೊಳ್ಳುವವರಿಗೂ ಕೇಂದ್ರ ಸರ್ಕಾರ ಗುಡ್​​ನ್ಯೂಸ್​​ ನೀಡಿದ್ದು, ಪ್ರಯಾಣದ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡಲಾಗುತ್ತದೆ. ವಿದೇಶಿ ಪ್ರಯಾಣಕ್ಕಾಗಿ ಟಿಸಿಎಸ್ ದರವನ್ನು ಶೇ. 5ಕ್ಕೆ ಇಳಿಸಲಾಗಿದೆ. ಜುಲೈ 31 ರವರೆಗೆ ರಿಟರ್ನ್ಸ್ ಸಲ್ಲಿಸಬಹುದು. ಈ ಕಾನೂನು ಅಘೋಷಿತ ಆದಾಯವನ್ನು ಒಂದು ಕೋಟಿ ರೂಪಾಯಿಗಳಿಗೆ ಮಿತಿಗೊಳಿಸಲು ಸಹ ಪ್ರಸ್ತಾಪಿಸಿದೆ.

ಇದನ್ನೂ ಓದಿ: ಕೇಂದ್ರ ಬಜೆಟ್​​ 2026-27, ಪಿಡಿಎಫ್ ಪ್ರತಿ ಡೌನ್​ಲೋಡ್ ಮಾಡಿ

ಐಟಿ ಸೇವೆಗಳಿಗಾಗಿ Safe Harbour ಮಿತಿಯನ್ನು 300 ಕೋಟಿಯಿಂದ 2,000 ಕೋಟಿಗೆ ಹೆಚ್ಚಳ ಮಾಡಲಾಗಿದೆ. ಭಾರತದ ಡೇಟಾ ಸೆಂಟರ್ ಸೇವೆಗಳ ಮೂಲಕ ಜಾಗತಿಕ ಗ್ರಾಹಕರಿಗೆ ಕ್ಲೌಡ್ ಸೇವೆ ನೀಡುವ ಕಂಪನಿಗಳಿಗೆ 2047 ರವರೆಗೆ ತೆರಿಗೆ ರಜೆ, ಮುನ್ಸಿಪಲ್ ಬಾಂಡ್‌ಗಳ ವಿತರಣೆಗಾಗಿ 100 ಕೋಟಿ ಪ್ರೋತ್ಸಾಹಧನ ಘೋಷಿಸಲಾಗಿದೆ. ಫ್ಯೂಚರ್ಸ್ ಮೇಲಿನ STT ಅನ್ನು 0.02% ರಿಂದ 0.05%ಕ್ಕೆ ಹೆಚ್ಚಿಸಲಾಗಿದೆ. ಮೀನುಗಾರಿಕಾ ಹಡಗುಗಳು ಎಕ್ಸ್‌ಕ್ಲೂಸಿವ್ ಎಕನಾಮಿಕ್ ಝೋನ್‌ನಲ್ಲಿ ಹಿಡಿಯುವ ಮೀನಿನ ಮೇಲೆ ಸುಂಕ ವಿನಾಯಿತಿಯನ್ನು ಕೇಂದ್ರ ಘೋಷಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:19 pm, Sun, 1 February 26