ಜನೌಷಧಿ ಕೇಂದ್ರಗಳ ಉತ್ತೇಜನಕ್ಕಾಗಿ SIDBI ಕ್ರೆಡಿಟ್ ಸ್ಕೀಮ್; ಅಡಮಾನರಹಿತ ಸಾಲಗಳ ವಿತರಣೆಗೆ ಯೋಜನೆ

SIDBI credit assistance for Jan Aushadi Kendras: ಜನೌಷಧಿ ಕೇಂದ್ರಗಳ ಸಂಖ್ಯೆ ಹೆಚ್ಚಿಸಲು ಗುರಿ ಇಟ್ಟುಕೊಂಡಿರುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಸಿಡ್ಬಿ ಕ್ರೆಡಿಟ್ ಅಸಿಸ್ಟೆನ್ಸ್ ಸ್ಕೀಮ್ ಅನ್ನು ಜಾರಿಗೆ ತರುತ್ತಿದೆ. ಇದರ ಅಡಿಯಲ್ಲಿ ಹೊಸ ಜನೌಷಧಿ ಕೇಂದ್ರಗಳ ಸ್ಥಾಪನೆಗೆ ಮತ್ತು ಈಗಿರುವ ಕೇಂದ್ರಗಳ ಬಲವರ್ಧನೆಗೆ ಅಡಮಾನ ರಹಿತ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಸದ್ಯ ಭಾರತದಲ್ಲಿ 10,000 ಜನೌಷಧ ಕೇಂದ್ರಗಳಿದ್ದು, ಇನ್ನಎರಡು ವರ್ಷದಲ್ಲಿ ಅದರ ಸಂಖ್ಯೆ 25,000ಕ್ಕೆ ಹೆಚ್ಚಿಸುವುದು ಸರ್ಕಾರದ ಗುರಿಯಾಗಿದೆ.

ಜನೌಷಧಿ ಕೇಂದ್ರಗಳ ಉತ್ತೇಜನಕ್ಕಾಗಿ SIDBI ಕ್ರೆಡಿಟ್ ಸ್ಕೀಮ್; ಅಡಮಾನರಹಿತ ಸಾಲಗಳ ವಿತರಣೆಗೆ ಯೋಜನೆ
ಜನೌಷಧ ಕೇಂದ್ರ
Follow us
|

Updated on: Mar 12, 2024 | 5:05 PM

ನವದೆಹಲಿ, ಮಾರ್ಚ್ 12: ದೇಶಾದ್ಯಂತ ಇರುವ ಜನೌಷಧಿ ಕೇಂದ್ರಗಳಿಗೆ (Jan Aushadi kendra) ಉತ್ತೇಜನ ಕೊಡಲು ಮತ್ತು ಹೆಚ್ಚೆಚ್ಚು ಕೇಂದ್ರಗಳನ್ನು ಸ್ಥಾಪಿಸಲು ಸಹಾಯವಾಗುವ ನಿಟ್ಟಿನಲ್ಲಿ ಸಿಡ್ಬಿ (SIDBI) ಸಾಲ ಸೌಲಭ್ಯ ಯೋಜನೆಯನ್ನು (SIDBI credit assistance programme) ಸರ್ಕಾರ ಆರಂಭಸಿದೆ. ಈ ಯೋಜನೆಯ ಅಡಿಯಲ್ಲಿ ಜನೌಷಧಿ ಕೇಂದ್ರಗಳ ಆಪರೇಟರ್​ಗಳಿಗೆ ಅಡಮಾನ ರಹಿತ ಸಾಲಗಳನ್ನು (collateral-free loan) ಎಸ್​ಐಡಿಬಿಐ ಸಂಸ್ಥೆಯಿಂದ ಸಾಲ ಸಿಗುತ್ತದೆ. ಹೊಸ ಜನೌಷಧಿ ಕೇಂದ್ರದ ಸ್ಥಾಪನೆಗೆ ಮತ್ತು ಜನೌಷಧಿ ಕೇಂದ್ರದ ವಿಸ್ತರಣೆಗೆ ಈ ಸ್ಕೀಮ್ ಸಹಾಯವಾಗಲಿದೆ.

ಜನೌಷಧಿ ಕೇಂದ್ರಗಳು ಎರಡು ವರ್ಷದಲ್ಲಿ ಎರಡು ಪಟ್ಟು ಹೆಚ್ಚಳಕ್ಕೆ ಗುರಿ

ಭಾರತದಾದ್ಯಂತ 2024ರ ಜನವರಿ 31ರವರೆಗೆ 10,624 ಜನೌಷಧಿ ಕೇಂದ್ರಗಳು ನಿರ್ವಹಣೆ ಆಗುತ್ತಿವೆ. 2026ರ ಮಾರ್ಚ್ 31ರೊಳಗೆ ಒಟ್ಟು ಜನೌಷಧಿ ಕೇಂದ್ರಗಳ ಸಂಖ್ಯೆ 25,000 ಆಗಬೇಕು ಎಂಬುದು ಸರ್ಕಾರ ನಿಗದಿ ಮಾಡಿಕೊಂಡಿರುವ ಗುರಿ. ಈ ನಿಟ್ಟಿನಲ್ಲಿ ಸಿಡ್ಬಿ ಸಾಲ ಉಪಯೋಗಕ್ಕೆ ಬರಲಿದೆ. ಅಡಮಾನ ರಹಿತವಾಗಿರುವ ಈ ಸಾಲಕ್ಕೆ ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಆಗಿರುವ ಸಿಜಿಟಿಎಂಎಸ್​ಇ ಸಂಸ್ಥೆ ಗ್ಯಾರಂಟಿ ಒದಗಿಸುತ್ತದೆ.

ಇದನ್ನೂ ಓದಿ: ಜೆಟ್ ಏರ್ವೇಸ್ ಮಾಲಕತ್ವ ವರ್ಗಾವಣೆಗೆ ಒಪ್ಪಿಗೆ; ಎಸ್​ಬಿಐ ನೇತೃತ್ವದ ಗುಂಪಿನ ವಿರೋಧ ತಳ್ಳಿಹಾಕಿದ ಮೇಲ್ಮನವಿ ನ್ಯಾಯಮಂಡಳಿ

ಜನೌಷಧಿ ಕೇಂದ್ರಗಳ ಉಪಯೋಗ

ಜನೌಷಧಿ ಕೇಂದ್ರಗಳಲ್ಲಿ ಜೆನೆರಿಕ್ ಔಷಧಿಗಳನ್ನು ಮಾರಲಾಗುತ್ತದೆ. ಜೆನೆರಿಕ್ ಔಷಧಗಳ ತಯಾರಿಕೆಗೆ ರಾಯಲ್ಟಿ ಅಥವಾ ರಾಯಧನ ಕೊಡುವ ಅಗತ್ಯ ಇಲ್ಲದ್ದರಿಂದ ತಯಾರಿಕೆ ವೆಚ್ಚ ಹೆಚ್ಚಿರುವುದಿಲ್ಲ. ಹಾಗೆಯೇ, ಸರ್ಕಾರವೇ ಹಲವು ಜೆನೆರಿಕ್ ಔಷಧಗಳಿಗೆ ಬೆಲೆ ಮಿತಿ ಹಾಕಿರುತ್ತದೆ.

ಮಾರುಕಟ್ಟೆಯಲ್ಲಿರುವ ಔಷಧಕ್ಕಿಂತ ಈ ಜೆನೆರಿಕ್ ಮೆಡಿಸಿನ್​ನ ಬೆಲೆ ಅರ್ಧಕ್ಕಿಂತ ಕಡಿಮೆ ಇರುತ್ತದೆ. ಭಾರತೀಯರು ಈ ಜನೌಷಧಿ ಕೇಂದ್ರಗಳಲ್ಲಿ ಔಷಧ ಖರೀದಿಸುವುದರಿಂದ ಶೇ. 60ಕ್ಕಿಂತಲೂ ಹೆಚ್ಚು ಖರ್ಚನ್ನು ಉಳಿಸಬಹುದು.

ಇದನ್ನೂ ಓದಿ: ಬಿಟ್​ಕಾಯಿನ್ 72,000 ಡಾಲರ್ ಮೈಲಿಗಲ್ಲು; ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಕ್ರಿಪ್ಟೋ; ಯಾಕಿಷ್ಟು ಏರಿಕೆ ಆಗುತ್ತಿದೆ? ಇಲ್ಲಿದೆ ಕಾರಣ

ಜನೌಷಧ ಕೇಂದ್ರಗಳಲ್ಲಿ 1,965 ರೀತಿಯ ಜೆನೆರಿಕ್ ಔಷಧ ಹಾಗೂ 293 ಸರ್ಜಿಕಲ್ ವಸ್ತುಗಳನ್ನು ಮಾರಲಾಗುತ್ತದೆ. ಫಾರ್ಮಸ್ಯೂಟಿಕಲ್ಸ್ ಅಂಡ್ ಮೆಡಿಲ್ ಡಿವೈಸಸ್ ಬ್ಯೂರೋ ಸಂಸ್ಥೆ (ಪಿಎಂಬಿಐ) ನೀಡಿದ ಮಾಹಿತಿ ಪ್ರಕಾರ 2022-23ರ ವರ್ಷದಲ್ಲಿ 1,235.95 ಕೋಟಿ ರೂ ಮೊತ್ತದ ಔಷಧಗಳ ಮಾರಾಟವಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್