20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಹೈದರಾಬಾದ್ನಲ್ಲಿ ಖತರ್ನಾಕ್ ಕಳ್ಳನ ಕೃತ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. 20 ರೂಪಾಯಿಯ ವಾಟರ್ ಬಾಟಲ್ ಖರೀದಿಸಲು ಅಂಗಡಿಗೆ ಬಂದ ಆ ವ್ಯಕ್ತಿ ಬುದ್ಧಿವಂತಿಕೆಯಿಂದ ಅಂಗಡಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಸಿಸಿಟಿವಿ ನೋಡಿದ ನಂತರವೇ ಈ ಕೃತ್ಯ ಬೆಳಕಿಗೆ ಬಂದಿದೆ.
ಹೈದರಾಬಾದ್: ಕೆಲವರು ಯಾವುದೇ ಮುಲಾಜಿಲ್ಲದೆ ಕಳ್ಳತನ ಮಾಡಿ ಪರಾರಿಯಾಗುತ್ತಾರೆ. ಇನ್ನು ಕೆಲವರು ಸಣ್ಣ ತಪ್ಪಿನಿಂದ ತಕ್ಷಣ ಸಿಕ್ಕಿಬೀಳುತ್ತಾರೆ. ಇಲ್ಲೂ ಇಂಥದ್ದೇ ಘಟನೆ ಬೆಳಕಿಗೆ ಬಂದಿದೆ. ಬುದ್ಧಿವಂತನೊಬ್ಬ 20 ರೂಪಾಯಿಯ ನೀರಿನ ಬಾಟಲಿ ಖರೀದಿಸಲು ಬಂದಿದ್ದು, ಅದೇ ವೇಳೆಗೆ ಮೊಬೈಲ್ ಕದ್ದಿದ್ದಾನೆ. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿ ದಾಖಲಾಗಿವೆ. ಮೊಬೈಲ್ ಎಲ್ಲೂ ಕಾಣದಿದ್ದಾಗ ಸಿಸಿಟಿವಿ ನೋಡಿದ ಮಾಲೀಕರಿಗೆ ಕಳ್ಳತನದ ವಿಷಯ ಗೊತ್ತಾಗಿದೆ. ಬಳಿಕ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದು, ಅವರು ಆರೋಪಿಯನ್ನು ಬಂಧಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos