AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್​ಎಸ್​ಇ ಪ್ಲಾಟ್​ಫಾರ್ಮ್​ನಲ್ಲಿ ಟ್ರಾನ್ಸಾಕ್ಷನ್ ಶುಲ್ಕ ಶೇ. 1ರಷ್ಟು ಇಳಿಕೆ; ಏಪ್ರಿಲ್ 1ರಿಂದ ಜಾರಿ

National Stock Exchange: ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಎನ್​ಎಸ್​ಇ ತನ್ನ ಕ್ಯಾಷ್ ಈಕ್ವಿಟಿ ಮತ್ತು ಈಕ್ವಿಟಿ ಡಿರೈವೇಟಿವ್​ಗಳ ಟ್ರಾನ್ಸಾಕ್ಷನ್ ಚಾರ್ಜಸ್ ಅನ್ನು ಶೇ. 1ರಷ್ಟು ಇಳಿಸಲು ನಿರ್ಧರಿಸಿದೆ. ಕ್ಯಾಷ್ ಈಕ್ವಿಟಿಯ ಟ್ರಾನ್ಸಾಕ್ಷನ್ ಶುಲ್ಕ ಒಟ್ಟು ವಹಿವಾಟು ಮೊತ್ತಕ್ಕೆ ಶೇ. 0.00325ರಷ್ಟು ಇರುತ್ತದೆ. ಇನ್ನು ಡಿರೈವೇಟಿವ್ ಟ್ರಾನ್ಸಾಕ್ಷನ್ ಶುಲ್ಕ ಶೇ. 0.0019ರಷ್ಟಾಗಲಿದೆ. 2024ರ ಏಪ್ರಿಲ್ 1ರಿಂದ ಹೊಸ ಶುಲ್ಕ ಜಾರಿಗೆ ಬರಲಿದೆ.

ಎನ್​ಎಸ್​ಇ ಪ್ಲಾಟ್​ಫಾರ್ಮ್​ನಲ್ಲಿ ಟ್ರಾನ್ಸಾಕ್ಷನ್ ಶುಲ್ಕ ಶೇ. 1ರಷ್ಟು ಇಳಿಕೆ; ಏಪ್ರಿಲ್ 1ರಿಂದ ಜಾರಿ
ಷೇರು ವಿನಿಮಯ ಕೇಂದ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 12, 2024 | 3:11 PM

Share

ನವದೆಹಲಿ, ಮಾರ್ಚ್ 12: ದೇಶದ ಪ್ರಮುಖ ಷೇರು ವಿನಿಮಯ ಕೇಂದ್ರವೆನಿಸಿರುವ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (NSE) ತನ್ನ ಪ್ಲಾಟ್​ಫಾರ್ಮ್​ನಲ್ಲಿ ಟ್ರಾನ್ಸಾಕ್ಷನ್ ಚಾರ್ಜ್​​ನಲ್ಲಿ ಇಳಿಕೆ ಮಾಡಿದೆ. ಕ್ಯಾಷ್ ಈಕ್ವಿಟಿ ಮತ್ತು ಈಕ್ವಿಟಿ ಡಿರೈವೇಟಿವ್​ಗಳ (Equity derivatives) ವಹಿವಾಟು ಶುಲ್ಕವನ್ನು ಶೇ. 1ರಷ್ಟು ಇಳಿಸಿದೆ. 2024ರ ಏಪ್ರಿಲ್ 1ರಿಂದ ನೂತನ ದರ ಜಾರಿಗೆ ಬರಲಿದೆ. ಈ ಶುಲ್ಕ ದರ ಇಳಿಕೆಯಿಂದ ಎನ್​ಎಸ್​ಇಗೆ ಬರುತ್ತಿದ್ದ ಆದಾಯದಲ್ಲಿ 130 ಕೋಟಿ ರೂನಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ. ಮಾರ್ಚ್ 11, ಸೋಮವಾರದಂದು ಎನ್​ಎಸ್​ಇಯ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕ್ಯಾಷ್ ಈಕ್ವಿಟಿಯ ವಹಿವಾಟು ಶುಲ್ಕ ಶೇ. 0.00335 ಇದ್ದು, ಅದನ್ನು ಶೇ. 0.00325ಕ್ಕೆ ಇಳಿಸಲಾಗಿದೆ. ಅಂದರೆ, ಪ್ರತೀ ಒಂದು ಲಕ್ಷ ರೂ ಮೊತ್ತದ ವಹಿವಾಟಿಗೆ 3.35 ರೂನಷ್ಟು ಶುಲ್ಕವನ್ನು ವಿಧಿಸುತ್ತದೆ ಎನ್​ಎಸ್​ಇ.

ಹಾಗೆಯೇ, ಡಿರೈವೇಟಿವ್ಸ್ ಟ್ರಾನ್ಸಾಕ್ಷನ್ ಶುಲ್ಕ ಈಗ ಶೇ. 0.0019ರಷ್ಟಿರಲಿದೆ. ಅಂದರೆ, ಪ್ರತೀ ಒಂದು ಲಕ್ಷ ರೂ ಮೊತ್ತದ ಡಿರೈವೇಟಿವ್ಸ್ ಟ್ರಾನ್ಸಾಕ್ಷನ್​ಗೆ 1.9 ರೂ ಶುಲ್ಕವನ್ನು ಎನ್​ಎಸ್​ಇ ವಿಧಿಸುತ್ತದೆ.

2022ರಲ್ಲಿ ಎನ್​ಎಸ್​ಇ ಟ್ರಾನ್ಸಾಕ್ಷನ್ ಶುಲ್ಕವನ್ನು ಶೇ. 6ರಷ್ಟು ಹೆಚ್ಚಿಸಿತ್ತು. 2023ರಲ್ಲಿ ಹೆಚ್ಚಳವನ್ನು ಹಿಂಪಡೆದುಕೊಂಡಿತು. ಈಗ ಮತ್ತಷ್ಟು ಶೇ. 1ರಷ್ಟು ಶುಲ್ಕ ಇಳಿಸಿದೆ.

ಇದನ್ನೂ ಓದಿ: ಎರಡು ವಾರದಲ್ಲಿ ಶೇ. 33ರಷ್ಟು ಕುಸಿತ ಕಂಡ ಜೆಟಿಎಲ್ ಷೇರು; ಇದನ್ನು ಖರೀದಿಸಲು ಸಕಾಲವಾ? ತಜ್ಞರ ಸಲಹೆ ಇದು

2024ರ ಏಪ್ರಿಲ್​ನಿಂದ ಎನ್​ಎಸ್​ಇನಲ್ಲಿ ವಿವಿಧ ಟ್ರಾನ್ಸಾಕ್ಷನ್ ಶುಲ್ಕ ವಿವರ ಇಂತಿದೆ

  • ಈಕ್ವಿಟಿ ಡೆಲಿವರಿ ಅಥವಾ ಕ್ಯಾಷ್ ಈಕ್ವಿಟಿ: ಶೇ. 0.00335
  • ಡಿರೈವೇಟಿವ್ಸ್: ಶೇ. 0.0019
  • ಫ್ಯೂಚರ್ಸ್: ಶೇ. 0.00195
  • ಕಮರ್ಷಿಯಲ್ ಪೇಪರ್​ಗಳ ವರ್ಗಾವಣೆ: ಶೇ. 0.0001
  • ಠೇವಣಿ ಪ್ರಮಾಣಪತ್ರ ವರ್ಗಾವಣೆ: ಶೇ. 0.0001
  • ರೆಪೋ ಟ್ರಾನ್ಸಾಕ್ಷನ್: ಶೇ. 0.00001

ಬೇರೆ ಬಿಸಿನೆಸ್​ಗಳನ್ನು ಕೈಬಿಡಲಿರುವ ಎನ್​ಎಸ್​ಇ

1993ರಲ್ಲಿ ಸ್ಥಾಪನೆಯಾದ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಕಂಪನಿ ಕೇವಲ ಷೇರು ವಿನಿಮಯ ಕೇಂದ್ರ ಮಾತ್ರವಲ್ಲ, ಬೇರೆ ಹಲವು ಬಿಸಿನೆಸ್​ಗಳನ್ನು ಹೊಂದಿದೆ. ಷೇರು ಮಾರುಕಟ್ಟೆಗೆ ಸಂಬಂಧಿಸದ ನಾನ್-ಕೋರ್ ಬಿಸಿನೆಸ್​ಗಳಿಂದ ಹೊರಬರಲು ಎನ್​ಎಸ್​ಇ ನಿರ್ಧರಿಸಿದೆ. ಡಿಜಿಟಲ್ ಟೆಕ್ನಾಲಜಿ ಮತ್ತು ಶಿಕ್ಷಣದ ಬಿಸಿನೆಸ್​ಗಳನ್ನು ಮಾರುವ ನಿರ್ಧಾರಕ್ಕೆ ಬಂದಿದೆ.

ಇದನ್ನೂ ಓದಿ: ಎನ್​ಎಲ್​ಸಿ ಇಂಡಿಯಾದ ಶೇ. 7ರಷ್ಟು ಪಾಲನ್ನು ಮಾರುತ್ತಿರುವ ಸರ್ಕಾರ; ಎರಡು ಸಾವಿರ ಕೋಟಿ ರೂ ಆದಾಯ ಗಳಿಕೆ ನಿರೀಕ್ಷೆ

ಎನ್​ಎಸ್​ಇಐಟಿ ಯುಎಸ್, ಔಜಸ್ ಸೈಬರ್ ಸೆಕ್ಯೂರಿಟಿ ಲಿ, ಸಿಎಕ್ಸ್​ಐಒ ಟೆಕ್ನಾಲಜೀಸ್ ಲಿ ಸಂಸ್ಥೆಗಳನ್ನು ಇನ್ವೆಸ್ಟ್​ಕಾರ್ಪ್ ಸಂಸ್ಥೆಗೆ 1,000 ಕೋಟಿ ರೂ ಮೊತ್ತಕ್ಕೆ ಮಾರಲಾಗುತ್ತಿರುವುದು ತಿಳಿದುಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ
ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ
ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು
ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು
ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ
ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ
ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗ
ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗ
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್