ಬಚ್ಚನ್ ಪಕ್ಕದ ಮನೆ ಮಾರಾಟಕ್ಕೆ; ಸಾಲ ಕಟ್ಟಿಲ್ಲ ಎಂದು ಬಂಗಲೆ ಹರಾಜು; ಮೂಲ ಬೆಲೆ 25 ಕೋಟಿ ರೂ

Auction of Bungalow of Amitabh Bachchan's Neighbour in Mumbai: ಮುಂಬೈನ ಜುಹು ಬೀಚ್​ನಲ್ಲಿರುವ ಅಮಿತಾಭ್ ಬಚ್ಚನ್ ಅವರ ಮನೆಯ ಪಕ್ಕದ ಬಂಗಲೆಯೊಂದನ್ನು ಡಾಯ್ಚು ಬ್ಯಾಂಕ್ ಹರಾಜಿಗೆ ಇಟ್ಟಿದೆ. ಮನೆ ಮಾಲೀಕರು 12.89 ಕೋಟಿ ರೂನಷ್ಟು ಸಾಲ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಬ್ಯಾಂಕು ಈ ಆಸ್ತಿಯನ್ನು ಹರಾಜು ಮಾಡುತ್ತಿದೆ. ಮಾರ್ಚ್ 27ರಂದು ಹರಾಜು ದಿನವೆಂದು ನಿಗದಿಯಾಗಿದೆ. 25 ಕೋಟಿ ರೂ ಮೀಸಲು ಬೆಲೆಯಾಗಿ ನಿಗದಿ ಮಾಡಲಾಗಿದೆ.

ಬಚ್ಚನ್ ಪಕ್ಕದ ಮನೆ ಮಾರಾಟಕ್ಕೆ; ಸಾಲ ಕಟ್ಟಿಲ್ಲ ಎಂದು ಬಂಗಲೆ ಹರಾಜು; ಮೂಲ ಬೆಲೆ 25 ಕೋಟಿ ರೂ
ಅಮಿತಾಭ್ ಬಚ್ಚನ್ ಮನೆ

Updated on: Mar 13, 2024 | 2:31 PM

ಮುಂಬೈ, ಮಾರ್ಚ್ 13: ಅಮಿತಾಭ್ ಬಚ್ಚನ್ ಅವರ ಬಳಿ ವಿವಿಧೆಡೆ ಮನೆ, ಕಮರ್ಷಿಯಲ್ ಆಸ್ತಿಗಳಿವೆ. ಮುಂಬೈನ ಜುಹು ಬೀಚ್ ಸಮೀಪ ಇರುವ ಅವರ ಜಲ್ಸಾ ಬಂಗಲೆ ಸಾಕಷ್ಟು ಜನಪ್ರಿಯವಾಗಿದೆ. ಬಾಲಿವುಡ್ ಬಿಗ್ ಬಿ ಅವರ ಈ ನಿವಾಸಕ್ಕೆ ನಿತ್ಯವೂ ಹಲವಾರು ಅಭಿಮಾನಿಗಳು ಎಡತಾಕುವುದುಂಟು. ಇಂಥ ಹೈ ಪ್ರೊಫೈಲ್ ನಟನ ನೆರೆ ಮನೆಯವರಾಗುವ ಭಾಗ್ಯ ಯಾರಿಗುಂಟು ಯಾರಿಗಿಲ್ಲ? ಅಮಿತಾಭ್ ಬಚ್ಚನ್ ಅವರ ಜುಹು ಬಂಗಲೆಯ ಪಕ್ಕದಲ್ಲಿರುವ ಬೇರೊಬ್ಬರ ಬಂಗಲೆ ಮಾರಾಟಕ್ಕಿದೆ. ಯಾರು ಬೇಕಾದರೂ ಈ ಬಂಗಲೆ ಖರೀದಿಸಬಹುದು. ಡಾಯ್ಚೂ ಬ್ಯಾಂಕ್ (Deutsche Bank) ಈ ಮನೆಯನ್ನು ಹರಾಜಿಗಿಟ್ಟಿದೆ. ಇದರ ಮೂಲಬೆಲೆ ಅಥವಾ ರಿಸರ್ವ್ ಪ್ರೈಸ್ 25 ಕೋಟಿ ರೂ ಆಗಿ ನಿಗದಿ ಮಾಡಲಾಗಿದೆ.

