AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ,  ವಿಡಿಯೋ ನೋಡಿ

ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ

ರಮೇಶ್ ಬಿ. ಜವಳಗೇರಾ
|

Updated on: Dec 15, 2025 | 2:48 PM

Share

ಚಾಮರಾಜನಗರ ಜಿಲ್ಲೆ ಗಡಿ ತಮಿಳುನಾಡಿನ ಮಾರ್ಗಮಧ್ಯ ಕಾಡಾನೆಗಳ ಓಡಾಟ ಜೋರಾಗಿದೆ. ಎತ್ತಕಟ್ಟಿ ಬೆಟ್ಟ ಹಾಗೂ ತಾಳವಾಡಿ ಸೇರಿದಂತೆ ಅಕ್ಕ ಪಕ್ಕ ಗ್ರಾಮಗಳ ಬಳಿ ಕಾಡಾನೆಗಳು ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಮುಖ್ಯರಸ್ತೆಯಲ್ಲೇ ಕಾಡಾನೆಗಳು, ಓಡಾಡುತ್ತಿವೆ. ಅದರಲ್ಲೂ ಒಂದು ಆನೆ ದಿಂಬಂ ಘಾಟ್​​​ನಲ್ಲಿ ಪೊಲೀಸರ ರೀತಿ ಲಾರಿಗಳನ್ನು ತಪಾಸಣೆ ನಡೆಸಿದೆ. ಹೌದು... ಚಾಮರಾಜನಗರದಿಂದ ತಮಿಳುನಾಡಿನ ಬಣ್ಣಾರಿಗೆ ತೆರಳುವ ರಸ್ತೆ ಮಧ್ಯೆ ಲಾರಿಗಳನ್ನು ಅಡ್ಡ ಹಾಕಿ ಕಬ್ಬು ತರಕಾರಿ ಕೀಳುತ್ತಿವೆ. ಒಂದು ವೇಳೆ ತಿನ್ನಲು ಲಾರಿಯಲ್ಲಿ ಏನು ಇಲ್ಲದಿದ್ದರೆ ಹಾಗೇ ಕಳುಹಿಸುತ್ತಿದೆ. ವಿಡಿಯೋ ನೋಡುತ್ತಿದ್ದರೆ ಥೇಟ್​​ ಸೇಮ್ ​ ಟು ಸೇಮ್​ ಪೊಲೀಸರ ರೀತಿಯಲ್ಲೇ ಕಾಡಾನೆ ವಾಹನಗಳನ್ನ ಅಡ್ಡ ಹಾಕಿ ಪರಿಶೀಲನೆ ಮಾಡುತ್ತಿದೆ.

ಚಾಮರಾಜನಗರ, (ಡಿಸೆಂಬರ್ 15): ಚಾಮರಾಜನಗರ ಜಿಲ್ಲೆ ಗಡಿ ತಮಿಳುನಾಡಿನ ಮಾರ್ಗಮಧ್ಯ ಕಾಡಾನೆಗಳ ಓಡಾಟ ಜೋರಾಗಿದೆ. ಎತ್ತಕಟ್ಟಿ ಬೆಟ್ಟ ಹಾಗೂ ತಾಳವಾಡಿ ಸೇರಿದಂತೆ ಅಕ್ಕ ಪಕ್ಕ ಗ್ರಾಮಗಳ ಬಳಿ ಕಾಡಾನೆಗಳು ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಮುಖ್ಯರಸ್ತೆಯಲ್ಲೇ ಕಾಡಾನೆಗಳು, ಓಡಾಡುತ್ತಿವೆ. ಅದರಲ್ಲೂ ಒಂದು ಆನೆ ದಿಂಬಂ ಘಾಟ್​​​ನಲ್ಲಿ ಪೊಲೀಸರ ರೀತಿ ಲಾರಿಗಳನ್ನು ತಪಾಸಣೆ ನಡೆಸಿದೆ. ಹೌದು… ಚಾಮರಾಜನಗರದಿಂದ ತಮಿಳುನಾಡಿನ ಬಣ್ಣಾರಿಗೆ ತೆರಳುವ ರಸ್ತೆ ಮಧ್ಯೆ ಲಾರಿಗಳನ್ನು ಅಡ್ಡ ಹಾಕಿ ಕಬ್ಬು ತರಕಾರಿ ಕೀಳುತ್ತಿವೆ. ಒಂದು ವೇಳೆ ತಿನ್ನಲು ಲಾರಿಯಲ್ಲಿ ಏನು ಇಲ್ಲದಿದ್ದರೆ ಹಾಗೇ ಕಳುಹಿಸುತ್ತಿದೆ. ವಿಡಿಯೋ ನೋಡುತ್ತಿದ್ದರೆ ಥೇಟ್​​ ಸೇಮ್ ​ ಟು ಸೇಮ್​ ಪೊಲೀಸರ ರೀತಿಯಲ್ಲೇ ಕಾಡಾನೆ ವಾಹನಗಳನ್ನ ಅಡ್ಡ ಹಾಕಿ ಪರಿಶೀಲನೆ ಮಾಡುತ್ತಿದೆ. ನೀವೂ ಒಮ್ಮೆ ವಿಡಿಯೋ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