2024ರ ಫೆಬ್ರುವರಿಯಲ್ಲಿ ಭಾರತದ ಹಣದುಬ್ಬರ ಶೇ. 5.09; ಜನವರಿಯಲ್ಲಿ ಔದ್ಯಮಿಕ ಉತ್ಪಾದನೆ ಶೇ. 3.8 ಹೆಚ್ಚಳ

India Inflation Rate at 5.09pc in 2024 February: ಭಾರತದ ಹಣದುಬ್ಬರ 2024ರ ಫೆಬ್ರುವರಿಯಲ್ಲಿ ಶೇ. 5.09ರಷ್ಟು ಇದೆ ಎಂದು ಕೇಂದ್ರ ಬಿಡುಗಡೆ ಮಾಡಿದ ದತ್ತಾಂಶದಲ್ಲಿ ತಿಳಿಸಲಾಗಿದೆ. ಆರ್​ಬಿಐ ನಿಗದಿ ಮಾಡಿದ ಹಣದುಬ್ಬರ ತಾಳಿಕೆ ಮಿತಿಯಾದ ಶೇ. 6ರ ದರದ ಒಳಗೆಯೇ ಹಣದುಬ್ಬರ ಇದೆ. ಇನ್ನು, ಜನವರಿ ತಿಂಗಳಲ್ಲಿ ಭಾರತದ ಔದ್ಯಮಿಕ ಉತ್ಪಾದನೆ ಶೇ. 3.8ರಷ್ಟು ಬೆಳೆದಿದೆ. ತಯಾರಿಕಾ ವಲಯದ ಉತ್ಪಾದನೆ ಕುಂಠಿತಗೊಂಡಿದೆ.

2024ರ ಫೆಬ್ರುವರಿಯಲ್ಲಿ ಭಾರತದ ಹಣದುಬ್ಬರ ಶೇ. 5.09; ಜನವರಿಯಲ್ಲಿ ಔದ್ಯಮಿಕ ಉತ್ಪಾದನೆ ಶೇ. 3.8 ಹೆಚ್ಚಳ
ಹಣದುಬ್ಬರ
Follow us
|

Updated on: Mar 12, 2024 | 6:26 PM

ನವದೆಹಲಿ, ಮಾರ್ಚ್ 12: ವಿವಿಧ ಆರ್ಥಿಕ ತಜ್ಞರು ಅಂದಾಜಿಸಿದ ಪ್ರಕಾರ ಭಾರತದ ಹಣದುಬ್ಬರ ದರ (Inflation rate) ಫೆಬ್ರುವರಿಯಲ್ಲಿ ಹೆಚ್ಚಿನ ವ್ಯತ್ಯಯ ಕಂಡಿಲ್ಲ. ಜನವರಿಯಲ್ಲಿ ಶೇ. 5.10ರಷ್ಟು ಇದ್ದ ರೀಟೇಲ್ ಹಣದುಬ್ಬರ ಫೆಬ್ರುವರಿಯಲ್ಲಿ ಶೇ. 5.09 ಇದೆ. ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಇಂದು ಮಂಗಳವಾರ ದತ್ತಾಂಶ ಬಿಡುಗಡೆ ಮಾಡಿದೆ. ಇದರ ಪ್ರಕಾರ ಭಾರತದ ಔದ್ಯಮಿಕ ಉತ್ಪಾದನೆ (industrial output) ಜನವರಿ ತಿಂಗಳಲ್ಲಿ ಶೇ. 3.8ರಷ್ಟು ಹೆಚ್ಚಾಗಿದೆ. ಐಐಪಿ ಸೂಚಿ ಜನವರಿಯಲ್ಲಿ ಶೇ. 5.8ರಷ್ಟು ಬೆಳೆದಿದೆ.

ಗ್ರಾಹಕ ಬೆಲೆ ಅನುಸೂಚಿ ಆಧಾರಿತ ಹಣದುಬ್ಬರ ದರ (CPI based inflation) ಫೆಬ್ರುವರಿಯಲ್ಲಿ ಶೇ. 5.09ರಲ್ಲಿ ಇರುವುದು ನಿರೀಕ್ಷಿತವೇ ಆಗಿದೆ. ಬ್ಲೂಮ್​ಬರ್ಗ್, ರಾಯ್ಟರ್ಸ್ ಮೊದಲಾದ ಕೆಲ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಹಲವು ಆರ್ಥಿಕ ತಜ್ಞರು ಹಣದುಬ್ಬರ ಶೇ. 5ರಿಂದ ಶೇ. 5.10ರ ನಡುವೆ ಇರಬಹುದು ಎನ್ನುವಂತಹ ಅಭಿಪ್ರಾಯಕ್ಕೆ ಬಂದಿದ್ದರು.

