AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಟ್ ಏರ್ವೇಸ್ ಮಾಲಕತ್ವ ವರ್ಗಾವಣೆಗೆ ಒಪ್ಪಿಗೆ; ಎಸ್​ಬಿಐ ನೇತೃತ್ವದ ಗುಂಪಿನ ವಿರೋಧ ತಳ್ಳಿಹಾಕಿದ ಮೇಲ್ಮನವಿ ನ್ಯಾಯಮಂಡಳಿ

Jet Airways controversy: ದಿವಾಳಿ ಎದ್ದಿರುವ ಜೆಟ್ ಏರ್ವೇಸ್ ಸಂಸ್ಥೆಯ ಮಾಲಕತ್ವ ವರ್ಗಾವಣೆಯಲ್ಲಿ ಇದ್ದ ಅಡೆತಡೆಯನ್ನು ಎನ್​ಸಿಎಲ್​ಎಟಿ ನಿವಾರಿಸಿದೆ. ಕಂಪನಿ ಕಾನೂನು ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ಮೇಲ್ಮನವಿ ನ್ಯಾಯಮಂಡಳಿ ಜ. 12, ಮಂಗಳವಾರ ಅನುಮೋದನೆ ನೀಡಿದೆ. ಕಲ್​ರಾಕ್ ಕ್ಯಾಪಿಟಲ್ ಮತ್ತು ಮುರಾರಿ ಲಾಲ್ ಜಲನ್ ಅವರ ಗುಂಪಿಗೆ ಜೆಟ್ ಏರ್ವೇಸ್ ಮಾಲಕತ್ವ ವರ್ಗಾವಣೆ ಆಗಲಿದೆ. ಜೆಟ್​ ಏರ್ವೇಸ್​ಗೆ ಸಾಲ ಕೊಟ್ಟಿದ್ದ ಎಸ್​ಬಿಐ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು.

ಜೆಟ್ ಏರ್ವೇಸ್ ಮಾಲಕತ್ವ ವರ್ಗಾವಣೆಗೆ ಒಪ್ಪಿಗೆ; ಎಸ್​ಬಿಐ ನೇತೃತ್ವದ ಗುಂಪಿನ ವಿರೋಧ ತಳ್ಳಿಹಾಕಿದ ಮೇಲ್ಮನವಿ ನ್ಯಾಯಮಂಡಳಿ
ಜೆಟ್ ಏರ್ವೇಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 12, 2024 | 4:14 PM

Share

ನವದೆಹಲಿ, ಮಾರ್ಚ್ 12: ಜೆಟ್ ಏರ್ವೇಸ್ ಮಾಲಕತ್ವ (Jet Airways ownership) ವಿಚಾರದಲ್ಲಿ ಇದ್ದ ಅನಿಶ್ಚಿತ ಸ್ಥಿತಿ ಕೊನೆಗೊಳ್ಳುವಂತಿದೆ. ವಿಮಾನ ಸಂಸ್ಥೆಯ ಮಾಲಕತ್ವವು ಜಲನ್ ಕಲ್​ರಾಕ್ ಕನ್ಸಾರ್ಟಿಯಂಗೆ (Jalan Kalrock consortium) ವರ್ಗಾವಣೆ ಆಗಲು ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (NCLAT- National Company Law Appellate Tribunal) ಅನುಮತಿಸಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಎಸ್​ಬಿಐ ನೇತೃತ್ವದ ಸಾಲಗಾರರ ಸಮಿತಿಯ (committee of creditors) ಅರ್ಜಿಯನ್ನು ಅಪೆಲೇಟ್ ಟ್ರಿಬಿನಲ್ ತಿರಸ್ಕರಿಸಿದೆ. ಜೆಟ್ ಏರ್ವೇಸ್ ಸಂಸ್ಥೆಯ ಪುನಶ್ಚೇತನಕ್ಕೆ ಮುರಾರಿ ಲಾಲ್ ಜಲನ್ ಮತ್ತು ಕಲ್​ರಾಕ್ ಕ್ಯಾಪಿಟಲ್ ಸಂಸ್ಥೆ ಜಂಟಿಯಾಗಿ ಸೇರಿ ನಿರ್ಣಯ ಯೋಜನೆ ಸಲ್ಲಿಸಿದ್ದರು. ಇದಕ್ಕೆ ಎನ್​ಸಿಎಲ್​ಟಿ ಅನುಮೋದನೆ ಕೊಟ್ಟಿತ್ತು. ಈ ಪ್ಲಾನ್ ಸರಿಯಾಗಿಲ್ಲ ಎಂದು ಆಕ್ಷೇಪಿಸಿ ಜೆಟ್ ಏರ್ವೇಸ್​ನ ಸಾಲಗಾರರ ಗುಂಪು ಎನ್​ಸಿಎಲ್​ಎಟಿಯಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಹಾಗೆಯೇ, ವಿವಿಧ ಕಾನೂನಾತ್ಮಕ ತಡೆಗಳನ್ನು ತಂದು ಜೆಟ್ ಏರ್ವೇಸ್​ನ ಮಾಲಕತ್ವಕ್ಕೆ ಎಸ್​ಬಿಐ ನೇತೃತ್ವದ ಗುಂಪು ಅಡ್ಡಿ ಮಾಡುತ್ತಿದೆ. ಎನ್​ಸಿಎಲ್​ಟಿ ಆದೇಶದ ಬಗ್ಗೆ ಒಂದು ಸ್ಪಷ್ಟತೆ ಕೊಡಿ ಎಂದು ಜಲನ್ ಕಲ್​ರಾಕ್ ಕನ್ಸಾರ್ಟಿಯಂ ಸಂಸ್ಥೆ ಕೂಡ ಅಪೆಲೇಟ್ ಟ್ರಿಬುನಲ್​ನ ಮೊರೆ ಹೋಗಿತ್ತು.

