AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Capricorn Yearly Horoscope 2026: 2026ರ ಹೊಸ ವರ್ಷ ಮಕರ ರಾಶಿಯವರಿಗೆ ಹೇಗಿರಲಿದೆ? ಶುಭ -ಅಶುಭ ಫಲಗಳ ವಿವರ ಇಲ್ಲಿದೆ

ಮಕರ ರಾಶಿ ವರ್ಷ ಭವಿಷ್ಯ 2026: 2026ನೇ ಇಸವಿಯ ಜನವರಿಯಿಂದ ಡಿಸೆಂಬರ್ ತನಕ ಮಕರ ರಾಶಿಯ ವರ್ಷ ಭವಿಷ್ಯದ ವಿವರ ಇಲ್ಲಿದೆ. ಈ ಭವಿಷ್ಯವನ್ನು ಗ್ರಹಗಳ ಗೋಚಾರದ ಆಧಾರದಲ್ಲಿ ತಿಳಿಸಲಾಗಿದೆ. ದೀರ್ಘ ಸಮಯದ ತನಕ ಒಂದೇ ರಾಶಿಯಲ್ಲಿ ಸಂಚರಿಸುವಂಥ ಗ್ರಹಗಳಾದ ಶನಿ, ರಾಹು-ಕೇತು ಹಾಗೂ ಗುರು ಗ್ರಹದ ಸಂಚಾರವನ್ನು ಈ ವರ್ಷ ಭವಿಷ್ಯಕ್ಕಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಕಾಲಪುರುಷನ ಚಕ್ರದಲ್ಲಿ ಹತ್ತನೇ ರಾಶಿ ಎನಿಸಿದ ಮಕರ ರಾಶಿಯವರಿಗೆ 2026ನೇ ಇಸವಿಯಲ್ಲಿ ಶುಭಾಶುಭ ಫಲಗಳು ಹೇಗಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Capricorn Yearly Horoscope 2026: 2026ರ ಹೊಸ ವರ್ಷ ಮಕರ ರಾಶಿಯವರಿಗೆ ಹೇಗಿರಲಿದೆ? ಶುಭ -ಅಶುಭ ಫಲಗಳ ವಿವರ ಇಲ್ಲಿದೆ
ಮಕರ ರಾಶಿ ವರ್ಷ ಭವಿಷ್ಯ
ಸ್ವಾತಿ ಎನ್​ಕೆ
| Updated By: ಅಕ್ಷತಾ ವರ್ಕಾಡಿ|

Updated on: Dec 14, 2025 | 3:33 PM

Share

2026ನೇ ಇಸವಿಯಲ್ಲಿ ಇಡೀ ವರ್ಷ ಶನಿ ಗ್ರಹ ನಿಮ್ಮ ರಾಶಿಗೆ 3ನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಇನ್ನು ಗುರು ಗ್ರಹವು ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ 6ನೇ ಮನೆ, ಅಂದರೆ ರಿಪು- ಶತ್ರು ಸ್ಥಾನದಲ್ಲಿ ಇರುತ್ತದೆ. ಆ ನಂತರ ಅಕ್ಟೋಬರ್ 31ನೇ ತಾರೀಕಿನವರೆಗೆ ಕಳತ್ರ ಸ್ಥಾನ, ಅಂದರೆ 7ನೇ ಮನೆಯಾದ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತದೆ. ನವೆಂಬರ್ ಹಾಗೂ ಡಿಸೆಂಬರ್ ಈ ಎರಡೂ ತಿಂಗಳು, ಆಯುಷ್ಯ ಸ್ಥಾನ, ಅಂದರೆ 8ನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ಇನ್ನು ಬಹುತೇಕ ಇಡೀ ವರ್ಷ ರಾಹು ಗ್ರಹವು ನಿಮ್ಮ ರಾಶಿಗೆ 2ನೇ ಮನೆ ಆಗುವಂಥ ಕುಂಭದಲ್ಲಿಯೂ ಹಾಗೂ ಕೇತು ಗ್ರಹವು 8ನೇ ಮನೆಯಲ್ಲಿ ಸಂಚರಿಸುತ್ತದೆ. 2026ನೇ ಇಸವಿಯ ಡಿಸೆಂಬರ್ 5ನೇ ತಾರೀಕಿಗೆ ರಾಹು ಗ್ರಹವು ಜನ್ಮ ಸ‌್ಥಾನವಾದ 1ನೇ ಮನೆಯಾದ ನಿಮ್ಮ ಜನ್ಮ ರಾಶಿಗೂ ಹಾಗೂ ಕೇತು ಗ್ರಹ ನಿಮ್ಮ ರಾಶಿಗೆ 7ನೇ ಮನೆ ಕರ್ಕಾಟಕ ರಾಶಿಗೂ ಪ್ರವೇಶಿಸುತ್ತದೆ.