ಸಾಲ ಕಟ್ಟಿಲ್ಲವೆಂದು ಬಂಗಲೆ ಹರಾಜು

ಅಮಿತಾಭ್ ಬಚ್ಚನ್ ಅವರ ಜಲ್ಸಾ ಬಂಗಲೆಯ ಪಕ್ಕದಲ್ಲಿರುವ ಕಟ್ಟಡವು ಸೆವೆನ್ ಸ್ಟಾರ್ ಸೆಟಿಲೈಟ್ ಪ್ರೈ ಲಿ ಎಂಬ ಸಂಸ್ಥೆ ಮೊದಲಾದವರಿಗೆ ಸೇರಿದ್ದು. 3,000 ಚದರಡಿಗೂ ಹೆಚ್ಚು ವಿಸ್ತೀರ್ಣದ ಈ ಬಂಗಲೆಯ ಪತ್ರ ಅಡ ಇಟ್ಟು ಡಾಯ್ಚೂ ಬ್ಯಾಂಕ್​ನಿಂದ ಸಾಲ ಪಡೆಯಲಾಗಿತ್ತು. ಇದರಲ್ಲಿ 12.89 ಕೋಟಿ ರೂ ಬಾಕಿ ಉಳಿಸಿಕೊಳ್ಳಲಾಗಿದೆ. ಎರಡು ವರ್ಷಗಳ ಹಿಂದೆ ಬ್ಯಾಂಕ್​ನಿಂದ ಡಿಮ್ಯಾಂಡ್ ನೋಟೀಸ್ ಕೂಡ ಕೊಡಲಾಗಿತ್ತು. 60 ದಿನದೊಳಗೆ ಬಾಕಿ ಹಣ ಪಾವತಿಸಲು ತಿಳಿಸಲಾಗಿತ್ತು. ಆದರೂ ಸಾಲ ಮರುಪಾವತಿ ಆಗಿಲ್ಲ. ಈ ಕಾರಣಕ್ಕೆ ಕಾನೂನು ಕ್ರಮ ಜರುಗಿಸಲು ಡಾಯ್ಚು ಬ್ಯಾಂಕ್ ನಿರ್ಧರಿಸಿದೆ.

ಇದನ್ನೂ ಓದಿ: ಹೀಗೇ ಆದರೆ ಮುಂದೆ ಅಮೆರಿಕ ದಿವಾಳಿ ಆಗುತ್ತೆ: ಸರ್ಕಾರವನ್ನು ಎಚ್ಚರಿಸಿದ ಉದ್ಯಮಿ ಇಲಾನ್ ಮಸ್ಕ್

ಬಂಗಲೆಯನ್ನು ಈಗಾಗಲೇ ಮುಟ್ಟುಗೋಲು ಹಾಕಿಕೊಂಡಿರುವ ಡಾಯ್ಚು ಬ್ಯಾಂಕ್, ಕಾನೂನು ಪ್ರಕಾರ ಬಂಗಲೆ ಹರಾಜು ಹಾಕುತ್ತಿದೆ. ಮಾರ್ಚ್ 27ರಂದು ಹರಾಜು ನಿಗದಿಯಾಗಿದೆ. ಇದರ ರಿಸರ್ವ್ ಪ್ರೈಸ್ ಆಗಿ 25 ಕೋಟಿ ರೂ ನಿಗದಿ ಮಾಡಲಾಗಿದೆ.

ಹರಾಜು ಬೆಲೆ ಹೇಗೆ ನಿಗದಿ?

ಆಸ್ತಿ ಪತ್ರ ಅಡ ಇಟ್ಟು ಸಾಲ ಪಡೆಯಲಾಗಿದ್ದು, ಅದು ಸಕಾಲಕ್ಕೆ ಪಾವತಿಯಾಗದಿದ್ದರೆ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಮುಟ್ಟುಗೋಲು ಹಾಕಿಕೊಳ್ಳುತ್ತವೆ. ಅವುಗಳನ್ನು ಹರಾಜಿಗೆ ಹಾಕುತ್ತವೆ. ಸಾಮಾನ್ಯವಾಗಿ ಮಾರುಕಟ್ಟೆ ದರಕ್ಕಿಂತ ಶೇ. 15ರಿಂದ 30ರಷ್ಟು ಕಡಿಮೆ ಬೆಲೆಗೆ ಹರಾಜಿನ ಮೂಲಬೆಲೆ ನಿಗದಿ ಮಾಡಲಾಗುತ್ತದೆ. ಹರಾಜಿನಲ್ಲಿ ಯಾರು ಅತಿಹೆಚ್ಚು ದರ ಕೂಗುವರೋ ಅವರಿಗೆ ಬಂಗಲೆಯ ಮಾಲಕತ್ವ ವರ್ಗಾವಣೆ ಆಗುತ್ತದೆ. ಈ ಹಣದಲ್ಲಿ ತಮಗೆ ಸಂದಾಯವಾಗಬೇಕಿರುವ ಬಾಕಿ ಸಾಲದ ಹಣವನ್ನು ಮುರಿದುಕೊಂಡು ಉಳಿದ ಹಣವನ್ನು ಪೂರ್ವ ಮಾಲೀಕರಿಗೆ ಮರಳಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us