ಜನವರಿ ತಿಂಗಳಲ್ಲಿ ಹಣದುಬ್ಬರ ಶೇ. 5.10ರಷ್ಟು ಇತ್ತು. ಈಗ 0.01ರಷ್ಟು ದರ ಕಡಿಮೆ ಆಗಿದೆ. ಆಹಾರ ಬೆಲೆ ಹಣದುಬ್ಬರ ಶೇ. 8.30ರಿಂದ ಶೇ. 8.66ಕ್ಕೆ ಏರಿದೆ. ಬೇಳೆ ಕಾಳುಗಳು, ಮಾಂಸದ ಬೆಲೆ ಹೆಚ್ಚಳವಾಗಿದೆ. ಮೊಟ್ಟೆ, ತರಕಾರಿ ಇತ್ಯಾದಿ ಬೆಲೆಗಳು ಕಡಿಮೆ ಆಗಿವೆ.

ಇದನ್ನೂ ಓದಿ: ಜನೌಷಧಿ ಕೇಂದ್ರಗಳ ಉತ್ತೇಜನಕ್ಕಾಗಿ SIDBI ಕ್ರೆಡಿಟ್ ಸ್ಕೀಮ್; ಅಡಮಾನರಹಿತ ಸಾಲಗಳ ವಿತರಣೆಗೆ ಯೋಜನೆ

ಆರ್​​ಬಿಐ ಹಣದುಬ್ಬರವನ್ನು ಶೇ. 4ಕ್ಕೆ ಇಳಿಸಬೇಕೆನ್ನುವ ಗುರಿ ಇಟ್ಟಿದೆ. ಜೊತೆಗೆ ತಾಳಿಕೆ ಮಿತಿಯಾಗಿ ಶೇ. 2ರಿಂದ ಶೇ. 6ರ ಶ್ರೇಣಿಯನ್ನು ನಿಗದಿ ಮಾಡಿದೆ. ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ ಹಣದುಬ್ಬರ ಶೇ. 5ರಷ್ಟಿರಬಹುದು ಎಂಬುದು ಆರ್​ಬಿಐನ ಎಣಿಕೆ. 2025ರ ಹಣಕಾಸು ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಹಣದುಬ್ಬರ ಶೇ. 4.7ಕ್ಕೆ ಇಳಿಯಬಹುದು. ಎರಡನೇ ಕ್ವಾರ್ಟರ್​ನಲ್ಲಿ ಶೇ. 4ಕ್ಕೆ ಕಡಿಮೆ ಆಗಬಹುದು ಎಂಬ ನಿರೀಕ್ಷೆ ಇದೆ.

ಔದ್ಯಮಿಕ ಉತ್ಪಾದನೆಯಲ್ಲಿ ಹೆಚ್ಚಳ

ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಭಾರತದ ಔದ್ಯಮಿಕ ಉತ್ಪಾದನೆ ಜನವರಿ ತಿಂಗಳಲ್ಲಿ ಶೇ. 3.8ರಷ್ಟು ಹೆಚ್ಚಾಗಿದೆ. ಐಐಪಿ ಆಧಾರದಲ್ಲಿ ಗಣಿಸಲಾಗುವ ಕಾರ್ಖಾನೆ ಉತ್ಪಾದನೆ ಜನವರಿಯಲ್ಲಿ ಶೇ. 5.8ರಷ್ಟು ಹೆಚ್ಚಾಗಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಫೆಬ್ರುವರಿಯಲ್ಲಿ ಭಾರತದ ಹಣದುಬ್ಬರ ಎಷ್ಟಿರಬಹುದು? ವಿವಿಧ ಆರ್ಥಿಕ ತಜ್ಞರು ಮಾಡಿರುವ ಅಂದಾಜು ಇದು

ತಯಾರಿಕಾ ವಲಯದ ಉತ್ಪಾದನೆಯ ಬೆಳವಣಿಗೆ ತುಸು ಕುಂಠಿತಗೊಂಡಿದೆ. 2023ರ ಜನವರಿಯಲ್ಲಿ ಶೇ. 4.5ರಷ್ಟಿದ್ದ ವೃದ್ಧಿ ಈ ವರ್ಷ ಶೇ. 3.2ಕ್ಕೆ ಬಂದಿದೆ. ಗಣಿಗಾರಿಕೆ ಉತ್ಪಾದನೆ ಶೇ. 5.9ರಷ್ಟು ಹೆಚ್ಚಾದರೆ, ಇಂಧನ ಉತ್ಪಾದನೆ ಶೇ. 5.6ರಷ್ಟು ಏರಿಕೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್