ಉತ್ತರಾಷಾಢ ನಕ್ಷತ್ರದ ಎರಡು, ಮೂರು, ನಾಲ್ಕನೇ ಪಾದ, ಶ್ರವಣ ನಕ್ಷತ್ರದ ನಾಲ್ಕೂ ಪಾದ, ಧನಿಷ್ಠಾ ನಕ್ಷತ್ರದ ಒಂದು, ಎರಡನೇ ಪಾದ ಸೇರಿ ಮಕರ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಶನಿ.

ಮಕರ ರಾಶಿಯವರಿಗೆ 2026ರ ವರ್ಷ ಭವಿಷ್ಯ ಹೀಗಿದೆ:

ಶನಿ ಗೋಚಾರ:

ಇಡೀ ವರ್ಷ ನಿಮ್ಮ ರಾಶಿಯಿಂದ ಮೂರನೇ ಮನೆಯಲ್ಲಿ ಶನೈಶ್ಚರನ ಸಂಚಾರ ಇರುತ್ತದೆ. ಉದ್ಯೋಗ- ವೃತ್ತಿ- ವ್ಯಾಪಾರದಲ್ಲಿ ಅಂದುಕೊಂಡಂಥ ಸಾಧನೆ ಆಗುತ್ತದೆ. ಸೋದರ- ಸೋದರಿಯರ ಜತೆಗೆ ಏನಾದರೂ ಅಭಿಪ್ರಾಯ ಭೇದ- ಮನಸ್ತಾಪ ಇದ್ದಲ್ಲಿ ದೂರವಾಗಲಿದೆ. ಆರೋಗ್ಯ ಸಮಸ್ಯೆಗಳು ಸುಧಾರಣೆ ಕಾಣುತ್ತವೆ. ನಿಮ್ಮ ನಿಧಾನಗತಿ ಧೋರಣೆಯಿಂದ ಇಷ್ಟು ಸಮಯ ಆಕ್ಷೇಪದ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಇದ್ದವರಿಗೆ ಆ ಸ್ವಭಾವಕ್ಕೆ ಮೆಚ್ಚುಗೆ ಮಾತುಗಳು ಕೇಳಿಬರಲಿವೆ. ಹಣಕಾಸಿನ ಹರಿವು ಸರಾಗವಾಗಿ ಆಗಲಿದೆ. ಒಂದು ವೇಳೆ ದಂಪತಿ- ಪ್ರೇಮಿಗಳ ಮಧ್ಯೆ ಹಣಕಾಸಿನ ವಿಷಯಕ್ಕೆ ಜಗಳ- ಮನಸ್ತಾಪ ಇದ್ದಲ್ಲಿ ಅದನ್ನು ದೂರ ಮಾಡಿಕೊಳ್ಳುವುದಕ್ಕೆ ಸಾಧ್ಯ ಆಗಲಿದೆ. ಮಾತು ಪ್ರಧಾನವಾದ ವೃತ್ತಿ- ಉದ್ಯೋಗ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಸೈಟು- ಮನೆ-ಫ್ಲ್ಯಾಟ್ ಖರೀದಿ ಮಾಡಬೇಕು ಎಂದುಕೊಳ್ಳುತ್ತಾ ಇರುವವರಿಗೆ ಪ್ರಯತ್ನಗಳು ಯಶಸ್ಸು ತರುತ್ತವೆ. ಈ ಅವಧಿಯಲ್ಲಿ ನಿಮಗಿರುವ ಸಾಲಗಳನ್ನು ತೀರಿಸಿಕೊಳ್ಳಲು ಸಾಧ್ಯವಾಗಲಿದ್ದು, ಉಳಿತಾಯ- ಹೂಡಿಕೆ ಸಹ ಮಾಡಲಿದ್ದೀರಿ. ವ್ಯಾಪಾರದಲ್ಲಿ ಆದಾಯ ಮೂಲಗಳು ಮತ್ತು ಲಾಭ ಜಾಸ್ತಿ ಆಗಲಿದೆ. ನಿಮ್ಮ ನಿರ್ಧಾರಗಳನ್ನು ನಂಬುವುದು ಬಹಳ ಮುಖ್ಯ. ಯಾವುದೇ ಲಾಭದಾಯಕ ಕೆಲಸ- ಕಾರ್ಯಗಳಲ್ಲಿ ತೊಡಗಿಕೊಳ್ಳುವುದಕ್ಕೆ ಅನುಮಾನ- ಹಿಂಜರಿಕೆ ಇಟ್ಟುಕೊಳ್ಳಬೇಡಿ. ಹೊಸದಾಗಿ ವ್ಯಾಪಾರ- ವ್ಯವಹಾರ ಆರಂಭಿಸಬೇಕು ಎಂದುಕೊಳ್ಳುವವರು ಈ ಅವಧಿಯಲ್ಲಿ ಶುರು ಮಾಡಬಹುದು. ಕಬ್ಬಿಣ, ಇಟ್ಟಿಗೆ, ಸಿಮೆಂಟ್ ಮಾರಾಟ ಹಾಗೂ ಸಬ್ ಕಾಂಟ್ರಾಕ್ಟ್ ಪಡೆದುಕೊಂಡು, ಅದರ ಮೂಲಕ ಆದಾಯ ಮಾಡಿಕೊಳ್ಳುವವರಿಗೆ ಹಣಕಾಸಿನ ಹರಿವು ಉತ್ತಮವಾಗಿರುತ್ತದೆ.

ಇದನ್ನೂ ಓದಿ: 2026ನೇ ಹೊಸ ವರ್ಷ ಮಿಥುನ ರಾಶಿಯವರಿಗೆ ಹೇಗಿರಲಿದೆ? ವರ್ಷ ಭವಿಷ್ಯ ಇಲ್ಲಿದೆ

ಗುರು ಗ್ರಹ ಗೋಚಾರ:

ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ ಆರನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಇರುತ್ತದೆ. ಎಂಥದ್ದೇ ಅಭಿಪ್ರಾಯ ಭೇದ ಅಂತ ಇದ್ದರೂ ಜಗಳ- ಕಲಹದ ಮಟ್ಟಕ್ಕೆ ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಿ. ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳ ಜತೆಗೆ ವೈರತ್ವ ಏರ್ಪಡಬಹುದು. ದೇಹದ ತೂಕದಲ್ಲಿ ಹೆಚ್ಚಳ ಆಗದಂತೆ, ಕೊಲೆಸ್ಟ್ರಾಲ್ ಜಾಸ್ತಿ ಆಗದಂತೆ ನೋಡಿಕೊಳ್ಳುವುದು ಮುಖ್ಯ. ನಿಮ್ಮ ರಾಶಿಗೆ ವ್ಯಯ ಸ್ಥಾನದ ಅಧಿಪತಿಯೀ ಆದಂಥ ಗುರು ಗ್ರಹ ಆರನೇ ಮನೆಯಲ್ಲಿ ಸಂಚರಿಸುವುದರಿಂದ ವೈದ್ಯಕೀಯ ವೆಚ್ಚದ ಪ್ರಮಾಣ ಹೆಚ್ಚಾಗಲಿದೆ. ಕೋರ್ಟ್- ಕಚೇರಿ ವ್ಯಾಜ್ಯ, ಪೊಲೀಸ್ ಠಾಣೆಗೆ ಅಲೆದಾಟ ಇಂಥವುಗಳಿಂದ ಕೂಡ ಖರ್ಚಿನ ಪ್ರಮಾಣ ಹೆಚ್ಚಾಗುತ್ತದೆ. ಹೊಸದಾಗಿ ಯಾವುದೇ ಪ್ರಾಜೆಕ್ಟ್ ಶುರು ಮಾಡುವ ಮುನ್ನ ಸಾಧಕ- ಬಾಧಕಗಳ ಬಗ್ಗೆ ಅಳೆದು ತೂಗಿ ನೋಡುವುದು ಬಹಳ ಮುಖ್ಯ. ಶೇಕಡಾ ಅರವತ್ತರಿಂದ ಎಂಬತ್ತರಷ್ಟು ಕೆಲಸ ಮುಗಿದ ಮೇಲೆ, ಅದರಿಂದ ಹೊರಗೆ ಬಂದುಬಿಡಬೇಕು ಎನಿಸುವುದಕ್ಕೆ ಆರಂಭವಾಗುತ್ತದೆ. ಗ್ಯಾಜೆಟ್- ಮೊಬೈಲ್ ಫೋನ್- ಲ್ಯಾಪ್ ಟಾಪ್ ಇಂಥವುಗಳ ಖರೀದಿಯನ್ನು ತೀರಾ ಅಗತ್ಯ ಎನಿಸಿದರೆ ಮಾತ್ರ ಮಾಡಿ. ಜೂನ್ ಒಂದರಿಂದ ಅಕ್ಟೋಬರ್ ಮೂವತ್ತೊಂದನೇ ತಾರೀಕು ಏಳನೇ ಮನೆಯಲ್ಲಿ ಗುರು ಸಂಚರಿಸುತ್ತದೆ. ಹಲವು ರೀತಿಯಲ್ಲಿ ಅನುಕೂಲಕರವಾಗಿರುತ್ತದೆ ಹಾಗೂ ಶುಭ ಕಾರ್ಯಗಳು ನಡೆಯುತ್ತವೆ. ಮದುವೆಗೆ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತ ಸಂಬಂಧ ದೊರೆಯುವುದು, ವಿದೇಶ ಪ್ರಯಾಣ ಅನುಕೂಲಕರ- ಲಾಭದಾಯಕ ಆಗಲಿದೆ. ಸಂತಾನಕ್ಕೆ ಪ್ರಯತ್ನಿಸುತ್ತಿರುವವರಿಗೂ ಶುಭ ಸುದ್ದಿ ಇದೆ. ಉದ್ಯೋಗ- ವೃತ್ತಿ, ವ್ಯಾಪಾರ- ವ್ಯವಹಾರ ಎಲ್ಲದರಲ್ಲೂ ಒಳಿತನ್ನು ಕಾಣುತ್ತೀರಿ. ನವೆಂಬರ್- ಡಿಸೆಂಬರ್ ನಲ್ಲಿ ಉದ್ಯೋಗ ಬಿಡುವಂತೆ ಆಗಬಹುದು ಅಥವಾ ಕೆಲಸದಿಂದ ತೆಗೆಯಬಹುದು. ಆರೋಗ್ಯ ಸಮಸ್ಯೆ ಆಗುತ್ತದೆ. ನೆರೆಹೊರೆಯವರ ಜತೆಗೆ ಜಗಳ, ಪೊಲೀಸ್ ಠಾಣೆಗೆ ಅಲೆದಾಟ ಈ ರೀತಿ ಫಲಗಳಿವೆ.

ರಾಹು-ಕೇತು ಗೋಚಾರ:

ಎರಡನೇ ಮನೆಯಲ್ಲಿ ರಾಹು ಸಂಚಾರದ ಅವಧಿ ಆದಾಯದ ವಿಚಾರಕ್ಕೆ ಭಾರೀ ಏರಿಳಿತ ತರುತ್ತದೆ. ಅನಗತ್ಯವಾಗಿ ಸಾಲ ಮಾಡುವಂತೆ ಆಗುತ್ತದೆ. ಕಣ್ಣಿಗೆ ಸಂಬಂಧಿಸಿದ ಕೆಲವು ತೊಂದರೆ ಕಾಣಿಸಿಕೊಳ್ಳಬಹುದು. ದಂಪತಿ ಮಧ್ಯೆ ಯಾರು ಸರಿ- ಯಾರ ನಿರ್ಧಾರ ಉತ್ತಮ ಎಂಬ ಕಾರಣಕ್ಕೆ ಜಗಳ- ಕಲಹ ಆಗುತ್ತದೆ. ಈ ಅವಧಿಯಲ್ಲಿ ಸಾಲ ತೆಗೆದುಕೊಂಡು, ಚಿನ್ನ- ಬೆಳ್ಳಿ, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದಕ್ಕೆ ಹೋಗಬೇಡಿ. ಎಂಟನೇ ಮನೆಯಲ್ಲಿ ಕೇತು ಗ್ರಹ ಸಂಚಾರದಲ್ಲಿ ಚರ್ಮ ವ್ಯಾಧಿಗಳು ಕಾಣಿಸಿಕೊಳ್ಳಬಹುದು. ಒಂದು ವೇಳೆ ಈಗಾಗಲೇ ಇದೆ ಎಂದಾದಲ್ಲಿ ಉಲ್ಬಣ ಆಗಬಹುದು. ಸೋರಿಯಾಸಿಸ್ ನಂಥ ಆರೋಗ್ಯ ಸಮಸ್ಯೆ ಇರುವವರು ಬಹಳ ಜಾಗ್ರತೆ ವಹಿಸಬೇಕು. ನವೆಂಬರ್- ಡಿಸೆಂಬರ್ ತಿಂಗಳಲ್ಲಿ ತೀವ್ರತರವಾದ ಮಾನಸಿಕ ಖಿನ್ನತೆ ಕಾಡಲಿದೆ. ಸುಸ್ತು, ದೇಹದಲ್ಲಿ ವಿಟಮಿನ್ ಕೊರತೆ, ಕ್ಯಾಟರಾಕ್ಟ್ (ಕಣ್ಣಿನ ಪೊರೆ) ಆಪರೇಷನ್ ಮಾಡಿಸುವಂತೆ ಆಗಲಿದೆ. ಸಾರ್ವಜನಿಕ ಜೀವನದಲ್ಲಿ ಇರುವವರು ತಮ್ಮ ಹೇಳಿಕೆಗಳಿಂದ ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುವಂತೆ ಆಗಲಿದೆ.

ಪರಿಹಾರ: ಗುರು ಗ್ರಹದ ಆರಾಧನೆ, ದುರ್ಗಾ ದೇವಿ ಮತ್ತು ಗಣಪತಿ ಪೂಜೆ- ಪುನಸ್ಕಾರ ಮಾಡಿಕೊಳ್ಳಿ.

ಲೇಖನ- ಸ್ವಾತಿ ಎನ್.ಕೆ.

ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್