AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology: ಈ ರಾಶಿಯವರು ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಅವಕಾಶ ಒದಗಿಬರಲಿದೆ

ರಾಶಿ ಭವಿಷ್ಯ ಶನಿವಾರ(ಸೆ.21): ಕ್ಷಣ ತಜ್ಞರ ಭೇಟಿಯಿಂದ ನಿಮ್ಮ ಓದು ಇನ್ನಷ್ಟು ಸುಗಮವಾಗುವುದು. ಮನೆಯವರ ಜೊತೆ ಕಾಲ ಕಳೆಯುವಿರಿ. ಕೂಡಿಟ್ಟ ಹಣದಿಂದ ಉಪಯುಕ್ತವಾದ ವಸ್ತುವನ್ನು ಖರೀದಿಸುವಿರಿ. ಸಹೋದರರಿಗೆ ಉಡುಗೊರೆಯನ್ನು ಕೊಟ್ಟು ಸಂತೋಷಪಡಿಸುವಿರಿ. ಹಾಗಾದರೆ ಸೆಪ್ಟೆಂಬರ್​ 21ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ಈ ರಾಶಿಯವರು ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಅವಕಾಶ ಒದಗಿಬರಲಿದೆ
ಈ ರಾಶಿಯವರು ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಅವಕಾಶ ಒದಗಿಬರಲಿದೆ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Sep 21, 2024 | 12:12 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಚತುರ್ಥೀ, ನಿತ್ಯ ನಕ್ಷತ್ರ: ಭರಣೀ, ಯೋಗ: ವ್ಯಾಘಾತ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 28 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ09:24 ರಿಂದ 10:55, ಯಮಘಂಡ ಕಾಲ ಮಧ್ಯಾಹ್ನ 01:56 ರಿಂದ 03:27ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:23 ರಿಂದ  07:53ರ ವರೆಗೆ.

ಧನು ರಾಶಿ: ಮಹಿಳೆಯರಿಗೆ ಕೊಡಬೇಕಾದ ಗೌರವವನ್ನು ಕೊಡುವಿರಿ. ಇಂದು ನಿಮಗೆ ಮನೆಯವರ ಸಹಕಾರದಿಂದ ಎಲ್ಲ ಕಾರ್ಯವನ್ನು ಮಾಡುವಿರಿ. ನಿಮ್ಮ ಸ್ವಭಾವಗಳು ಇಷ್ಟವಾಗದು. ನಿಮ್ಮ‌ ಮಾತುಗಳನ್ನು ನಿರಾಸಕ್ತಿಯಿಂದ ಪಾಲಿಸುವರು. ನಿಮ್ಮ ಪ್ರಭಾವವನ್ನು ತೋರಿಸಲು ಹೋಗಿ ಅಪಮಾನಗೊಳ್ಳುವಿರಿ. ಸಂಬಂಧವನ್ನು ಮತ್ತಷ್ಟು ಆತ್ಮೀಯವಾಗಿಸಲು ಪ್ರಯತ್ನಿಸುವಿರಿ. ಉದ್ಯೋಗದ ಸ್ಥಳದಲ್ಲಿ ಹೆಚ್ಚಿನ ನಿರೀಕ್ಷೆ ಇರಲಿದೆ. ಯಾರನ್ನೂ ಅಪಾರ್ಥ ಮಾಡಿಕೊಳ್ಳುವುದು ಸರಿಯಲ್ಲ. ನಿಮಗೆ ಸಿಗುವ ಗೌರವದಲ್ಲಿ ವ್ಯತ್ಯಾಸವಾದ ಕಾರಣ ನಿಮಗೆ ಸಿಟ್ಟು ಬರಬಹುದು. ದಾಂಪತ್ಯದಲ್ಲಿ ಉಂಟಾದ ಬಿರುಕನ್ನು ಕುಳಿತು ಸರಿಮಾಡಿಕೊಳ್ಳಿ. ಚಲಿಸುತ್ತಿದ್ದರೆ ಯಾವುದಾದರೂ ಒಂದು ಸ್ಥಾನವನ್ನು ತಲುಪಲು ಸಾಧ್ಯ. ನಿಮ್ಮಲ್ಲಿ‌ ಇರುವುದನ್ನು ದಾನಮಾಡುವಿರಿ. ಮಕ್ಕಳ‌ ವಿವಾಹದ ಚಿಂತೆ‌ಯು ಕಾಡಲಿದೆ. ಅಂದುಕೊಂಡ ಕೆಲಸವನ್ನು ಪೂರೈಸಲು ನಿಮಗೆ ಸಮಸ್ಯೆಯು ಬರಬಹುದು. ನಿಮ್ಮ ಬಂಡವಾಳಕ್ಕೆ ತಕ್ಕ ಮನೆಯು ಸಿಗಲಿದೆ.

ಮಕರ ರಾಶಿ: ನೀವು ವಿಶ್ವಾಸ ಯೋಗ್ಯರ ಜೊತೆ ಹೆಚ್ಚು ಬೆರೆಯುವಿರಿ. ಇಂದು ನೀವು ಯಾವುದೇ ಒತ್ತಡಕ್ಕೆ ಸಿಲುಕದೇ ಆಪ್ತರ ಜೊತೆ ಆರಾಮಾಗಿ ಮಾತನಾಡಿ ದಿನವನ್ನು ಕಳೆಯುವಿರಿ. ಯಾರಾದರೂ ನಿಮ್ಮ ಹಾದಿಯನ್ನು ತಪ್ಪಿಸಬಹುದು. ದೈವೀಕ್ಷೇತ್ರದಲ್ಲಿ ಹೆಚ್ಚು ಸಮಯವನ್ನು ಕಳೆಯಲು ಇಷ್ಟಪಡುವಿರಿ. ವಿವಾಹದಲ್ಲಿ ಆಸಕ್ತಿಯು ಕಡಿಮೆಯಾಗಲಿದೆ. ಸ್ವತಂತ್ರವಾಗಿರಲು ಬಯಸುವಿರಿ. ಮನೆಯವರ ವರ್ತನೆಯು ನಿಮಗೆ ಹಿಡಿಸದೇಹೋದೀತು. ಸಂಪತ್ತು ಕ್ಷಣಿಕ ಎಂದೆನಿಸಬಹುದು. ಸ್ತ್ರೀಯರಿಂದ ಸಹಾಯವನ್ನು ಪಡೆಯಲು ಇಚ್ಛಿಸುವಿರಿ. ಮಕ್ಕಳನ್ನು‌ ಮನೆಯಿಂದ ಆಚೆ ಇಟ್ಟು ಓದಿಸುವ ಆಲೋಚನೆ ಇರಲಿದೆ. ನಿಮ್ಮ ನಡತೆಯಲ್ಲಿ ಅನುಮಾನ ಕಾಣಬಹುದು. ಸಮಯವು ಅಮೂಲ್ಯ ಎಂದು ಅನ್ನಿಸಬಹುದು. ಉಪಕಾರಕ್ಕೆ ಪ್ರತ್ಯುಪಕಾರವನ್ನು ಬಯಸುವಿರಿ. ನಿಮಗೆ ಧನಸಹಾಯ ಸಿಕ್ಕರೂ ಅದನ್ನು ಪಡೆಯಲು ಮನಸ್ಸು ಒಪ್ಪದು. ಹೊಂದಾಣಿಕೆಯಿಂದ ಮನಸ್ಸಿನ ಕ್ಲೇಶವು ಸುಧಾರಿಸಬಹುದು. ಧನವು ನಷ್ಟವಾದ ವಿಚಾರಗಳನ್ನು ಯಾರ ಬಳಿಯೂ ಹೇಳಲಾರಿರಿ. ತಂದೆಯ ಜೊತೆ ವಾಗ್ವಾದ ಮಾಡಿಕೊಳ್ಳುವಿರಿ.

ಕುಂಭ ರಾಶಿ: ಕಳೆದ ಕಷ್ಟದ ದಿನಗಳು ನಿಮಗೆ ಇಂದು ಖುಷಿ ಎನಿಸಬಹುದು. ಇಂದು ನೀವಿರುವ ವಾತಾವರಣವು ನಿಮಗೆ ಹಾಯೆನಿಸಬಹುದು. ಸ್ನೇಹಿತರ ಜೊತೆ ಸಮಯವನ್ನು ಕಳೆಯುವಿರಿ. ನಂಬಿಕೆಗೆ ದ್ರೋಹವಾಗಬಹುದು.‌ ಸಂಗಾತಿಯ ಮಾತುಗಳು ನಿಮಗೆ ಅಜೀರ್ಣವಾಗುವುದು. ಅಕಾರಣ ಪ್ರೀತಿಯನ್ನು ಒಪ್ಪಿಕೊಳ್ಳುವಿರಿ. ಹಣಕಾಸಿನ ವೃದ್ಧಿಗೆ ಮಾರ್ಗೋಪಾಯವನ್ನು ಕಂಡುಕೊಳ್ಳುವಿರಿ. ನೀವು ಬಯಸಿದ ವಸ್ತುಗಳು ನಿಮ್ಮನ್ನು ಬಂದು ಸೇರಲಿದೆ. ಧಾರ್ಮಿಕ ಆಚರಣೆಯಲ್ಲಿ‌ ಆಸಕ್ತಿಯು ಕಡಿಮೆ ಆಗಲಿದೆ. ಸರ್ಕಾರದ ಕೆಲಸದಿಂದ ನಿಮಗೆ ಬೇಸರವಾಗಬಹುದು. ‌ವ್ಯರ್ಥ ಓಡಾಟವು ನಿಮಗೆ ಬೇಸರ ತರಿಸಬಹುದು. ಪ್ರತಿ ಕ್ಷಣವನ್ನೂ ಖುಷಿಯಿಂದ ಕಳೆಯಲು ಇಚ್ಛಿಸುವಿರಿ. ನಿಮ್ಮವರ ಕೆಲವು ವರ್ತನೆಗಳು ನಿಮಗೆ ಇಷ್ಟವಾಗದೇಹೋಗಬಹುದು. ಕುಟುಂಬದ ಜವಾಬ್ದಾರಿಯು ನಿಮಗೆ ಸಿಗಬಹುದು. ಮನಸ್ಸಿನ ಚಾಂಚಲ್ಯವನ್ನು ಕಡಿಮೆ ಮಾಡಿಕೊಳ್ಳುವುದು ಅಗತ್ಯ.

ಮೀನ ರಾಶಿ: ನೀವು ದೂರದ ಊರಿನಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶ ಸಿಗಬಹುದು. ನಿಮ್ಮ ಕೆಲವು ವಿಚಾರದಲ್ಲಿ ತಿಳಿವಳಿಕೆ ಬಂದು ಅದನ್ನು ವಿವೇಕದಿಂದ ನೋಡುವಿರಿ. ವಿನಾಕಾರಣ ಎಲ್ಲದಕ್ಕೂ ಎಲ್ಲರಮೇಲೂ ಸಿಟ್ಟಾಗುವಿರಿ. ಶಿಕ್ಷಣ ತಜ್ಞರ ಭೇಟಿಯಿಂದ ನಿಮ್ಮ ಓದು ಇನ್ನಷ್ಟು ಸುಗಮವಾಗುವುದು. ಮನೆಯವರ ಜೊತೆ ಕಾಲ ಕಳೆಯುವಿರಿ. ಕೂಡಿಟ್ಟ ಹಣದಿಂದ ಉಪಯುಕ್ತವಾದ ವಸ್ತುವನ್ನು ಖರೀದಿಸುವಿರಿ. ಸಹೋದರರಿಗೆ ಉಡುಗೊರೆಯನ್ನು ಕೊಟ್ಟು ಸಂತೋಷಪಡಿಸುವಿರಿ. ಗೆಳೆತನದ ವಿಚಾರದಲ್ಲಿ ಮಿತಿಯಿರಲಿದೆ. ಸಂತರ ಭೇಟಿಯಾಗಿ ನಿಮಗೆ ನೆಮ್ಮದಿಯು ಸಿಗಲಿದೆ. ಪ್ರಯಾಣವನ್ನು ಮಾಡುವ ಉತ್ಸಾಹದಲ್ಲಿ ಇರುವಿರಿ. ಕೃಷಿಯಲ್ಲಿ ಉತ್ತಮ‌ ಲಾಭವನ್ನು ಪಡೆಯಲು ಸಾಧ್ಯವಾಗುವುದು. ಯಾವುದಾದರೂ ಉಪಕರಣದಿಂದ ನಿಮಗೆ ಲಾಭವಾಗಬಹುದು. ಉದ್ಯೋಗದ ಸ್ಥಳದಲ್ಲಿ ಒತ್ತಡ ಅನಿರೀಕ್ಷಿತವಾಗಿ ಹೆಚ್ಚಾಗುವುದು.