ಕ್ರೆಡಿಟ್ ಕಾರ್ಡ್‌ಗಳ ವಿತರಣೆ, ಬಳಕೆಗೆ RBIನಿಂದ ಹೊಸ ಮಾರ್ಗಸೂಚಿ, ಇದು ಯಾರಿಗೆಲ್ಲ ಅನ್ವಯ

ಕ್ರೆಡಿಟ್​​​​ ಕಾರ್ಡ್ ವಿತರಕರು ಇತರ ಕಾರ್ಡ್ ನೆಟ್‌ವರ್ಕ್‌ಗಳೊಂದಿಗೆ ಯಾವುದೇ ಒಪ್ಪಂದವನ್ನು ಮಾಡಿಕೊಳ್ಳಬಾರದು ಎಂದು ಆರ್​​​ಬಿಐ ಹೊಸ ಮಾರ್ಗಸೂಚಿಯನ್ನು ನೀಡಿದೆ. ಕ್ರೆಡಿಟ್​ ಕಾರ್ಡ್​​ ​​ನೀಡುವಾಗ ಗ್ರಾಹಕರಿಗೆ ಬಹು ಆಯ್ಕೆಯನ್ನು ಕ್ರೆಡಿಟ್​​​​ ಕಾರ್ಡ್ ವಿತರಕರು ಅಗತ್ಯವಾಗಿ ನೀಡಬೇಕು ಹಾಗೂ ಈಗಾಗಲೇ ಕ್ರೆಡಿಟ್​​ ಕಾರ್ಡ್​​​ ಹೊಂದಿರುವವರಿಗೆ ಮುಂದಿನ ನವೀಕರಣದ ಅಥವಾ ಅಪ್ಡೇಟ್​​​ ಸಮಯದಲ್ಲಿ ಈ ಬಹು ಆಯ್ಕೆಗಳನ್ನು ನೀಡಬಹುದು ಎಂದು ಆರ್​ಬಿಐ ಹೇಳಿದೆ.

ಕ್ರೆಡಿಟ್ ಕಾರ್ಡ್‌ಗಳ ವಿತರಣೆ, ಬಳಕೆಗೆ RBIನಿಂದ ಹೊಸ ಮಾರ್ಗಸೂಚಿ, ಇದು ಯಾರಿಗೆಲ್ಲ ಅನ್ವಯ
Follow us
ಅಕ್ಷಯ್​ ಪಲ್ಲಮಜಲು​​
|

Updated on: Mar 06, 2024 | 12:20 PM

ಆರ್​​ಬಿಐ (Reserve Bank of India) ಇಂದು ಮಹತ್ವದ ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ಕ್ರೆಡಿಟ್​​​​ ಕಾರ್ಡ್ ವಿತರಕರು ಇತರ ಕಾರ್ಡ್ ನೆಟ್‌ವರ್ಕ್‌ಗಳೊಂದಿಗೆ ಯಾವುದೇ ಒಪ್ಪಂದವನ್ನು ಮಾಡಿಕೊಳ್ಳಬಾರದು ಎಂದು ಹೇಳಿದೆ. ಹಾಗೂ ಇತರ ಕ್ರೆಡಿಟ್​​​​ ಕಾರ್ಡ್​​ ನೆಟ್‌ವರ್ಕ್‌ ಸೇವೆಗಳನ್ನು ಪಡೆಯುವುದನ್ನು ತಡೆಯಬಹುದು ಎಂದು ಹೇಳಿದೆ. ಕಾರ್ಡ್ ವಿತರಕರು ತಮ್ಮ ಅರ್ಹ ಗ್ರಾಹಕರಿಗೆ ಕಾರ್ಡ್ ವಿತರಿಸುವಾಗ ಅವರಿಗೆ ಬಹು ಆಯ್ಕೆಯ ವ್ಯವಸ್ಥೆಯನ್ನು ನೀಡಬೇಕು ಎಂದು ಹೇಳಿದೆ.

