ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಜೋರ್ಡಾನ್, ಓಮನ್ ಮತ್ತು ಇಥಿಯೋಪಿಯಾಗೆ ಪ್ರವಾಸ ಆರಂಭಿಸಿದ್ದಾರೆ. ಈ ಭೇಟಿ ಈ ರಾಷ್ಟ್ರಗಳೊಂದಿಗಿನ ಭಾರತದ ಸಂಬಂಧಗಳು ವ್ಯವಹಾರ, ವಿಶ್ವಾಸಾರ್ಹತೆ ಮತ್ತು ಸಹಕಾರವನ್ನು ಹೇಗೆ ಒತ್ತಿಹೇಳುತ್ತವೆ. ಪ್ರಧಾನಿ ಮೋದಿ ಜೋರ್ಡಾನ್‌ನ ಅಮ್ಮನ್‌ನಲ್ಲಿ ಬಂದಿಳಿದಿದ್ದಾರೆ. ಜೋರ್ಡಾನ್ ಪ್ರಧಾನಿ ಅವರಿಂದ ಮೋದಿಗೆ ಸ್ವಾಗತ ನೀಡಲಾಯಿತು.
ನವದೆಹಲಿ, ಡಿಸೆಂಬರ್ 15: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಇಂದಿನಿಂದ 4 ದಿನಗಳ ಕಾಲ ಜೋರ್ಡಾನ್, ಇಥಿಯೋಪಿಯಾ, ಓಮನ್ ಪ್ರವಾಸ ಕೈಗೊಂಡಿದ್ದಾರೆ. ಇಂದು ಜೋರ್ಡಾನ್‌ನ ಅಮ್ಮನ್ ವಿಮಾನ ನಿಲ್ದಾಣವನ್ನು ತಲುಪಿದ ಪ್ರಧಾನಿ ಮೋದಿಯನ್ನು ಜೋರ್ಡಾನ್ ಪ್ರಧಾನಿಯವರೇ ಖುದ್ದಾಗಿ ತೆರಳಿ ಬರಮಾಡಿಕೊಂಡಿದ್ದಾರೆ. ಕಿಂಗ್ ಅಬ್ದುಲ್ಲಾ II ಬಿನ್ ಅಲ್ ಹುಸೇನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಜೋರ್ಡಾನ್‌ಗೆ 2 ದಿನಗಳ ಭೇಟಿಗೆ ತೆರಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos

