ಸೀಕ್ರೆಟ್ ರೂಮ್ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಒಂದೇ ರೂಮ್ನಲ್ಲಿ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರು ಇದ್ದಾರೆ. ಇದು ಸೀಕ್ರೆಟ್ ರೂಮ್. ಅಲ್ಲಿಂದಲೇ ಅವರು ಬಿಗ್ ಬಾಸ್ ಮನೆಯ ಆಟವನ್ನು ನೋಡುತ್ತಿದ್ದಾರೆ. ಆಗ ಅವರಿಬ್ಬರ ನಡುವೆ ಚರ್ಚೆ ನಡೆದಿದೆ. ಧ್ರುವಂತ್ ಕೇಳಿದ ಒಂದು ಸಿಂಪಲ್ ಪ್ರಶ್ನೆಗೆ ರಕ್ಷಿತಾ ಶೆಟ್ಟಿ ಓವರ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಸ್ಪರ್ಧಿಗಳಾದ ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಅವರು ಈಗ ಸೀಕ್ರೆಟ್ ರೂಮ್ನಲ್ಲಿ ಇದ್ದಾರೆ. ಅಲ್ಲಿಯೂ ಕೂಡ ಅವರು ಜಗಳ ಮಾಡಿಕೊಂಡಿದ್ದಾರೆ. ಧ್ರುವಂತ್ ಕೇಳಿದ ಒಂದು ಸಿಂಪಲ್ ಪ್ರಶ್ನೆಗೆ ರಕ್ಷಿತಾ ಶೆಟ್ಟಿ (Rakshitha Shetty) ಓವರ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಸಣ್ಣ ಪ್ರಶ್ನೆ ಕೂಡ ರಕ್ಷಿತಾಗೆ ಅರ್ಥ ಆಗಿಲ್ಲ ಎಂದು ಧ್ರುವಂತ್ (Dhruvanth) ವ್ಯಂಗ್ಯವಾಡಿದ್ದಾರೆ. ಅವರಿಬ್ಬರು ಮತ್ತೆ ಬಿಗ್ ಬಾಸ್ ಮನೆಯ ಒಳಗೆ ಕಾಲಿಡಲಿದ್ದಾರೆ. ಆಗ ಮನೆಯೊಳಗಿನ ಸ್ಪರ್ಧಿಗಳಿಗೆ ಅಚ್ಚರಿ ಆಗಲಿದೆ. ಎಲಿಮಿನೇಟ್ ಆಗಿದ್ದಾರೆ ಎಂದು ತಿಳಿದುಕೊಂಡು ಈಗಾಗಲೇ ರಕ್ಷಿತಾ ಮತ್ತು ಧ್ರುವಂತ್ ಬಗ್ಗೆ ಮನೆಮಂದಿ ನಾನಾ ರೀತಿಯ ಮಾತುಗಳನ್ನು ಮಾಡಿದ್ದಾರೆ. ಅದಕ್ಕೆಲ್ಲ ಅವರಿಬ್ಬರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

