ಪಾಕ್ ವೇಗಿಗೆ ಇದೆಂಥಾ ಅವಮಾನ! ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
Shaheen Afridi BBL Debut Shocker: ಬಿಗ್ ಬ್ಯಾಷ್ ಲೀಗ್‌ನ 2025-26ರ ಎರಡನೇ ಪಂದ್ಯದಲ್ಲಿ ಶಾಹೀನ್ ಶಾ ಅಫ್ರಿದಿ ಬ್ರಿಸ್ಬೇನ್ ಹೀಟ್ ಪರ ಚೊಚ್ಚಲ ಪಂದ್ಯ ಆಡಿದರು. ದುಬಾರಿ ಬೌಲಿಂಗ್ ಪ್ರದರ್ಶಿಸಿದ ಅಫ್ರಿದಿ, 2.4 ಓವರ್‌ಗಳಲ್ಲಿ 43 ರನ್ ನೀಡಿದರು. ನಿಯಮದ ಪ್ರಕಾರ ಎರಡು ಹೈ ಫುಲ್ ಟಾಸ್ ಎಸೆದ ಕಾರಣ ಅಂಪೈರ್ ಅವರನ್ನು ಓವರ್ ಮಧ್ಯದಲ್ಲೇ ಬೌಲಿಂಗ್ ನಿಲ್ಲಿಸಿದರು. ಈ ನಿರ್ಧಾರ ಅಫ್ರಿದಿಗೆ ಭಾರಿ ಮುಜುಗರ ಉಂಟುಮಾಡಿದೆ, ಇದು ಕ್ರಿಕೆಟ್ ಲೋಕದಲ್ಲಿ ಚರ್ಚೆಗೆ ಕಾರಣವಾಗಿದೆ.
ಬಿಗ್ ಬ್ಯಾಷ್ ಲೀಗ್ 2025-26 ರ ಎರಡನೇ ಪಂದ್ಯದಲ್ಲಿ, ಬ್ರಿಸ್ಬೇನ್ ಹೀಟ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದೊಂದಿಗೆ, ಪಾಕಿಸ್ತಾನದ ಸ್ಟಾರ್ ವೇಗಿ ಶಾಹೀನ್ ಶಾ ಅಫ್ರಿದಿ ಕೂಡ ಬ್ರಿಸ್ಬೇನ್ ಹೀಟ್ ಪರ ತಮ್ಮ ಮೊದಲ ಬಿಬಿಎಲ್ ಪಂದ್ಯವನ್ನು ಆಡಿದರು. ಆದರೆ ಬಿಬಿಎಲ್ನ ಚೊಚ್ಚಲ ಪಂದ್ಯದಲ್ಲಿಯೇ ಅಫ್ರಿದಿ ಮುಜುಗರಕ್ಕೊಳಗಾಗುವಂತಹ ಘಟನೆ ನಡೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೆಲ್ಬೋರ್ನ್ ರೆನೆಗೇಡ್ಸ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 212 ರನ್ ಕಲೆಹಾಕಿತು. ಇತ್ತ ಬ್ರಿಸ್ಬೇನ್ ಹೀಟ್ ಪರ ಕಣಕ್ಕಿಳಿದಿದ್ದ ಶಾಹೀನ್ ಶಾ ಅಫ್ರಿದಿ ಸರಾಗವಾಗಿ ರನ್ ಬಿಟ್ಟುಕೊಟ್ಟರು. ಇದು ಮಾತ್ರವಲ್ಲದೆ ನಿಯಮ ಮುರಿದ ಅಫ್ರಿದಿಯನ್ನು ಓವರ್ ಮಧ್ಯದಲ್ಲೇ ಬೌಲಿಂಗ್ ಮಾಡದಂತೆ ತಡೆದ ಘಟನೆಯೂ ನಡೆಯಿತು.
ಈ ಪಂದ್ಯದಲ್ಲಿ ತುಂಬಾ ದುಬಾರಿಯಾದ ಶಾಹೀನ್ ಶಾ ಅಫ್ರಿದಿ ಬೌಲ್ ಮಾಡಿದ್ದು ಕೇವಲ 2.4 ಓವರ್‌ಗಳಾದರೂ ಒಂದೇ ಒಂದು ವಿಕೆಟ್ ಪಡೆಯದೆ 43 ರನ್‌ಗಳನ್ನು ಬಿಟ್ಟುಕೊಟ್ಟರು. ಇದಲ್ಲದೆ ತಮ್ಮ ಖೋಟಾದ ಮೂರನೇ ಓವರ್‌ನಲ್ಲಿ ಅಫ್ರಿದಿ ಎರಡು ಹೈ ಫುಲ್ ಟಾಸ್ ಚೆಂಡುಗಳನ್ನು ಎಸೆದಿದ್ದರಿಂದ ಅಂಪೈರ್ ಅವರನ್ನು ಬೌಲಿಂಗ್ ಮಾಡದಂತೆ ತಡೆದರು. ವಾಸ್ತವವಾಗಿ ಕ್ರಿಕೆಟ್ ನಿಯಮಗಳ ಪ್ರಕಾರ, ಬೌಲರ್ ಒಂದು ಓವರ್‌ನಲ್ಲಿ ಎರಡು ಅಪಾಯಕಾರಿ ಹೈ ಫುಲ್ ಟಾಸ್‌ಗಳನ್ನು (ಬೀಮರ್‌ಗಳು) ಎಸೆದರೆ ಅವರ ಬೌಲಿಂಗ್ ಅನ್ನು ಅಲ್ಲಿಗೆ ನಿಲ್ಲಿಸಲಾಗುತ್ತದೆ. ಈ ನಿಯಮದ ಪ್ರಕಾರ ಅಂಪೈರ್, ಶಾಹೀನ್ ಅಫ್ರಿದಿ ಅವರನ್ನು ಓವರ್ ಮಧ್ಯದಲ್ಲೇ ಬೌಲಿಂಗ್ ಮಾಡದಂತೆ ತಡೆದರು. ಕ್ರಿಕೆಟ್ನಲ್ಲಿ ನಿಯಮ ಇದ್ದರೂ, ಹೆಚ್ಚಿನ ಸಂದರ್ಭಗಳಲ್ಲಿ ಈ ನಿಯಮವನ್ನು ಅಂಪೈರ್ಗಳು ಪಾಲಿಸುವುದಿಲ್ಲ. ಆದರೆ ಶಾಹೀನ್ ಅಫ್ರಿದಿ ವಿಚಾರದಲ್ಲಿ ಅಂಪೈರ್ ತೆಗೆದುಕೊಂಡ ನಿರ್ಧಾರ, ಅಫ್ರಿದಿಗೆ ಮುಜುಗುರವನ್ನುಂಟುಮಾಡಿದೆ ಎಂಬುದರಲ್ಲಿ ಸುಳ್ಳಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

