Mandya: ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ; ಅಷ್ಟಕ್ಕೂ ಆಗಿದ್ದೇನು?
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಶಟ್ಟಹಳ್ಳಿಯಲ್ಲಿ ಜಾಗದ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಉಂಟಾದ ತಳ್ಳಾಟ-ನೂಕಾಟದಲ್ಲಿ ಅಂಬೇಡ್ಕರ್ ಫ್ಲೆಕ್ಸ್ಗೆ ಹಾನಿಯಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. 0 ಗುಂಟೆ ಜಾಗದಲ್ಲಿ 5 ಗುಂಟೆ ಜಾಗವನ್ನು ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಬಿಟ್ಟುಕೊಡುವಂತೆ ಒಂದು ಸಮುದಾಯ ಒತ್ತಾಯ ಮಾಡಿದೆ. ಆದರೆ ಜಾಗ ಬಿಟ್ಟುಕೊಡಲು ಮತ್ತೊಂದು ಸಮುದಾಯ ವಿರೋಧ ವ್ಯಕ್ತಪಡಿಸಿದೆ.
ಮಂಡ್ಯ, ಡಿಸೆಂಬರ್ 15: ಜಾಗದ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದು ಉಂಟಾದ ತಳ್ಳಾಟ ನೂಕಾಟದಲ್ಲಿ ಅಂಬೇಡ್ಕರ್ ಫ್ಲೆಕ್ಸ್ಗೆ ಹಾನಿಯಾಗಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಶಟ್ಟಹಳ್ಳಿಯಲ್ಲಿ ನಡೆದಿದೆ. ಬೊಮ್ಮಲಿಂಗೇಶ್ವರ ಟ್ರಸ್ಟ್ ಹೆಸರಿನಲ್ಲಿರುವ ಜಾಗದ ವಿಚಾರದಲ್ಲಿ ಗಲಾಟೆ ನಡೆದಿದ್ದು, ಸಸಿ ನೆಡುವುದಕ್ಕೆ ಮತ್ತೊಂದು ಸಮುದಾಯ ವಿರೋಧ ವ್ಯಕ್ತಪಡಿಸಿದೆ. ಜೊತೆಗೆ ಆ ಜಾಗದಲ್ಲಿ ಅಂಬೇಡ್ಕರ್ ಫ್ಲೆಕ್ಸ್ ಇಡಲು ಯತ್ನಿಸಿದಾಗ ವಾಗ್ವಾದ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿ ತಳ್ಳಾಟ ನೂಕಾಟ ನಡೆದಿದೆ. ಜಾಗದ ವಿಚಾರವಾಗಿ ಒಂದು ವರ್ಷದಿಂದ ವಿವಾದ ಇದ್ದು, 30 ಗುಂಟೆ ಜಾಗದಲ್ಲಿ 5 ಗುಂಟೆ ಜಾಗವನ್ನು ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಬಿಟ್ಟುಕೊಡುವಂತೆ ಒಂದು ಸಮುದಾಯ ಒತ್ತಾಯ ಮಾಡಿದೆ. ಆದರೆ ಜಾಗ ಬಿಟ್ಟುಕೊಡಲು ಮತ್ತೊಂದು ಸಮುದಾಯ ವಿರೋಧ ವ್ಯಕ್ತಪಡಿಸಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