ಎನ್​ಸಿಎಲ್​​ಎಟಿ ನ್ಯಾಯಮಂಡಳಿಯು ಅಂತಿಮವಾಗಿ ಎನ್​ಸಿಎಲ್​ಟಿ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ. ಮುರಾರಿ ಲಾಲ್ ಜಲನ್ ಮತ್ತು ಕಲ್​ರಾಕ್ ಕ್ಯಾಪಿಟಲ್ ಸಂಸ್ಥೆಯ ಹಾದಿ ಸುಗಮಗೊಂಡಿದೆ. ಇದೀಗ ಜೆಟ್ ಏರ್​ವೇಸ್​ನ ಆಡಳಿತ ನಿರ್ವಹಣೆ ಅಧಿಕಾರವು ಮುರಾರಿ ಲಾಲ್ ಜಲನ್ ಮತ್ತು ಕಲ್​ರಾಕ್ ಕ್ಯಾಪಿಟಲ್ ಸಂಸ್ಥೆಗಳಿಂದ ಜಂಟಿಯಾಗಿ ರಚಿಸಲಾಗಿರುವ ಜಲನ್ ಕಲ್​ರಾಕ್ ಕನ್ಸಾರ್ಟಿಯಂಗೆ ವರ್ಗಾವಣೆ ಆಗಲಿದೆ. ಜೆಟ್ ಏರ್ವೇಸ್​ನ ಪುನಶ್ಚೇತನಕ್ಕಾಗಿ ಸಲ್ಲಿಸಲಾದ ಪ್ಲಾನ್ ಪ್ರಕಾರ ಮೊದಲ ಹಂತದಲ್ಲಿ 150 ಕೋಟಿ ರೂ ಹಣ ನೀಡಬೇಕಾಗುತ್ತದೆ.

ಇದನ್ನೂ ಓದಿ: ಬಿಟ್​ಕಾಯಿನ್ 72,000 ಡಾಲರ್ ಮೈಲಿಗಲ್ಲು; ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಕ್ರಿಪ್ಟೋ; ಯಾಕಿಷ್ಟು ಏರಿಕೆ ಆಗುತ್ತಿದೆ? ಇಲ್ಲಿದೆ ಕಾರಣ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿರೋಧ ಯಾಕೆ?

