ಎನ್​ಎಲ್​ಸಿ ಇಂಡಿಯಾದ ಶೇ. 7ರಷ್ಟು ಪಾಲನ್ನು ಮಾರುತ್ತಿರುವ ಸರ್ಕಾರ; ಎರಡು ಸಾವಿರ ಕೋಟಿ ರೂ ಆದಾಯ ಗಳಿಕೆ ನಿರೀಕ್ಷೆ

NLC India Share Sales: ಕಲ್ಲಿದ್ದಲು ಗಣಿಗಾರಿಕೆಯ ಎನ್​ಎಲ್​ಸಿ ಇಂಡಿಯಾದಲ್ಲಿ ಸರ್ಕಾರ ಹೊಂದಿರುವ ಶೇ. 7ರಷ್ಟು ಷೇರುಪಾಲನ್ನು ಮಾರಾಟಕ್ಕಿಡಲಾಗಿದೆ. ಇಂದು ಮಾರ್ಚ್ 7 ಮತ್ತು ಮಾರ್ಚ್ 11ರಂದು ಎರಡು ದಿನ 9.7 ಕೋಟಿ ಎನ್​ಎಲ್​ಸಿ ಷೇರುಗಳು ಬಿಕರಿಯಾಗಲಿವೆ. ಗುರುವಾರ ಸಾಂಸ್ಥಿಕ ಹೂಡಿಕೆದಾರರಿಗೆ ಈ ಷೇರುಗಳು ಖರೀದಿಗೆ ಲಭ್ಯ ಇರಲಿವೆ. ಮಾರ್ಚ್ 11, ಸೋಮವಾರ ರೀಟೇಲ್ ಹೂಡಿಕೆದಾರರು ಇದನ್ನು ಖರೀದಿಸಬಹುದು.

ಎನ್​ಎಲ್​ಸಿ ಇಂಡಿಯಾದ ಶೇ. 7ರಷ್ಟು ಪಾಲನ್ನು ಮಾರುತ್ತಿರುವ ಸರ್ಕಾರ; ಎರಡು ಸಾವಿರ ಕೋಟಿ ರೂ ಆದಾಯ ಗಳಿಕೆ ನಿರೀಕ್ಷೆ
ಎನ್​ಎಲ್​ಸಿ ಇಂಡಿಯಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 07, 2024 | 10:23 AM

ನವದೆಹಲಿ, ಮಾರ್ಚ್ 7: ತಮಿಳುನಾಡಿನಲ್ಲಿರುವ ಲಿಗ್ನೈಟ್ ಉತ್ಪಾದನಾ ಸಂಸ್ಥೆಯಾದ ಎನ್​ಎಲ್​ಸಿ ಇಂಡಿಯಾದ (NLC India) ತನ್ನ ಕೆಲ ಷೇರುಪಾಲನ್ನು ಸರ್ಕಾರ ಮಾರಾಟಕ್ಕಿಟ್ಟಿದೆ. ನೆಯ್ವೇಲಿ ಲಿಗ್ನೈಟ್ ಕಾರ್ಪೊರೇಶನ್ ಸಂಸ್ಥೆಯಲ್ಲಿನ ತನ್ನ ಶೇ. 7ರಷ್ಟು ಷೇರುಗಳನ್ನು ಸರ್ಕಾರ ಮಾರುತ್ತಿದೆ. ಸಾಂಸ್ಥಿಕ ಹೂಡಿಕೆದಾರರು ಮತ್ತು ರೀಟೇಲ್ ಹೂಡಿಕೆದಾರರಿಗೆ 9.7 ಕೋಟಿ ಷೇರುಗಳು ಮಾರಾಟವಾಗಲಿವೆ. ಕನಿಷ್ಠ ಬೆಲೆ ಅಥವಾ ಫ್ಲೋರ್ ಪ್ರೈಸ್ 212 ರೂನಂತೆ ಷೇರುಗಳು ಬಿಕರಿಯಾಗಲಿವೆ. ಈ ಮಾರಾಟದಿಂದ ಸರ್ಕಾರ ಸುಮಾರು 2,000 ಕೋಟಿ ರೂ ಆದಾಯ ಸಿಗುವ ನಿರೀಕ್ಷೆ ಇದೆ.

