ಹೆಗಲಿಗೆ ಬ್ಯಾಗ್ ಹಾಕಿ, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಶಾಲಾ ಮಕ್ಕಳು

ಹೆಗಲಿಗೆ ಬ್ಯಾಗ್ ಹಾಕಿ, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಶಾಲಾ ಮಕ್ಕಳು

ಸುಷ್ಮಾ ಚಕ್ರೆ
|

Updated on:Sep 20, 2024 | 8:56 PM

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಹಳ್ಳಿಯೊಂದರ ಶಾಲಾ ಮಕ್ಕಳು ಶಾಲೆಗೆ ಹೋಗಬೇಕೆಂದರೆ ಕೈಯಲ್ಲಿ ತಮ್ಮ ಚಪ್ಪಲಿ ಹಿಡಿದು, ಯೂನಿಫಾರಂ ಮೇಲೆತ್ತಿಕೊಂಡು ಕೆಸರಿನ ಹಾದಿಯಲ್ಲಿ ನಡೆದುಹೋಗಬೇಕು. ಈ ಊರಿಗೆ ಸರಿಯಾದ ರಸ್ತೆಯೇ ಇಲ್ಲ. ಮಳೆಗಾಲದಲ್ಲಂತೂ ಈ ಊರಿನ ಮಕ್ಕಳು ಶಾಲೆಗೆ ಹೋಗೋ ಮಾತೇ ಇಲ್ಲ.

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಪಿಪ್ರಾ ಗ್ರಾಮದ ರಸ್ತೆಗಳ ಸ್ಥಿತಿ ತೀರಾ ಹದಗೆಟ್ಟಿದೆ. ಇಲ್ಲಿನ ರಸ್ತೆಗಳು ಕೆಸರಿನಿಂದ ಆವೃತವಾಗಿವೆ. ಸಾಮಾನ್ಯ ಜನರು ಹಾಗೂ ಶಾಲಾ ಮಕ್ಕಳು ಸಮಸ್ಯೆ ಎದುರಿಸಬೇಕಾಗಿ ಬಂದರೂ ಕೇಳುವವರೇ ಇಲ್ಲದಂತಾಗಿದೆ. ಶಾಲಾ ಮಕ್ಕಳು ಪ್ರತಿನಿತ್ಯ ತಮ್ಮ ಶಾಲೆಗಳಿಗೆ ಕೆಸರಿನ ದಾರಿಯಲ್ಲೇ ಹೋಗಿ ಬರುತ್ತಿದ್ದಾರೆ. ಹೆಗಲ ಮೇಲೆ ಶಾಲಾ ಬ್ಯಾಗ್, ಕೈಯಲ್ಲಿ ಶೂ, ಚಪ್ಪಲಿ ಹಿಡಿದುಕೊಂಡು ಮಕ್ಕಳು ನಿತ್ಯ ಕೆಸರುಮಯ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಅಷ್ಟೇ ಅಲ್ಲ, ಚಿಕ್ಕ ವಯಸ್ಸಿನ ಶಾಲಾ ಮಕ್ಕಳು, ಅವರ ಕುಟುಂಬದವರು ಅವರನ್ನು ಶಾಲೆಗೆ ಬಿಡಲು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 20, 2024 08:10 PM