ಮಂಡ್ಯ: ಮದ್ದೂರು ಕಲ್ಲು ತೂರಾಟದ ಕಿಂಗ್ಪಿನ್ ಯಾರು? ಕೊನೆಗೂ ಮಾಹಿತಿ ಬಹಿರಂಗ
ರಾಜ್ಯದಾದ್ಯಂತ ಸಂಚಲನಕ್ಕೆ ಕಾರಣವಾಗಿದ್ದ ಮದ್ದೂರು ಕಲ್ಲು ತೂರಾಟದ ಪ್ರಮುಖ ಆರೋಪಿ ಚನ್ನಪಟ್ಟಣದ ಇರ್ಫಾನ್ ಎಂಬುದು ಬಯಲಾಗಿದೆ. ಸಿಸಿಟಿವಿ ದೃಶ್ಯ ಸೇರಿದಂತೆ ವಿವಿಧ ಮಾಹಿತಿ ಕಲೆಹಾಕಿ ಪೊಲೀಸರು ತನಿಖೆ ನಡೆಸುತ್ತಿದ್ದು, ಹಲವು ವಿಚಾರಗಳು ಬಹಿರಂಗವಾಗಿವೆ. ಮಸೀದಿ ಮುಂದೆ ಗಣೇಶ ಮೆರವಣಿಗೆ ಸಹಿಸದೆ ಆತ ಕೃತ್ಯ ಎಸಗಿದ್ದ ಎನ್ನಲಾಗಿದೆ. ವಿವರಗಳಿಗೆ ವಿಡಿಯೋ ನೋಡಿ.
ಮಂಡ್ಯ, ಸೆಪ್ಟೆಂಬರ್ 10: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದಿದ್ದ ಕಲ್ಲು ತೂರಾಟದ ಕಿಂಗ್ಪಿನ್ ಯಾರು ಎಂಬುದು ಬಯಲಾಗಿದೆ. ಚನ್ನಪಟ್ಟಣದ ಇರ್ಫಾನ್ ಎಂಬಾತನೇ ಕಲ್ಲು ತೂರಾಟದ ಕಿಂಗ್ಪಿನ್ ಎಂಬುದು ತಿಳಿದುಬಂದಿದೆ. ಈತ ಹಲವು ವರ್ಷಗಳಿಂದ ಮದ್ದೂರಿನಲ್ಲೇ ಇದ್ದು, ಮಸೀದಿ ಮುಂದೆ ಗಣೇಶ ಮೆರವಣಿಗೆ ಬಗ್ಗೆ ಅಸಮಾಧಾನಗೊಂಡಿದ್ದ. ಆತನನ್ನು ಜಾಫರ್ ಎಂಬಾತ ಪ್ರಚೋದಿಸಿದ್ದ ಎನ್ನಲಾಗಿದೆ. ಈವರೆಗೆ ಪ್ರಕರಣ ಸಂಬಂಧ 22 ಮಂದಿಯನ್ನು ಬಂಧಿಸಲಾಗಿದೆ. ಏತನ್ಮಧ್ಯೆ, ಇಂದು ಮಂಡ್ಯದಲ್ಲಿ ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದ್ದು, ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