ಜೆಟ್ ಏರ್ವೇಸ್​ಗೆ ಸಾಲ ಕೊಟ್ಟಿದ್ದ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಎಸ್​ಬಿಐ ಒಂದು. ಜೆಟ್ ಏರ್ವೇಸ್​ನ ಪುನಶ್ಚೇತನಕ್ಕೆ ರೂಪಿಸಲಾಗುವ ಯಾವುದೇ ಯೋಜನೆಯಾದರೂ ಸಾಲಗಾರರ ಸಮ್ಮತಿ ಬೇಕಾಗುತ್ತದೆ. ಜೆಟ್ ಏರ್ವೇಸ್ ಅನ್ನು ಖರೀದಿಸಿದ ಜಲನ್ ಕಲ್ರಾಕ್ ಗುಂಪಿನ ಪ್ಲಾನ್​ಗಳು ಎಸ್​ಬಿಐಗೆ ಸಮಾಧಾನ ತಂದಿಲ್ಲ. ಮಾಲಕತ್ವ ವರ್ಗಾವಣೆಗೆ ಮುನ್ನ ಹಾಕಲಾಗಿದ್ದ ಷರತ್ತುಗಳು ಈಡೇರಿಲ್ಲ. ಹಾಗೆಯೇ, ಜೆಟ್ ಏರ್ವೇಸ್​ನ ಪುನಶ್ಚೇತನಕ್ಕೆ ಇನ್ನೂವರೆಗೆ ಯಾವುದೇ ಫಂಡ್ ಅನ್ನು ಬಿಡುಗಡೆ ಮಾಡಲಾಗಿಲ್ಲ. ಅಲ್ಲದೇ, ಕನ್ಸಾರ್ಟಿಯಂ ಸಲ್ಲಿಸಿರುವ ಅನುಮೋದಿತ ನಿರ್ಣಯ ಯೋಜನೆದಿಂದ ವಿಮಾನ ಸಂಸ್ಥೆಯ ಪುನಶ್ಚೇತನ ಸಾಧ್ಯವಾಗುವುದಿಲ್ಲ ಎಂದು ಎಸ್​ಬಿಐ ನೇತೃತ್ವದ ಸಾಲಗಾರರ ಸಮಿತಿ ವಾದಿಸಿದೆ.

ಜಿಗಿತುಕೊಂಡ ಜೆಟ್ ಏರ್ವೇಸ್ ಷೇರು ಬೆಲೆ

ಜೆಟ್ ಏರ್ವೇಸ್ 1992ರಲ್ಲಿ ನರೇಶ್ ಗೋಯಲ್ ಅವರಿಂದ ಸ್ಥಾಪಿತವಾದ ಕಂಪನಿ. ಇವತ್ತು ಗೋಯಲ್ ಮತ್ತವರ ಕುಟುಂಬ ವಿವಿಧ ಹಣಕಾಸು ಅವ್ಯವಹಾರ ಪ್ರಕರಣಗಳಲ್ಲಿ ಸಿಲುಕಿ ಕಾನೂನು ಕ್ರಮ ಎದುರಿಸುತ್ತಿದ್ದಾರೆ. ಜೆಟ್ ಏರ್ವೇಸ್ ಷೇರು ಬೆಲೆ ಸಹಜವಾಗಿ ಇಳಿಮುಖವಾಗಿದೆ. 2018ರಲ್ಲಿ 900 ರೂ ಸಮೀಪ ಇದ್ದ ಅದರ ಷೇರು ಬೆಲೆ ಇವತ್ತು 43 ರೂಗೆ ಇಳಿದಿದೆ.

ಇದನ್ನೂ ಓದಿ: ಎರಡು ವಾರದಲ್ಲಿ ಶೇ. 33ರಷ್ಟು ಕುಸಿತ ಕಂಡ ಜೆಟಿಎಲ್ ಷೇರು; ಇದನ್ನು ಖರೀದಿಸಲು ಸಕಾಲವಾ? ತಜ್ಞರ ಸಲಹೆ ಇದು

ಎನ್​ಸಿಎಲ್​ಎಟಿ ತೀರ್ಪು ಬಂದ ಬಳಿಕ ಅದರ ಷೇರುಬೆಲೆ ಶೇ. 5ರಷ್ಟು ಹೆಚ್ಚಾಗಿದೆ. ಒಂದು ವೇಳೆ ವಿಮಾನ ಸಂಸ್ಥೆ ವಾಸ್ತವದಲ್ಲಿ ಪುನಶ್ಚೇತನಗೊಂಡು ಮತ್ತೆ ಪೂರ್ಣಪ್ರಮಾಣದಲ್ಲಿ ಸೇವೆ ನೀಡಬಲ್ಲುದಾದರೆ ಅದರ ಷೇರಿಗೆ ಬೇಡಿಕೆ ಕುದುರುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