EPFO Joint Declaration : ಉದ್ಯೋಗದಾರರು ಇಪಿಎಫ್ ಖಾತೆಯ ವಿವರಗಳನ್ನು ತಿದ್ದುಪಡಿ ಮಾಡಬೇಕೆ? ಇಲ್ಲಿದೆ ಸುಲಭ ಮಾರ್ಗ
ಉದ್ಯೋಗದಲ್ಲಿರುವ ಪ್ರತಿಯೊಬ್ಬರು ಕೂಡ ಪಿಎಫ್ ಖಾತೆ ಯನ್ನು ಹೊಂದಿರುತ್ತಾರೆ. ಪ್ರತಿ ತಿಂಗಳ ವೇತನದಲ್ಲಿ ಕನಿಷ್ಠ ಮೊತ್ತವು ಕಡಿತಗೊಂಡು, ಈ ಮೊತ್ತ ನಿವೃತ್ತಿ ಜೀವನದಲ್ಲಿ ಸಹಾಯಕ್ಕೆ ಬರುತ್ತದೆ ಎನ್ನುವುದು ಗೊತ್ತಿರುವ ವಿಚಾರ. ಆದರೆ ಒಂದು ವೇಳೆ ನಿಮ್ಮ ಇಪಿಎಫ್ ದಾಖಲೆಗಳಲ್ಲಿ ಏನಾದರೂ ಬದಲಾವಣೆ ಮಾಡಿಕೊಳ್ಳಬೇಕಾಗಿದ್ದರೆ ಇಪಿಎಫ್ಒ ಜಂಟಿ ಘೋಷಣೆ ಫಾರ್ಮ್ ಅನ್ನು ಭರ್ತಿ ಮಾಡಿ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.
ಬಹುತೇಕ ಕಂಪನಿಗಳಲ್ಲಿ ಪ್ರತಿ ತಿಂಗಳು ನೌಕರರ ವೇತನದಿಂದ ಒಂದು ನಿರ್ದಿಷ್ಟ ಮೊತ್ತವು ಕಡಿತ ಮಾಡಲಾಗುತ್ತದೆ. ಕೆಲಸದಲ್ಲಿರುವ ಉದ್ಯೋಗಿ ಭವಿಷ್ಯ ನಿಧಿ ಫಾರ್ಮ್‌ಗಳನ್ನು ಭರ್ತಿ ಮಾಡಿರುತ್ತಾರೆ. ಆದರೆ ಕೆಲವೊಮ್ಮೆ ಸಣ್ಣ ತಪ್ಪುಗಳಿಂದ ಇಪಿಎಫ್ ಖಾತೆಗಳಲ್ಲಿ ಕೆಲವು ತಪ್ಪುಗಳಾಗಿರಬಹುದು. ಆದರೆ ಉದ್ಯೋಗಿಗಳು ಪಿಎಫ್ ಖಾತೆಯಲ್ಲಿ ನಮೂದಿಸಿದ ತಪ್ಪಾದ ಮಾಹಿತಿಯನ್ನು ಸರಿಪಡಿಸಲು ಜಂಟಿ ಘೋಷಣೆ ಫಾರ್ಮ್ ಬಳಸಿಕೊಳ್ಳಬಹುದಾಗಿದೆ. ಉದ್ಯೋಗಿಯು ಪ್ರಾದೇಶಿಕ ಪಿಎಫ್ ಕಮಿಷನರ್‌ಗೆ ಸಲ್ಲಿಸಬೇಕಾದ ಜಂಟಿ ನಮೂನೆ ಇದಾಗಿದೆ.
ಜಂಟಿ ಘೋಷಣೆಯ ನಮೂನೆ (ಫಾರ್ಮ್ ) ಯ ಉದ್ದೇಶ:
ಉದ್ಯೋಗದಾತರ ಪಿಎಫ್ ಖಾತೆಯಲ್ಲಿ ಯಾವುದೇ ವ್ಯತ್ಯಾಸಗಳಿದ್ದರೂ ಸರಿಪಡಿಸಲು ಅಥವಾ ತಮ್ಮ ಇಪಿಎಫ್ ಖಾತೆಗೆ ಲಿಂಕ್ ಮಾಡಲಾದ ಹೆಸರು, ಜನ್ಮ ದಿನಾಂಕ, ಸಂಪರ್ಕ ವಿವರಗಳು ಅಥವಾ ಬ್ಯಾಂಕ್ ಖಾತೆ ಮಾಹಿತಿಯಂತಹ ಅವರ ವೈಯಕ್ತಿಕ ಮಾಹಿತಿಯನ್ನು ತಿದ್ದುಪಡಿ ಮಾಡಲು ಉದ್ಯೋಗಿಗಳಿಗೆ ಅವಕಾಶವನ್ನು ನೀಡುತ್ತದೆ. ಜಂಟಿ ಘೋಷಣೆಯ ನಮೂನೆ (ಫಾರ್ಮ್) ಉದ್ಯೋಗಿಗಳ ಇಪಿಎಫ್ ದಾಖಲೆಗಳಲ್ಲಿನ ಬದಲಾವಣೆಗೆ ಅನುವು ಮಾಡಿಕೊಡುತ್ತಾರೆ.