ಗುರುವಾರ ಮತ್ತು ಸೋಮವಾರ ಎರಡು ದಿನ ಮಾತ್ರವೇ ಮಾರಾಟ

ಇಂದು ಗುರುವಾರ (ಮಾ. 7) ಸಾಂಸ್ಥಿಕ ಹೂಡಿಕೆದಾರರಿಗೆ ಎನ್​ಎಲ್​ಸಿ ಇಂಡಿಯಾದ ಷೇರುಗಳು ಮಾರಾಟಕ್ಕೆ ಲಭ್ಯ ಇರುತ್ತವೆ. ಶುಕ್ರವಾರ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಷೇರು ಮಾರುಕಟ್ಟೆ ಬಂದ್ ಆಗಿರುತ್ತದೆ. ಶನಿವಾರ ಮತ್ತು ಭಾನುವಾರ ಷೇರುಪೇಟೆಗೆ ವೀಕೆಂಡ್ ರಜೆಗಳಾಗಿವೆ. ಸೋಮವಾರ (ಮಾ. 11) ಎನ್​ಎಲ್​ಸಿ ಷೇರುಗಳನ್ನು ರೀಟೇಲ್ ಹೂಡಿಕೆದಾರರು ಖರೀದಿಸಬಹುದಾಗಿದೆ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್‌ಗಳ ವಿತರಣೆ, ಬಳಕೆಗೆ RBIನಿಂದ ಹೊಸ ಮಾರ್ಗಸೂಚಿ, ಇದು ಯಾರಿಗೆಲ್ಲ ಅನ್ವಯ

ಎನ್​ಎಲ್​ಸಿ ಇಂಡಿಯಾದಲ್ಲಿ ಸರ್ಕಾರದ ಪಾಲು ಎಷ್ಟಿದೆ?

ನೇಯ್ವೇಲಿ ಲಿಗ್ನೈಟ್ ಕಾರ್ಪೊರೇಶನ್ ಸಂಸ್ಥೆ ಸರ್ಕಾರದ ಪಾಲು ಶೇ. 79.20ರಷ್ಟು ಇದೆ. ಈಗ ಶೇ. 7ರಷ್ಟು ಷೇರುಪಾಲನ್ನು ಬಿಕರಿ ಮಾಡಿದರೂ ಸರ್ಕಾರದ ಪಾಲು ಶೇ. 72ಕ್ಕಿಂತಲೂ ಹೆಚ್ಚೇ ಇರುತ್ತದೆ.

ತಮಿಳುನಾಡಿನ ಕಡಲೂರು ಜಿಲ್ಲೆಯ ನೇಯ್ವೇಲಿಯಲ್ಲಿ ಲಿಗ್ನೈಟ್ ಗಣಿಗಾರಿಕೆಗೆ 1956ರಲ್ಲಿ ಸ್ಥಾಪನೆಯಾದ ಕಂಪನಿ ಎನ್​ಎಲ್​ಸಿ ಇಂಡಿಯಾ. ಲಿಗ್ನೈಟ್ ಎಂಬುದು ಒಂದು ವಿಧದ ಕಲ್ಲಿದ್ದಲು. ನೇಯ್ವೇಲಿ ಮತ್ತು ರಾಜಸ್ಥಾನದ ಬಿಕನೇರ್ ಜಿಲ್ಲೆಯಲ್ಲಿ ಇದು ಲಿಗ್ನೈಟ್ ಗಣಿಗಾರಿಕೆ ನಡೆಸುತ್ತದೆ.

ಎನ್​ಎಲ್​ಸಿ ಇಂಡಿಯಾದ ಷೇರುಬೆಲೆ ನಿನ್ನೆ 226 ರೂಗೆ ಅಂತ್ಯವಾಗಿತ್ತು. ಸರ್ಕಾರ ಇದರ ಷೇರನ್ನು 212 ರೂಗೆ ಮಾರಲು ನಿರ್ಧರಿಸಿದ ಬಳಿಕ ಇಂದು ಶೇ. 6ರಷ್ಟು ಬೆಲೆ ಕುಸಿತವಾಗಿದೆ.

ಇದನ್ನೂ ಓದಿ: ಉದ್ಯೋಗದಾರರು ಇಪಿಎಫ್ ಖಾತೆಯ ವಿವರಗಳನ್ನು ತಿದ್ದುಪಡಿ ಮಾಡಬೇಕೆ? ಇಲ್ಲಿದೆ ಸುಲಭ ಮಾರ್ಗ

ಕಳೆದ ಒಂದು ವರ್ಷದಿಂದ ಎನ್​ಎಲ್​ಸಿ ಇಂಡಿಯಾ ಮಲ್ಟಿಬ್ಯಾಗರ್ ಷೇರು ಎನಿಸಿದೆ. 74 ರೂ ಇದ್ದ ಇದರ ಷೇರು ಬೆಲೆ 12 ತಿಂಗಳ ಅಂತರದಲ್ಲಿ 226 ರೂಗೆ ಏರಿದ್ದು ನಿಜಕ್ಕೂ ಗಮನಾರ್ಹ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್