ಕ್ರೆಡಿಟ್​ ಕಾರ್ಡ್​​ ​​ನೀಡುವಾಗ ಗ್ರಾಹಕರಿಗೆ ಬಹು ಆಯ್ಕೆಯನ್ನು ಕ್ರೆಡಿಟ್​​​​ ಕಾರ್ಡ್ ವಿತರಕರು ಅಗತ್ಯವಾಗಿ ನೀಡಬೇಕು ಹಾಗೂ ಈಗಾಗಲೇ ಕ್ರೆಡಿಟ್​​ ಕಾರ್ಡ್​​​ ಹೊಂದಿರುವವರಿಗೆ ಮುಂದಿನ ನವೀಕರಣದ ಅಥವಾ ಅಪ್ಡೇಟ್​​​ ಸಮಯದಲ್ಲಿ ಈ ಬಹು ಆಯ್ಕೆಗಳನ್ನು ನೀಡಬಹುದು ಎಂದು ಆರ್​ಬಿಐ ಹೇಳಿದೆ. ಆರ್​​ಬಿಐ ಕ್ರೆಡಿಟ್​ ಕಾರ್ಡ್​​ ವಿತರಕರು ತಮ್ಮ ಗ್ರಾಹಕರಿಗೆ ಕೆಲವೊಂದು ಇಂತಹ ವ್ಯವಸ್ಥೆಗಳನ್ನು ನೀಡಿಲ್ಲ ಎಂದು ಗಮನಿಸಿದ ಕಾರಣ ಈ ಕ್ರಮವನ್ನು ತಂದಿದೆ.

ಹೊಸ ನಿರ್ದೇಶನಗಳ ಉದ್ದೇಶವೇನು?

ಈ ಮಾರ್ಗಸೂಚಿಯ ಪ್ರಮುಖ ಉದ್ದೇಶ, ಕ್ರೆಡಿಟ್ ಕಾರ್ಡ್‌ಗಳ ವಿತರಣೆ ಮತ್ತು ಬಳಕೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಮತ್ತು ನಮ್ಯತೆಯನ್ನು ಒದಗಿಸುವುದು ಆರ್​​ಬಿಐ ಉದ್ದೇಶವಾಗಿದೆ. ಕಾರ್ಡ್ ನೆಟ್‌ವರ್ಕ್‌ಗಳು ಮತ್ತು ವಿತರಕರ ನಡುವಿನ ಕೆಲವು ವ್ಯವಸ್ಥೆಗಳು ಗ್ರಾಹಕರ ಆಯ್ಕೆಗಳನ್ನು ಸೀಮಿತಗೊಳಿಸುತ್ತಿವೆ ಎಂದು ಆರ್​​ಬಿಐ ಹೇಳಿದೆ. ಅದಕ್ಕಾಗಿ ಕೇಂದ್ರ ಬ್ಯಾಂಕ್ ಈ​​​ ನಿರ್ದೇಶನವನ್ನು ನೀಡಿದೆ:

1.ಕ್ರೆಡಿಟ್​​​​ ಕಾರ್ಡ್ ವಿತರಕರು ಇತರ ಕಾರ್ಡ್ ನೆಟ್‌ವರ್ಕ್‌ಗಳೊಂದಿಗೆ ಯಾವುದೇ ಒಪ್ಪಂದವನ್ನು ಮಾಡಿಕೊಳ್ಳಬಾರದು.

2. ಕಾರ್ಡ್ ವಿತರಕರು ಅರ್ಹ ಗ್ರಾಹಕರಿಗೆ ಕಾರ್ಡ್ ನೀಡುವಾಗ ಬಹು ಕಾರ್ಡ್ ನೆಟ್‌ವರ್ಕ್‌ಗಳಿಂದ ಆಯ್ಕೆ ಮಾಡುವ ಆಯ್ಕೆಯನ್ನು ನೀಡಬೇಕು.

3. ಈಗಾಗಲೇ ಕ್ರೆಡಿಟ್​​ ಕಾರ್ಡ್​​​ ಹೊಂದಿರುವವರಿಗೆ ಮುಂದಿನ ನವೀಕರಣದ ಅಥವಾ ಅಪ್ಡೇಟ್​​​ ಸಮಯದಲ್ಲಿ ಈ ಬಹು ಆಯ್ಕೆಗಳನ್ನು ನೀಡಬಹುದು.

ಇದನ್ನೂ ಓದಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಬ್ಯಾಂಕಿಂಗ್ ಲೈಸೆನ್ಸ್ ರದ್ದಾಗುವ ಸಾಧ್ಯತೆ; ಆಡಳಿತಗಾರರ ನೇಮಕಕ್ಕೆ ಆರ್​ಬಿಐ ಯೋಜನೆ

ನಿರ್ದೇಶನದ ಪ್ರಕಾರ ಅಧಿಕೃತ ಕಾರ್ಡ್ ನೆಟ್‌ವರ್ಕ್‌ಗಳು ಯಾವುವು?

ಆರ್‌ಬಿಐ ತನ್ನ ನಿರ್ದೇಶನದಲ್ಲಿ ಅಧಿಕೃತ ಕಾರ್ಡ್ ನೆಟ್‌ವರ್ಕ್‌ಗಳನ್ನು ಹೀಗೆ ವ್ಯಾಖ್ಯಾನಿಸಿದೆ. ಅಮೇರಿಕನ್ ಎಕ್ಸ್‌ಪ್ರೆಸ್ ಬ್ಯಾಂಕಿಂಗ್ ಕಾರ್ಪೊರೇಷನ್, ಡೈನರ್ಸ್ ಕ್ಲಬ್ ಇಂಟರ್‌ನ್ಯಾಶನಲ್ ಲಿಮಿಟೆಡ್., ಮಾಸ್ಟರ್‌ಕಾರ್ಡ್ ಏಷ್ಯಾ/ಪೆಸಿಫಿಕ್ ಪ್ರೈ. Ltd., ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ-ರುಪೇ ಮತ್ತು ವೀಸಾ ವರ್ಲ್ಡ್‌ವೈಡ್ Pteಗೆ ಸೀಮಿತಗೊಳಿಸಲಾಗಿದೆ.

ಹೊಸ ಮಾರ್ಗಸೂಚಿಗಳು ಯಾರಿಗೆಲ್ಲ ಅನ್ವಯವಾಗುವುದಿಲ್ಲ

₹ 10 ಲಕ್ಷಕ್ಕಿಂತ ಕಡಿಮೆ ವ್ಯವಹಾರ ನಡೆಸುವ ಕಾರ್ಡ್‌ದಾರರಿಗೆ ಕ್ರೆಡಿಟ್ ಕಾರ್ಡ್ ವಿತರಕರ ಈ ನಿರ್ದೇಶನಗಳು ಅನ್ವಯಿಸುವುದಿಲ್ಲ.

ಈ ನಿರ್ದೇಶನ ಯಾವಾಗ ಜಾರಿಯಲ್ಲಿ ಇರಲಿದೆ?

ಕ್ರೆಡಿಟ್ ಕಾರ್ಡ್ ವಿತರಿಸುವ ಸಮಯದಲ್ಲಿ ಗ್ರಾಹಕರ ಆಯ್ಕೆಗೆ ಸಂಬಂಧಿಸಿದ ನಿರ್ದೇಶನವು ಈ ಸುತ್ತೋಲೆಯ ದಿನಾಂಕದಿಂದ ಆರು ತಿಂಗಳವರೆಗೆ ಜಾರಿಗೆ ಬರಲಿದೆ ಎಂದು ಆರ್‌ಬಿಐ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್