ಇದನ್ನೂ ಓದಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಬ್ಯಾಂಕಿಂಗ್ ಲೈಸೆನ್ಸ್ ರದ್ದಾಗುವ ಸಾಧ್ಯತೆ; ಆಡಳಿತಗಾರರ ನೇಮಕಕ್ಕೆ ಆರ್ಬಿಐ ಯೋಜನೆ
ಜಂಟಿ ಘೋಷಣೆ ಫಾರ್ಮ್ (JDF) ಬಳಸಿಕೊಂಡು ಇಪಿಎಫ್ ಖಾತೆಯಲ್ಲಿ ತಿದ್ದುಪಡಿ ಮಾಡುವುದು ಹೇಗೆ?
- ಹಂತ 1: ಮೊದಲಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (EPFO) ಅಧಿಕೃತ ವೆಬ್‌ಸೈಟ್ https://www.epfindia.gov.in/. ಗೆ ಭೇಟಿ ನೀಡಿ.
- ಹಂತ 2: ನಿಮ್ಮ ಯುನಿವರ್ಸಲ್ ಖಾತೆ ಸಂಖ್ಯೆ (UAN) ಮತ್ತು ಪಾಸ್‌ವರ್ಡ್ ಬಳಸಿ ಲಾಗ್ ಇನ್ ಆಗಿ.
- ಹಂತ 3: ಲಾಗ್ ಇನ್ ಬಳಿಕ EPFO ಪೋರ್ಟಲ್‌ನಲ್ಲಿ ‘ಆನ್‌ಲೈನ್ ಸೇವೆಗಳು’ ವಿಭಾಗವನ್ನು ಆಯ್ಕೆ ಮಾಡಿ.
- ಹಂತ 4: ಇಪಿಎಫ್ ಖಾತೆಯಲ್ಲಿನ ವಿವರಗಳನ್ನು ಸರಿಪಡಿಸಲು ಜಾಯಿಂಟ್ ಡಿಕ್ಲರೇಶನ್ ಫಾರ್ಮ್ (ಜೆಡಿಎಫ್) ಆಯ್ಕೆಮಾಡಿ.
- ಹಂತ 5: ಸರಿಯಾದ ಮಾಹಿತಿಯೊಂದಿಗೆ ಜಾಯಿಂಟ್ ಡಿಕ್ಲರೇಶನ್ ಫಾರ್ಮ್ (ಜೆಡಿಎಫ್) ಭರ್ತಿ ಮಾಡಿ. ಈಗಾಗಲೇ ಭರ್ತಿ ಮಾಡಲಾದ ಮಾಹಿತಿಯು ಸರಿಯಾಗಿದೆಯೇ ಎಂದು ಒಮ್ಮೆ ಖಚಿತಪಡಿಸಿಕೊಳ್ಳಿ.
- ಹಂತ 6: ಮಾಹಿತಿ ತಿದ್ದುಪಡಿಯ ಬಳಿಕ ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಅಥವಾ ಬ್ಯಾಂಕ್ ಪಾಸ್‌ಬುಕ್ ಸೇರಿದಂತೆ ಪ್ರಮುಖ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಹಂತ 7: ಈಗಾಗಲೇ ಅಪ್ಲೋಡ್ ಮಾಡಲಾದ ದಾಖಲೆಗಳನ್ನು ಒಮ್ಮೆ ಪರೀಕ್ಷಿಸಿ , EPFO ಪೋರ್ಟಲ್ ಮೂಲಕ ಜೆಡಿಎಫ್ ನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿ.
- ಹಂತ 8: EPFO ಪೋರ್ಟಲ್ ಮೂಲಕ ನಿಮ್ಮ JDF ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