ದೆಹಲಿಯಲ್ಲಿ ಗಾಳಿ ಗುಣಮಟ್ಟ ಕಳಪೆ: ಜಾಗೃತಿ ಮೂಡಿಸಲು ಸಂಸತ್ತಿಗೆ ಸೈಕಲ್‌ನಲ್ಲಿ ಬಂದ ಸಂಸದ
ದೆಹಲಿಯಲ್ಲಿ ವಾಯು ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ಟಿಡಿಪಿ ಸಂಸದ ಅಪ್ಪಲನಾಯ್ಡು ಕಲ್ಲಿಸೆಟ್ಟಿ ಮಾಸ್ಕ್ ಧರಿಸಿ ಸಂಸತ್ತಿಗೆ ಸೈಕಲ್‌ನಲ್ಲಿ ಆಗಮಿಸಿದರು. ಕಳಪೆ ಗಾಳಿಯ ಗುಣಮಟ್ಟದಿಂದ ಆರೋಗ್ಯದ ಪರಿಣಾಮಗಳನ್ನು ಎದುರಿಸಲು ವಾಹನಗಳ ಬದಲಿಗೆ ಸೈಕಲ್‌ಗಳನ್ನು ಬಳಸುವಂತೆ ಮನವಿ ಮಾಡಿದರು. ದೆಹಲಿಯ ಹದಗೆಟ್ಟ ಗಾಳಿಯ ಗುಣಮಟ್ಟದಿಂದ ಸಾರ್ವಜನಿಕರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದು, ಜನರನ್ನು ಹಾಗೂ ರಾಜಕಾರಣಿಗಳನ್ನು ಎಚ್ಚರಿಸಲು ಅವರು ಈ ಕ್ರಮ ಕೈಗೊಂಡರು.
ದೆಹಲಿ,ಡಿ.15: ದೆಹಲಿಯಲ್ಲಿ ವಾಯು ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ಟಿಡಿಪಿ ಸಂಸದ ಅಪ್ಪಲನಾಯ್ಡು ಕಲ್ಲಿಸೆಟ್ಟಿ , ಮಾಸ್ಕ್ ಧರಿಸಿಕೊಂಡು ಸಂಸತ್ತಿಗೆ ಸೈಕಲ್‌ನಲ್ಲಿ ಬಂದಿದ್ದಾರೆ. ದೆಹಲಿಯಲ್ಲಿ ಕಳಪೆ ಗಾಳಿಯ ಗುಣಮಟ್ಟದಿಂದ ಆರೋಗ್ಯದ ಪರಿಣಾಮವನ್ನು ಎದುರಿಸುವ ಕಾರಣ, ವಾಹನಗಳ ಬದಲು ಸೈಕಲ್‌ಗಳನ್ನು ಬಳಸಿ ಎಂದು ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ದಿನದಿಂದ ದಿನಕ್ಕೆ ಗಾಳಿಯ ಗುಣಮಟ್ಟ ಹದಗೆಟ್ಟಿದೆ. ಇದರಿಂದ ಸಾರ್ವಜನಿಕರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಹೇಳಿದರು. ಈ ಮೂಲಕ ಜನರನ್ನು ಹಾಗೂ ನಮ್ಮ ಸಂಸದರು, ರಾಜಕಾರಣಿಗಳನ್ನು ಎಚ್ಚರಿಸಬೇಕಿದೆ. ವಾಹನ ಬಳಸುವ ಬದಲು ಸಂಸತ್ತಿಗೆ ಸೈಕಲ್‌ನಲ್ಲಿ ಬನ್ನಿ, ಹಾಗೂ ವಾತಾವರಣದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಎಂದು ಹೇಳಿದ್ದಾರೆ. ಇನ್ನು ಬೆಂಗಳೂರಿನಲ್ಲೂ ಕೂಡ ಒಂದು ವಾರದಿಂದ ಗಾಳಿಯ ಗುಣಮಟ್ಟದಲ್ಲಿ ವ್ಯಾತ್ಯಾಸ ಕಂಡು ಬಂದಿದೆ. ಶನಿವಾರದಂದು ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ 206ಕ್ಕೆ ಇಳಿಕೆದಿತ್ತು. ಇಂದು ಬೆಳಿಗ್ಗೆ ಗಾಳಿಯ ಗುಣಮಟ್ಟ 165 ಇತ್ತು. ಇದೀಗ 105ಕ್ಕೆ ಬಂದಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್ನ್ಯೂಸ್: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ

