ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್

ಕನ್ನಡದಲ್ಲಿ ಔಷಧ ಚೀಟಿ ಬರೆಯುವಂತೆ ಕನ್ನಡ ಪ್ರಾಧಿಕಾರದ ಅಧ್ಯಕ್ಷರ ಇಂಗಿತಕ್ಕೆ ಚಿತ್ರದುರ್ಗದ ವೈದ್ಯ ಸಾಥ್​ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿನ ತಾಲೂಕು ಆಸ್ಪತ್ರೆಯ ಕೀಲು ಮೂಳೆ ತಜ್ಞ ಡಾ.ಸಂಜಯ್ ಕನ್ನಡದಲ್ಲಿ ಔಷಧ ಚೀಟಿ ಬರೆಯುವ ಮೂಲಕ ಇದೀಗ ವೈರಲ್ ಆಗಿದ್ದಾರೆ.​

ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
| Updated By: ಗಂಗಾಧರ​ ಬ. ಸಾಬೋಜಿ

Updated on: Sep 20, 2024 | 10:31 PM

ಚಿತ್ರದುರ್ಗ, ಸೆಪ್ಟೆಂಬರ್ 20: ಕನ್ನಡದಲ್ಲಿ ಔಷಧ ಚೀಟಿ (prescription) ಬರೆಯುವ ಮೂಲಕ ಮತ್ತೊಬ್ಬ ವೈದ್ಯ ಗಮನಸೆಳೆದಿದ್ದಾರೆ. ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿನ ತಾಲೂಕು ಆಸ್ಪತ್ರೆಯ‌ ವೈದ್ಯ ಡಾ.ಸಂಜಯ್ ಕನ್ನಡದಲ್ಲಿ ಔಷಧ ಚೀಟಿ ಬರೆಯುತ್ತಿದ್ದಾರೆ. ಕೀಲು ಮೂಳೆ ತಜ್ಞ ಡಾ.ಸಂಜಯ್​ರಿಂದ ವಿಶೇಷ ಪ್ರಯತ್ನ ಮಾಡಲಾಗುತ್ತಿದ್ದು, ಕನ್ನಡ ಪ್ರಾಧಿಕಾರದ ಅಧ್ಯಕ್ಷರ ಇಂಗಿತ ಹಿನ್ನೆಲೆ ಡಾ.ಸಂಜಯ್​ರಿಂದ ಸಾಕಾರ ನೀಡಲಾಗಿದೆ. ಜೊತೆಗೆ ಕನ್ನಡದಲ್ಲೇ‌ ಔಷಧ ಚೀಟಿಯಿಂದ ಅನೇಕರಿಗೆ ಅನುಕೂಲವಾಗಲಿದೆ. ಸದ್ಯ ಡಾ.ಸಂಜಯ್ ಕನ್ನಡದಲ್ಲೇ ಬರೆದ ಔಷಧ‌ ಚೀಟಿ ವೈರಲ್​ ಆಗಿದ್ದು ಸಾಮಾಜಿಕ‌ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us