AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 15ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 15ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜೀವನದ ಸವಾಲುಗಳನ್ನು ಎದುರಿಸಲು ಈ ಭವಿಷ್ಯ ನಿಮಗೆ ಸಹಾಯಕವಾಗಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 15ರ ದಿನಭವಿಷ್ಯ
ದಿನ ಭವಿಷ್ಯ
ಸ್ವಾತಿ ಎನ್​ಕೆ
| Updated By: ಅಕ್ಷತಾ ವರ್ಕಾಡಿ|

Updated on: Dec 15, 2025 | 12:04 AM

Share

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಕ್ಲಿಕ್ ಆಗಿಯೇ ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿ ನೀವು ಆರಂಭಿಸಿದ ವೃತ್ತಿ- ವ್ಯಾಪಾರ ಅಂದುಕೊಂಡ ದಿಕ್ಕಿನಲ್ಲಿಯೇ ಸಾಗಲಿದೆ. ಹಣಕಾಸಿನ ಹೊಂದಾಣಿಕೆ ಮಾಡಬೇಕು ಎಂದಿದ್ದಲ್ಲಿ ಅದು ಕೂಡ ಸಲೀಸಾಗಿ ಆಗಲಿದೆ. ನೀವು ಮುಂಜಾಗ್ರತೆಯಿಂದ ಹಣ ಉಳಿತಾಯ ಮಾಡಿಕೊಂಡು ಬಂದಿದ್ದು ಅಂತೂ ಪ್ರಯೋಜನಕ್ಕೆ ಬಂತು ಎಂಬ ಸಮಾಧಾನ ಈ ದಿನ ನಿಮಗೆ ಸಿಗಲಿದೆ. ವೈವಾಹಿಕ, ಪ್ರೀತಿ- ಪ್ರೇಮದ ವಿಚಾರ ಆದ್ಯತೆ ಪಡೆದುಕೊಳ್ಳುತ್ತವೆ. ಗ್ಯಾರೇಜ್ ನಡೆಸುತ್ತಾ ಇರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ವಾಹನಗಳ ಬಿಡಿ ಭಾಗಗಳ ಹೋಲ್ ಸೇಲ್ ಮಾರಾಟ ಮಾಡುವಂಥವರಿಗೆ ವಿಸ್ತರಣೆಗೆ ಅವಕಾಶಗಳು ತೆರೆದುಕೊಳ್ಳಲಿವೆ. ರಿಯಾಯಿತಿಯಲ್ಲಿ ಸಿಗುತ್ತಿದೆ ಎಂಬ ಕಾರಣಕ್ಕೋ ಅಥವಾ ಬೇರೆ ಯಾವುದೋ ಆಫರ್ ಗಳಿವೆ ಅಂತಲೋ ವಾಷಿಂಗ್ ಮಶೀನ್, ರೆಫ್ರಿಜರೇಟ್, ಟಿವಿ ಇಂಥವುಗಳನ್ನು ಖರೀದಿ ಮಾಡುವ ಸಾಧ್ಯತೆ ಇದೆ. ಖರ್ಚಿನ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಮುಖ್ಯ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ನಿಮಗೆ ತುಂಬ ಚೆನ್ನಾಗಿ ಗೊತ್ತಿರುವಂಥ- ಅನುಭವ ಇರುವಂಥ ವಿಷಯಗಳಲ್ಲಿಯೇ ನಿರೀಕ್ಷಿತ ಮಟ್ಟದ ಫಲಿತಾಂಶ ಪಡೆದುಕೊಳ್ಳಲು ಹರಸಾಹಸ ಪಡುವಂತೆ ಆಗಲಿದೆ. ನಿಮ್ಮ ಸುತ್ತಮುತ್ತ ಏನೋ ಬದಲಾವನೆ ಆಗುತ್ತಿದೆ ಎಂಬುದು ಬಲವಾಗಿ ಮನಸ್ಸಿನಲ್ಲಿ ಬೇರೂರಲಿದೆ. ಉದ್ಯೋಗ ಅಥವಾ ವೃತ್ತಿಗೆ ಸಂಬಂಧಿಸಿದಂತೆ ಕೆಲವು ಕೋರ್ಸ್ ಗಳಿಗೆ ಸೇರ್ಪಡೆ ಆಗುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಇದಕ್ಕಾಗಿ ಸ್ನೇಹಿತರು- ಸಹೋದ್ಯೋಗಿಗಳ ನೆರವು, ಮಾರ್ಗದರ್ಶನ ಸಹ ಪಡೆದುಕೊಳ್ಳಲಿದ್ದೀರಿ. ನಿಮಗೆ ಏನು ಸಿಗುತ್ತದೋ ಅಷ್ಟರಲ್ಲಿಯೇ ತೃಪ್ತಿ ಪಟ್ಟುಕೊಂಡು ಸುಮ್ಮನಿರಬೇಕು ಎಂದು ಎಚ್ಚರಿಕೆ ಧ್ವನಿಯಲ್ಲಿ ಕೆಲವು ವ್ಯಕ್ತಿಗಳು ಹೇಳಲಿದ್ದಾರೆ. ಭಾವನಾತ್ಮಕವಾಗಿ ನೀವು ಬಹಳ ಹತ್ತಿರವಾದ ವ್ಯಕ್ತಿಯ ಆರ್ಥಿಕ ವಿಚಾರಗಳು ಗಾಬರಿ ಹುಟ್ಟಿಸುತ್ತವೆ. ನೀವು ಊಹಿಸಲು ಕೂಡ ಸಾಧ್ಯವಿಲ್ಲದಂಥ ದೊಡ್ಡ ಸಮಸ್ಯೆ ಅವರ ಬದುಕಿನಲ್ಲಿ ಆಗಿರುವುದು ತಿಳಿದುಬಂದು, ಬೇಸರ ಮೂಡಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಸಂಯಮ ಹಾಗೂ ತಾಳ್ಮೆ ನಿಮ್ಮ ಪಾಲಿಗೆ ಗಟ್ಟಿಯಾಗಿ ನಿಲ್ಲುವಂಥ ಸ್ವಭಾವ ಆಗಿರುತ್ತವೆ. ನಿಮ್ಮ ಜತೆಗೆ ಇರುವವರು ಇನ್ನು ಇದು ಆಗದು ಎಂದು ಕೆಲವು ಕೆಲಸಗಳಿಂದ ದೂರ ಸರಿದು ನಿಂತ ಮೇಲೂ ನೀವು ಗಟ್ಟಿಯಾಗಿ ನಿಂತು ಯಶಸ್ಸು ಕಾಣುವಂತೆ ಆಗಲಿದೆ. ವ್ಯಾಪಾರ- ವ್ಯವಹಾರ ಮಾಡಿಕೊಂಡು ಇರುವವರು ಅದರಲ್ಲಿನ ರಹಸ್ಯಗಳನ್ನು ಯಾರ ಜೊತೆಗೆ ಹಂಚಿಕೊಳ್ಳುವುದಕ್ಕೆ ಹೋಗಬೇಡಿ. ನಿಮಗೆ ತುಂಬ ಇಷ್ಟವಾಗುವಂಥ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿನ ಜೊತೆಗೆ ಸಂತೋಷವಾದ ಸಮಯವನ್ನು ಕಳೆಯುವಂಥ ಯೋಗ ಇದೆ. ಅಷ್ಟೇ ಅಲ್ಲ, ಕುಟುಂಬ ಸದಸ್ಯರ ಜೊತೆಗೆ ಹೋಟೆಲ್- ರೆಸ್ಟೋರೆಂಟ್ ನಲ್ಲಿ ಸ್ವಾದಿಷ್ಟವಾದ ಭೋಜನ- ಖಾದ್ಯಗಳನ್ನು ಸವಿಯುವಂಥ ಯೋಗ ಸಹ ಇದೆ. ಲೇವಾದೇವಿ ವ್ಯವಹಾರ ಮಾಡುತ್ತಿರುವವರು ವಿಧಾನದಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದಕ್ಕೆ ತೀರ್ಮಾನ ತೆಗೆದುಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನಿಮ್ಮದೆಷ್ಟೋ ಅಷ್ಟು ಕೆಲಸವನ್ನು ಮಾತ್ರ ಮಾಡುವ ಕಡೆಗೆ ಲಕ್ಷ್ಯವನ್ನು ನೀಡಿ. ಅತ್ಯುತ್ಸಾಹದಲ್ಲೋ ಅಥವಾ ಇನ್ನೊಬ್ಬರಿಗೆ ಸಹಾಯ ಆಗಲಿ ಅಂದುಕೊಂಡೋ ಏನಾದರೂ ಅಗತ್ಯಕ್ಕಿಂತ ಹೆಚ್ಚು ಮಾತನಾಡುವುದೋ ಅಥವಾ ಕೆಲಸಕ್ಕೆ ತೊಡಗುವುದೋ ಮಾಡಿದರೆ ಆ ನಂತರ ಪರಿತಪಿಸುವಂತೆ ಆಗಲಿದೆ. ವಸ್ತ್ರಾಭರಣಗಳ ಖರೀದಿಗೆ ಹೆಚ್ಚಿನ ಖರ್ಚಾಗುವಂಥ ಯೋಗ ಇದೆ. ಸಂಬಂಧಿಗಳೋ- ಸ್ನೇಹಿತರೋ ತಮ್ಮ ಶಾಪಿಂಗ್ ಗೆ ನೀವೂ ಬರಬೇಕು ಎಂದು ಒತ್ತಡ ಹಾಕಿ, ಕರೆದುಕೊಂಡು ಹೋಗಲಿದ್ದಾರೆ. ಮನೆಗೆ ಬೇಕಾದ ವಸ್ತುಗಳು ಕೆಲವನ್ನು ತರಲೇಬೇಕು ಎಂಬ ಕಾರಣಕ್ಕೆ ಕ್ರೆಡಿಟ್ ಕಾರ್ಡ್ ಬಳಸಲಿದ್ದೀರಿ. ಇಷ್ಟು ಕಾಲ ಅಷ್ಟೇನೂ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಇದ್ದಂಥ ವಸ್ತು- ವಿಷಯಗಳಿಗೆ ಸಿಕ್ಕಾಪಟ್ಟೆ ಪ್ರಾಶಸ್ತ್ಯ ಬಂದುಬಿಡುತ್ತದೆ. ಉದ್ಯೋಗಸ್ಥರಿಗೆ ಕೆಲ ಸಮಯದ ಮಟ್ಟಿಗೆ ಹೆಚ್ಚುವರಿ ಜವಾಬ್ದಾರಿಗಳನ್ನು ವಹಿಸಿಕೊಳ್ಳುವಂತೆ ಮೇಲಧಿಕಾರಿಗಳು ಸೂಚನೆಯನ್ನು ನೀಡಲಿದ್ದಾರೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಪ್ರಯಾಣದಿಂದ ಆಯಾಸ ಕಾಡಲಿದೆ. ಉದ್ಯೋಗ ಸ್ಥಳದಲ್ಲಿಯೂ ಕೆಲಸದ ಒತ್ತಡ ಇದ್ದು, ಅದರಿಂದ ಮಾನಸಿಕವಾದ ದಣಿವು ಕೂಡ ಜತೆಯಾಗುತ್ತದೆ. ಸಂಬಂಧಿಗಳು ಆಡಿದ ಮಾತುಗಳಿಂದ ಅಥವಾ ಈ ದಿನ ನಿಮಗೆ ಫೋನ್ ಮಾಡಿ, ಆಡುವಂಥ ಕೆಲವು ಮಾತುಗಳಿಂದ ವಿಪರೀತ ಸಿಟ್ಟು ಬರುವಂತೆ ಆಗಲಿದೆ. ವಿವಾಹಿತರಿಗೆ ಸಂಗಾತಿಯು ಹಣಕಾಸಿನ ವಿಚಾರದಲ್ಲಿ ತೆಗೆದುಕೊಳ್ಳುವ ತೀರ್ಮಾನ ಸಿಟ್ಟು ತರಿಸುತ್ತದೆ. ಚಾರ್ಟರ್ಡ್ ಅಕೌಂಟೆಂಟ್ ಗಳು, ಫೈನಾನ್ಷಿಯರ್ ಅಡ್ವೈಸರ್ ಗಳಾಗಿ ಕಾರ್ಯ ನಿರ್ವಹಿಸುವವರಿಗೆ ಏಕಾಗ್ರತೆ ಕಷ್ಟ ಆಗಲಿದೆ. ಅನಿವಾರ್ಯ ಅಲ್ಲದ ಮುಖ್ಯ ಜವಾಬ್ದಾರಿಗಳನ್ನು ಮುಂದೂಡುವುದು ಕ್ಷೇಮ. ಸ್ವಂತ ಶಾಲೆ, ಡೇ ಕೇರ್ ಇಂಥವುಗಳನ್ನು ನಡೆಸುತ್ತಾ ಇರುವವರಿಗೆ ಹೊಸದಾಗಿ ಹೂಡಿಕೆ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಜಮೀನು ಇರುವವರು ಅಲ್ಲಿ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಸಂಬಂಧ ಕುಟುಂಬ ಸದಸ್ಯರ ಜೊತೆಗೆ ಮಾತುಕತೆ ನಡೆಸಲಿದ್ದೀರಿ.

ಇದನ್ನೂ ಓದಿ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 14ರಿಂದ 20ರ ವರೆಗಿನ ವಾರಭವಿಷ್ಯ

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಕಾಳುಮೆಣಸಿನ ಬೆಳೆಗಾರರಿಗೆ ಆದಾಯದಲ್ಲಿ ಭಾರೀ ಏರಿಕೆ ಆಗಲಿದೆ. ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದಕ್ಕೆ ಮಳಿಗೆ ತೆರೆಯುವ ಬಗ್ಗೆ ಆಲೋಚನೆ ಮಾಡುವಂಥ ಯೋಗ ಸಹ ಇದೆ. ವಿಲಾಸಿ ವಸ್ತುಗಳ ಬಗ್ಗೆ ನಿಮಗೆ ಈ ದಿನ ಆಕರ್ಷಣೆ ಹೆಚ್ಚಾಗಿರುತ್ತದೆ. ನಿಮ್ಮ ಜೊತೆಗೆ ಉದ್ಯೋಗ ಮಾಡುತ್ತಿರುವವರಿಗೆ ತಾತ್ಕಾಲಿಕವಾದರೂ ಹಣಕಾಸಿನ ನೆರವು ನೀಡುವಂತೆ ಆಗಲಿದೆ. ನಿಮಗೆ ಬೇಡ ಎಂದುಕೊಂಡು ಸುಮ್ಮನಿದ್ದು ಬಿಟ್ಟಿದ್ದರೂ ಅದೇ ವಸ್ತು ಮನೆಗೆ ಬರುವಂಥ ಯೋಗ ಇದೆ. ಖುಷಿಯೋ ದುಃಖವೋ ಮನಸ್ಸಿನಲ್ಲಿ ಇತರರ ಬಗ್ಗೆ ಇರುವಂಥ ಅಭಿಪ್ರಾಯವನ್ನು ಹೇಳಿ ಮುಗಿಸುವುದು ಒಳ್ಳೆಯದು. ವಿವಾಹಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ಕೆಲವು ಗೊಂದಲದ ಸನ್ನಿವೇಶ ಸೃಷ್ಟಿ ಆಗಬಹುದು. ಮನೆಯ ಹಿರಿಯರು ಹೇಳುವಂಥ ಕೆಲವು ಅಭಿಪ್ರಾಯಗಳಿಗೆ ಸಹಮತ ಇಲ್ಲದೆ ಬೇಸರ ಉಂಟಾಗಲಿದೆ. ಹಳೇ ವ್ಯಾಜ್ಯಗಳು ಬಗೆಹರಿಯುವುದಕ್ಕೆ ವೇದಿಕೆ ಸೃಷ್ಟಿ ಆಗಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಚುರುಕಿನಿಂದ ಸನ್ನಿವೇಶಕ್ಕೆ ಪ್ರತಿಕ್ರಿಯೆ ನೀಡುವುದರಿಂದ ಪಾಸಿಟಿವ್ ಬೆಳವಣಿಗೆಗಳು ಆಗಲಿವೆ. ಹಣಕಾಸಿನ ಹೊಂದಾಣಿಕೆ ಮಾಡುವುದು ಯಾವ ಮೂಲದಿಂದ ಎಂದು ಆಲೋಚಿಸುವುದಕ್ಕೆ ಹೆಚ್ಚು ಸಮಯವನ್ನು ಮೀಸಲು ಇಡಲಿದ್ದೀರಿ. ಮೆಡಿಕಲ್ ಶಾಪ್ ನಡೆಸುತ್ತಾ ಇರುವವರಿಗೆ ಈಗ ನಡೆಸುತ್ತಿರುವ ವ್ಯಾಪಾರದಲ್ಲಿ ಕ್ರಮ ಬದಲಾವಣೆ ಮಾಡಿಕೊಳ್ಳಬೇಕು ಎಂದೆನಿಸಲಿದೆ. ಸಂಗಾತಿಯ ಸಲಹೆ ಗಂಭೀರವಾಗಿ ಪರಿಗಣಿಸಿ. ದೀರ್ಘ ಕಾಲದವರೆಗೆ ಒಂದು ಸ್ಥಳದಲ್ಲಿ ನಿಂತು ಕೆಲಸ ಮಾಡುವವರಿಗೆ ಕೆಲವು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಇತರರ ವೈಯಕ್ತಿಕ ಸಂಬಂಧಗಳಿಗೆ ಸಂಬಂಧ ಪಟ್ಟಂತೆ ಯಾವುದೇ ಸಲಹೆ- ಸೂಚನೆಗಳನ್ನು ನೀಡುವುದಕ್ಕೆ ಹೋಗಬೇಡಿ. ಸೋದರ ಸಂಬಂಧಿಗಳು ನಿಮ್ಮ ಕೆಲವು ತುರ್ತು ಕೆಲಸಗಳಿಗೆ ಸಹಾಯವನ್ನು ಮಾಡಲಿದ್ದಾರೆ. ವ್ಯಾಪಾರಸ್ಥರು ಕೆಲವು ವ್ಯಕ್ತಿಗಳಿಂದ ದೂರ ಇರುವುದಕ್ಕೆ- ಅವರ ಜೊತೆಗೆ ಯಾವುದೇ ವ್ಯವಹಾರ ಮಾಡದಿರುವುದಕ್ಕೆ ನಿರ್ಧಾರ ಮಾಡುತ್ತೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಕುಟುಂಬದವರ ಜತೆಗೆ ಹೆಚ್ಚಿನ ಸಮಯವನ್ನು ಕಳೆಯುವುದಕ್ಕೆ ಸಾಧ್ಯ ಅಂತಾದಲ್ಲಿ ಅವರಿಗೆ ಅಂತಲೇ ಸಮಯವನ್ನು ಮೀಸಲಿಡುವುದು ಒಳ್ಳೆಯದು. ಒಂದು ಸಮಯಕ್ಕೆ ಹತ್ತಾರು ಆಲೋಚನೆ ನಿಮ್ಮನ್ನು ಮುತ್ತಿಕೊಳ್ಳಲಿದೆ. ನಿಮ್ಮ ಆರೋಗ್ಯದ ವಿಚಾರದಲ್ಲಿ ಕುಟುಂಬದ ಹಿರಿಯರು ನೀಡುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ. ಈಗ ಇರುವ ಆದಾಯ ಮೂಲವನ್ನು ಹೆಚ್ಚು ಮಾಡಿಕೊಳ್ಳುವುದಕ್ಕೆ ಶತಾಯಗತಾಯ ಪ್ರಯತ್ನ ಮಾಡಲಿದ್ದೀರಿ. ನಿಮ್ಮ ಪ್ರೀತಿಪಾತ್ರರಿಗೆ ನೀಡುವುದಕ್ಕೆ ಕೆಲವು ಅಪರೂಪದ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳಿಗೆ ಬಹಳ ಸಮಯದಿಂದ ಅಲೆದಾಡುತ್ತಾ ಇದ್ದೀರಿ ಅಂತಾದಲ್ಲಿ ಅದನ್ನು ಪೂರ್ಣ ಮಾಡಿಕೊಳ್ಳುವ ಮಾರ್ಗೋಪಾಯ ಗೋಚರ ಆಗಲಿದೆ. ಭವಿಷ್ಯದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುವಂಥ ವ್ಯಕ್ತಿಯೊಬ್ಬರನ್ನು ಈ ದಿನ ಭೇಟಿ ಆಗಲಿದ್ದೀರಿ. ನನಗೆ ಅನಿಸಿದ್ದನ್ನು ನೇರವಾಗಿ ಹೇಳಿಬಿಡುತ್ತೇನೆ ಎಂಬ ಧೋರಣೆಯನ್ನು ಬಿಡುವುದು ನಿಮಗೆ ಅನುಕೂಲ ತರಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನೀವು ವಹಿಸಿಕೊಂಡ ಹೊಸ ಜವಾಬ್ದಾರಿಯಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ಬಹಳ ದೂರದ ಹಾದಿ ಸವೆಸಬೇಕು ಎಂದು ಈ ದಿನ ನಿಮಗೆ ಗಟ್ಟಿಯಾಗಿ ಅನಿಸಲಿದೆ. ಹೊರನೋಟಕ್ಕೆ ಕಾಣಿಸುವಂತೆ ಕೆಲವು ಸಂಗತಿಗಳು ಸರಳವಾಗಿ ಇರುವುದಿಲ್ಲ. ನಿಮ್ಮ ಬಳಿ ಇರುವ ಒಡವೆ ಅಥವಾ ಬೇರೆ ಯಾವುದಾದರೂ ಆಸ್ತಿಯನ್ನು ಮಾರಿ, ಹೊಸ ವ್ಯವಹಾರ ಆರಂಭಿಸಲು ಆಲೋಚನೆ ಮಾಡುತ್ತೀರಿ. ಕೆಟ್ಟ ಕುತೂಹಲದಿಂದ ಇತರರು ವೈಯಕ್ತಿಕ ವಿಚಾರಗಳ ಬಗ್ಗೆ ಕೆದಕುತ್ತಾರೆ. ಸಾಕು ಇನ್ನು ಎಂದುಕೊಂಡ ಸ್ನೇಹಿತನ ಜತೆಗಿನ ಮಾತುಕತೆಯನ್ನು ಮುಂದುವರಿಸುವಂತೆ ಆಗಲಿದೆ. ಸಾವಯವ ಉತ್ಪನ್ನಗಳ ಮಾರಾಟ ಮಳಿಗೆ ನಡೆಸುತ್ತಾ ಇರುವವರಿಗೆ ಆದಾಯದಲ್ಲಿ ಗಣನೀಯ ಏರಿಕೆ ಆಗಲಿದೆ. ಹೊಸ ವಿತರಕರ ಜತೆಗಿನ ಸಂಪರ್ಕ ನಿಮ್ಮಲ್ಲಿ ಒಂದು ವಿಶ್ವಾಸವನ್ನು ಮೂಡಿಸಲಿದೆ. ನಕ್ಕು ಸುಮ್ಮನಾಗುವಂಥ ಕೆಲವು ಆಕ್ಷೇಪಗಳನ್ನು ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ಮಾಡಲಿದ್ದಾರೆ.

ಲೇಖನ- ಎನ್‌.ಕೆ.ಸ್ವಾತಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!